ಕೋಲಾರ: ಒಂದು ಮರ (Tree) ನೂರಾರು ಜನರ ಜೀವಕ್ಕೆ (Life) ಅವಶ್ಯವಿರುವ ಆಮ್ಲಜನಕ (Oxygen) ಮೂಲವಾಗಿದೆ, ಗಿಡ ಬೆಳೆಸಿ ಪರಿಸರ (Nature) ಉಳಿಸಿ ಎನ್ನುವ ಅಭಿಯಾನವನ್ನ ಸರ್ಕಾರಗಳು (Government), ಸಂಘ ಸಂಸ್ತೆಗಳು ನಿರಂತರವಾಗಿ ಮಾಡುತ್ತಲೆ ಅರಿವು ಮೂಡಿಸುತ್ತಿದೆ, ಇನ್ನು ನಾಡು ಉಳಿಯಬೇಕಿದ್ದರೆ ಪ್ರಾಕೃತಿಕ ಸಂಪತ್ತನ್ನ ನಾವು ಉಳಿಸಿಕೊಳ್ಳಬೇಕಿದೆ, ಆದರೆ
ಕೋಲಾರ (Kolar) ಜಿಲ್ಲೆಯ ಮಾಲೂರು (Malur) ತಾಲೂಕಿನ ನೆಲ್ಲಹಳ್ಳಿ ಎನ್ನುವ ಕುಗ್ರಾಮದಲ್ಲಿ, ಕೆರೆ ಬದಿ ಬೆಳೆದು ನಿಂತಿದ್ದ 50 ಕ್ಕೂ ಹೆಚ್ಚು ಬೃಹತ್ ಹೊಂಗೆ ಮರಗಳನ್ನ ಕಾರಣವಿಲ್ಲದೆ ಕಟಾವು ಮಾಡಲಾಗಿದೆ.
ತಂಪು ನೀಡುತ್ತಿದ್ದ ಮರಕ್ಕೆ ಕೊಡಲಿ ಏಟು
ಕೆರೆ ಏರಿಯ ಎರಡು ಬದಿ ಸುಮಾರು 100 ಕ್ಕೂ ಹೆಚ್ಚು ಹೊಂಗೆ ಮರಗಳು ಬೆಳೆದಿದ್ದು, ಜನರಿಗೆ ತಂಪು ನೆರಳಿನ ಆಶ್ರಯ ನೀಡುತ್ತಾ, ಹಚ್ಚ ಹಸಿರಿನ ವಾತಾವರಣ ಕಾಣಸಿಗುತ್ತಿತ್ತು, ಆದರೆ ಪಕ್ಕದ ಮಾಕಾರಹಳ್ಳಿಯ ಮರ ವ್ಯಾಪಾರಿ ರಿಜ್ವಾನ್ ಎನ್ನುವರು, ಕೆರೆಯ ಎರಡೂ ಬದಿಯಲ್ಲಿದ್ದ ಮರಗಳನ್ನ ಕಟಾವು ಮಾಡಿ, ಎರಡು ಟ್ರಾಕ್ಟರ್ನಲ್ಲಿ ಸಾಗಿಸಿದ್ದಾರೆ.
ಜಿಲ್ಲಾಧಿಕಾರಿ ಗಮನಕ್ಕೆ ತಂದ ಗ್ರಾಮಸ್ಥರು
ಇದನ್ನ ಗ್ರಾಮಸ್ತರು ಪ್ರಶ್ನಿಸಿದ್ದು, ಗ್ರಾಮದ ಮುನಿರಾಜು, ತಿಮ್ಮರಾಯಪ್ಪ ಮರಗಳನ್ನ ನಮಗೆ ಮಾರಾಟ ಮಾಡಿದ್ದಾರೆಂದು ತಿಳಿಸಿದ ರಿಜ್ವಾನ್, ಟ್ರಾಕ್ಟರ್ ಮೂಲಕ ಮರಗಳನ್ನ ಸಾಗಿಸಿದ್ದಾರೆ, ಮರ ಕಟಾವು ಮಾಡುವಾಗ ನಾಗರಾಜ್, ಮಸ್ತಾನ್ ಖಾನ್ ಎನ್ನುವರು ವಿಡಿಯೋ ಮಾಡಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಗಮನಕ್ಕು ತಂದಿದ್ದಾರೆ
ಇದನ್ನೂ ಓದಿ: Hubballi: ಗಲಾಟೆ ನಡೆಯುವಾಗ ಕಣ್ಮುಚ್ಚಿ ಕುಳಿತಿತ್ತು CCTV! ಪೊಲೀಸ್ ಇಲಾಖೆಯನ್ನೇ ಯಾಮಾರಿಸಿದ ಖಾಸಗಿ ಕಂಪನಿ!
ಪೊಲೀಸರು ಬರ್ತಿಲ್ಲ, ಪಿಡಿಒ ಕೇಳುತ್ತಿಲ್ಲ!
ಇನ್ನು ಕೆರೆ ಏರಿಯ ಎರಡು ಬದಿಯ 50 ಕ್ಕೂ ಹೆಚ್ಚು ಮರಗಳನ್ನ ಕಟಾವು ಮಾಡಿದ್ದರು, ಇದುವರೆಗು ಬನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿಲ್ಲ, ಪಿ.ಡಿ.ಒ ಅಂಬರೀಶ್ ಪೋನ್ ಸಂಪರ್ಕಕ್ಕು ಸಿಗದೆ ನಿರ್ಲಕ್ಷ್ಯ ತೋರಿದ ಆರೋಪ ಕೇಳಿಬಂದಿದೆ.
ತನಿಖೆಯ ಭರವಸೆ ನೀಡಿದ ಅಧಿಕಾರಿ
ಸರ್ಕಾರಿ ಸ್ತಳದಲ್ಲಿ ಯಾವುದೇ ಮರ ಕಟಾವು ನಡೆಸಬೇಕಿದ್ದರು, ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ, ಆದರೆ ಇಲ್ಲಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಬೀಳುವ ಜೊತೆಗೆ, ಪರಿಸರ ಸಂಪತ್ತು ಲೂಟಿಯಾದರು, ಗ್ರಾಮ ಪಂಚಾಯ್ತಿಯವರು ತಮಗೂ, ಇದಕ್ಕು ಸಂಬಂದವೇ ಇಲ್ಲದಂತೆ ವರ್ತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋಲಾರ ಜಿಲ್ಲಾ ಪಂಚಾಯಿತಿ ಸಿ.ಇ.ಒ ಯುಕೇಶ್ ಕುಮಾರ್, ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಆರೋಪ ತಳ್ಳಿಹಾಕಿದ ಗ್ರಾಮದ ಮುಖಂಡ
ಈ ಬಗ್ಗೆ ಮಾತನಾಡಿರುವ ಗ್ರಾಮಸ್ತರು 4 ಸಾವಿರ ಹಣದ ಆಸೆಗೆ ಮರಗಳನ್ನ ಕಟಾವು ಮಾಡಿಸಿದ್ದಾರೆಂದು ದೂರಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ, ಈ ಬಗ್ಗೆ ಮಾತನಾಡಿರುವ ಮರ ಕಟಾವು ಮಾಡಿದ ವ್ಯಕ್ತಿ ರಿಜ್ವಾನ್, ನಮಗೆ ಗ್ರಾಮಸ್ತರು ಮರಗಳನ್ನ ಮಾರಾಟ ಮಾಡಿದ್ದು, ಅದರಂತೆ ಮರಗಳನ್ನ ಕಡಿದಿದ್ದಾಗಿ ತಿಳಿಸಿದ್ದು, ನಾನು 4 ಸಾವಿರ ಹಣ ನೀಡಿ, ಇನ್ನೂ 1 ಸಾವಿರ ಹೆಚ್ಚುವರಿ ಹಣವನ್ನ ಕೆಲವರಿಗೆ ನೀಡಿದ್ದೇವೆ, ಮರ ಕಡಿಯಲು ಹೇಳಿದ್ದು ಯಾರೆಂಬ ಪ್ರಶ್ನೆಗೆ ಧಿಮಾಕಿನ ಉತ್ತರ ನೀಡಿದ ರಿಜ್ವಾನ್, 50 ಕ್ಕು ಹೆಚ್ಚು ಜನ ಹೇಳಿದ್ದಾರೆ ಎನ್ನುತ್ತಾ ಸ್ತಳದಿಂದ ಕಾಲ್ಕಿತ್ತಿದ್ದಾರೆ.
ಇನ್ನು ಮರ ಕಟಾವಿಗೆ ಮುನಿರಾಜು ಕಾರಣ, ಎನ್ನುವ ಗ್ರಾಮಸ್ತರ ಆರೋಪಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಗ್ರಾಮದ ಹಿರಿಯ ಮುಖಂಡ ಮುನಿರಾಜು, ಘಟನೆಗು ತಮಗು ಯಾವುದೇ ಸಂಬಂದವಿಲ್ಲ ಎಂದು ಆರೋಪ ತಳ್ಳಿಹಾಕಿದ್ದು, ಮರಗಳು ಎಷ್ಟಿವೆ ಎನ್ನುವ ಮಾಹಿತಿಯೇ ತಿಳಿದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Puttur: ಇಲ್ಲಿ ಮಹಿಳೆಯರು ಮನೆ ಮಾತ್ರವಲ್ಲ, ಊರನ್ನೇ ಸ್ವಚ್ಛ ಮಾಡ್ತಾರೆ
ಒಟ್ಟಿನಲ್ಲಿ ನೆಲ್ಲಹಳ್ಳಿ ಗ್ರಾಮದ ಕೆರೆ ಏರಿಯ ಎರಡೂ ಬದಿಯಲ್ಲಿದ್ದ ಹೊಂಗೆ ಮರಗಳು ಮರ ವ್ಯಾಪಾರಿಗಳ ಪಾಲಾಗಿದ್ದು, ಪರಿಸರ ಸಂಪತ್ತನ್ನ ಉಳಿಸಬೇಕಿರುವ ಜನರೇ ಕಡಿಯಲು ಹೇಳಿರುವ ಬೆಳವಣಿಗೆ ನಿಜಕ್ಕೂ ವಿಪರ್ಯಾಸ ಎಂದರೆ ತಪ್ಪಾಗಲಾರದು. ಪರಿಸರ ಸಂಪತ್ತು ಎಲ್ಲರ ಸ್ವತ್ತು, ಗಿಡ ಮರಗಳನ್ನ ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯವೂ ಆಗಿದೆ ಎಂಬುದನ್ನ ಯಾರು ಮರೆಯುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ