• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • D Roopa Husband: ಪರಿಷತ್​ನಲ್ಲಿ ಹಳ್ಳಿ ಹಕ್ಕಿ ಕುಟುಕಿದ್ದಕ್ಕೆ ಗದ್ಗದಿತರಾದ ಡಿ ರೂಪಾ ಪತಿ

D Roopa Husband: ಪರಿಷತ್​ನಲ್ಲಿ ಹಳ್ಳಿ ಹಕ್ಕಿ ಕುಟುಕಿದ್ದಕ್ಕೆ ಗದ್ಗದಿತರಾದ ಡಿ ರೂಪಾ ಪತಿ

ಹೆಚ್ ವಿಶ್ವನಾಥ್, ಮೌನಿಶ್ ಮೌದ್ಗಿಲ್, ಡಿ ರೂಪಾ

ಹೆಚ್ ವಿಶ್ವನಾಥ್, ಮೌನಿಶ್ ಮೌದ್ಗಿಲ್, ಡಿ ರೂಪಾ

ಈ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡದೇ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸರ್ಕಾರದ ಪರವಾಗಿ ಸಚಿವ ಅಶ್ವತ್ಥ್ ನಾರಾಯಣ್ ಉತ್ತರ ನೀಡಿದರು.

  • Share this:

ಬೆಂಗಳೂರು: ಐಎಎಸ್ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಡಿ.ರೂಪಾ (IPS D Roopa) ನಡುವಿನ ಜಗಳ ಇಂದು ಸಹ ಸದನದಲ್ಲಿ ಸದ್ದು ಮಾಡಿದೆ. ನಿನ್ನೆಯೂ ವಿಧಾನ ಪರಿಷತ್​ನಲ್ಲಿ (Vidhana Parishat) ಅಧಿಕಾರಿಗಳ ಕಿತ್ತಾಟದ (Officer War) ಬಗ್ಗೆ ಚರ್ಚೆ ನಡೆಸಲಾಗಿತ್ತು. ಇಂದು ವಿಧಾನ ಪರಿಷತ್ ಶೂನ್ಯ ವೇಳೆ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ (BJP MLC H.Vishwanath) ಇಬ್ಬರು ಅಧಿಕಾರಿಗಳ ಜಗಳಕ್ಕೆ ಬೇಸರ ಹೊರ ಹಾಕಿದರು. ತಮ್ಮ ಮೊನಚು ಮಾತುಗಳಿಂದಲೇ ಅಧಿಕಾರಿಗಳಿಗೆ ವಿಶ್ವನಾಥ್ ಚಾಟಿ ಬೀಸುತ್ತಿದ್ರೆ, ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತಿದ್ದ ಡಿ.ರೂಪಾ ಪತಿ ಐಎಎಸ್​ ಅಧಿಕಾರಿ ಮುನೀಶ್ ಮೌದ್ಗಿಲ್ (IAS Officer Munish Moudgil) ಗದ್ಗದಿತರಾಗಿರೋದು ಕಂಡು ಬಂತು.


ಶೂನ್ಯ ವೇಳೆಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್. ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರ ಆರೋಪ ಪ್ರತ್ಯಾರೋಪಗಳು ಧಾರಾವಾಹಿ ರೂಪದಲ್ಲಿ ಪ್ರಸಾರ ಆಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇದು ಪ್ರಾರಂಭವಾಗಿ ಮಾಧ್ಯಮಗಳಲ್ಲಿ ಮುಂದುವರೆದಿದೆ ಎಂದು ಹೇಳಿದರು.


ಸರ್ಕಾರಕ್ಕೆ ಹೆಚ್.ವಿಶ್ವನಾಥ್ ಪ್ರಶ್ನೆ?


ಇದು ರಾಜ್ಯದ ಆಡಳಿತದ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. ಇಂತಹ ನೈತಿಕತೆ ಕಳೆದುಕೊಂಡ ನಡತೆಗೆಟ್ಟವರು ನಮ್ಮ ರಾಜ್ಯಕ್ಕೆ ಬೇಕಾ? ಸಿಂಧೂರಿ ಮತ್ತು ಸಾರಾ ಮಹೇಶ್ ಮಧ್ಯೆ ಸಂಧಾನ ನಡೆಸಲು ಪಿ ಮಣಿವಣ್ಣನ್ ಅವರಿಗೆ ಸರ್ಕಾರ ಅಧಿಕಾರ ಕೊಟ್ಟಿದೆಯಾ ಎಂದು ಹೆಚ್.ವಿಶ್ವನಾಥ್ ಪ್ರಶ್ನೆ ಮಾಡಿದರು.


ಇಬ್ಬರ ವಿರುದ್ಧ ತನಿಖೆಗೆ ಆದೇಶ ಕೊಡಿ


ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ. ಮಹೇಶ್ ಮಾಡಿರುವ ಆರೋಪಗಳು ಹಾಗೆ ಇವೆ. ಸಿಂಧೂರಿ ಇನ್ನೂ ಆರೋಪ ಮುಕ್ತರಾಗಿಲ್ಲ. ಈ ಸಂದರ್ಭದಲ್ಲಿ ಸಂಧಾನ ನಡೆಸಲು ಪ್ರಯತ್ನಿಸಿದ್ದು ಸರಿಯಾ? ಇವರಿಗೆ ಸರ್ಕಾರ ಯಾಕೆ ಈವರೆಗೆ ಶೋಕಾಸ್ ನೋಟಿಸ್​ ಕೊಟ್ಟಿಲ್ಲ, ಕೊಡದೇ ಇರುವುದಕ್ಕೆ ಕಾರಣವಾದರೂ ಏನು? ತಕ್ಷಣವೇ ಈ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ಆರಂಭಿಸಬೇಕು ಎಂದು ವಿಶ್ವನಾಥ್ ಪ್ರಸ್ತಾಪಿಸಿದರು.


ಈ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡದೇ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಬಿಗಿಯಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಸರ್ಕಾರದ ಪರವಾಗಿ ಸಚಿವ ಅಶ್ವತ್ಥ್ ನಾರಾಯಣ್ ಉತ್ತರ ನೀಡಿದರು.




ಗದ್ಗದಿತರಾದ ಮೌನೀಶ್ ಮೌದ್ಗಿಲ್


ಈ ಚರ್ಚೆ ನಡೆಯುವಾಗ ಪರಿಷತ್ ಅಧಿಕಾರಿಗಳ ಗ್ಯಾಲರಿಯಲ್ಲಿದ್ದ ಮನೀಶ್ ಮೌದ್ಗಿಲ್, ಇಂತಹ ನೈತಿಕತೆ ಕಳೆದುಕೊಂಡ ನಡತೆಗೆಟ್ಟ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಬೇಕಾ ಎಂದು ವಿಶ್ವನಾಥ್ ಹೇಳುತ್ತಿದ್ದಂತೆ ಗದ್ಗದಿತರಾದರು. ಮೌನೀಶ್ ಮೌದ್ಗಿಲ್ ಪ್ರಾಮಾಣಿಕ, ತಾಂತ್ರಿಕತೆಯಲ್ಲಿ ನಿಪುಣ ಅಧಿಕಾರಿ ಎಂದು ಹೆಸರು ಮಾಡಿದ್ದಾರೆ.


ಚರ್ಚೆಗೆ ಅವಕಾಶ ಕೇಳಿದ್ದ ಹೆಚ್.ವಿಶ್ವನಾಥ್


ನಿನ್ನೆ ಪರಿಷತ್ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದ ಹೆಚ್.ವಿಶ್ವನಾಥ್, ಇಬ್ಬರೂ ಅಧಿಕಾರಿಗಳ ವರ್ತನೆಯಿಂದ ಆಡಳಿತ ಮೇಲೆ ಪರಿಣಾಮ ಉಂಟಾಗಿದೆ. ರೋಹಿಣಿ ಹಾಗೂ ರೂಪಾ ಅವರಿಗೆ ಅಭಿಮಾನಿ ಸಂಘಗಳೂ ಹುಟ್ಟಿಕೊಂಡಿವೆ. ಈ ಬಗ್ಗೆ ಚರ್ಚೆ ಮಾಡಿದರೆ ಸರ್ಕಾರ ಉತ್ತರ ಕೊಡಲು ಆಗುವುದಿಲ್ಲ. ಹೀಗಾಗಿ ನಿಯನದಡಿ ಚರ್ಚೆಗೆ ಪ್ರಸ್ತಾವನೆ ಕೊಡಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರ ಮನವಿ ಮಾಡಿಕೊಂಡಿದ್ದರು. ನಾಳೆ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದರು.


ಇದನ್ನೂ ಓದಿ:  Rohini Sindhuri Vs D Roopa: ನಾನು ಗಟ್ಟಿಗಿತ್ತಿ, ಹೋರಾಡುತ್ತೇನೆ; ಆಡಿಯೋ ಲೀಕ್​ ಬೆನ್ನಲ್ಲೇ ಡಿ ರೂಪಾ ಮತ್ತೊಂದು ಪೋಸ್ಟ್


ವಿಶ್ವನಾಥ್ ಅವರು ಹಿರಿಯ ಸದಸ್ಯರುಯಾವುದಾರೊಂದು ನಿಯಮದಡಿ ಚರ್ಚೆಗೆ ಕೊಡಲಿ. ಸರ್ಕಾರ ಆಗ ಉತ್ತರ ಕೊಡಲು ಸಾಧ್ಯವಾಗುತ್ತದೆ ಎಂದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು