• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mandous Cyclone Effect: ಮಕ್ಕಳಲ್ಲಿಯೂ ಉಸಿರಾಟದ ತೊಂದರೆ; ರೋಗಿಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ

Mandous Cyclone Effect: ಮಕ್ಕಳಲ್ಲಿಯೂ ಉಸಿರಾಟದ ತೊಂದರೆ; ರೋಗಿಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ

ಆಸ್ಪತ್ರೆ

ಆಸ್ಪತ್ರೆ

ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕೊಡ್ತಿದ್ದೇವೆ. ಶೀತಗಾಳಿ ಇತ್ಯಾದಿಗೆ ಮುನ್ನೆಚ್ಚರಿಕೆ ಅಗತ್ಯ. ಸ್ವೆಟರ್ ಇತ್ಯಾದಿ ಹಾಕಿಕೊಂಡು ಶೀತಗಾಳಿಯಂದ ಸಂರಕ್ಷಿಸಿಕೊಳ್ಳುವಂತೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಸಲಹೆ ನೀಡಿದ್ದಾರೆ.

  • Share this:

Mandous Cyclone Effect: ಮಾಂಡೌಸ್ ಚಂಡಮಾರುತ ಪರಿಣಾಮದಿದಾಗಿ ಧಾರವಾಡ ಜಿಲ್ಲೆಯಲ್ಲಿ (Dharwad District) ಸಾಂಕ್ರಾಮಿಕ ರೋಗಗಳ (Infectious Disease) ಸಂಖ್ಯೆ ಹೆಚ್ಚಳವಾಗಿದೆ. ಚಂಡಮಾರುತ, ಚಳಿಗಾಳಿಗೆ (Cold Wave) ಜನರು ತತ್ತರಗೊಂಡಿದ್ದಾರೆ. ಜ್ವರದ ಕಾಟದಿಂದಾಗಿ ಜನ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಉಸಿರಾಟದ ತೊಂದರೆಯಿಂದ (Breathing Problem) ಬಳಲುವವರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಜ್ವರದ ಜೊತೆಗೆ ನೆಗಡಿ, ಮೈಕೈ ನೋವು, ಎದೆ ನೋವು, ಸುಸ್ತಿನಿಂದ ಜನತೆ ನರಳಾಡುವಂತಾಗಿದೆ. ಡೆಂಗ್ಯೂ, ಚಿಕೂನ್‌ ಗುನ್ಯಾ (Chikungunya virus infection) ಮತ್ತಿತರ ಕಾಯಿಲೆ ಹೆಚ್ಚಳ ಭೀತಿ ಸೃಷ್ಟಿಯಾಗಿದೆ. ವಿಶೇಷವಾಗಿ ಮಕ್ಕಳಲ್ಲಿ ಉಸಿರಾಟದ ತೊಂದರೆ ಹೆಚ್ಚಾಗಿದೆ.


ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿರೋದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಚಳಿಗಾಲದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.


cyclonic weather cases of viral fever rise in dharwad district mrq
ಆಸ್ಪತ್ರೆ


ಈ ವರ್ಷ ಧಾರವಾಡ ಜಿಲ್ಲೆಯ ರೋಗಿಗಳು ಅಂಕಿ ಸಂಖ್ಯೆಗಳು


2019 ರಲ್ಲಿ 250 ಜನರಲ್ಲಿ ಡೆಂಗ್ಯೂ, 121 ಜನರಲ್ಲಿ ಚಿಕೂನ್‌ ಗುನ್ಯಾ ಪತ್ತೆಯಾಗಿತ್ತು. 2020ರಲ್ಲಿ 36 ಜನರಲ್ಲಿ ಡೆಂಗ್ಯೂ, 17 ಜನರಲ್ಲಿ ಚಿಕೂನ್‌ ಗುನ್ಯಾ, 8 ಜನರಲ್ಲಿ ಮಲೇರಿಯಾ ಪತ್ತೆಯಾಗಿದೆ. 2022 ರ ನ.30 ಅಂತ್ಯದವರೆಗೆ ನೀಡಿರುವ ಮಾಹಿತಿ ಅನ್ವಯ ಜಿಲ್ಲೆಯಲ್ಲಿ 2500ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ ಲಕ್ಷಣಗಳು ಪತ್ತೆಯಾಗಿವೆ.


ಈ ಪೈಕಿ ತಪಾಸಣೆಗೊಳಪಡಿಸಿದಾಗ 247 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ನವೆಂಬರ್‌ ತಿಂಗಳಲ್ಲಿಯೇ 12 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಚಿಕೂನ್‌ ಗುನ್ಯಾ ಗುಣಲಕ್ಷಣ ಕಂಡು ಬಂದ 1,051 ಜನರನ್ನು ತಪಾಸಣೆ ಮಾಡಲಾಗಿದ್ದು, ಈ ಪೈಕಿ 33 ಜನರಲ್ಲಿ ರೋಗ ದೃಢಪಟ್ಟಿದೆ.


cyclonic weather cases of viral fever rise in dharwad district mrq
ಆಸ್ಪತ್ರೆ


ಮಲೇರಿಯಾ ನಿಯಂತ್ರಣ


ಮಲೇರಿಯಾ ಒಂದಷ್ಟು ನಿಯಂತ್ರಣದಲ್ಲಿದೆ. ಮೆದುಳು ಜ್ವರ ಲಕ್ಷಣ ಕಂಡು ಬಂದ 15 ಜನರ ತಪಾಸಣೆ ಮಾಡಲಾಗಿದ್ದು, ಈ ಪೈಕಿ ಯಾರಲ್ಲೂ ರೋಗ ದೃಢಪಟ್ಟಿಲ್ಲ. ಈ ವರ್ಷದ 11 ತಿಂಗಳಲ್ಲಿ ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿಯೇ 74 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ನವೆಂಬರ್‌ ತಿಂಗಳಲ್ಲಿಯೇ 13 ಡೆಂಗ್ಯೂ ಪ್ರಕರಣ ದೃಢಪಟ್ಟಿದೆ. ಗ್ರಾಮೀಣ ಭಾಗದಲ್ಲಿ ಸೀಜನ್‌ ಜ್ವರ ಹೆಚ್ಚಳವಾಗಿದೆ.


ಹುಬ್ಬಳ್ಳಿ ಕಿಮ್ಸ್​ಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಳ


ಗ್ರಾಮೀಣ ಪ್ರದೇಶದಲ್ಲಿ ಮೈ-ಕೈ ನೋವು ಬಾಧೆ, ಗಂಟಲ ಬೇನೆ ಇತ್ಯಾದಿ ತೊಂದರೆಯಾಗಿದೆ. ಸಾಂಕ್ರಾಮಿಕ ರೋಗ ಸದ್ದಿಲ್ಲದೆ ಹರಡುತ್ತಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಹವಾಮಾನ ವೈಪರೀತ್ಯದಿಂದ ಶೀತಮಯ ವಾತಾವರಣ ನಿರ್ಮಾಣವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ.


cyclonic weather cases of viral fever rise in dharwad district mrq
ಆಸ್ಪತ್ರೆ


ಶೀತಗಾಳಿಯಿಂದ ರಕ್ಷಿಸಿಕೊಳ್ಳಿ


ಹೊರ ರೋಗಿಗಳ ಸಂಖ್ಯೆಯಲ್ಲಿ ಎರಡು ಪಟ್ಟು ಏರಿಕೆಯಾಗಿದೆ. ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿರುವವರ ಸಂಖ್ಯೆ ಕಡಿಮೆ ಇದೆ. ಆದರೆ ಚಿಕಿತ್ಸೆ ಪಡೆದು ವಾಪಸ್ ಹೋಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕೊಡ್ತಿದ್ದೇವೆ. ಶೀತಗಾಳಿ ಇತ್ಯಾದಿಗೆ ಮುನ್ನೆಚ್ಚರಿಕೆ ಅಗತ್ಯ. ಸ್ವೆಟರ್ ಇತ್ಯಾದಿ ಹಾಕಿಕೊಂಡು ಶೀತಗಾಳಿಯಂದ ಸಂರಕ್ಷಿಸಿಕೊಳ್ಳುವಂತೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಸಲಹೆ ನೀಡಿದ್ದಾರೆ.


cyclonic weather cases of viral fever rise in dharwad district mrq
ಆಸ್ಪತ್ರೆ


ಡಿಸೆಂಬರ್ 19ರಿಂದ ರಾಜ್ಯದಲ್ಲಿ ಮತ್ತೆ ಮಳೆ


ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿರುವ ಮಳೆ ಸೋಮವಾರ ಅಂದ್ರೆ ಡಿಸೆಂಬರ್ 19ರಂದು ಎಂಟ್ರಿ ಕೊಡಲಿದ್ದಾನೆ. ಎರಡು ದಿನ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.


ಇದನ್ನೂ ಓದಿ:  Farmer Success Story: ಕೃಷಿಯಲ್ಲಿ ನಷ್ಟ; ಕೈ ಕಟ್ಟಿ ಕೂರದೇ ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ರೈತ


ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಹಾಸನ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು