DK Shivakumar: ಬಿಜೆಪಿಯವರು ಬೆಳ್ಳುಳ್ಳಿ-ಅಡಿಕೆ ಬೆಳೆದು ಆಸ್ತಿ ಮಾಡಿದ್ರಾ? ಆಪ್ತನಿಗೆ ನೋಟಿಸ್ ಕೊಟ್ಟಿದ್ದಕ್ಕೆ ಡಿಕೆಶಿ ಕಿಡಿ!

ಕರ್ನಾಟಕದಲ್ಲಿ ಚುನಾವಣೆಗೆ ಏಳೆಂಟು ತಿಂಗಳು ಇರುವಾಗಲೇ ಸಿಬಿಐ ಹಳೇಯ ಕೇಸ್​ಗೆ ಮರುಜೀವ ಕೊಡಲು ಮುಂದಾಗಿದೆ. ಇದೀಗ ಸಿಬಿಐ ಡಿಕೆಶಿ ಆಪ್ತ ವಿಜಯ್ ಮುಳುಗುಂದ್​​ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆಗಸ್ಟ್​ 30ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

  • Share this:
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ.ಶಿವಕುಮಾರ್​ (D K Shivakumar) ಆಪ್ತಗೆ ಶಾಕ್ ಎದುರಾಗಿದೆ. ಸಿಬಿಐ (CBI) ದಾಳಿ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ವಿಜಯ್ ಮುಳಗುಂದ್‌ಗೆ (Vijay Mulagund) ನೋಟಿಸ್ (Notice) ನೀಡಿದೆ. 2020ರ ಅಕ್ಟೋಬರ್ 5ರಂದು ನಡೆದಿದ್ದ ಇದೇ ಆಗಸ್ಟ್ 30ರಂದು ಬೆಂಗಳೂರಿನ (Bengaluru) ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸುವಂತೆ ವಿಜಯ್ ಮುಳಗುಂದ್‌ಗೆ ಸೂಚಿಸಲಾಗಿದೆ. ಇದರಿಂದಾಗಿ ಚುನಾವಣೆ (Election) ಹೊತ್ತಲ್ಲೇ ಡಿಕೆಶಿಗೂ ಸಂಕಷ್ಟ ಶುರುವಾಗುತ್ತಾ ಅನ್ನೋ ಅನುಮಾನ ಶುರುವಾಗಿದೆ. ಆಪ್ತನಿಗೆ ಸಿಬಿಐ ನೋಟಿಸ್ ಕೊಟ್ಟ ಬೆನ್ನಲ್ಲೇ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಕೇಸ್‌ನಲ್ಲಿ ಸಿಬಿಐಯಿಂದ ಮತ್ತೆ ಡಿಕೆಶಿಗೆ ಬುಲಾವ್ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಚುನಾವಣೆಗೆ ಏಳೆಂಟು ತಿಂಗಳು ಇರುವಾಗಲೇ ಸಿಬಿಐ ಹಳೇಯ ಕೇಸ್​ಗೆ ಮರುಜೀವ ಕೊಡಲು ಮುಂದಾಗಿದೆ. ಇದೀಗ ಸಿಬಿಐ ಡಿಕೆಶಿ ಆಪ್ತ ವಿಜಯ್ ಮುಳುಗುಂದ್​​ಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆಗಸ್ಟ್​ 30ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

D K Shivakumar attack on bjp for cbi given a notice to his close friend vijay Mulagund
ಡಿಕೆ ಶಿವಕುಮಾರ್


2020 ಅ.5ರ ಸಿಬಿಐ ದಾಳಿ ಸಂಬಂಧ ವಿಚಾರಣೆ

2013 ರಿಂದ 2018ರವರೆಗೆ ಶಾಸಕರಾಗಿದ್ದ ವೇಳೆ ಅಕ್ರಮ ಆಸ್ತಿ ಸಂಗ್ರಹಿಸಿದ್ದ ಆರೋಪದ ಮೇಲೆ 2020ರ ಅಕ್ಟೋಬರ್ 5ರಂದು ಡಿಕೆಶಿ ಹಾಗೂ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿಯಾಗಿತ್ತು. ಡಿಎ ಕೇಸ್ ನಡಿ ಎಫ್‌ಐಆರ್ ದಾಖಲಿಸಿ ಸಿಬಿಐ ರೇಡ್ ಮಾಡಿತ್ತು. 74.93 ಕೋಟಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿತ್ತು.

ಇದನ್ನೂ ಓದಿ: ಜೊತೆ ಜೊತೆಯಲಿ ಸೇರುತ್ತಾರಾ ಈ ನಟ, ತುಮಕೂರಲ್ಲಿ ಭೀಕರ ಅಪಘಾತ! ಇಂದಿನ ಟಾಪ್ ಸುದ್ದಿಗಳು ಇಲ್ಲಿವೆ

ಡಿಕೆಶಿಗೆ ಶುರುವಾಗುತ್ತಾ ಮತ್ತೆ ಸಂಕಷ್ಟ?

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಕೇಸಲ್ಲಿ ಸಿಬಿಐಯಿಂದ ಡಿಕೆಶಿ ಆಪ್ತಗೆ ಮತ್ತೆ ನೊಟೀಸ್ ಬಂದಿದೆ. ಆಪ್ತನಿಗೆ ಬುಲಾವ್ ಕೊಟ್ಟ ಬೆನ್ನಲ್ಲೇ ಮತ್ತೆ ಡಿಕೆಶಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 2020 ಅಕ್ಟೋಬರ್ 5 ರಂದು ಡಿಕೆಶಿ ಹಾಗೂ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿಯಾಗಿತ್ತು. ಇದೀಗ ಸಿಬಿಐನಿಂದ ಆಪ್ತರಿಗೆ ಬುಲಾವ್ ಹಿನ್ನೆಲೆ ಡಿಕೆಶಿಗೂ ಆತಂಕ ಹೆಚ್ಚಾಗಿದೆ.

ಆಗಸ್ಟ್​ನಲ್ಲಿ ಮತ್ತೆ ಶುರು ಮಾಡ್ತಾರೆ ಅಂತಾ ಹೇಳಿದ್ದೆ- ಡಿಕೆಶಿ

ಆಪ್ತನಿಗೆ ನೋಟಿಸ್​ ಬೆನ್ನಲ್ಲೇ ಮಾತನಾಡಿದ ಡಿಕೆಶಿ, ಸಾಕಷ್ಟು ವರ್ಷಗಳಿಂದ ನನ್ನ ಜೊತೆ ವ್ಯವಹಾರ ಮಾಡಿದ ಎಲ್ಲರಿಗೂ ಇದೇ ಮಾಡ್ತಿದ್ದಾರೆ. ನಾನು ಆಗಸ್ಟ್​ಗೆ ಶುರುವಾಗತ್ತೆ ಅಂತ ಹೇಳಿದ್ದೆ. ಅದೇ ರೀತಿ ನಡೆಯುತ್ತಿದೆ. ನಮಗೂ ಮಾಹಿತಿ ಕೊಡೋರು ಇದ್ದಾರೆ. ನನ್ನದು ಇನ್ನೇನು ಉಳಿದಿದೆ? ನಮ್ಮ ತಾಯಿಯನ್ನ ನನ್ನ ಬೇನಾಮಿ ಅಂತ ಆಸ್ತಿ ಸೀಜ್ ಮಾಡಿದ್ದರು.

ಬಿಜೆಪಿಯಲ್ಲಿ ಇರೋರೆಲ್ಲಾ ಸತ್ಯ ಹರಿಶ್ಚಂದ್ರರಾ?

ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿಯಲ್ಲಿ ಇರೋರೆಲ್ಲಾ ಸತ್ಯ ಹರಿಶ್ಚಂದ್ರರಾ ಅಂತಾ ಪ್ರಶ್ನೆ ಮಾಡಿದ್ದಾರೆ. ಮಂತ್ರಿಗಳದ್ದೂ ವ್ಯವಹಾರ ತನಿಖೆ ಮಾಡಿಸಿ ನೋಡೋಣ. ಶಾಸಕರಾಗಿದ್ದಾಗ ಎಷ್ಟಿತ್ತು? ಈಗ ಮಂತ್ರಿಗಳಾದಾಗ ಎಷ್ಟಿದೆ ಅಂತಾ ತನಿಖೆ ಮಾಡಿಸಿ. ಅವರೆಲ್ಲಾ ಬೆಳ್ಳುಳ್ಳಿ-ಅಡಿಕೆ ಬೆಳೆದು ಆಸ್ತಿ ಮಾಡಿದಾರಾ ಅಂತಾ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಆರೋಪಿ ಇಲ್ಲದಿದ್ದರೂ ನಡೆಯುತ್ತಾ ವಿಚಾರಣೆ? ಕರ್ನಾಟಕ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

ಡಿಕೆಶಿ ಭೇಟಿಯಾಗಿ ವಿಜಯ್ ಮುಳಗುಂದ್ ಚರ್ಚೆ

ನೋಟಿಸ್​ ಬೆನ್ನಲ್ಲೇ ವಿಜಯ್ ಮುಳಗುಂದ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​​ನ್ನು ಭೇಟಿ ಮಾಡಿ ಚರ್ಚೆ ಮಾಡಿದ್ರು. ಬಳಿಕ ಮಾತನಾಡಿ, ಸಿಬಿಐನವರಿಗೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ಈ ಹಿಂದೆಯೂ ಕರೆದಿದ್ದರು. ಆಗಲೂ ಹೋಗಿ ಉತ್ತರ ಕೊಟ್ಟು ಬಂದಿದ್ದೇನೆ. ಈಗ ಯಾಕೆ ಕರೆದಿದ್ದಾರೋ ಗೊತ್ತಿಲ್ಲ. ಯಾವ ಪ್ರಕರಣ ಏನೂ ಅನ್ನೋದು ಗೊತ್ತಿಲ್ಲ ಅಂದ್ರು.

D K Shivakumar attack on bjp for cbi given a notice to his close friend vijay Mulagund
ಡಿಕೆಶಿ ಆಪ್ತ ವಿಜಯ್ ಮುಳಗುಂದ್


ಡಿಕೆಶಿಗೆ ತೊಂದರೆ ಕೊಡಲು ನೋಟಿಸ್​!

ರಾಜಕೀಯ ಕಾರಣಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ನಮ್ಮ ಅಧ್ಯಕ್ಷರಿಗೆ ತೊಂದರೆ ಕೊಡಲು ಹೀಗೆಲ್ಲಾ ಮಾಡುತ್ತಿದ್ದಾರೆ. ಅಧ್ಯಕ್ಷರ ಆಪ್ತರಿಗೆ ಮಾತ್ರ ಹೀಗೆ ಮಾಡುತ್ತಿದ್ದಾರೆ. ವಿಚಾರಣೆಗೆ ಧೈರ್ಯವಾಗಿ ಹೋಗುತ್ತೇನೆ ಅಂತಾ ವಿಜಯ್ ಮುಳಗುಂದ್ ಹೇಳಿದ್ರು.
Published by:Thara Kemmara
First published: