ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತ: 2 ಕೆಜಿ ಅಕ್ಕಿ ಬದಲು ರಾಗಿ, ಜೋಳ; ಬಿಸಿ ಪಾಟೀಲ್​​

ಅನ್ನಭಾಗ್ಯ ಯೋಜನೆಗೆ ಈ ಬಾರೀ ಬಜೆಟ್​ನಲ್ಲಿ ರೂ. 1,234 ಕೋಟಿ ರೂ ಕಡಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಈ ಧಾನ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಬಿ.ಸಿ. ಪಾಟೀಲ್.

ಬಿ.ಸಿ. ಪಾಟೀಲ್.

  • Share this:
ಹಿರೇಕೆರೂರರು (ಮಾ.07): ಬಿಪಿಎಲ್​ ಕಾರ್ಡ್​ಗಳಿಗೆ ನೀಡುತ್ತಿರುವ ಅನ್ನಭಾಗ್ಯ ಯೋಜನೆಯಲ್ಲಿ 7 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ, ಇನ್ಮುಂದೆ 5 ಕೆಜಿ ನೀಡಲಾಗುವುದು. ಉಳಿದ 2 ಕೆಜಿಗೆ ಜೋಳ ಅಥವಾ ರಾಗಿಯನ್ನು ನೀಡಲಾಗುವುದು ಎಂದು ಸಚಿವ ಬಿಸಿ ಪಾಟೀಲ್​ ತಿಳಿಸಿದ್ದಾರೆ. 

ನಗರದಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ಮಾಡಿರುವ ಸರ್ಕಾರದ ನಿರ್ಧಾರದ ಕುರಿತು ಮಾತನಾಡಿದ ಅವರು, ಇನ್ಮುಂದೆ ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿ ನೀಡಲಾಗುವುದು. ಉಳಿದ ಎರಡು ಕೆಜಿಗೆ ಜೋಳ, ರಾಗಿ ನೀಡಲಾಗುವುದು. ಕಾರಣ ಉತ್ತರ ಕರ್ನಾಟಕದ ಜನ ರೊಟ್ಟಿ ತಿಂತಾರೆ. ಹಳೆ ಮೈಸೂರಲ್ಲಿ ಮುದ್ದೆ ಹೆಚ್ಚಾಗಿ ತಿಂತಾರೆ. ಹಾಗಾಗಿ 2 ಕೆಜಿ ಜೋಳ, ರಾಗಿ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ ಜೋಳ, ರಾಗಿಗೂ ಬೇಡಿಕೆ ಬರುತ್ತದೆ ಎಂದರು.

ಅನ್ನಭಾಗ್ಯ ಯೋಜನೆಗೆ ಈ ಬಾರೀ ಬಜೆಟ್​ನಲ್ಲಿ ರೂ. 1,234 ಕೋಟಿ ರೂ ಕಡಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಈ ಧಾನ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಇದನ್ನು ಓದಿ: ಮಗನ ಮದುವೆಗೆ ಮತದಾರರಿಗೆ ಯಾವುದೇ ಉಡುಗೊರೆ ನೀಡುತ್ತಿಲ್ಲ, ಇದೆಲ್ಲಾ ಸುಳ್ಳು ಸುದ್ದಿ: ಅನಿತಾ ಕುಮಾರಸ್ವಾಮಿ

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಮುಖ್ಯಮಂತ್ರಿಗಳನ್ನೇ ಈ ಕುರಿತು ಕೇಳುವುದು ಉತ್ತಮ. ಸದ್ಯ ಅಧಿವೇಶನ ನಡೆಯುತ್ತಿದ್ದು, ಇದು ಮುಗಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದರು.

ಸರ್ಕಾರ ಭದ್ರ: 

ಬಿಜೆಪಿ ಸರ್ಕಾರ ಆಗ ಬೀಳುತ್ತದೆ. ಈಗ ಬೀಳುತ್ತದೆ ಎಂಬ ವಂದತಿ ನಾವೆಲ್ಲಾ ಬಂದ ಬಳಿಕ ಸುಳ್ಳಾಗಿದೆ. ಸರ್ಕಾರ ಸುಭದ್ರವಾಗಿದ್ದು, ಮೂರುವರೆ ವರ್ಷಗಳ ಕಾಲ ಬಿಎಸ್​ ವೈ ಆಡಳಿತ ನಡೆಸಲಿದ್ದಾರೆ. ಆರ್ ಶಂಕರ್ ಸೇರಿದಂತೆ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವಲ್ಲಿ ಕೆಲವು ತಾಂತ್ರಿಕ ತೊಂದರೆಗಳಾಗಿವೆ. ಇವು ಬಗೆಹರಿಯಬೇಕು.  ಯಡಿಯೂರಪ್ಪ ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ಇದೆ ಎಂದರು.
First published: