Curfew And Protest In Assam: ಅಸ್ಸಾಂನಲ್ಲಿ ಇಂದೂ ಮುಂದುವರಿದ ಪ್ರತಿಭಟನೆ ; ಸುಧಾರಣೆ ಕಾಣುತ್ತಿಲ್ಲ ಪರಿಸ್ಥಿತಿ, ಕರ್ಫ್ಯೂ ಮುಂದುವರಿಕೆ

Curfew and Protest Against CAB in Assam: ಗುರುವಾರ ಪ್ರತಿಭಟನಾನಿರತರ ಮೇಲೆ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಇದು ಪ್ರತಿಭಟನಾಕಾರರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದೆ.

news18-kannada
Updated:December 13, 2019, 12:02 PM IST
Curfew And Protest In Assam: ಅಸ್ಸಾಂನಲ್ಲಿ ಇಂದೂ ಮುಂದುವರಿದ ಪ್ರತಿಭಟನೆ ; ಸುಧಾರಣೆ ಕಾಣುತ್ತಿಲ್ಲ ಪರಿಸ್ಥಿತಿ, ಕರ್ಫ್ಯೂ ಮುಂದುವರಿಕೆ
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನೆಯಲ್ಲಿ ಸುಡಲಾಗಿರುವ ವಾಹನಗಳು.
  • Share this:
ನವದೆಹಲಿ (ಡಿ.13): ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅನುಮೋದನೆ ದೊರೆತಿದ್ದನ್ನು ಖಂಡಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರಿಯಲಿದೆ.

ಗುವಾಹಟಿ, ದಿಬ್ರುಗರ್​ನಲ್ಲಿ ಅನಿರ್ಧಿಷ್ಟಾವಧಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅಸ್ಸಾಂನ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆ ನಿಯೋಜನೆ ಮಾಡಲಾಗಿದೆ. ಆದರೆ, ಪ್ರತಿಭಟನಾಕಾರರು ಇದನ್ನೂ ಮೀರಿ ಪ್ರತಿಭಟಿಸುತ್ತಿದ್ದಾರೆ.

ಗುರುವಾರ ಪ್ರತಿಭಟನಾನಿರತರ ಮೇಲೆ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಇದು ಪ್ರತಿಭಟನಾಕಾರರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದೆ. ಪೌರತ್ವ ತಿದ್ದುಪಡಿ ಮಸೂದಗೆ ವಿರೋಧ ವ್ಯಕ್ತಪಡಿಸಿ ಅಸ್ಸಾಂನಲ್ಲಿ ಕಳೆದ ಮೂರು ದಿನಗಳಿಂದ ಪ್ರತಿಭಟನೆಗಳು ತಾರಕಕ್ಕೇರಿದೆ. ವಿವಿಧ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಹಲವೆಡೆ ಹಿಂಸಾರೂಪ ತಳೆದಿದೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಗುವಾಹಟಿ ಪೊಲೀಸರು; ಇಬ್ಬರು ಸಾವು

ಭಾರೀ ವಿವಾದ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಮಸೂದೆ ಬುಧವಾರ ರಾಜ್ಯಸಭೆಯಲ್ಲಿ ಎಂಟು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆ ಪಡೆದುಕೊಂಡಿತ್ತು. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ ರಾಜ್ಯಸಭೆ, ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಿಕೊಟ್ಟಿತ್ತು. ಮಸೂದೆಯ ಪರವಾಗಿ 125 ಸದಸ್ಯರು ಮತ ಹಾಕಿದರೆ, ಮಸೂದೆ ವಿರುದ್ಧವಾಗಿ 105 ಮತಗಳು ಚಲಾವಣೆಯಾಗಿದ್ದವು.
First published: December 13, 2019, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading