ಕೊನೆಗೂ ಡಿ ಬಾಸ್​ಗೆ ದರ್ಶನ ಕೊಟ್ಟ ಕರಿಯ; ನಾಗರಹೊಳೆಯಲ್ಲಿ 3 ವರ್ಷಗಳಿಂದ ಕಾಣಿಸದೆ ಸತಾಯಿಸಿದ್ದ ವಿಶೇಷ ಅತಿಥಿ!

ಮೂರು ದಿನಗಳ ಕಾಲ ಸ್ನೇಹಿತರೊಡನೆ ನಾಗರಹೊಳೆಯಲ್ಲಿ ಬೀಡು ಬಿಟ್ಟಿದ್ದ ನಟ ದರ್ಶನ್ ಕಾಡಿನ ಸುತ್ತ ಸಖತ್ ಸಫಾರಿ ಮಾಡಿದ್ದಾರೆ. ಈ ಬಾರಿ ಕಾಡಿಗೆ ಭೇಟಿ ನೀಡಿದ್ದ ದಾಸನಿಗೆ ಹುಲಿ, ಆನೆ, ಕಾಡೆಮ್ಮೆ, ಜಿಂಕೆ ಜೊತೆ ಕರಿಚಿರತೆಯ ದರ್ಶನವಾಗಿದ್ದು ಎಲ್ಲ ಪ್ರಾಣಿಗಳ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.

ನಟ ದರ್ಶನ್

ನಟ ದರ್ಶನ್

  • Share this:
ಮೈಸೂರು; ಡಿ ಬಾಸ್ ದರ್ಶನ್ ತಾವು ಅಂದುಕೊಂಡಿದ್ದೆ ಮಾಡೋ ಕ್ಯಾಟಗರಿಯವರು. ಅದರಲ್ಲೂ ಚಾಲೆಂಜಿಂಗ್‌ ಅನ್ನೋ ವಿಷಯಗಳಲ್ಲಿ ದರ್ಶನ್‌ ಎಂದಿಗೂ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಲಾಂಗ್ ಡ್ರೈವ್ ಹೋಗ್ಬೇಕು ಅಂದ್ರೆ? ಬೈಕ್‌ ಏರಿ ಸ್ನೇಹಿತರ ಜೊತೆ ಹೋಗ್ತಿರೋದೆ. ಸಫಾರಿಗೆ ಹೋಗ್ಬೇಕು ಅಂದ್ರೆ ಕಾಡಿಗೆ ಭೇಟಿ ಕೊಡ್ತಿರೋದೆ. ಆಟ ಆಡ್ಬೇಕು ಅಂದ್ರೆ ಯಾವ ಜಾಗದಲ್ಲಿ ಯಾರು ಇದ್ರು ಪರವಾಗಿಲ್ಲ ತನ್ನ ತನವನ್ನ ಬಿಟ್ಟುಕೊಟ್ಟವರಲ್ಲ ನಟ ದಚ್ಚು. ಸಿನಿಮಾ ಹೊರತುಪಡಿಸಿ ಹಲವು ಹವ್ಯಾಸಗಳಿಗೆ ದರ್ಶನ್‌ ಈಗಲೂ ಬದ್ದರಾಗಿದ್ದಾರೆ. ಇಂತಹ ದರ್ಶನ್‌ಗೆ ಒಂದೇ‌ ಒಂದು ಬೇಸರ ಕಾಡ್ತಿತ್ತು. ಅದು ಮೂರು ವರ್ಷದಿಂದಲೂ ಆ ಕರಿಯ ತನ್ನನ್ನು ಭೇಟಿ ಮಾಡ್ತಿಲ್ಲ ಅನ್ನೋ ಬೇಸರ.

ಭೇಟಿಗೆ ಅಂತ ಹೋದಾಗಲೆಲ್ಲ ಆ ಕರಿಯ ಮಾತ್ರ ದರ್ಶನ್‌ಗೆ ದರ್ಶನ ಭಾಗ್ಯವನ್ನೇ ನೀಡ್ತಾ ಇರಲಿಲ್ಲ. ಆದ್ರೆ ಹಠ ತೊಟ್ಟು ನಿಂತ ನಟ ದರ್ಶನ್‌ ಮೂರು ದಿನ ಮೊಕ್ಕಾಂ ಹೂಡಿ ಮೂರು ವರ್ಷದ ಬೇಸರವನ್ನು ಕಳೆದುಕೊಂಡಿದ್ದಾರೆ. ನಾಗರಹೊಳೆಯಲ್ಲಿ ಮೂರು ವರ್ಷಗಳಿಂದಲೂ ಕಣ್ಣಿಗೆ ಸಿಗದೆ ಓಡಾಡುತ್ತಿದ್ದ ಕರಿಚಿರತೆಯನ್ನ ಕಂಡು ಖುಷಿಯಾಗಿದ್ದಾರೆ. ತನ್ನದೆ ಕ್ಯಾಮೆರಾದಲ್ಲಿ ಕರಿಚಿರತೆಯ ಪೋಟೋಗಳನ್ನು ತೆಗೆದು ಬಿಂದಾಸ್ ಸಫಾರಿ ಮಾಡಿದ್ದಾರೆ.

ದರ್ಶನ್ ಸೆರೆ ಹಿಡಿದ ಕರಿಚಿರತೆ ಚಿತ್ರ.


ಕರ್ನಾಟಕ ರಾಜ್ಯದ ಅರಣ್ಯ ಇಲಾಖೆ ರಾಯಭಾರಿಯಾಗಿರುವ ನಟ ದರ್ಶನ್‌ ಆಗ್ಗಾಗ್ಗೆ ಕಾಡಿಗೆ ಹೋಗೋದು ಸಹಜ. ದರ್ಶನ್ ಕಾಡಿಗೆ ಎಂಟ್ರಿ ಕೊಟ್ಟು ಅಲ್ಲಿ ಎಲ್ಲ ಪ್ರಾಣಿಗಳ ಫೋಟೋ ಕ್ಲಿಕ್ಕಿಸಿ, ಅದನ್ನು ಫೋಟೋ ಎಕ್ಸಿಬಿಷನ್ ಮಾಡಿ ಅದರಲ್ಲಿ ಬಂದ ಹಣವನ್ನು ಒಳ್ಳೆಯ ಕಾರ್ಯಕ್ಕೆ ಬಳಸುತ್ತಾರೆ.‌ ಹೀಗೆ ಕಳೆದ ಎರಡು ವರ್ಷದಿಂದ ಮಾಡ್ತಿರೋ ದರ್ಶನ್ ಎಲ್ಲ ಪ್ರಾಣಿಗಳ ಹಾಗೂ ಪಕ್ಷಿಗಳ ಅದ್ಭುತವಾದ ಫೋಟೋ ಕ್ಲಿಕ್ಕಿಸಿದ್ದಾರೆ. ಅದರಲ್ಲೂ ಹುಲಿ, ಆನೆ, ಚಿರತೆ,‌ ಜಿಂಕೆ, ಕಾಡೆಮ್ಮೆ, ಪಕ್ಷಿಗಳ ಫೋಟೋ ತೆಗೆದಿದ್ದ ದರ್ಶನ್ ಒಂದೇ ಒಂದು ಪ್ರಾಣಿಯ ಫೋಟೋ ಮಿಸ್ ಮಾಡಿಕೊಂಡಿದ್ದರು. ಅದು ದಚ್ಚು ಕ್ಯಾಮರಾ ಕಣ್ಣಿಗೆ ಸಿಗದೆ ಸಖತ್ ಆಟ ಆಡಿಸ್ತಿತ್ತು. ಆದ್ರೆ ದಚ್ಚು ಮಾತ್ರ ಪ್ರತಿ ಸಫಾರಿ ಮೇಲೆ ಆತನ ಮೇಲೆ‌ ಕಣ್ಣಿಟ್ಟಿದ್ರು. ಆದ್ರೆ ಆತನ ಸುಳಿವು ಮಾತ್ರ ಸಿಕ್ತಾನೆ ಇರ್ಲಿಲ್ಲ. ಇದೀಗಾ ಆತನ ಸುಳಿವು ಪತ್ತೆ ಹಚ್ಚಿದ ನಟ ದರ್ಶನ್‌ ಕಣ್ಣಿಗೆ ಬೀಳದೆ ಓಡುತ್ತಿದ್ದ ಕರಿಚಿರತೆಯನ್ನು ಕಂಡಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ ಮೂರು ದಿನಗಳ ಸಫಾರಿ ಮಾಡಿರುವ ನಟ ದರ್ಶನ್‌ ಈ ಭಾರಿ ಕರಿ ಚಿರತೆಯ ಪೋಟೋ ಕೂಡ ತೆಗೆದಿದ್ದಾರೆ.

ಇದನ್ನು ಓದಿ: Darshan: ನಾಗರಹೊಳೆಯಲ್ಲಿ ಡಿಬಾಸ್​ ದರ್ಶನ್​: ಇಲ್ಲಿವೆ ಲೆಟೆಸ್ಟ್​ ಫೋಟೋಗಳು..!

ದಚ್ಚು ಕಾತರದಿಂದ ಕಳೆದ ಮೂರು ವರ್ಷದಿಂದ ಈ ಪೋಟೋ ತೆಗೆಯಲು ಕಾಯುತ್ತಿದ್ದರು. ಸ್ಯಾಂಡಲ್‌ವುಡ್ ಕರಿಯನಾಗಿರುವ ದರ್ಶನ್‌ ಕಣ್ಣಿಗೆ ನಾಗರಹೊಳೆಯ ಕರಿಯ ಕಾಣದೇ ಆಟ ಆಡಿಸುತ್ತಿದ್ದ. ಸಂಕ್ರಾಂತಿ ಹಿನ್ನಲೆಯಲ್ಲಿ ಮೈಸೂರಿಗೆ ಬಂದಿದ್ದ ನಟ ದರ್ಶನ್‌ ಮೂರು ದಿನಗಳ ಕಾಲ ನಾಗರಹೊಳೆಯಲ್ಲಿ ಸಫಾರಿ ಮಾಡಿದ್ದರು. ಈ ವೇಳೆ ಕಣ್ಣಿಗೆ ಬಿದ್ದ ಆ ಕರಿಚಿರತೆ ದರ್ಶನ ದರ್ಶನ್‌ಗೆ ಸಖತ್ ಖುಷಿ ಕೊಟ್ಟಿದೆ. ರಸ್ತೆ ದಾಟುವಾಗ ಸಫಾರಿ ವಾಹನಗಳ ಮುಂದೆಯೇ ಹಾದು ಹೋಗಿರುವ ಕರಿಚಿರತೆಯನ್ನು ದರ್ಶನ್ ತಮ್ಮ ಕ್ಯಾಮಾರಾದಲ್ಲಿ ಸೆರೆ ಹಿಡಿದಿದ್ದಾರೆ. ದರ್ಶನ್ ಕಳೆದ ಎರಡು ವರ್ಷ ತೆಗೆದ ಪೋಟೋಗಳ ಒಂದು ಪ್ರದರ್ಶನ ಆಯೋಜಿಸಿದ್ದರು. ಇದೀಗ ಕರಿಚಿರತೆಯ ಸ್ಪೇಷಲ್‌ ಪೋಟೋಗಳ ಜೊತೆ ಮತ್ತೊಂದು ಎಕ್ಸಿಬ್ಯಿಷನ್‌ನಲ್ಲಿ ನಡೆಸುವ ಸಾಧ್ಯತೆ ಇದೆ.

ಮೂರು ದಿನಗಳ ಕಾಲ ಸ್ನೇಹಿತರೊಡನೆ ನಾಗರಹೊಳೆಯಲ್ಲಿ ಬೀಡು ಬಿಟ್ಟಿದ್ದ ನಟ ದರ್ಶನ್ ಕಾಡಿನ ಸುತ್ತ ಸಖತ್ ಸಫಾರಿ ಮಾಡಿದ್ದಾರೆ. ಈ ಬಾರಿ ಕಾಡಿಗೆ ಭೇಟಿ ನೀಡಿದ್ದ ದಾಸನಿಗೆ ಹುಲಿ, ಆನೆ, ಕಾಡೆಮ್ಮೆ, ಜಿಂಕೆ ಜೊತೆ ಕರಿಚಿರತೆಯ ದರ್ಶನವಾಗಿದ್ದು ಎಲ್ಲ ಪ್ರಾಣಿಗಳ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.
Published by:HR Ramesh
First published: