HOME » NEWS » State » CYCLONE TAUKTAE EFFECT TO UTTARA KANNADA DISTRICT AND PEOPLE SCARED ABOUT CYCLONE DKK LG

Cyclone Tauktae: ತೌಕ್ತೆ ಚಂಡಮಾರುತಕ್ಕೆ ಬೆಚ್ಚಬಿದ್ದ ಉತ್ತರ ಕನ್ನಡ ಜಿಲ್ಲೆ; ಸಮುದ್ರ ತೀರದ ಜನರಲ್ಲಿ ಹೆಚ್ಚಿದ ಆತಂಕ

ಈಗಾಗಲೇ ಅಂಕೋಲಾ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಮುದ್ರದ ಅಬ್ಬರ ಜೋರಾಗಿದ್ದು ಸಮುದ್ರ ತೀರದಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ. ಕುಟುಂಬಸ್ಥರು ರಕ್ಷಣೆ ಪಡೆಯಲು ಸುರಕ್ಷಿತ ಜಾಗ‌ ಹುಡುಕಿ ಹೋಗುತ್ತಿದ್ದಾರೆ. ಇನ್ನು ಕೆಲವೆಡೆ ಜನರು ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದ್ದಾರೆ.

news18-kannada
Updated:May 15, 2021, 4:03 PM IST
Cyclone Tauktae: ತೌಕ್ತೆ ಚಂಡಮಾರುತಕ್ಕೆ ಬೆಚ್ಚಬಿದ್ದ ಉತ್ತರ ಕನ್ನಡ ಜಿಲ್ಲೆ; ಸಮುದ್ರ ತೀರದ ಜನರಲ್ಲಿ ಹೆಚ್ಚಿದ ಆತಂಕ
ಸಮುದ್ರ ತೀರ
  • Share this:
ಕಾರವಾರ(ಮೇ 15): ತೌಕ್ತೆ ಚಂಡಮಾರುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಇವತ್ತು ಮಳೆ ಇಲ್ಲದಿದ್ದರೂ ಅರಬ್ಬಿ ಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಅಲೆಗಳ ಅಬ್ಬರ ಜೋರಾಗಿದೆ. ಆಳೆತ್ತರದ ರಕ್ಕಸದಂತ ಕಡಲ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದು ಮೀನುಗಾರರು ತಮ್ಮ ತಮ್ಮ ದೋಣಿಗಳನ್ನು ಸುರಕ್ಷತಾ ಜಾಗಕ್ಕೆ ಕೊಂಡೊಯ್ಯಲು ಹರಸಾಹಸ ಪಡುತ್ತಿದ್ದಾರೆ. ಮೀನುಗಾರಿಕಾ ಬಲೆಗಳು ಕಡಲ ಅಲೆಗಳಿಗೆ ಕೊಚ್ಚಿ ಹೋಗಿವೆ. ಇನ್ನು ಮೀನುಗಾರಿಕಾ ಶೆಡ್ ಗಳಿಗೆ ಹಾನಿ ಆಗಿದೆ. ಇನ್ನು ನಾಳೆ ಕೂಡಾ ತೌಕ್ತೆ ಅಬ್ಬರ ಮುಂದುವರೆಯಲಿದ್ದು, ಸಮುದ್ರ ತೀರದ ನಿವಾಸಿಗಳು ಕಂಗಾಲು ಬಿದ್ದಿದ್ದಾರೆ. ಹೀಗೆ ಮುಂದುವರೆದ್ರೆ ಎಲ್ಲಿ ಅಂತಾ ಹೊಗೋದು ಎನ್ನುತ್ತಿದ್ದಾರೆ. ಇನ್ನು ಕಾರವಾರ ಬಂದರಿಗೆ ಮಲ್ಪೆ, ಮಂಗಳೂರು, ಗೋವಾ ಕೇರಳ ರಾಜ್ಯದ ಮೀನುಗಾರಿಕಾ ಬೋಟುಗಳು ಮೀನುಗಾರಿಕೆ ಮಾಡಲಾಗದ ಸ್ಥಿತಿಯಲ್ಲಿ ಕಾರವಾರ ಬಂದರಿನಲ್ಲಿ ಲಂಗರು ಹಾಕಿವೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರು ಮತ್ತು ಸಮುದ್ರ ತೀರದ ಜನರಲ್ಲಿ ತೌಕ್ತೆ ಚಂಡಮಾರುತ ನಿದ್ದೆ ಕೆಡಿಸಿದೆ. ನಾಳೆ ಕೂಡಾ ಮುಂದುವರೆಯಲಿದ್ದು ಇದರ ತೀವ್ರತೆ ಹೇಗಿರಲಿದೆ ಎಂದು ಕಾದು ನೋಡಬೇಕು ಅಷ್ಟೆ...

ಭಟ್ಕಳ, ಮುರುಡೇಶ್ವರ, ಹೊನ್ನಾವರ, ಅಂಕೋಲಾ ಗ್ರಾಮೀಣ ಭಾಗದಲ್ಲಿ ಅಬ್ಬರಿಸುತ್ತಿರುವ ತೌಕ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಭಟ್ಕಳದವರೆಗೂ ತೌಕ್ತೆ ಚಂಡಮಾರುತ ತನ್ನ ರೌದ್ರ ನರ್ತನ‌ ತೋರುತ್ತಿದೆ. ಇದರಿಂದ ತೀರಾ ಸಂಕಷ್ಟಕ್ಕೆ ಒಳಗಾದವರು ಸಮುದ್ರ ತೀರದಲ್ಲಿ ವಾಸಿಸುವ ಸಾವಿರಾರು ಕುಟುಂಬಗಳು. ಈಗಾಗಲೇ ಅಂಕೋಲಾ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಮುದ್ರದ ಅಬ್ಬರ ಜೋರಾಗಿದ್ದು ಸಮುದ್ರ ತೀರದಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ. ಕುಟುಂಬಸ್ಥರು ರಕ್ಷಣೆ ಪಡೆಯಲು ಸುರಕ್ಷಿತ ಜಾಗ‌ ಹುಡುಕಿ ಹೋಗುತ್ತಿದ್ದಾರೆ. ಇನ್ನು ಕೆಲವೆಡೆ ಜನರು ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದ್ದಾರೆ.

ಪೋಷಕರೇ ಎಚ್ಚರ...!; ಮಕ್ಕಳನ್ನೂ ಬಾಧಿಸಬಹುದು ಲಕ್ಷಣ ರಹಿತ ಕೊರೋನಾ ಸೋಂಕು

ಕೊರೋನಾ ಸಂಕಷ್ಟದ ಸಮಯದಲ್ಲಿ ತೌಕ್ತೆ ಚಂಡಮಾರುತ ಜನರನ್ನು ಕಂಗಾಲು ಮಾಡಿಸಿದೆ. ಲಕ್ಷಾಂತರ ಮೌಲ್ಯದ ಮೀನಿನ ಬಲೆಗಳು ಸಮುದ್ರ ಪಾಲಾಗಿವೆ. ಕೆಲವೆಡೆ ಸಾಂಪ್ರದಾಯಿಕ ಮೀನುಗಾರಿಕೆಯ ದೋಣಿಗಳು ಸಮುದ್ರದ ಅಲೆಗಳ ಅಬ್ಬರಕ್ಕೆ ಕಲ್ಲಿಗೆ ಬಡಿದು ಹಾನಿ ಆಗಿವೆ. ಒಂದೇ ದಿನಕ್ಕೆ ತನ್ನ ತೀವ್ರತೆ ಹೆಚ್ಚಿಸಿಕೊಂಡ  ತೌಕ್ತೆ ಚಂಡಮಾರುತ ನಾಳೆ ದಿನ ಹೇಗೆ ರೌದ್ರವತಾರ ತಾಳಲಿದೆ ಕಾದು ನೋಡಬೇಕು.

ಕಾರವಾರದಿಂದ ಭಟ್ಕಳದವರೆಗೂ ಒಂದೇ ಸ್ಥಿತಿ

ಕಾರವಾರ ತಾಲೂಕಿನ ಗ್ರಾಮೀಣ ಭಾಗದಿಂದ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಹೇಗೆ ಇದೆಯೋ ಅದೆ ಸ್ಥಿತಿ ಭಟ್ಕಳದವರೆಗೂ ಮುಂದುವರೆದಿದೆ. ತಾಲೂಕಿನಿಂದ ತಾಲೂಕಿಗೆ ತೌಕ್ತೆ ಚಂಡಮಾರುತದಿಂದ ಜನ ಒಂದಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆ ಪ್ರಮಾಣ ಕಡಿಮೆ ಇದ್ದರೂ ಕೂಡಾ ಸಮುದ್ರದಲ್ಲಿ ಕಡಲ ಅಬ್ಬರಕ್ಕೆ ಸಮುದ್ರ ತೀರದ ಜನರ ಪಾಡು ಹೇಳತೀರದಾಗಿದೆ.
Youtube Video

ಮಳೆ ಪ್ರಮಾಣ ಕಡಿಮೆ; ಸಮುದ್ರದ ಅಬ್ಬರ ಜೋರು

ಮಳೆ ಬಿದ್ದರೂ ಸಮಸ್ಯೆ ಇಲ್ಲ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಜನರಿಗೆ. ಆದ್ರೆ ಸಮುದ್ರ ಮುನಿಸಿಕೊಳ್ತು ಅಂದ್ರೆ ಸಮುದ ತೀರದ ಜನರ ಸಂಕಷ್ಟ ಹೇಳತೀರದ್ದಾಗುತ್ತದೆ. ಸಮುದ್ರದ ಆಳೆತ್ತರದ ಅಲೆಗಳು ನೇರವಾಗಿ ದಡಕ್ಕೆ ಅಪ್ಪಳಿ ಮನೆಗಳಿಗೆ ನುಗ್ಗಿ ಹಾನಿ ಮಾಡುತ್ತವೆ. ಹೀಗೆ ತೌಕ್ತೆ ಚಂಡಮಾರುತ ಸಮುದ್ರ ತೀರದ ಜನರನ್ನ ಹಿಂಡು ಹಿಪ್ಪೆ ಮಾಡುತ್ತಿದೆ.
Published by: Latha CG
First published: May 15, 2021, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories