ಬೆಂಗಳೂರು: : ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ (Hindu Religious Institutions) ಆಯುಕ್ತೆ ರೋಹಿಣಿ ಸಿಂಧೂರಿ (IAS Officer Rohini Sindhuri) ಅವರು ಮಾಜಿ ಸಚಿವ ಸಾರಾ ಮಹೇಶ್ ಜೊತೆಗೆ ಸಭೆ ನಡೆಸಿದ ಒಂದು ಫೋಟೋ ವೈರಲ್ ಆಗಿತ್ತು. ಈ ಫೋಟೋ ವೈರಲ್ ಬೆನ್ನಲ್ಲೇ ಫೇಸ್ಬುಕ್ನಲ್ಲಿ ಪೋಸ್ಟ್ (Facebook Post) ಮಾಡಿದ್ದ ಐಜಿಪಿ ಡಿ ರೂಪಾ, ರೋಹಿಣಿ ಸಿಂಧೂರಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಇದಾದ ಕೆಲ ಸಮಯದ ಬಳಿಕ ರೋಹಿಣಿ ಸಿಂಧೂರಿ ಮೂರು ಪುರುಷ ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎಂದು ಕೆಲ ಖಾಸಗಿ ಫೋಟೋಗಳನ್ನು (Rohini Sindhuri Private Photos) ಬಿಡುಗಡೆಗೊಳಿಸಿದ್ದರು. ಈ ಆರೋಪಕ್ಕೆ ಪ್ರತಿಯಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ ರೋಹಿಣಿ ಸಿಂಧೂರಿ ದೂರು ದಾಖಲಿಸೋದಾಗಿ ಹೇಳಿದ್ದರು. ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ (Sudheer Reddy , Rohini Sindhuri Husband), ಪತ್ನಿ ಹಾಗೂ ತಮ್ಮ ಕುಟುಂಬದ ವಿರುದ್ಧ ಕೇಳಿ ಬಂದ ಆರೋಪಗಳಿಗೆ ತಿರುಗೇಟು ನೀಡಿದ್ದರು.
ಸುಧೀರ್ ರೆಡ್ಡಿ ಹೇಳಿಕೆ ಬೆನ್ನಲ್ಲೇ ಡಿ ರೂಪಾ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಸುದ್ದಿಗೋಷ್ಠಿ ಮಾಡ್ತಾರೆ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಮಾನ ಹರಾಜು ಆಗಿದೆ!
ರೋಹಿಣಿ ಸಿಂಧೂರಿಗೆ ಮೀಡಿಯಾದವರ ಸವಾಲು ಎದುರಿಸಲು ಧೈರ್ಯ ಇಲ್ಲವಾ? ಉತ್ತರಗಳಿಲ್ಲವಾ? ಅವರ ಪತಿ ಹೇಳೋದು, phone hack ಮಾಡಲಾಗಿದೆ ಅಂತ. ಇದು ನಂಬುವ ಮಾತೇ? ಏನೋ ಹೇಳಬೇಕು ಪಾಪ. ಮಾನ ಹರಾಜು ಆಗಿದೆ ಎಂದು ವ್ಯಂಗ್ಯವಾದ ಸಾಲುಗಳನ್ನು ಡಿ ರೂಪಾ ಬರೆದುಕೊಂಡಿದ್ದಾರೆ.
ಸುಧೀರ್ ರೆಡ್ಡಿ ಹೇಳಿದ್ದೇನು?
ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿರುವ ರೂಪಾ ಕಿಡಿಕಾಡಿದ್ದಾರೆ, ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಅವರು ಯಾವುದೇ ಸಾಮಾಜಿಕ ಜಾಲತಾಣ ಸಹ ಬಳಕೆ ಮಾಡುತ್ತಿಲ್ಲ. ನಾನು ಆಂಧ್ರ ಪ್ರದೇಶದವನೂ ಅಲ್ಲ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದಿರುವ ಕನ್ನಡಿಗ. ಪತ್ನಿಯ ಫೋಟೋಗಳು ರೂಪಾ ಅವರಿಗೆ ಸಿಕ್ಕಿದ್ದು ಹೇಗೆ? ಈ ರೂಪಾ ಅನ್ನೋರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಹಜವಾಗಿ ರಾಜ್ಯದಲ್ಲಿ ಅವರಿಗೆ ಒಳ್ಳೆಯ ಹೆಸರು ಇದೆ. ಆದರೆ ಅವರ ಹೆಸರಿಗೆ ಮಸಿ ಬಳೆಯುವ ಕೆಲಸಗಳು ನಡೆಯುತ್ತಿವೆ. ರೋಹಿಣಿ ಸಿಂಧೂರಿ ಯಾರಿಗೆ ಫೋಟೋ ಕಳುಹಿಸಿದ್ದಾರೆ ಎಂಬುದನ್ನು ರೂಪಾ ಅವರು ಹೇಳಲಿ ಎಂದು ಸುಧೀರ್ ರೆಡ್ಡಿ ಸವಾಲು ಹಾಕಿದ್ದಾರೆ.
ಖಾಸಗಿ ಫೋಟೋ ಬಳಸದಂತೆ ಸಿಂಧೂರಿ ಮನವಿ
ಮಾಧ್ಯಮಗಳಲ್ಲಿ (Media) ತಮ್ಮ ಖಾಸಗಿ ಫೋಟೋಗಳನ್ನು (Private Photos) ಬಳಕೆ ಮಾಡದಂತೆ ಮನವಿ ಮಾಡಿದ್ದಾರೆ. ಪ್ರತಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಖಾಸಗಿ ಫೋಟೋಗಳನ್ನು ಶೇರ್ ಮಾಡಿದ ಕಾರಣಕ್ಕೆ ರೂಪಾ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Rohini Sindhuri Vs D Roopa: ಮಹಿಳಾಧಿಕಾರಿಗಳ ಕಿತ್ತಾಟಕ್ಕೆ ಸಿಎಂ ಬೊಮ್ಮಾಯಿ ಗರಂ; ಇಬ್ಬರಿಗೂ ನೋಟಿಸ್ ನೀಡಲು ಸೂಚನೆ?
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ ಅವರು, ಸಾಮಾಜಿಕ ಮಾಧ್ಯಮಗಳಿಂದ ಹಾಗೂ ವಾಟ್ಸಾಪ್ ಸ್ಟೇಟಸ್ಗಳಿಂದ ಸ್ಕ್ರೀನ್ ಶಾಟ್ಗಳ ಮೂಲಕ ಸಂಗ್ರಹಿಸಿದ ಫೋಟೋಗಳನ್ನು ನನ್ನ ತೇಜೋವಧೆ ಮಾಡಲು ರೂಪಾ ಐಪಿಎಸ್ ಬಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ