ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತುರ್ತು ಸಭೆ; ಗೌಡರ ಮಧ್ಯಂತರ ಚುನಾವಣೆಯ ಭವಿಷ್ಯ ನಿಜವಾಗುತ್ತಾ?

ಬಾದಾಮಿ ಮತ್ತು ವರುಣಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ಸಭೆಗಳನ್ನ ನಡೆಸುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಮೈತ್ರಿ ಸರ್ಕಾರ ಸುಭದ್ರವಾಗಿದೆ, ಪೂರ್ಣಾವಧಿ ಅಧಿಕಾರ ನಡೆಸುತ್ತದೆ ಎಂದು ಪದೇಪದೇ ಹೇಳುವ ಅವರು ಒಂದೇ ಕ್ಷೇತ್ರದಲ್ಲಿ ಒಂದೇ ತಿಂಗಳಲ್ಲಿ 5 ಸಭೆ ನಡೆಸಲು ಕಾರಣವಾದರೂ ಏನು?

news18
Updated:July 3, 2019, 4:00 PM IST
ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತುರ್ತು ಸಭೆ; ಗೌಡರ ಮಧ್ಯಂತರ ಚುನಾವಣೆಯ ಭವಿಷ್ಯ ನಿಜವಾಗುತ್ತಾ?
ಸಿದ್ದರಾಮಯ್ಯ
  • News18
  • Last Updated: July 3, 2019, 4:00 PM IST
  • Share this:
ಮೈಸೂರು(ಜುಲೈ 03): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಗ ಪ್ರತಿನಿಧಿಸುವ ಮೈಸೂರಿನ ವರುಣ ಕ್ಷೇತ್ರದಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಸಿದ್ದರಾಮಯ್ಯ ಅವರು ಐದು ಬಾರಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಮೊನ್ನೆಮೊನ್ನೆಯಷ್ಟೇ ಬಾದಾಮಿ ಕ್ಷೇತ್ರದಲ್ಲಿ ಬರೋಬ್ಬರಿ ನಾಲ್ಕು ದಿನಗಳ ಕಾಲ ಪ್ರವಾಸ ಮಾಡಿ ಜನಸಂಪರ್ಕ ನಡೆಸಿದ್ದರು. ಅದಾದ ಬೆನ್ನಲ್ಲೇ ತಮ್ಮ ಮೂಲ ಕ್ಷೇತ್ರವಾಗಿರುವ, ಈ ಬಾರಿ ತಮ್ಮ ಮಗ ಯತೀಂದ್ರ ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರದಲ್ಲಿ ತುರ್ತಾಗಿ ಕೈ ಕಾರ್ಯಕರ್ತರ ಸಭೆ ನಡೆಸಿದ್ದಾರೆ.

ಬಾದಾಮಿ ಮತ್ತು ವರುಣಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ಸಭೆಗಳನ್ನ ನಡೆಸುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಮೈತ್ರಿ ಸರ್ಕಾರ ಸುಭದ್ರವಾಗಿದೆ, ಪೂರ್ಣಾವಧಿ ಅಧಿಕಾರ ನಡೆಸುತ್ತದೆ ಎಂದು ಪದೇಪದೇ ಹೇಳುವ ಅವರು ಒಂದೇ ಕ್ಷೇತ್ರದಲ್ಲಿ ಒಂದೇ ತಿಂಗಳಲ್ಲಿ 5 ಸಭೆ ನಡೆಸಲು ಕಾರಣವಾದರೂ ಏನು?

ಇದನ್ನೂ ಓದಿ: ಎಚ್​. ವಿಶ್ವನಾಥ್​ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನ ತೊರೆಯಲು ಹಿಂದಿರುವ ಅಸಲಿ ಕಾರಣ ಏನು ಗೊತ್ತೆ?

ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು. ಈಗ ಸಿದ್ದರಾಮಯ್ಯ ನಡೆಸುತ್ತಿರುವ ತುರ್ತು ಸಭೆಗಳು ಗೌಡರ ಮಾತಿಗೆ ಪುಷ್ಟಿ ನೀಡುವಂತಿವೆ. ಮಧ್ಯಂತರ ಚುನಾವಣೆ ಬಂದರೆ ಬಾದಾಮಿ ಮತ್ತು ವರುಣ ಕ್ಷೇತ್ರಗಳು ಕೈಬಿಟ್ಟುಹೋಗದಂತೆ ಸಿದ್ದರಾಮಯ್ಯ ಭದ್ರ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ.

ವರುಣಾದಲ್ಲಿ ಸಭೆ ನಡೆಸುತ್ತಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಯಲ್ಲಿ ಸೋಲು ಯಾಕಾಯಿತು ಎಂಬುದನ್ನು ತಿಳಿದುಕೊಳ್ಳಲು ಈ ಸಭೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸುತ್ತಾರೆ.

ಇದನ್ನೂ ಓದಿ: ಬಹುಮತ ಸಾಬೀತುಪಡಿಸಿದರೆ ನಾವೇ ಸರ್ಕಾರವನ್ನು ಬಿಟ್ಟುಕೊಡುತ್ತೇವೆ; ಶೋಭಾ ಕರಂದ್ಲಾಜೆಗೆ ಸಿದ್ದರಾಮಯ್ಯ ಸವಾಲ್​

ಆನಂದ್ ಸಿಂಗ್ ಒಬ್ಬರೇ ರಾಜೀನಾಮೆ ಕೊಟ್ಟಿರೋದು…ಮೈತ್ರಿ ಪಕ್ಷಗಳ ಹಲವಾರು ನಾಯಕರು ರಾಜೀನಾಮೆ ಕೊಡುತ್ತಿದ್ದು, ಮೈತ್ರಿ ಸರ್ಕಾರ ಅಲುಗಾಡುತ್ತಿದೆ ಎಂಬ ವಾದವನ್ನು ಸಿದ್ದರಾಮಯ್ಯ ತಳ್ಳಿಹಾಕಿದರು. ಸದ್ಯಕ್ಕೆ ಆನಂದ್ ಸಿಂಗ್ ಒಬ್ಬರೇ ರಾಜೀನಾಮೆ ಕೊಟ್ಟಿರೋದು. ಅವರು ಜಿಂದಾಲ್ ವಿಚಾರವಾಗಿ ಮಾತ್ರ ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿರುವ ವಿಚಾರವನ್ನೂ ಅವರು ತಳ್ಳಿಹಾಕಿದರು. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿಲ್ಲವೆಂದು ಸ್ಪೀಕರ್ ಅವರೇ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ರಾಜೀನಾಮೆಯ ಪತ್ರವನ್ನು ಒಪ್ಪಲು ಹೇಗೆ ಸಾಧ್ಯ? ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದಿದೆ; ಮೈತ್ರಿ ಪಕ್ಷದ ನಾಯಕರ ವಿರುದ್ಧ ಚಾಟಿ ಬೀಸಿದ ಹೆಚ್​. ವಿಶ್ವನಾಥ್

ಜಿಟಿಡಿ ಹೇಳಿಕೆಗೆ ತಿರುಗೇಟು:

ಬಿಜೆಪಿಯಿಂದ ಯಾವುದೇ ಆಪರೇಷನ್ ನಡೆಯುತ್ತಿಲ್ಲ ಎಂದ ಜಿ.ಟಿ. ದೇವೇಗೌಡ ಅವರ ಅಭಿಪ್ರಾಯಕ್ಕೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಲಿಲ್ಲ. ಜಿಟಿಡಿ ಅವರಿಗೆ ಆ ಬಗ್ಗೆ ಆ ರೀತಿಯ ಮಾಹಿತಿ ಇರಬಹುದು. ಆದರೆ, ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿರುವುದು ನಿಜ. ಸ್ವತಃ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರೇ ಆಪರೇಷನ್ ಕಮಲ ಮಾಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

ಇದೇ ವೇಳೆ, ಬಿಜೆಪಿಯ ಆಪರೇಷನ್​ಗೆ ಪ್ರತಿಯಾಗಿ ರಿವರ್ಸ್ ಆಪರೇಷನ್ ಮಾಡುವ ಸಾಧ್ಯತೆಯನ್ನು ತಳ್ಳಿಹಾಕಿದರು. ಆಪರೇಷನ್, ರಿವರ್ಸ್ ಆಪರೇಷನ್ ಇವುಗಳಲ್ಲಿ ನನಗೆ ನಂಬಿಕೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಇಂಥದ್ದು ಮಾಡಬಾರದು ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಅವರು ಅಭಿಪ್ರಾಯಪಟ್ಟರು.

(ವರದಿ: ಪುಟ್ಟಪ್ಪ)
First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ