​​Cyclone Asani: ಆಂಧ್ರ ಕರಾವಳಿಯಲ್ಲಿ ಪರಿಸ್ಥಿತಿ ನಿಭಾಯಿಸಲು NDRF​​​ ಸಜ್ಜು; ಬೆಂಗಳೂರಲ್ಲಿ ಶುರುವಾದ ಮಳೆ

ಚಂಡಮಾರುತದಿಂದಾಗಿ ಹೈದರಾಬಾದ್, ವಿಶಾಖಪಟ್ಟಣಂ, ಜೈಪುರ ಮತ್ತು ಮುಂಬೈ ಸೇರಿದಂತೆ 10 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಮೇ. 10): ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯು ಭಾರ ಕುಸಿತದಿಂದ ರೂಪುಗೊಂಡಿರುವ ಅಸನಿ ಚಂಡಮಾರುತವು ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದ್ದು, ಇನ್ನು ತೀವ್ರಗೊಂಡಿದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ಅಸಾನಿ ಚಂಡಮಾರುತವು (​​Cyclone Asani) ಗಂಟೆಗೆ 10 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದು, ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಉತ್ತರ ಆಂಧ್ರ ಕರಾವಳಿ ಮತ್ತು ಪಕ್ಕದ ಒಡಿಶಾ ಕರಾವಳಿಯನ್ನು ತಲುಪುವ ಸಾಧ್ಯತೆಯಿದ್ದು, ತೀರ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

    ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಆಸನಿ ಚಂಡಮಾರುತವು ಮುಂದಿನ ಎರಡು ದಿನಗಳ ಕಾಲ ಆಂಧ್ರದ ಉತ್ತರ ಕರಾವಳಿಯ ಕೆಲವೆಡೆ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

    ಪಶ್ಚಿಮ ಮಧ್ಯ ಮತ್ತು ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನಲೆ ಮೇ 13ರವರೆಗೆ ಮೀನುಗಾರರು ದಡಕ್ಕೆ ಹೋಗದಂತೆ ಸೂಚಿಸಲಾಗಿದೆ. ಇನ್ನು ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಸಮುದ್ರ ತೀರದಲ್ಲಿ ಮಳೆಯಾಗುವ ಹಿನ್ನಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದ್ದು, ಎನ್​ಡಿಆರ್​ಎಫ್​ ತಂಡಗಳು ಬೀಡು ಬಿಟ್ಟಿದೆ.

    ಚಂಡಮಾರುತದಿಂದಾಗಿ ಹೈದರಾಬಾದ್, ವಿಶಾಖಪಟ್ಟಣಂ, ಜೈಪುರ ಮತ್ತು ಮುಂಬೈ ಸೇರಿದಂತೆ 10 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಚೆನ್ನೈನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

    ಮಲೆನಾಡು ಆದ ಬೆಂಗಳೂರು
    ಅಸನಿ ಚಂಡಮಾರುತ ಪರಿಣಾಮ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಅನೇಕ ಕಡೆ ಮರ ಬಿದ್ದು ಹಾನಿಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇನ್ನು ಎರಡು ದಿನಗಳ ಕಾಲ ಇದೇ ರೀತಿ ಮಳೆ ವಾತಾವರಣ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ವಿಜ್ಞಾನಿ ಪ್ರಸಾದ್ ತಿಳಿಸಿದ್ದಾರೆ.
    ವಾಯುವ್ಯ ದಿಕ್ಕಿನಲ್ಲಿ ಚಂಡ ಮಾರುತ ತೀವ್ರಗೊಳ್ಳುತ್ತಿದ್ದು, ಇಂದು ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದೆ. ಇಂದು ಕೂಡ ಗುಡುಗು ಮಿಂಚಿನಿಂದ ಮಳೆ ಆಗಲಿದೆ.

    ಇದನ್ನು ಓದಿ: ಜೂನ್ 3ರಂದು 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ

    ಬೆಳ್ಳಂಬೆಳಗ್ಗೆ ಮೋಡ ಕವಿದ ವಾತಾವರಣ
    ಚಂಡ ಮಾರುತ ಪರಿಣಾಮ ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆಯಿಂದ ಮೋಡದ ವಾತಾವರಣ ಇದ್ದು, ಮಧ್ಯಾಹ್ನದಿಂದ ಮಳೆ ಆರಂಭವಾಗಿದೆ. ಮಳೆಯ ವೇಳೆ ಗಾಳಿ ಹೆಚ್ಚಾಗಲಿದೆ. ಇನ್ನು ಎರಡು ದಿನ ಇದೇ ರೀತಿ ವಾತಾವರಣ ಇರಲಿದೆ.

    ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ರಾಜ್ಯದಾದ್ಯಂತ ಅಲ್ಲಲ್ಲಿ ಮಿಂಚಿನೊಂದಿಗೆ ಗುಡುಗು ಸಂಭವಿಸುವ ಸಾಧ್ಯತೆಯಿದೆ.



    ಇದನ್ನು ಓದಿ: ಅಬ್ಬರಿಸಲಿದೆ ಅಸನಿ ಚಂಡಮಾರುತ: ಈ ಮೂರು ರಾಜ್ಯಗಳಲ್ಲಿ ಹೈಅಲರ್ಟ್ ಘೋಷಣೆ

    ಮಳೆಯಿಂದ ಬೆಂಗಳೂರಿನಲ್ಲಿ ವಿದ್ಯುತ್​ ವ್ಯತ್ಯಯ
    ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಗಾಳಿ ಮಳೆಯಾಗುತ್ತಿದ್ದು, ಅನೇಕ ಕಡೆ ಮರ ಬಿದ್ದು, ವಿದ್ಯುತ್​ ವ್ಯತ್ಯಯವಾಗಿದೆ. ಬೆಸ್ಕಾಂ ಅಧಿಕಾರಿಗಳ ಪ್ರಕಾರ ನಗರದ ವಿವಿಧ ಕಡೆ ಸುಮಾರು 398 ಮರ ಬಿದ್ದಿದ್ದು, 375 ವಿದ್ಯುತ್​ ಕಂಬ ಮತ್ತು 30 ಟ್ರಾನ್ಸ್​ಫಾರ್ಮ್​ಗಳು ಹಾನಿಗೊಂಡಿದೆ. ಎಚ್ ಎಸ್ ಆರ್ ಲೇಔಟ್ ನಲ್ಲಿ 35 ಕಂಬಗಳು ಮುರಿದು ಬಿದ್ದಿವೆ. ಇದರ ಹೊರತಾಗಿ, ಕೆಂಗೇರಿ, ಬಂಡೇಮಠ, ರಾಮೋಹಳ್ಳಿ, ಕುಂಬಳಗೋಡು, ಕನಕಪುರ, ಜಯನಗರ, ಪುಟ್ಟೇನಹಳ್ಳಿ, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

    ನಗರದಲ್ಲಿ ಮೇ 11 ರವರೆಗೆ ಸಾಧಾರಣ ಮಳೆಯಾಗಲಿದೆ. ನಗರ ಪ್ರದೇಶದಲ್ಲಿ 2.4 ಮಿ.ಮೀ., ಎಚ್‌ಎಎಲ್‌ನ ವೀಕ್ಷಣಾಲಯದಲ್ಲಿ ಮೇ 8 ರಂದು 37.2 ಮಿ.ಮೀ ಮಳೆ ದಾಖಲಾಗಿದೆ. ಮಾರ್ಚ್ 1 ರಿಂದ ಬೆಂಗಳೂರಿನಲ್ಲಿ 226 ಮಿ.ಮೀ ಮಳೆಯಾಗಿದೆ.​
    Published by:Seema R
    First published: