ಚಿಕ್ಕಮಗಳೂರು: ಮ್ಯಾಂಡಸ್ ಚಂಡಮಾರುತದ (Mandous Cyclone Effect) ಎಫೆಕ್ಟ್ಗೆ ಕಾಫಿನಾಡಿನ ಕಾಫಿ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ. 2022ರಲ್ಲಿ ಇಡೀ ವರ್ಷ ಮಳೆ (Rain 2022) ಸುರಿದ ಪರಿಣಾಮ ಅಳಿದುಳಿದ ಕಾಫಿ ಕೊಯ್ಲಿಗೆ (Coffee Crop) ಬಂದ ವೇಳೆ ಮಣ್ಣಲ್ಲಿ ಮಣ್ಣಾಗಿ ಗೊಬ್ಬರವಾಗ್ತಿದೆ. ಕಾಫಿ ಕೊಯ್ಯೋದಕ್ಕೆ ಜನರೂ ಸಿಕ್ತಿಲ್ಲ. ಬಿಟ್ಟರೇ ಉದುರಿ ಅದೇ ತೋಟಕ್ಕೆ ಗೊಬ್ಬರವಾಗುತ್ತಿದೆ. ಚಂಡಮಾರುತದಿಂದ (Cyclone) ಶೀತ ಹೆಚ್ಚಾಗಿ ಗಿಡದಲ್ಲಿದ್ದ ಹಣ್ಣಾಗಿರೋ ಕಾಫಿ ಒಡೆದು, ಉದುರಿ ಹೋಗ್ತಿದೆ. ವರ್ಷವಿಡಿ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಣ್ಮುಂದೆಯೇ ಕರಗಿ ಹೋಗ್ತಿದೆ. ಪ್ರಕೃತಿ ಜೊತೆ ಹೊಡೆದಾಡಲು ಶಕ್ತಿ ಇಲ್ಲದ ಬೆಳೆಗಾರರು (Farmers) ಅಸಹಾಯಕರಾಗಿದ್ದಾರೆ. ತಮಿಳುನಾಡಿನ ಮ್ಯಾಂಡಸ್ ಚಂಡಮಾರುತ ಚಿಕ್ಕಮಗಳೂರಿನ ಕಾಫಿ ಬೆಳೆಗಾರರ ಬದುಕಿನ ಮೇಳೆ ಬರೆ ಎಳೆದಿದೆ.
ಕಳೆದ ಮೂರ್ನಾಲ್ಕು ದಿನದಿಂದ ಮಳೆ ಮಧ್ಯೆ ಶೀತ ಗಾಳಿ ಬೀಸುತ್ತಿದ್ದ ಅತಿಯಾದ ಚಳಿಗೆ ಕಾಫಿ ಸಂಪೂರ್ಣ ನೆಲಕಚ್ಚುತ್ತಿದೆ. ನವೆಂಬರ್-ಡಿಸೆಂಬರ್ ತಿಂಗಳಲ್ಲೇ ಕಾಫಿ ಕೊಯ್ಲಿಗೆ ಬರುತ್ತೆ. ಎಲ್ಲಾ ಸರಿ ಇದ್ದಿದ್ದರೆ ಈಗಾಗಲೇ ತೋಟದ ತುಂಬಾ ಕಾರ್ಮಿಕರು ಕಾಫಿ ಕೊಯ್ಯುತ್ತಿದ್ದರು. ಆದರೆ, ಕಳೆದ ಮೂರ್ನಾಲ್ಕು ದಿನದಿಂದ ವಾತಾವರಣ ಸಂಪೂರ್ಣ ಬದಲಾಗಿದ್ದು ಮಳೆ ಇರೋದ್ರಿಂದ ಕಾಫಿ ಕೊಯ್ಯಲು ಕಾರ್ಮಿಕರು ಬರುತ್ತಿಲ್ಲ.
ಕಣ್ಮುಂದೆಯೇ ನೆಲ ಕಚ್ಚುತ್ತಿರುವ ಕಾಫಿ ಹಣ್ಣು
ಮಳೆ ಹಾಗೂ ಶೀತಕ್ಕೆ ಗಿಡದಲ್ಲಿರೋ ಹಣ್ಣು ಕೂಡ ನೆಲಕ್ಕುದುರುತ್ತಿದೆ. ಇದರಿಂದ ಕಂಗಾಲಾಗಿರೋ ಕಾಫಿಬೆಳೆಗಾರರು ಸರ್ಕಾರದ ನೆರವಿನ ದಾರಿ ಕಾಯ್ತಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಕಾಫಿನಾಡಿಸನ ಕಾಫಿ ಬೆಳೆಗಾರರು ಮಳೆಯಿಂದ ಅಕ್ಷರಶಃ ಬೀದಿಗೆ ಬಂದಿದ್ರು. ಅದರಲ್ಲೂ ಸಣ್ಣ-ಸಣ್ಣ ಬೆಳೆಗಾರರ ಬದುಕು ಮಳೆ ನೀರಲ್ಲಿ ಕೊಚ್ಚಿ ಹೋಗಿತ್ತು. ಆದರಲ್ಲೂ ಈ ವರ್ಷವಂತೂ ವರ್ಷಪೂರ್ತಿ ಮಳೆ ಸುರಿದಿದ್ರಿಂದ ಕಾಫಿ ಗಿಡದಲ್ಲಿದ್ದಕ್ಕಿಂತ ಮಣ್ಣಲ್ಲಿ ಗೊಬ್ಬರವಾಗಿದ್ದೇ ಹೆಚ್ಚು.
ಎಲ್ಲಾ ಬೆಳೆಗಳ ಮೇಲೆ ಪರಿಣಾಮ
2022ರ ಜನವರಿಯಲ್ಲಿ ಆರಂಭವಾದ ಮಳೆ ಡಿಸೆಂಬರ್ ಬಂದ್ರು ನಿಂತಿಲ್ಲ. ಆಗಾಗ್ಗೆ ವಾರ, ಹದಿನೈದು ದಿನ ಬಿಡುವು ನೀಡಿದ್ದು ಬಿಟ್ಟರೇ ವರುಣದೇವ ವರ್ಷವಿಡಿ ಕಾಫಿನಾಡಲ್ಲೇ ಠಿಕಾಣಿ ಹೂಡಿದ್ದ. ಇದು ಕಾಫಿ-ಅಡಿಕೆ-ಮೆಣಸು ಸೇರಿದಂತೆ ಆಹಾರ ಬೆಳೆಗಳ ಮೇಲೂ ಪರಿಣಾಮ ಬೀರಿತ್ತು.
ಇದನ್ನೂ ಓದಿ: Health Guidelines: ರಾಜ್ಯದಲ್ಲಿ ಮುಂದುವರಿದ ಶೀತ ವಾತಾವರಣ; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಸರ್ಕಾರದ ಪರಿಹಾರಕ್ಕಾಗಿ ಆಗ್ರಹ
ಈಗಂತೂ ಒಳ್ಳೆ ಟೈಮಲ್ಲಿ ಚಂಡಮಾರುತ ಬೆಳೆಗಾರರ ಮೇಲೆ ಸವಾರಿ ಮಾಡುತ್ತಿದ್ದು, ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹಣ್ಣನ್ನ ಕೊಯ್ಯೋ ಸಮಯದಲ್ಲಿಯೇ ಚಂಡಮಾರುತ ಅಪ್ಪಳಿಸಿರೋದು ಈ ವರ್ಷ ಕಾಫಿ ಕೈಗೆ ಸಿಗೋದು ಅನುಮಾನವೇ ಸರಿ. ಹಾಗಾಗಿ ಬೆಳೆಗಾರರು ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಾರೆ, 2022ರ ವರ್ಷಪೂರ್ತಿ ಮಳೆ ಸುರಿದ ಪರಿಣಾಮ ಕಾಫಿನಾಡ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಅದರಲ್ಲೂ ಡಿಸೆಂಬರ್ ತಿಂಗಳಲ್ಲಿ ಕಾಫಿ ಕೊಯ್ಯುವ ಸಮಯದಲ್ಲೇ ಚಂಡಮಾರುತದ ಎಫೆಕ್ಟ್ ಮಳೆಯಿಂದ ಕಂಗಾಲಾಗಿದ್ದ ಬೆಳೆಗಾರರ ಬದುಕಿನ ಮೇಲೆ ಚಂಡಮಾರುತವೂ ಬರೆ ಎಳೆದಿದೆ.
ಜಿಟಿ ಮಳೆಗೆ ಬೆಂಗಳೂರಿಗರು ತತ್ತರ
ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ (Cyclone Mandous) ಪರಿಣಾಮ ಹೆಚ್ಚಾಗಿದ್ದು, ದಕ್ಷಿಣ ಒಳನಾಡಿನ 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ (India Meteorological Department) ಆರೆಂಜ್ ಅಲರ್ಟ್ (Orange Alert) ಘೋಷಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಡಿಸೆಂಬರ್ 12ರವರೆಗೆ ಮೋಡ ಕವಿದ ವಾತಾವರಣ, ಚಳಿಯ ಜೊತೆಗೆ ಮಳೆ ಸುರಿಯಲಿದೆ. ಮತ್ತೊಂದೆಡೆ ಕೆ.ಆರ್. ಮಾರ್ಕೆಟ್ನಲ್ಲಿ (K.R.Market) ಜನಜೀವನ ಅಸ್ತವ್ಯಸ್ತವಾಗಿದ್ದು, ವ್ಯಾಪಾರ ಮಾಡಲಾಗದೇ ವ್ಯಾಪಾರಿಗಳು ಪರದಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ