Gold smuggling: ಕಣ್ಣೂರಿನ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಪ್ಯಾಂಟಿನ ಒಳಗೆ ಪ್ಯಾಂಟ್ ಹಾಕಿಕೊಂಡು ಅದರೊಳಗೆ 302 ಗ್ರಾಂ ಚಿನ್ನವನ್ನು ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದಾಗ ಅದನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಈ ಖತರ್ನಾಕ್ ಕಳ್ಳಸಾಗಾಣೆದಾರರನ್ನು ವಶಕ್ಕೆ ಪಡೆದಿದ್ದಾರೆ.
"ಕಣ್ಣೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಟೆಲಿಜೆನ್ಸ್ ಯುನಿಟ್ ಪ್ರಯಾಣಿಕರೊಬ್ಬರು ಧರಿಸಿದ್ದ ಡಬಲ್ ಲೇಯರ್ ಪ್ಯಾಂಟ್ ನೊಳಗೆ ಪೇಸ್ಟ್ ರೂಪದಲ್ಲಿ ಎನೋ ಇರುವುದು ಗಮನಕ್ಕೆ ಬಂದಿದೆ ತಕ್ಷಣ ಆ ಪ್ರಯಾಣಿಕನ ಪ್ಯಾಂಟ್ಅನ್ನು ಬಿಚ್ಚಿಸಿ ನೋಡಿದಾಗ ಚಿನ್ನ ಇರುವುದು ಗೊತ್ತಾಗಿ ವಶಪಡಿಸಿಕೊಳ್ಳಲಾಗಿದೆ" ಎಂದು ಕೊಚ್ಚಿಯಲ್ಲಿರುವ ಕಸ್ಟಮ್ಸ್ ಪ್ರಿವೆಂಟಿವ್ ಯುನಿಟ್ ವರದಿ ಮಾಡಿದೆ.
ಪ್ರಯಾಣಿಕನು ತಿಳಿ ನೀಲಿ ಬಣ್ಣದ ಪ್ಯಾಂಟ್ ಅನ್ನು ಡಬಲ್ ಲೇಯರ್ ಮಾಡಿಸಿಕೊಂಡು ಧರಿಸಿದ್ದನು, ಒಳಗಿನ ಪ್ಯಾಂಟೂ ಸಹ ಗಾಡ ನೀಲಿ ಬಣ್ಣದ್ದಾಗಿದ್ದು ಈ ಎರಡರ ಮಧ್ಯದಲ್ಲಿ ಚಿನ್ನವನ್ನು ತೆಳುವಾಗಿ ಪೇಸ್ಟ್ ರೀತಿಯಲ್ಲಿ ಮಾಡಿ ಮುಚ್ಚಿಡಲಾಗಿತ್ತು.
ಇತ್ತೀಚೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿ ಇರುವ ಭಾರತೀಯ ಚಿನ್ನದ ನೀತಿ ಸಂಸ್ಥೆಯು ವರದಿ ಬಿಡುಗಡೆ ಮಾಡಿದ್ದು ವರ್ಷಕ್ಕೆ 300 ಟನ್ಗಳಷ್ಟು ಚಿನ್ನವು ಕಳ್ಳಸಾಗಣೆ ಮೂಲಕ ದೇಶದ ಒಳಗೆ ಬರುತ್ತದೆ ಎಂದು ಅಂದಾಜಿಸಿದ್ದು, ಇದರಿಂದ ಸರ್ಕಾರಕ್ಕೆ ₹ 20,000 ಕೋಟಿ ಆದಾಯ ನಷ್ಟವಾಗುತ್ತಿದೆ ಎಂದು ಹೇಳಲಾಗಿದೆ.
ಕಳೆದ ವಾರ, ದುಬೈನಿಂದ ಅಂದಾಜು 5,58,900 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಲಾಗಿತ್ತು.
ಗುಲಾಬಿ ಬಣ್ಣದ ಹೇರ್ಬ್ಯಾಂಡ್ಗಳ ಒಳಗೆ ಚಿನ್ನವನ್ನು ತಂತಿಯ ರೂಪದಲ್ಲಿ ಅಡಗಿಸಿ ಕಳ್ಳಸಾಗಣೆ ಮಾಡಲಾಗುತ್ತಿತ್ತು, ಇದು ಸುಮಾರು 115 ಗ್ರಾಂ ತೂಕವಿತ್ತು ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಗೆ (ಸಿಬಿಐಸಿ) ಮಾಹಿತಿ ನೀಡಿತ್ತು.
ಆರೋಪಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಮೂಲದವನು ಎಂದು ಹೇಳಲಾಗಿದ್ದು, ದುಬೈನಿಂದ ಬಂದ ಮೇಲೆ ಆತನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಚಿನ್ನ ಕಳ್ಳಸಾಗಾಣಿಕೆ ಹೆಚ್ಚು ಕೇರಳ ಮೂಲಕವೇ ನಡೆಯುತ್ತಿದೆ ಎನ್ನುವುದು ಕಸ್ಟಮ್ ಅಧಿಕಾರಿಗಳ ಅಭಿಪ್ರಾಯ. ಅಲ್ಲದೇ ಕಳೆದ ಕೇರಳ ವಿಧಾನಸಭಾ ಚುನಾವಣೆ ಹತ್ತಿರದಲ್ಲಿ ಇದ್ದಾಗ ಕೇರಳ ಸಿಎಂ ಪಿಣರಾಯಿ ಸೇರಿದಂತೆ ಸರ್ಕಾರದ ಸಚಿವರು ಚಿನ್ನ ಕಳ್ಳಸಾಗಾಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೊಡ್ಡ ಆರೋಪ ಮಾಡಲಾಗಿತ್ತು.
ಇದನ್ನೂ ಓದಿ: BS Yediyurappa: ಬಿಎಸ್ವೈ ರಾಜ್ಯ ಪ್ರವಾಸ: ಪ್ರಭಾವಿ ನಾಯಕನ ಮೇಲೆ ಕಣ್ಣಿಟ್ಟ ಬಿಜೆಪಿ ಹೈಕಮಾಂಡ್
ಇದು ಬಿಜೆಪಿ ಮತ್ತು ಕೇರಳ ಕಮ್ಯುನಿಸ್ಟ್ ಸರ್ಕಾರದ ಜಟಾಪಟಿಗೆ ಕಾರಣವಾಗಿ ಆರೋಪ- ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ