Cyclone Tauktae: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ರಾಜ್ಯದ ಕರಾವಳಿ, ಮಲೆನಾಡು ತತ್ತರ; 8 ಸಾವು

ತೌಕ್ತೆ ಚಂಡಮಾರುತದಿಂದ ದಕ್ಷಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳು ನಲುಗಿವೆ. ಸುಮಾರು 121 ಗ್ರಾಮಗಳು ಹಾನಿಗೊಂಡಿದೆ

ತೌಕ್ತೆ ಚಂಡಮಾರುತ

ತೌಕ್ತೆ ಚಂಡಮಾರುತ

  • Share this:
    ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಮತ್ತು ಮಲೆನಾಡು ತತ್ತರಿಸಿದ್ದು, ಭಾರೀ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಕೊರೋನಾ ಬಿಕ್ಕಟ್ಟಿನ ನಡುವೆ ಸುರಿದ ಭಾರೀ ಮಳೆಗೆ ಬೆಳೆಗಳು ಹಾನಿಯಾಗಿವೆ. ಅಲ್ಲದೇ, ಈ ಮಳೆಯಿಂದಾಗಿ ರಾಜ್ಯದಲ್ಲಿ ಏಂಟು ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿ ತಿಳಿಸಿದೆ. ತೌಕ್ತೆ ಚಂಡಮಾರುತದಿಂದ ದಕ್ಷಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳು ನಲುಗಿವೆ. ಸುಮಾರು 121 ಗ್ರಾಮಗಳು ಹಾನಿಗೊಂಡಿದ್ದು, ಉತ್ತರ ಕನ್ನಡದಲ್ಲಿಯೇ 48 ಹಳ್ಳಿಗಳು ಮಳೆ ಹೊಡೆತಕ್ಕೆ ಸಿಲುಕಿದೆ. ಮಳೆ ಅಬ್ಬರಕ್ಕೆ ದಕ್ಷಿಣ ಕನ್ನಡ, ಬೆಳಗಾವಿಯಲ್ಲಿ ನಾಲ್ವರು ಮಂದಿ ಸಾವನ್ನಪ್ಪಿದ್ದರೆ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಶಿವಮೊಗ್ಗದಲ್ಲಿ ಪ್ರತಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಟಗ್​ ಮಗುಚಿಕೊಂಡ ಪರಿಣಾಮ ದಕ್ಷಿಣ ಕನ್ನಡದಲ್ಲಿ ಇಬ್ಬರು, ಮನೆ ಕುಸಿತದ ಪರಿಣಾ ಬೆಳಗಾವಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡದಲ್ಲಿ ಚಂಡಮಾರುತದಿಂದ ಬೋಟ್​ ರಕ್ಷಿಸಲು ಹೋದ ವ್ಯಕ್ತಿಯೊಬ್ಬ, ಉಡುಪಿಯಲ್ಲಿ ವಿದ್ಯುತ್​ ಅವಗಡದಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮನೆ ಕುಸಿತ, ಮಿಂಚಿಗೆ ಬಲಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

    ಚಂಡಮಾರುತಕ್ಕೆ 387 ಮನೆಗಳು ಹಾನಿಗೊಂಡಿದ್ದು, 57 ಮನೆಗಳು ಸಂಪೂರ್ಣ ನೆಲಕಚ್ಚಿದೆ, 330 ಮನೆಗಳು ಭಾಗಶಃ ಹಾಳಾಗಿದೆ. ದಕ್ಷಿಣ ಕನ್ನಡದಲ್ಲಿ ಒಂದು ಪ್ರಾಣ ಮಳೆಗೆ ಬಲಿಯಾಗಿದೆ, 711 ವಿದ್ಯುತ್​ ಕಂಬ, 153 ಟ್ರಾನ್ಸ್​​ಫಾರ್ಮರ್​, 9,203 ಲೈನ್ಸ್​, 56.2 ಕಿ,ಮೀ ರಸ್ತೆ, 57 ನೆಟ್ಸ್​, 116 ಬೋಟ್​ ಹಾನಿಯಾಗಿದೆ. ಮಳೆಯುಂದಾಗಿ ಸರಿ ಸುಮಾರು 30 ಹೆಕ್ಟೇರ್​ ಬೆಳೆ ನಾಶವಾಗಿದೆ

    ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಬೆಳಗಾವಿ, ಧಾರವಾಡ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಮಿಂಚಿನಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇದನ್ನು ಓದಿ: ಕೋವಿಡ್​​ ನಿರ್ಬಂಧದಲ್ಲೂ ನಂಜನಗೂಡು ದೇವಾಲಯಕ್ಕೆ ವಿಜಯೇಂದ್ರ ಭೇಟಿ; ಲಾಕ್ಡೌನ್​ ನಿಯಮ ಜನಸಾಮಾನ್ಯರಿಗೆ ಮಾತ್ರವಾ?

    ಚಂಡಮಾರುತ ಮಹಾರಾಷ್ಟ್ರದ ಕರಾವಳಿ ಯತ್ತ ಸಾಗುತ್ತಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಭಾರೀ ಹಾನಿಯಾಗಿರುವ ಹಿನ್ನಲೆ ಅಗ್ನಿಶಾಮಕ ದಳ, ಪೊಲೀಸರು, ಕರಾವಳಿ ಪೊಲೀಸರು , ಹೋಂ ಗಾರ್ಡ್​ಮ ಎಸ್​ಡಿಆರ್​ಎಫ್​ ಸಿಬ್ಬಂದಿಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

    ಹಾನಿ ಪರಿಶೀಲನಾ ಸಭೆ ಬಳಿಕ ಮಂಗಳೂರಿನಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್​ ಅಶೋಕ್​, ತೌಕ್ತೆ ಚಂಡ ಮಾರುತದಿಂದ ಹಾನಿಗೊಳಾದ 182 ಕುಟುಂಬಗಳಿಗೆ ತಕ್ಷಣಕ್ಕೆ 10 ಸಾವಿರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರುಮ ಜಿಲ್ಲೆಯಲ್ಲಿ 87 ಮನೆಗಳು ಹಾನಿಗೊಂಡಿದ್ದು, ಅದರಲ್ಲಿ 63 ಮನೆಗಳು ಭಾಗಶಃ ಹಾನಿಯಾಗಿದೆ. ಜನರು ತಮ್ಮ ಮನೆಗಳನ್ನು ಪುನರ್ನಿಮಿಸಲು ಸರ್ಕಾರ ಒಂದು ಲಕ್ಷ ಮತ್ತು 5 ಲಕ್ಷ ಪರಿಹಾರ ನೀಡುತ್ತದೆ.ಎನ್​ಡಿಆರ್​ಎಫ್​ ಮತ್ತು ಎಸ್​ಡಿಆರ್​ಎಫ್​ ನಿಧಿಯಡಿ ಪರಿಹಾರ ನೀಡಲು ಕ್ರಮಕ್ಕೆ ಮುಂದಾಗಲಾಗುವುದು ಎಂದಿದ್ದಾರೆ. ಸಚಿವರು ಇಂದು ಉಡುಪಿ, ಭಟ್ಕಳ, ಕಾರವಾರಕ್ಕೆ ಅವರು ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.
    Published by:Seema R
    First published: