ಸಿಎಂ ಇಬ್ರಾಹಿಂ (C.M. Ibrahim) ಕಾಂಗ್ರೆಸ್ (Congress) ತೊರೆಯುವ ಬಗ್ಗೆ ಮಾತನಾಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್, (D.K. Shivakumar) ನಮ್ಮ ಇಬ್ರಾಹಿಂ ಬಹಳ ಸೀನಿಯರ್ ಲೀಡರ್, ಸಿದ್ದರಾಮಯ್ಯನವರ ಕಾಲದಲ್ಲಿ ಸಿಟ್ಟಿಂಗ್ ಎಂಎಲ್ಎ ತೆಗೆದು ಟಿಕೆಟ್ ಕೊಡಿಸಿದ್ದರು, ಸೋತ ಮೇಲೂ ಕ್ಯಾಬಿನೆಟ್ ಸ್ಟೇಟಸ್ ಕೊಟ್ಟಿದ್ದರು. ಎರಡು ಬಾರಿ ಎಂಎಲ್ಸಿ ಮಾಡಿದ್ದಾರೆ. ಆದರು ಕೂಡ ಈ ಬಾರಿ ನ್ನೆ ಸ್ವಲ್ಪ ಮುನಿಸಿಕೊಂಡು ಬೈಎಲೆಕ್ಷನ್ಗೆ (By Election) ಬರಲಿಲ್ಲ. ಎಲ್ಲಾ ಪಕ್ಷದಲ್ಲಿ ಮುನಿಸು ಇದ್ದೆ ಇರುತ್ತೆ. ಅವರು ನಮ್ಮ ಸ್ನೇಹಿತರು, ಮಾತನಾಡಿ ಸಮಸ್ಯೆ ಬಗೆ ಹರಿಸುತ್ತೇನೆ ಎಂದಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಮೆಂಬರ್, ಅವರನ್ನು ಪಕ್ಷ ಎಂಎಲ್ಸಿ ಮಾಡಿದೆ. ಸ್ವಲ್ಪ ನೋವಲ್ಲಿ ಇರ್ತಾರೆ ಈಗ ಸೀರಿಯಸ್ ಆಗಿ ಮಾತಾಡೋದು ತಪ್ಪು. ಅವರ ಜೊತೆ ಮಾತನಾಡಿ ಎಲ್ಲ ಸರಿ ಮಾಡಲಾಗುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.
ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಕೈ ತಪ್ಪಿದ ಹಿನ್ನೆಲೆ, ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ(CM Ibrahim) ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾರೆ. ಇಬ್ರಾಹಿಂ ಪರಿಷತ್ ವಿಪಕ್ಷ ನಾಯಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಆ ಸ್ಥಾನವನ್ನು ಬಿಕೆ ಹರಿಪ್ರಸಾದ್(BK Hariprasad) ಅವರಿಗೆ ನೀಡಿದ ಹಿನ್ನೆಲೆ, ಸಿ.ಎಂ.ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಬ್ರಾಹಿಂ ಬೆಂಗಳೂರಿನಲ್ಲಿ ತಮ್ಮ ನಿಲುವು ಪ್ರಕಟಿಸಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲಿ ರಾಜೀನಾಮೆ ಕೊಡ್ತೇನೆ. ನಾನು ಜೆಡಿಎಸ್ ಸೇರುತ್ತೇನೊ? ಮಾಯಾವತಿ ಪಕ್ಷ ಸೇರುತ್ತೇನೊ ಗೊತ್ತಿಲ್ಲ. ದೇವೇಗೌಡರು ಪುಣ್ಯಾತ್ಮರು. ಡಿಕೆಶಿ ಜೊತೆಗೆ ಹೊಂದಾಣಿಕೆ ಆಗಲ್ಲ. ನಾನು ಕಾಂಗ್ರೆಸ್ ತೊರೆದಿರುವ ಪರಿಣಾಮ ಯುಪಿ ಚುನಾವಣೆಯ ಮೇಲೆ ಆಗುತ್ತದೆ. ಯುಪಿ ಚುನಾವಣೆ ಫಲಿತಾಂಶದ ಪರಿಣಾಮ ರಾಜ್ಯದ ಮೇಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ಅತಂತ್ರರಾದಾಗ ನಮ್ಮ ಬಾಗಿಲ ಬಳಿ ಬಂದಿದ್ರು, ನಾವು ಹೋಗಿರಲಿಲ್ಲ- ಸಿಎಂ ವಿರುದ್ಧ ಎಚ್ಡಿಕೆ ಕಿಡಿ
ಇದೇ ವೇಳೆ, ಯಾರೂ ಕೈ ಬಿಟ್ಟರೂ ನೀವು (ಮಾಧ್ಯಮ) ನನ್ನ ಕೈ ಬಿಡಬೇಡಿ ಎಂದು ಮಾಧ್ಯಮದವರಿಗೆ ಇಬ್ರಾಹಿಂ ಮನವಿ ಮಾಡಿದರು. ಜನರಿಗೆ ಈಗ ವಿಶ್ವಾಸ ಉಳಿದಿರುವುದು ಮಾಧ್ಯಮ ಹಾಗೂ ನ್ಯಾಯಾಂಗದ ಮೇಲೆ. ನಂಗೆ ಸಾಲವಿದೆ, ನನ್ನ ಆಸ್ತಿ ಮಾರಿ ಸಾಲ ತೀರಿಸುತ್ತೇನೆ. ನಂಗೆ ಎಳೆಂಟು ಮಕ್ಕಳಿದ್ದಾರೆ ಎಂದರು.
ಸಿ.ಎಂ. ಇಬ್ರಾಹಿಂರನ್ನು ಪಕ್ಷಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ
ಇಬ್ರಾಹಿಂ ಅವರು ಹಿರಿಯರ ನಾಯಕರು, ಅವರು ನಮ್ಮ ಪಕ್ಷ ಹಾಗೂ ದೇವೇಗೌಡರ ಏಳು ಬೀಳುಗಳಲ್ಲಿ ಜೊತೆಯಾದವರು. ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಅವರ ಹೆಸರು ಕೇಳಿ ಬಂದಿತ್ತು. ವಿ.ಪ ನಾಯಕರ ಸ್ಥಾನ ಸಿಕ್ಕಿದರೆ ಉಪಯೋಗ ಮಾಡಿಕೊಳ್ಳಿ ಅಲ್ಲೇ ಅಂದಿದ್ದೆ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದಿದ್ದೆ. ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಪರೋಕ್ಷವಾಗಿ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ಗೆ ಆಹ್ವಾನಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ; ‘ಕೈ‘ ತೊರೆಯಲು ನಿರ್ಧರಿಸಿದ ಸಿಎಂ ಇಬ್ರಾಹಿಂ
ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ, ಇಂದೂ ಕೂಡ ನಾನು ಕರೆ ಮಾಡಿ ಮಾತಾಡಿದ್ದೀನಿ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ