ಮಂಗಳೂರಿನಲ್ಲಿ ಕರ್ಫ್ಯೂ ಪುನರಾರಂಭ; ನಾಳೆಯಿಂದ ಮತ್ತೆ ನಿಷೇಧಾಜ್ಞೆ

ನಾಳೆಯಿಂದ ಪೊಲೀಸ್ ಆಯುಕ್ತರ ಮುಂದಿನ ಸೂಚನೆ ಬರುವವರೆಗೂ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಮಂಗಳೂರು

ಮಂಗಳೂರು

  • Share this:
ಮಂಗಳೂರು(ಡಿ.22): ರಾಷ್ಟ್ರೀಯ ಪೌರತ್ವ ಮಸೂದೆ ಕಾಯ್ದೆ ಜಾರಿ ವಿರೋಧಿಸಿ ರಾಜ್ಯದಲ್ಲಿನ ಹೋರಾಟದ ಕಿಚ್ಚು ಜೋರಾಗಿದೆ. ಮೊನ್ನೆ ಇಬ್ಬರು ಪ್ರತಿಭಟನಾಕಾರರು ಹೋರಾಟದ ವೇಳೆ ಸಾವನ್ನಪ್ಪಿದ್ದರು. ಬಳಿಕ  ಮಂಗಳೂರಿನಲ್ಲಿ ಪರಿಸ್ಥಿರಿ ತೀರಾ ಹದಗೆಟ್ಟಿತ್ತು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜೊತೆಗೆ ಕರ್ಫ್ಯೂ ಜಾರಿ ಮಾಡಿ, 48 ಗಂಟೆಗಳ ಕಾಲ ಇಂಟರ್​ನೆಟ್​ ನಿಷೇಧ ಮಾಡಲಾಗಿತ್ತು. ಬಳಿಕ 12 ಗಂಟೆಗಳ ಕಾಲ ಕರ್ಫ್ಯೂ ಸಡಿಲಗೊಳಿಸಲಾಗಿತ್ತು.

ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಸಂಜೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಪುನರಾರಂಭ ಮಾಡಲಾಗಿದೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಾಳೆಯಿಂದ ಪೊಲೀಸ್ ಆಯುಕ್ತರ ಮುಂದಿನ ಸೂಚನೆ ಬರುವವರೆಗೂ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಯುವಕರನ್ನು ಸೈನ್ಯಕ್ಕೆ ಸೇರಿಸುವುದಾಗಿ ವಂಚನೆ: ನಕಲಿ ಆಫೀಸರ್ ಅಂದರ್...!

ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ ಕಾಪಾಡುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಂಗಳೂರಿನಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಬೆಳಗ್ಗೆಯಿಂದ ಕರ್ಫ್ಯೂ ಸಡಿಲಗೊಳಿಸಲಾಗಿತ್ತು.

ಮಂಗಳೂರಿನ ರಸ್ತೆಗಳು ಬಿಕೋ ಎನ್ನುತ್ತಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಂಗಡಿ, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ನಾಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ನಗರದ ಸುತ್ತಲೂ ಹಿರಿಯ  ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾರೆ.

ಸಿಎಎ ಮತ್ತು ಎನ್​​ಆರ್​ಸಿ ತಡೆಯುವುದು ಹೇಗೆ?; ಎರಡು ದಾರಿಗಳು ಬಿಚ್ಚಿಟ್ಟ ಪ್ರಶಾಂತ್​​ ಕಿಶೋರ್​​
Published by:Latha CG
First published: