• Home
  • »
  • News
  • »
  • state
  • »
  • Dakshina Kannada: ಮರೆತ ಜನರಿಗೆ ತನ್ನ ಇರುವಿಕೆ ತಿಳಿಸಿದ ದೈವ, ಕಾಂತಾರ ಸಿನಿಮಾ ಜೊತೆಗೆ ನೆನಪಾದ ದೈವದ ಕಥೆ

Dakshina Kannada: ಮರೆತ ಜನರಿಗೆ ತನ್ನ ಇರುವಿಕೆ ತಿಳಿಸಿದ ದೈವ, ಕಾಂತಾರ ಸಿನಿಮಾ ಜೊತೆಗೆ ನೆನಪಾದ ದೈವದ ಕಥೆ

ದೈವಸ್ಥಾನ

ದೈವಸ್ಥಾನ

ತುಳುನಾಡಿನ ಭೂಮಿಯ ಒಡೆಯನಂತೆ ಆರಾಧಿಸಲ್ಪಡುತ್ತಿರುವ ನಾಗಗಳ ಸಾವಿನಿಂದ ಊರಿಗೆ ಗಂಡಾಂತರ ಬರಲಿದೆ ಎನ್ನುವುದನ್ನು ಮನಗಂಡ ಈ ಊರಿನ ಕೆಲವು ಮಂದಿ ಸೇರಿ ನಾಗಗಳ ಸಾವಿನ ಕಾರಣವನ್ನು ಹುಡುಕಿಕೊಂಡು ಹೊರಟರು.

  • Share this:

ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಕಾಂತಾರ ಸಿನಿಮಾ (Kantara Cinema) ದೇಶದೆಲ್ಲೆಡೆ ಭಾರೀ ಸಂಚಲನವನ್ನು ಉಂಟು ಮಾಡಿದೆ. ಕನ್ನಡದಲ್ಲಿ (Kannada) ಮೊದಲಿಗೆ ರಿಲೀಸ್ ಆದ ಈ ಚಿತ್ರ ಐದು ಭಾಷೆಗಳಲ್ಲಿ ಡಬ್ ಆಗಲಿದೆ. ಕರಾವಳಿ ಭಾಗದ (Coastal Karnataka) ಭಾರೀ ನಂಬಿಕೆಗೆ ಪಾತ್ರವಾದ ದೈವಗಳ (Daiva) ಕಾರಣೀಕವನ್ನು ಮೂಲಕಥೆಯನ್ನಾಗಿ ನಿರ್ಮಿಸಲಾಗಿರುವ ಈ ಕಥೆ ತನ್ನನ್ನು ಮರೆತು ಮೆರದವರನ್ನು ದೈವ ಯಾವ ರೀತಿ ಧರ್ಮದಲ್ಲಿ ನಡೆಯುವಂತೆ ಮಾಡಿತು ಎನ್ನುವುದನ್ನು ತಿಳಿಸಿ ಕೊಟ್ಟಿದೆ. ಇಂಥಹುದೇ ಹಲವು ನಿದರ್ಶನಗಳು ಕರಾವಳಿ ಭಾಗದಲ್ಲಿ ಸಾಕಷ್ಟು ನಡೆದಿದ್ದು, ಇಂಥಹುದೇ ಒಂದು ಘಟನೆಯನ್ನು ಕಾಂತಾರದ ಸಿನಿಮಾ ಚಾಲ್ತಿಯಲ್ಲಿರುವ ಸಮಯದಲ್ಲಿ ನೆನಪಿಸಬೇಕಿದೆ. ಹೌದು ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Bantwala, Dakshina kannada) ತಾಲೂಕಿನ ಪೆರ್ನೆ (Perne Village) ಎನ್ನುವ ಗ್ರಾಮದಲ್ಲಿ.


ಆ ಊರಿನ ಜನರಲ್ಲಿ ಇತ್ತೀಚಿನ ವರ್ಷಗಳಲ್ಲಿ  ನೆಮ್ಮದಿ ಬದುಕೆಂಬುದೇ ನಷ್ಟವಾಗಿ ಹೋಗಿತ್ತು. ಅಲ್ಲಲ್ಲಿ ಅಪಮೃತ್ಯುಗಳು, ಅತ್ಯಂತ ನಂಬಿಕೆಯ ನಾಗಗಳ ಸಾವುಗಳು ಅಲ್ಲಿನ ಜನರನ್ನು ನಿದ್ದೆಗೆಡಿಸಿತ್ತು. ನಾಗಗಳ ಸಾವನ್ನು ಬೆನ್ನತ್ತಿ ಹೋದ ಆ ಊರಿನ ಜನರಿಗೆ ವಿಸ್ಮಯವೇ ಕಾದಿತ್ತು. ಊರಿನಲ್ಲಿ ನಡೆಯುತ್ತಿರುವ ಇಂಥಹ ಗಂಡಾಂತರಗಳಿಗೆ 300 ವರ್ಷಗಳಿಂದ ಪಾಳು ಬಿದ್ದ ಆ ದೈವಸ್ಥಾನವೇ ಕಾರಣ ಎಂದು ತಿಳಿದಾಗ ಊರಿನ ಜನರಿಗೆ ಬರ ಸಿಡಿಲೇ ಬಡಿದಿತ್ತು.


ದೈವಗಳ ಬಗ್ಗೆ ಅಪಾರ ಭಕ್ತಿ, ನಂಬಿಕೆ


ಹೌದು ಈ ಘಟನೆ ನಡೆದಿರೋದು ಪರಶುರಾಮನ ಸೃಷ್ಠಿಯ ತುಳುನಾಡಿನಲ್ಲಿ. ತುಳುನಾಡಿನಲ್ಲಿ ದೇವರಿಗಿಂತಲೂ ದೈವಗಳಿಗೇ ಹೆಚ್ಚು ಮಹತ್ವ. ದೈವಗಳ ಜೊತೆಗೆ ಇಲ್ಲಿ ಮಣ್ಣು ನಾಗನಿಗೆ ಸೇರಿದ್ದು ಎನ್ನುವ ನಂಬಿಕೆಯೂ ಇದೆ. ಈ ಕಾರಣಕ್ಕಾಗಿಯೇ ಇಲ್ಲಿನ ಜನ ದೇವರಿಗಿಂತಲೂ ದೈವಗಳ ಬಗ್ಗೆ ಅಪಾರ ಭಕ್ತಿ, ನಂಬಿಕೆ ಹಾಗೂ ಭಯವನ್ನೂ ಹೊಂದಿದ್ದಾರೆ.


Daiva show his existence to people akp mrq
ದೈವಸ್ಥಾನ


ಪ್ರತಿ ಕುಟಂಬಕ್ಕೆ ಒಂದೊಂದು ದೈವಸ್ಥಾನ


ಇದೇ ಕಾರಣಕ್ಕಾಗಿಯೇ ಇಲ್ಲಿನ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ದೈವ ಸ್ಥಾನಗಳಿವೆ. ವರ್ಷಕ್ಕೊಮ್ಮೆ ಇಲ್ಲಿ ಈ ದೈವಗಳಿಗೆ ಕೋಲ, ತಂಬಿಲ ನಡೆಸೋದು ಇಲ್ಲಿನ ಜನರ ವಾಡಿಕೆಯೂ ಆಗಿದೆ. ನಂಬಿದವರಿಗೆ ಇಂಬು ಕೊಡುವೆ ಎನ್ನುವ ಇಲ್ಲಿನ ದೈವಗಳ ನುಡಿಯನ್ನು ನಂಬಿಕೊಂಡಿರುವ ಇಲ್ಲಿನ ಜನ ಚಾಚೂ ತಪ್ಪದೇ ತಮ್ಮ ಕುಟುಂಬ ದೈವಗಳ ಆರಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.


Daiva show his existence to people akp mrq
ದೈವಸ್ಥಾನ


ದೈವ ಮರೆತ ಊರಿನ ಕಥೆ


ತುಳುನಾಡಿನಲ್ಲಿ 400ಕ್ಕೂ ಮಿಕ್ಕಿದ ದೈವಗಳ ಆರಾಧನೆ ನಡೆಯುತ್ತಿರುವುದೇ ಇಲ್ಲಿನ ಜನರ ದೈವಗಳ ಮೇಲಿನ ಭಯ-ಭಕ್ತಿಗೆ ನಿದರ್ಶನವೂ ಆಗಿದೆ. ಇಂಥ ಭಯ-ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ದೈವಗಳನ್ನು ಕಾರಣಾಂತರಗಳಿಂದ ಮರೆತು ಬಿಟ್ಟ ಆ ಊರಿನ ಜನರ ಕಥೆಯೇ ಇದು.


ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾದ ಜನರ ಅಪಮೃತ್ಯುಗಳು, ತುಳುನಾಡಿನ ನಂಬಿಕೆಯ ಮೂಲಧಾರವಾದ ನಾಗಗಳ ಸಾವು ಇಲ್ಲಿನ ಜನರನ್ನು ವಿಚಲಿತರನ್ನಾಗಿ ಮಾಡಿತ್ತು.


Daiva show his existence to people akp mrq
ದೈವಸ್ಥಾನ


ಅಪಮೃತ್ಯು, ನಾಗಗಳ ಸಾವು


ಪೆರ್ನೆಯಲ್ಲಿ 2013 ರಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ನಡೆದ ದುರ್ಘಟನೆಯಲ್ಲಿ ಈ ಗ್ರಾಮಕ್ಕೆ ಸೇರಿದ 11 ಜನ ಸಾವನ್ನಪ್ಪಿದ್ದರು. ಅಲ್ಲದೆ ಬಾವಿಗೆ ಬಿದ್ದು ಸಾವು, ಆತ್ಮಹತ್ಯೆ, ಅಫಘಾತದಂತಹ ಹಲವು ಘಟನೆಗಳು ಇಲ್ಲಿ ನಿರಂತರವಾಗಿ ನಡೆಯಲಾರಂಭಿಸಿತ್ತು. ಈ ನಡುವೆ ಕಳೆದ ಆರು ತಿಂಗಳ ಒಳಗೆ ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳಲ್ಲಿ 14 ನಾಗರ ಹಾವುಗಳು ಆಕಸ್ಮಿಕವಾಗಿ ಸಾವಿಗೀಡಾಗಿರುವುದು ಇಲ್ಲಿನ ಜನರ ನಿದ್ದೆಗೆಡಿಸಿತ್ತು.


ತುಳುನಾಡಿನ ಭೂಮಿಯ ಒಡೆಯನಂತೆ ಆರಾಧಿಸಲ್ಪಡುತ್ತಿರುವ ನಾಗಗಳ ಸಾವಿನಿಂದ ಊರಿಗೆ ಗಂಡಾಂತರ ಬರಲಿದೆ ಎನ್ನುವುದನ್ನು ಮನಗಂಡ ಈ ಊರಿನ ಕೆಲವು ಮಂದಿ ಸೇರಿ ನಾಗಗಳ ಸಾವಿನ ಕಾರಣವನ್ನು ಹುಡುಕಿಕೊಂಡು ಹೊರಟರು.


ನಾಗಗಳ ಸಾವಿನ ರಹಸ್ಯ


ನಾಗ, ದೈವ, ದೇವರುಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಅತ್ಯಂತ ನಿಖರವಾಗಿ ಹೇಳಬಲ್ಲ ಅಷ್ಟಮಂಗಲ ಪ್ರಶ್ನೆಯನ್ನು ಕೇಳಿ ನಾಗಗಳ ಸಾವಿನ ರಹಸ್ಯ ತಿಳಿಯಲು ಹೊರಟ ಈ ಊರಿನ ಜನರಿಗೆ ಅಚ್ಚರಿಯ ಹಾಗೂ ವಿಸ್ಮಯಕಾರಿಯಾದ ಕೆಲವು ಅಂಶಗಳು ಬೆಳಕಿಗೆ ಬಂದಿದೆ.


Daiva show his existence to people akp mrq
ದೈವಸ್ಥಾನ


ಇದನ್ನೂ ಓದಿ:  Tippu Express ಇನ್ಮುಂದೆ ಒಡೆಯರ್ ಎಕ್ಸ್​ಪ್ರೆಸ್; ಹೆಸರು ಬದಲಾವಣೆಗೆ ಯಾರು, ಏನು ಹೇಳಿದ್ರು?


ಅಷ್ಟಮಂಗಲ ಪ್ರಶ್ನೆಗಾಗಿ ಖ್ಯಾತ ಜೋತಿಷ್ಯಿಗಳಾದ ಕೆ.ವಿ.ಗಣೇಶ್ ಭಟ್ ಮುಳಿಯ ಅವರನ್ನು ಸಂಪರ್ಕಿಸಿ ಪ್ರಶ್ನೆಗೆ ಗ್ರಾಮಸ್ಥರು ದಿನವನ್ನೂ ನಿಗದಿಪಡಿಸುತ್ತಾರೆ. ಗ್ರಾಮದಲ್ಲಿ ಅದ್ಧೂರಿಯಾಗಿ ಉತ್ಸವಾದಿಗಳು ನಡೆಯುತ್ತಿದ್ದ 500 ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನವೊಂದು ಕಾಡಿನೊಳಗೆ ಪಾಳು ಬಿದ್ದಿದೆ.


ಭಂಡಾರದ ಮನೆಯೂ ನೆಲಸಮ


ಇದಕ್ಕೆ ಸಂಬಂಧಪಟ್ಟ ಭಂಡಾರದ ಮನೆಯೂ ನೆಲಸಮವಾಗಿದೆ. ಆ ಮನೆಯಲ್ಲಿದ್ದ ದೈವದ ಮೂರ್ತಿಗಳೂ ಕೂಡಾ ಮಣ್ಣಿನಡಿಗೆ ಸೇರಿವೆ. ಈ ದೈವಸ್ಥಾನದ ಪುನರುತ್ಥಾನವೇ , ಗ್ರಾಮದ ಪುನರುತ್ಥಾನಕ್ಕೆ ಕಾರಣವಾಗಬಹುದು ಎನ್ನುವ ವಿಚಾರವನ್ನೂ ಅಷ್ಟಮಂಗಲ ಪ್ರಶ್ನೆಯ ಮೂಲಕ ಗ್ರಾಮಸ್ಥರು ಕಂಡುಕೊಂಡಿದ್ದರು.


ಇದನ್ನೂ ಓದಿ:  Crime News: ಬೇರೊಬ್ಬನ ಜೊತೆ ಗೆಳತಿಯ ಪ್ರೀತಿ; ಅಮಾಯಕನ ಮೇಲೆ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ


2023ರಲ್ಲಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಸಿದ್ಧತೆ


ಭಂಡಾರದ ಮನೆಯಲ್ಲಿ ಸಿಕ್ಕಿದ ದೈವಗಳು ಪೆರ್ನೆ ಹಾಗೂ ಬಿಳಿಯೂರು ಗ್ರಾಮಕ್ಕೆ ಸಂಬಂಧಪಟ್ಟಿದ್ದು ಎನ್ನುವುದು ಇದೀಗ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದಿದೆ. ಇದೀಗ ಈ ದೈವಗಳ ಆರಾಧನೆಗೆ ಈ ಊರಿನ ಜನ ನಿರ್ಧರಿಸಿದ್ದಾರೆ. ತನ್ನನ್ನು ಮರೆತ ಜನರಿಗೆ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಿದ ದೈವದ ಸೇಡು ಇದೀಗ ಆ ಊರಿನ ಜನರಲ್ಲಿ ದೈವ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ 2023 ರ ಫೆಬ್ರವರಿ ತಿಂಗಳಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ದೈವಸ್ಥಾನದ ಸಿದ್ಧಗೊಳ್ಳಲಿದೆ‌.

Published by:Mahmadrafik K
First published: