• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • D Roopa Audio Viral: ವರ್ಗಾವಣೆ ಬಳಿಕ ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಸ್ಪೋಟಕ ಆಡಿಯೋ ವೈರಲ್

D Roopa Audio Viral: ವರ್ಗಾವಣೆ ಬಳಿಕ ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಸ್ಪೋಟಕ ಆಡಿಯೋ ವೈರಲ್

ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾ

ರೋಹಿಣಿ ಸಿಂಧೂರಿ ವರ್ಸಸ್ ಡಿ ರೂಪಾ

Rohini Sindhuri Vs D Roopa: ಆರ್​​ಟಿಐ ಕಾರ್ಯಕರ್ತ ಗಂಗರಾಜು (RTI Activist Gangaraju ) ಜೊತೆ ಮಾತನಾಡುವ ವೇಳೆ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ಬೆಂಗಳೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್​ ಅಧಿಕಾರಿ ಡಿ.ರೂಪಾ (IPS Officer D Roopa) ನಡುವಿನ ಜಗಳ ಮತ್ತೊಂದು ಹಂತಕ್ಕೆ ತಲುಪಿದೆ. ಈಗಾಗಲೇ ಇಬ್ಬರಿಗೂ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಿ ಸರ್ಕಾರ ಶಿಕ್ಷೆ ನೀಡಿದೆ. ಇತ್ತ ರೂಪಾ ಪತಿ ಐಎಎಸ್ ಅಧಿಕಾರಿ ಮೌನೀಶ್ ಮುದ್ಗಿಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ರೋಹಿಣಿ ಸಿಂಧೂರಿ ವಿರುದ್ಧ ಸ್ಪೋಟಕ ಆರೋಪ ಮಾಡಿರುವ ಡಿ.ರೂಪಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ (D Roopa Audio) ಆಗಿದೆ. ಆರ್​​ಟಿಐ ಕಾರ್ಯಕರ್ತ ಗಂಗರಾಜು (RTI Activist Gangaraju ) ಜೊತೆ ಮಾತನಾಡುವ ವೇಳೆ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.


ಆಡಿಯೋದಲ್ಲಿ ಏನಿದೆ?


ನೀವು ಮೊದಲು ಅಪ್ಲಿಕೇಶನ್ ಕಳಿಸಿ. ಗಂಡನ ರಿಯಲ್ ಎಸ್ಟೇಟ್ ಬ್ಯುಸಿನೆಸ್​ ಪ್ರಮೋಟ್ ಮಾಡಲು ಲ್ಯಾಂಡ್​ ರೆಕಾರ್ಡ್​ ಆಫೀಸ್​ ನಿಂದ ಎಷ್ಟು ಮಾಹಿತಿ ತೆಗೆದುಕೊಂಡಿದ್ದಾಳೆ ಅಂತ ಗೊತ್ತು. ನೀವು ಇದರಲ್ಲಿ ಶಾಮೀಲು ಆಗಿದ್ದೀರಿ. ನನಗೆ ಬರುತ್ತಿರೋ ಕೋಪದಲ್ಲಿ, ಬೇಕಿದ್ರೆ ಈ ಆಡಿಯೋ ಪಬ್ಲಿಕ್ ಮಾಡ್ಕೊಳ್ಳಿ. ರೋಹಿಣಿ ಸಿಂಧೂರಿ ಎಷ್ಟು ಮನೆ ಕೆಡೆಸಿದ್ದಾಳೆ ಎಂಬುವುದು ಎಲ್ಲರಿಗೂ ಗೊತ್ತಾಗಲಿ ಎಂದು ಡಿ ರೂಪಾ ಹೇಳಿದ್ದಾರೆ.


ರವಿ ಆತ್ಮಹತ್ಯೆಗೆ ರೋಹಿಣಿ ಪ್ರಚೋದನೆ?


ಡಿ‌.ಕೆ ರವಿ ಸಾವಿನ ಸಿಬಿಐ ರಿಪೋರ್ಟ್ ಮತ್ತೆ ಮುನ್ನೆಲೆಗೆ ಬಂದಿದೆ. ಡಿ. ರೂಪಾ ತಮ್ಮ ಆರೋಪಗಳಲ್ಲಿ ಡಿ‌.ಕೆ ರವಿ ಸಾವಿನ ಬಗ್ಗೆ ಸಿಬಿಐ ರಿಪೋರ್ಟ್​ನಲ್ಲಿರುವ ಅಂಶವನ್ನು ಪ್ರಸ್ತಾಪಿಸಿದ್ದರು.


ಡಿ.ಕೆ ರವಿ ತೊಂದರೆ ಕೊಡ್ತಿದ್ರೆ ನಂಬರ್ ಯಾಕೆ ಬ್ಲಾಕ್ ಮಾಡಲಿಲ್ಲ ಎಂದು ಡಿ.ರೂಪಾ ಪ್ರಶ್ನಿಸಿದ್ರು. ಇದೀಗ ಡಿ.ರೂಪಾಗೆ ವಕೀಲ ಸೂರ್ಯ ಮುಕುಂದರಾಜ್ ಬೆಂಬಲ ನೀಡಿದ್ದಾರೆ. ರೋಹಿಣಿ ಮೇಲೆ ಆತ್ಮಹತ್ಯೆ ಪ್ರಚೋದನೆ ದಾಖಲಾಗಬೇಕಿತ್ತು ಎಂದಿದ್ದಾರೆ.




8 ಡಿಲಿಟೆಡ್​ ಫೋಟೋ ಸೀಕ್ರೆಟ್


ತಮ್ಮ ವಿರುದ್ಧ ಸಾಲು ಸಾಲು ದೂರು ನೀಡಿದ್ದ ಐಪಿಎಸ್ ಅಧಿಕಾರಿ ಡಿ ರೂಪಾ (IPS Officer D Roopa) ಅವರ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ (Chief Secretary Vandita Sharma) ಅವರಿಗೆ ಇಂದು ದೂರು ದಾಖಲು ಮಾಡಿದ್ದಾರೆ. ಇತ್ತ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಅವರು ಕೂಡ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ‌‌ (Bagalgunte Police Station) ಡಿ ರೂಪಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.


ಇತ್ತ ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಮತ್ತೆ ರೋಹಿಣಿ ಅವರ ವಿರುದ್ಧ ತಮ್ಮ ಆರೋಪಗಳನ್ನು ಮುಂದುವರಿಸಿರುವ ಡಿ ರೂಪಾ ಅವರು, ರೋಹಿಣಿ ಸಿಂಧೂರಿ ಅವರು ನಗ್ನ ಫೋಟೋಗಳನ್ನು ಕಳುಹಿಸಿದ್ದಾರೆ. ಆ ಮೂಲಕ ಐಎಎಸ್ ಅಧಿಕಾರಿ ನಿಯಮಗಳನ್ನು ಮುರಿದಿದ್ದಾರೆ. ಅಲ್ಲದೆ ಎಷ್ಟೋ ಸಂಸಾರ ಹಾಳು ಮಾಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.


ಇದನ್ನೂ ಓದಿ: Rohini Sindhuri: 'So Madly Beautiful, 8 ಡಿಲಿಟೆಡ್​ ಫೋಟೋ ಸೀಕ್ರೆಟ್' -ರೋಹಿಣಿ ವಿರುದ್ಧ ರೂಪಾ ಮತ್ತೊಂದು ಬಾಂಬ್


ನಗ್ನ ಚಿತ್ರ ಕಳಿಸಬಹುದಾ?


ರೋಹಿಣಿ ಸಿಂಧೂರಿ Get well soon ಅಂತ ಹೇಳಿದ್ದಾರೆ. ಅವರ ಡಿಲಿಟೆಡ್ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ಎಂದು ಮೊಬೈಲ್ ಸ್ಕ್ರೀನ್​ ಶಾಟ್​ ಒಂದರ ಫೋಟೋ ಶೇರ್ ಮಾಡಿ ಪ್ರಶ್ನಿಸಿದ್ದಾರೆ. ಅಲ್ಲದೆ ಫೋಟೋದಲ್ಲಿ ಇರುವ ನಂಬರ್ ರೋಹಿಣಿ ಸಿಂಧೂರಿ ಅವರದ್ದೇ ಅಲ್ವಾ? ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ.

Published by:Mahmadrafik K
First published: