Power Star Puneeth Rajkumar: ಅಪ್ಪು ನೆನಪಿನಲ್ಲಿ ಸೈಕಲ್ ಜಾಥಾ: ಶಿವಣ್ಣ ಚಾಲನೆ

ಎಲ್ಲರ ಹೃದಯದಲ್ಲೂ ಅಪ್ಪು ಶಾಶ್ವತ. ಅಪ್ಪು ನನಗೆ ಅಣ್ಣನಾಗಿ ಹೋಗಿದ್ದಾನೆ. ನನ್ನ ಹುಟ್ಟು ಹಬ್ಬಕ್ಕೆ ಅಪ್ಪು ಸೈಕಲ್ ಗಿಫ್ಟ್ (Cycle Gift)ಮಾಡಿದ್ದನು. ತಮ್ಮನ ಬಗ್ಗೆ ಏನ್ ಹೇಳಬೇಕೋ ಮಾತು ಬರುತ್ತಿಲ್ಲ ಎಂದು ಶಿವಣ್ಣ ಭಾವುಕರಾದರು.

ಸೈಕಲ್ ಜಾಥಾ

ಸೈಕಲ್ ಜಾಥಾ

  • Share this:
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Power Star Puneeth Rajkumar)  ಅವರ  ನೆನಪಿನಲ್ಲಿ KSRP ಮತ್ತು ಸಂಚಾರಿ ಪೊಲೀಸರ ಆಯೋಜನೆಯ ಸೈಕಲ್ ಜಾಥಾಗೆ (Cycle Rally) ನಟ ಶಿವರಾಜ್ ಕುಮಾರ್ (Shivarjkumar) ಚಾಲನೆ ನೀಡಿದರು. ಬೆಂಗಳೂರು ನಗರದಲ್ಲಿ (Bengaluru City) 50 ಕಿಮೀ ಸೈಕಲ್ ಜಾಥಾ ಸಾಗಲಿದೆ. ನಟ ಪುನೀತ್ ರಾಜ್‍ಕುಮಾರ್ ಪುಣ್ಯ ನೆನಪು ಹಾಗೂ ಕನ್ನಡಕ್ಕಾಗಿ ನಾವು, ಮಾತಾಡ್ ಮಾತಾಡ್ ಕನ್ನಡ ಎಂಬ ಘೋಷ ವಾಕ್ಯದಡಿ ಸೈಕಲ್ ಜಾಥಾ ನಡೆಸಲಾಗಿದೆ.  ಸೈಕಲ್ ಜಾಥದಲ್ಲಿ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ (Alok Kumar), ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ (Ravikantegowda), ಪೊಲೀಸ್ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಭಾಗಿಯಾದರು.

ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ಸೈಕಲ್ ರೈಡ್ ಅಂದ್ರೆ ಅಪ್ಪುಗೆ ತುಂಬಾ ಇಷ್ಟ. ಪುನೀತ್ ಸಹ ಆಗಾಗ ಸೈಕಲ್ ಜಾಥಾ ಹೋಗುತ್ತಿದ್ದರು. ಅಪ್ಪು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾನೆ. ಇರ್ತಾನೆ ಎಂದರು.

ಶಿವಣ್ಣನ ಹುಟ್ಟುಹಬ್ಬಕ್ಕೆ ಸೈಕಲ್ ಗಿಫ್ಟ್ ನೀಡಿದ್ರು ಅಪ್ಪು

ಎಲ್ಲರ ಹೃದಯದಲ್ಲೂ ಅಪ್ಪು ಶಾಶ್ವತ. ಅಪ್ಪು ನನಗೆ ಅಣ್ಣನಾಗಿ ಹೋಗಿದ್ದಾನೆ. ನನ್ನ ಹುಟ್ಟು ಹಬ್ಬಕ್ಕೆ ಅಪ್ಪು ಸೈಕಲ್ ಗಿಫ್ಟ್ (Cycle Gift)ಮಾಡಿದ್ದನು. ನಮಗೆಲ್ಲಾ ಸೈಕಲಿಂಗ್ ಮಾಡಲು ಹೇಳುತ್ತಿದ್ದನು.  ಬಹುಶಃ ಇವತ್ತು ಇದ್ದಿದ್ರೆ ಈ ಸೈಕಲ್ ಜಾಥಾದಲ್ಲಿ ಭಾಗಿಯಾಗುತ್ತಿದ್ದನು. ತಮ್ಮನ ಬಗ್ಗೆ ಏನ್ ಹೇಳಬೇಕೋ ಮಾತು ಬರುತ್ತಿಲ್ಲ ಎಂದು ಶಿವಣ್ಣ ಭಾವುಕರಾದರು.

ಇದನ್ನೂ ಓದಿ:  Puneeth Rajkumar ತಿಥಿ ಕಾರ್ಯದ ದಿನ ಕಾವೇರಿ ನದಿಗೆ ತರ್ಪಣ ಬಿಟ್ಟ ನಟ Vinod Raj

ಪೊಲೀಸ್ ಸಿಬ್ಬಂದಿ ನೋವಿನಿಂದ ಕೆಲಸ ಮಾಡಿದ್ರು

ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ಬಹಳ ಸರಳ ವ್ಯಕ್ತಿತ್ವದ ವ್ಯಕ್ತಿ ಪುನೀತ್. ನನಗೆ ಅವರ ಜೊತೆ ಉತ್ತಮ ಒಡನಾಟ ಇತ್ತು. ಇವತ್ತು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಬಂದೋಬಸ್ತ್ ದಿನ ಎಲ್ಲಾ ಪೊಲೀಸರು ನಮ್ಮ ಮನೆಯವರು ನಮ್ಮನ್ನ ಬಿಟ್ಟು ಹೋಗಿದ್ದಾರೆ ಅಂತ ದುಃಖದಿಂದ ಕೆಲಸ ಮಾಡಿದ್ದಾರೆ. ಅಂದು ಮನೆಗೆ ಹೋಗಿ ನಾನು ನನ್ನ ಪತ್ನಿ ಜೊತೆ ಕಣ್ಣೀರು ಹಾಕಿದ್ದೇನೆ. ನಮ್ಮೆಲ್ಲರ ಮನ ಗೆದ್ದಿದ್ದಾರೆ ಪುನೀತ್. ಅವರು ಇದ್ದಿದ್ರೆ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಅದ್ರೆ ವಿಧಿ ಇವತ್ತು ಅವರೇ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:  Puneeth Rajkumar ನಿಧನದ ಬಳಿಕ ಹೆಂಡತಿ Ashwini ಮೊದಲ ರಿಯಾಕ್ಷನ್; ದೊಡ್ಡತನ ಮೆರೆದ ದೊಡ್ಮನೆ ಸೊಸೆ

ರಾಜಕುಮಾರ ಚಿತ್ರದ ಹಾಡು ಹೇಳಿದ ಅಲೋಕ್ ಕುಮಾರ್

ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ನಾವು ಪೊಲೀಸ್ ಹಾಕಿ ಆಯೋಜನೆ ಮಾಡಬೇಕಿತ್ತು. ಇದಕ್ಕೆ ಅಪ್ಪುರನ್ನ ಕರೆಯಿಸಿ ಅವರಿಂದಲೇ ಚಾಲನೆ ಕೊಡಿಸಬೇಕಿತ್ತು. ಅವರು ಒಪ್ಪಿಕೊಂಡಿದ್ರು, ಅದ್ರೆ ಮರುದಿನವೇ ಅವರು ವಿಧಿವಶರಾದರು. ಆದ್ರೆ ಅದು ಸಾಧ್ಯ ಆಗಲಿಲ್ಲ ಎಂದು ಹೇಳಿದರು. ವೇದಿಕೆ ಮೇಲೆ  ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡು ಹಾಡಿದರು.



ಸೈಕಲ್ ಜಾಥಾ ಮಾರ್ಗ ಹೀಗಿದೆ

ಕಂಠೀರವ ಸ್ಟೇಡಿಯಂನಿಂದ ಹೊರಟ ಸೈಕಲ್ ಜಾಥಾ, ಚಾಲುಕ್ಯ ಸರ್ಕಲ್, ಮೇಖ್ರಿ ಸರ್ಕಲ್‌, ಹೆಬ್ಬಾಳ, ಬಿಇಎಲ್ ಸರ್ಕಲ್, ಗೋರಗುಂಟೆಪಾಳ್ಯ, ರಾಜ್ ಕುಮಾರ್ ಸಮಾಧಿ ತಲುಪಲಿದೆ. ಪುನೀತ್ ಸಮಾಧಿಗೆ ಪುಷ್ಪ ನಮನ ಸಲ್ಲಿಸರುವ ಪೊಲೀಸರು, ನಂತರ ನಾಗರಭಾವಿ, ದೇವೆಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್,  ಬಿಟಿಎಂ ಜಂಕ್ಷನ್, ಸಿಲ್ಕ್ ಬೋರ್ಡ್, ಆಡುಗೋಡಿ, ರಿಚ್ಮಂಡ್ ಸರ್ಕಲ್,  ಮೆಯೋ ಹಾಲ್, ಕಡೆಯಿಂದ ಸಾಗಿ ಪೊಲೀಸ್ ಹಾಕಿ ಗ್ರೌಂಡ್ ನಲ್ಲಿ ಸೈಕಲ್ ಜಾಥಾ (Cycle Rally) ಅಂತ್ಯವಾಗಲಿದೆ.
Published by:Mahmadrafik K
First published: