ಬೆಂಗಳೂರು: ಇಂದು ಬೆಳಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ (Congress Leader R Dhruv Narayan) ನಿಧನರಾಗಿದ್ದು, ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಕಣ್ಣೀರಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಧೃವ ನಾರಾಯಣ ಅವರ ಕಾರ್ಯ ಇತಿಹಾಸ ಗೊತ್ತಿದೆ. ಒಂದು ವೋಟ್ ಧೃವ ನಾರಾಯಣ್ ಅಂತ ನಿನ್ನೆ ನಾವು ಮಾತಾಡ್ತಾ ಇದ್ದೀವಿ. ಅದು ಶಾಶ್ವತವಾಗಿ ಉಳಿಯಲಿಲ್ಲ. ನಾನು ಮಲಗಿದ್ದೆ, ನಮ್ಮ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಬ್ಲಡ್ ವಾಮಿಟ್ ಆಗಿ ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದಾರೆ ಅಂದರು.ಸಾವಿಗೂ ಹುಟ್ಟಿಗೂ ನಡುವೆ ಒಂದು ಪುಟ್ಟ ಜೀವನವನ್ನ ಭಗವಂತ ಇಟ್ಟಿದ್ದ. ಇಡೀ ನಮ್ಮ ಕಾಂಗ್ರೆಸ್ ಪರಿವಾರಕ್ಕೆ ಯಾವೆಲ್ಲಾ ಜವಬ್ದಾರಿ ತೆಗೆದುಕೊಂಡಿದ್ರೂ ಸಂಭಾವ್ಯ ಮೆರೆದಿದ್ದ ವ್ಯಕ್ತಿ ಎಂದು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದರು.
ಯಾರನ್ನು ಕೂಡ ನೋಯಿಸಬಾರದು ಎಂಬ ವಿಶೇಷ ಗುಣ ಹೊಂದಿದ್ದ ನಾಯಕ ನಮ್ಮ ಧ್ರುವ ನಾರಾಯಣ. ಎಲ್ಲಾ ಸಮಾಜದವರು ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದ ವ್ಯಕ್ತಿ. ನನಗೂ ಕೂಡಾ ಹತ್ತಾರು ಬಾರಿ ಸಮಾಧಾನ ಹೇಳಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದರು ಎಂದು ಧ್ರುವ ನಾರಾಯಣ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.
ಎಲ್ಲಾ ಕಾರ್ಯಕರ್ತರಿಗೂ ಆಸ್ತಿ ಆಗಿದ್ರು
ನನ್ನ ಕುಟುಂಬ ಹಾಗೂ ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ಆಸ್ತಿಯಾಗಿದ್ದರು. ಅವರ ಕ್ಷೇತ್ರದಲ್ಲಿ ಮಾಡಿದ್ದ ಕೆಲಸ ಸಾಕ್ಷಿಯಾಗಿ ಉಳಿದುಕೊಂಡಿದೆ. ಇಂದು ಅವರು ನಮ್ಮ ಜೊತೆ ಇಲ್ಲ ಎಂಬ ವಿಷಯ ತಿಳಿದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧಿ ನಾಯಕಿ ಸೋನಿಯಾ ಗಾಂಧಿಯವರು ಸೇರಿದಂತೆ ಎಲ್ಲಾ ನಾಯಕರು ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ.
ಎಲ್ಲರ ಹೃದಯ ಗೆದ್ದ ನಾಯಕ
ಧ್ರುವ ನಾರಾಯಣ ಅವರ ಸಾವನ್ನು ಯಾರಿಗೂ ನಂಬೋದಕ್ಕೆ ಆಗ್ತಿಲ್ಲ. ಅವರು ಅಷ್ಟು ಸಹ ಎಲ್ಲರ ಹೃದಯವನ್ನು ಗೆದ್ದಿದ್ದವರು. ರಾಮನಗರದ ಕಾರ್ಯಕ್ರಮ ರದ್ದು ಮಾಡಿದ್ದೇನೆ. ಸಂಜೆ ಅಂತಿಮ ಗೌರವ ಕೊಡುವ ಬಗ್ಗೆ ಅವರೇ ಮಾತನಾಡುತ್ತಾರೆ. ಸಿಎಂ ಅವರು ಕೂಡಾ ಸರ್ಕಾರಿ ಗೌರವದ ಬಗ್ಗೆ ಮಾತನಾಡಿದ್ದಾರೆ. ಈ ನಷ್ಟವನ್ನು ನನ್ನಿಂದ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು.
ಲ
ಕೋವಿಡ್ ಸಮಯದಲ್ಲಿ ಇಡೀ ರಾಜ್ಯದ ತುಂಬೆಲ್ಲಾ ಓಡಾಡಿ ಜನರಿ ಜೀವನದ ಬಗ್ಗೆ ಕಾರ್ಯ ಮಾಡಿದ್ದರು. ಅವರ ಕುಟುಂಬಕ್ಕೆ ಸಲಹೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ದಿನೇಶ್ ಗುಂಡೂರಾವ್ ಸಂತಾಪ
KPCC ಕಾರ್ಯಾಧ್ಯಕ್ಷ R. ಧ್ರುವ ನಾರಾಯಣ್ ಹೃದಯಾಘಾತದಿಂದ ನಿಧನರಾಗಿದ್ದು ಅತೀವ ದುಃಖ ಉಂಟು ಮಾಡಿದೆ. ರಾಜ್ಯ ಕಾಂಗ್ರೆಸ್‌ನ ಕ್ರಿಯಾಶೀಲ ನಾಯಕರಾಗಿದ್ದ ಧ್ರುವ ನಾರಾಯಣ್ ಪಕ್ಷದ ಆಸ್ತಿಯಾಗಿದ್ದರು. ಎರಡು ಬಾರಿ ಸಂಸದರಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಧ್ರುವ ನಾರಾಯಣ್ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ಅವರ ಅಕಾಲಿಕ ನಿಧನ ಆಘಾತ ತಂದಿದೆ.
ಇದನ್ನೂ ಓದಿ: R Dhruvnarayan: ಕೆಪಿಸಿಸಿ ಕಾರ್ಯಾಧ್ಯಕ್ಷರ ಸಾವಿಗೆ ಕಾರಣ ಏನು? ಚಿಕಿತ್ಸೆ ನೀಡಿದ್ದ ವೈದ್ಯರು ಹೇಳಿದ್ದೇನು?
ನನ್ನ ಆತ್ಮೀಯ ಮಿತ್ರರೂ ಆಗಿದ್ದ R. ಧ್ರುವ ನಾರಾಯಣ್ ಸದಾ ಹಸನ್ಮುಖಿ. ಎಲ್ಲರೊಂದಿಗೂ ನಗು ನಗುತ್ತಲೇ ಮಾತಾಡುತ್ತಿದ್ದ ಧೃವನಾರಾಯಣ್ ಇಂದು ನಮ್ಮೊಂದಿಗಿಲ್ಲ ಎಂಬುದೇ ನೋವಿನ ಸಂಗತಿ. ಪಕ್ಷ ಸಂಘಟನೆಯಲ್ಲಿ ಧೃವನಾರಾಯಣ್ ಕೊಡುಗೆ ಅಪಾರ. ಧೃವನಾರಾಯಣ್ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಸಂತಾಪ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ