Suicide Attempt: ಹೆಂಡ್ತಿ ಜೊತೆ ಫೈಟ್ ಮಾಡೋ ಗಂಡ, ಠಾಣೆ ಮುಂದೆ ಥಂಡಾ! ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನ

ಪತ್ನಿ ಜೊತೆ ಜಗಳ ಮಾಡಿಕೊಂಡ ಪತಿ ಕೊನೆಗೆ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತ್ನಿ ಕವಿತಾ ದೂರು ಕೊಡಲು ಠಾಣೆಗೆ ಬಂದಿದ್ದಾರೆ. ಈ ವೇಳೆ ಪತಿಗೆ ಜ್ಞಾನೋದಯ ಆಗಿದೆ ಅನ್ಸತ್ತೆ. ತಕ್ಷಣ ಹೈಡ್ರಾಮಾ ಮಾಡಿ ಹೆಂಡತಿಯನ್ನು ತಡೆಯಲು ನೋಡಿದ್ದಾನೆ. ಹೆಂಡತಿ ಕೇಳದಿದ್ದಾಗ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯೊಬ್ಬ ಬೆಂಕಿ (Fire) ಹಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿದ (Suicide attempt) ಘಟನೆ ನಡೆದಿದೆ. ಬೆಂಗಳೂರು (Bengaluru) ಹೊರವಲಯವಾದ ಆನೇಕಲ್ ಬಳಿಯ ಜಿಗಣಿ ಪೊಲೀಸ್ ಠಾಣೆ (Police Station) ಮುಂಭಾಗವೇ ವ್ಯಕ್ತಿ ಪೆಟ್ರೋಲ್ (Petrol) ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚಿಕ್ಕಮಗಳೂರು ಮೂಲದ ರತೀಶ್ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪತ್ನಿ (Wife) ಜೊತೆ ಜಗಳದಿಂದ ಸೂಸೈಡ್​ಗೆ ಯತ್ನಿಸಿದ್ದಾನೆ. ತಕ್ಷಣ ಪೊಲೀಸ್ ಸಿಬ್ಬಂದಿ ಬೆಂಕಿ ನಂದಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ (Hospital) ದಾಖಲಿಸಿದ್ದಾರೆ. ಗಂಡನ ವಿರುದ್ಧ ದೂರು ನೀಡಲು ಪತ್ನಿ ಕವಿತಾ ಜಿಗಣಿ ಠಾಣೆ ಬಳಿ ಆಗಮಿಸಿದ್ದರು. ಈ ವೇಳೆ ಹೆಂಡತಿ ಜೊತೆ ವಾಗ್ವಾದ ಮಾಡಿಕೊಂಡೇ ಬಂದ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆೆ.

ಪತ್ನಿ ಜೊತೆ ಜಗಳ ಮಾಡಿಕೊಂಡ ಪತಿ ಕೊನೆಗೆ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತ್ನಿ ಕವಿತಾ ದೂರು ಕೊಡಲು ಠಾಣೆಗೆ ಬಂದಿದ್ದಾರೆ. ಈ ವೇಳೆ ಪತಿಗೆ ಜ್ಞಾನೋದಯ ಆಗಿದೆ ಅನ್ಸತ್ತೆ. ತಕ್ಷಣ ಹೈಡ್ರಾಮಾ ಮಾಡಿ ಹೆಂಡತಿಯನ್ನು ತಡೆಯಲು ನೋಡಿದ್ದಾನೆ. ಹೆಂಡತಿ ಕೇಳದಿದ್ದಾಗ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Daily fight with wife she came to police station for complaint but husband poured petrol Bengaluru
ಸಾಂದರ್ಭಿಕ ಚಿತ್ರ


ಸಂಸಾರದಲ್ಲಿ ದಿನನಿತ್ಯ ಕಲಹ

ಹತ್ತು ವರ್ಷದ ಹಿಂದೆ ಕೊಳ್ಳೆಗಾಲ ಮೂಲದ ಕವಿತಾ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆ ಬಳಿಕ ಬನ್ನೇರುಘಟ್ಟದಲ್ಲಿ ಮಡದಿಯೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಇತ್ತೀಚೆಗೆ ಸಂಸಾರದಲ್ಲಿ ವಿರಹ ಮೂಡಿತ್ತು.

ಇದನ್ನೂ ಓದಿ: ಹಬ್ಬಕ್ಕೆಂದು ಊರಿಗೆ ಬಂದಿದ್ದ ಮಗಳು-ಅಳಿಯ, ಮೊಮ್ಮಗನೂ ಮಸಣಕ್ಕೆ!

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಇಂದು ಕೂಡ ಇಬ್ಬರ ನಡುವೆ ಜಗಳವಾಗಿದೆ. ಆಗ ಗಂಡನ ವಿರುದ್ಧ ದೂರು ನೀಡಲು ಪತ್ನಿ ಕವಿತಾ ಜಿಗಣಿ ಠಾಣೆ ಬಳಿ ಆಗಮಿಸಿದ್ದಾರೆ. ಈ ವೇಳೆ ಠಾಣೆ ಬಳಿ ಹೆಂಡತಿ ಜೊತೆ ಗಂಡ ವಾಗ್ವಾದ ನಡೆಸಿದ್ದಾನೆ. ಪೊಲೀಸ್ ಠಾಣೆಗೆ ದೂರು ನೀಡದಂತೆ ಪತ್ನಿಗೆ ಒತ್ತಾಯ ಮಾಡಿದ್ದಾನೆ. ಒಪ್ಪದಿದ್ದಾಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೀ ಕುಡಿಯೋ ಟೇಬಲ್‌ಗಾಗಿ ಕೊಲೆ ಮಾಡಿದವರ ಬಂಧನ!

ಟೇಬಲ್‌ ಮೇಲೆ ಕುಳಿತುಕೊಂಡು ಟೀ ಕುಡಿಯುವ ಸಲುವಾಗಿ ಓರ್ವನ ಹತ್ಯೆಗೈದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಜಯಪುರ ನಗರದಲ್ಲಿ ನಾಲ್ವರು ಆರೋಪಿಗಳು ಅಂದರ್ ಆಗಿದ್ದಾರೆ. ನಾಗರಾಜ್ ಗಣಿ, ಅಭಿಲಾಷ್ ರಜಪೂತ, ರಮೇಶ ಉಗಾರಕರ್, ಶಿವಪುತ್ರ ನಾವ್ಹಿ ಬಂಧಿತ ಆರೋಪಿಗಳು. ವಿಜಯಪುರದ ಬೈಪಾಸ್ ಬಳಿಯ ಚಹಾದ ಅಂಗಡಿ ಮುಂದೆ ಗಲಾಟೆ ನಡೆದಿತ್ತು.

ಧಾರವಾಡದಲ್ಲಿ ಕಿರುಕುಳ ಕೊಟ್ಟಿದ್ದ ಕಾಲೇಜ್ ಅಧ್ಯಕ್ಷನ ಬಂಧನ

ಶಾಲಾ-ಕಾಲೇಜು ಅಂದ್ರೆ ದೇವಸ್ಥಾನದ ಸಮ ಅಂತೀವಿ. ಗುರುಗಳನ್ನು ದೇವರ ಸಮಾನವಾಗಿ ಕಾಣ್ತೀವಿ. ಆದರೆ ಧಾರವಾಡದಲ್ಲಿ ಕಾಲೇಜು ಪ್ರಿನ್ಸಿಪಾಲ್ ಮತ್ತು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷನೇ ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟಿದ್ದಾರೆ. ಈಗ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷನನ್ನು ಬಂಧಿಸಲಾಗಿದೆ.

ಕೇಸ್​ ದಾಖಲಾಗ್ತಿದ್ದಂತೆ ಪರಾರಿಯಾಗಿದ್ದ ಅಧ್ಯಕ್ಷ

ಧಾರವಾಡದ ವಿಶ್ವೇಶ್ವರಯ್ಯ ಕಾಲೇಜ್‌ನಲ್ಲಿ ಈ ಘಟನೆ ನಡೆದಿತ್ತು. ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ‌ ಕಾಲೇಜ್ ಅಧ್ಯಕ್ಷ ಬಸವರಾಜ ಯಡವಣ್ಣವರ ದೌರ್ಜನ್ಯ ಎಸಗಿದ್ದ. ಈತನಿಗಾಗಿ ಬಲೆ ಬೀಸಲಾಗಿತ್ತು. ಇಂದು ಬಸವರಾಜ ಯಡವಣ್ಣವರನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಈ ಮೊದಲು ಕಾಲೇಜು ಪ್ರಿನ್ಸಿಪಾನ್​ನನ್ನು ಅರೆಸ್ಟ್ ಮಾಡಲಾಗಿತ್ತು.

ಇದನ್ನೂ ಓದಿ: ಆರೋಪಿ ಇಲ್ಲದಿದ್ದರೂ ನಡೆಯುತ್ತಾ ವಿಚಾರಣೆ? ಕರ್ನಾಟಕ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

ಬಸವರಾಜ ಯಡವಣ್ಣವರ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ದೂರು ದಾಖಲಿಸಿದ್ದಳು. ಈ ಅಧ್ಯಕ್ಷ ಜ್ಯೂಸ್ ನೀಡಿ ದೌರ್ಜನ್ಯ ಎಸಗಿದ್ದ. ನಂತರ ಕೇಸ್ ದಾಖಲಾಗುತ್ತಿದ್ದಂತೆ ಬಸವರಾಜ ಯಡವಣ್ಣವರ ಧಾರವಾಡ ಬಿಟ್ಟು ಪರಾರಿಯಾಗಿದ್ದ. ಕೊನೆಗೂ ಪೊಲೀಸರು ಬಸವರಾಜ ಯಡವಣ್ಣವರನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Published by:Thara Kemmara
First published: