HOME » NEWS » State » CYCLONE BUREVI EFFECT CLOUDY WEATHER AND LIGHTLY RAIN IN KODAGU DISTRICT HK

Cyclone Burevi: ಬುರೇವಿ ಚಂಡಮಾರುತದ ಎಫೆಕ್ಟ್​​ : ಕೊಡಗಿನಾದ್ಯಂತ ಮೋಡಕವಿದ ವಾತಾವರಣ ಅಲ್ಲಲ್ಲಿ ಧಾರಾಕಾರ ಮಳೆ 

ಭತ್ತದ ಬೆಳೆ ಕಟಾವು ಮಾಡಿ ಗದ್ದೆಗಳಲ್ಲಿ ಬಿಡಲಾಗಿದ್ದು ಮಳೆ ತೀವ್ರವಾಗಿ ಸುರಿದಲ್ಲಿ ಎಲ್ಲವೂ ಅಲ್ಲಿಯೇ ಮೊಳಕೆಯೊಡೆಯುವ ಸಾಧ್ಯತೆ ಇದೆ. ಹೀಗಾಗಿ ಜನರು ಮೂರು ತಿಂಗಳಿಂದ ಕಷ್ಟ ಪಟ್ಟು ಬೆಳೆದಿದ್ದ ಬೆಳೆ ಹಾನಿಗೊಳಗಾಗುವ ಆತಂಕದಲ್ಲಿ ರೈತರಿದ್ದಾರೆ.

news18-kannada
Updated:December 8, 2020, 4:23 PM IST
Cyclone Burevi: ಬುರೇವಿ ಚಂಡಮಾರುತದ ಎಫೆಕ್ಟ್​​ : ಕೊಡಗಿನಾದ್ಯಂತ ಮೋಡಕವಿದ ವಾತಾವರಣ ಅಲ್ಲಲ್ಲಿ ಧಾರಾಕಾರ ಮಳೆ 
ಮಳೆ
  • Share this:
ಕೊಡಗು (ಡಿಸೆಂಬರ್​. 08): ಬುರೇವಿ ಚಂಡಮಾರುತದ ಪರಿಣಾಮ ಕೊಡಗಿನ ಕೆಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ವಿರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದಲ್ಲಿ ಅರ್ಧ ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು ಬಿಟ್ಟು ಬಿಟ್ಟು ತುಂತುರು ಮಳೆ ಬೀಳುತಿತ್ತು. ಆದರೆ ಇಂದು ವಿರಾಜಪೇಟೆ ತಾಲೂಕಿನ ಅಲ್ಲಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಇನ್ನು ಮೋಡಕವಿದ ವಾತಾವರಣದ ಜೊತೆಗೆ ಮೈ ನಡುಗಿಸುವ ಭಾರಿ ಶೀತಗಾಳಿ ಬೀಸುತ್ತಿರುವುದು ಜನರನ್ನು ಹೈರಾಣಾಗಿಸಿದೆ.

ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ತೆರಳುವವರಂತು ಹಿಂದೆ ಮುಂದೆ ನೋಡುವಂತೆ ಆಗಿದೆ. ಜಿಲ್ಲೆಯ ಎಲ್ಲೆಡೆ ಈಗಾಗಲೇ ಭತ್ತದ ಬೆಳೆ ಕಟಾವು ಮಾಡಲಾಗುತ್ತಿದೆ. ಅಲ್ಲದೆ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ಹಾಗೂ ಕರಿಮೆಣಸು ಬೆಳೆಗಳನ್ನು ಕಟಾವು ಮಾಡಲಾಗುತ್ತಿದೆ. ಆದರೆ ಬುರೇವಿ ಚಂಡಮಾರುತದ ಪರಿಣಾಮವಾಗಿ ತುಂತುರು ಮಳೆ, ಕೆಲವೆಡೆ ಧಾರಕಾರ ಮಳೆ ಸುರಿಯುತ್ತಿರುವುದು ಕೊಡಗಿನ ರೈತರನ್ನು ಆತಂಕಕ್ಕೆ ದೂಡಿದೆ.

ಭತ್ತದ ಬೆಳೆ ಕಟಾವು ಮಾಡಿ ಗದ್ದೆಗಳಲ್ಲಿ ಬಿಡಲಾಗಿದ್ದು ಮಳೆ ತೀವ್ರವಾಗಿ ಸುರಿದಲ್ಲಿ ಎಲ್ಲವೂ ಅಲ್ಲಿಯೇ ಮೊಳಕೆಯೊಡೆಯುವ ಸಾಧ್ಯತೆ ಇದೆ. ಹೀಗಾಗಿ ಜನರು ಮೂರು ತಿಂಗಳಿಂದ ಕಷ್ಟ ಪಟ್ಟು ಬೆಳೆದಿದ್ದ ಬೆಳೆ ಹಾನಿಗೊಳಗಾಗುವ ಆತಂಕದಲ್ಲಿ ರೈತರಿದ್ದಾರೆ.

ಇದನ್ನೂ ಓದಿ : Bharath Bandh: ಭಾರತ ಬಂದ್ ಗೆ ಕಲಬುರ್ಗಿಯಲ್ಲಿ ಮಿಶ್ರ ಪ್ರತಿಕ್ರಿಯೆ ; ಬಂದ್ ವೇಳೆ ಕಳ್ಳತನಕ್ಕೆ ಯತ್ನಿಸಿದ ಖದೀಮ

ಇನ್ನು ಕಾಫಿ ಗಿಡದಲ್ಲಿ ಹಣ್ಣಾಗಿದ್ದು ಬರುವ ಮಳೆಗೆ ನೆಲಕಚ್ಚುವುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕಾಫಿ ಬೀಜಗಳನ್ನು ಬಿಡಿಸಿದಲ್ಲಿ ಒಣಗಿಸಲು ಸಾಧ್ಯವಾಗದೆ ಕರಗಿಹೋಗುವುದೇ ಎನ್ನುವ ಪರಿಸ್ಥಿತಿ ಎದುರಾಗಿದೆ.

ಬುರೇವಿ ಚಂಡಮಾರುತ್ತದ ಪರಿಣಾಮವಾಗಿ ಕೊಡಗು ಜಿಲ್ಲೆಯಾದ್ಯಂತ ತುಂತುರು ಮಳೆ ಬೀಳುತಿದ್ದರೆ, ಮತ್ತೆ ಕೆಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದ ಬೆಳೆ ಹಾಳಾಗುವುದೇನೋ ಎಂದು ರೈತರು ಕಂಗಾಲಾಗುವಂತೆ ಮಾಡಿದೆ.
Published by: G Hareeshkumar
First published: December 8, 2020, 4:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories