ಬಿಜೆಪಿಯದ್ದು ಗರ್ಭಗುಡಿ ಸಂಸ್ಕೃತಿ; ಬಡವರು, ದಲಿತರಿಗೆ ಅಲ್ಲಿ ಜಾಗ ಇಲ್ಲ: ಶಿವಶಂಕರ್ ರೆಡ್ಡಿ

ಸುಧಾಕರ್ ಒಬ್ಬ ಬ್ರೋಕರ್, ಕಪಟಿ, ಏಜೆಂಟ್. ಆತ ನಿಜವಾದ ರಾಜಕಾರಣಿಯಲ್ಲ, ವ್ಯಾಪಾರಸ್ಥ. ಹಣಕ್ಕಾಗಿ ರಾಜಕಾರಣ ಮಾಡುವ ಬ್ರೋಕರ್. ಆತ ವಚನ ಭ್ರಷ್ಟ, ಪಕ್ಷ ದ್ರೋಹಿ ಎಂದು ಮಾಜಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಟೀಕಿಸಿದ್ದಾರೆ.

news18-kannada
Updated:November 22, 2019, 6:46 PM IST
ಬಿಜೆಪಿಯದ್ದು ಗರ್ಭಗುಡಿ ಸಂಸ್ಕೃತಿ; ಬಡವರು, ದಲಿತರಿಗೆ ಅಲ್ಲಿ ಜಾಗ ಇಲ್ಲ: ಶಿವಶಂಕರ್ ರೆಡ್ಡಿ
ಶಿವಶಂಕರ್ ರೆಡ್ಡಿ
  • Share this:
ಚಿಕ್ಕಬಳ್ಳಾಪುರ(ನ. 22): ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು ಬಿಜೆಪಿಯದ್ದು ಗರ್ಭಗುಡಿ ಸಂಸ್ಕೃತಿ ಎಂದು ಹರಿಹಾಯ್ದರು. ಇಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ನಡೆಸಿದ ಶಿವಶಂಕರ್ ರೆಡ್ಡಿ, ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಕ್ಷವು ಮೇಲ್ಜಾತಿ, ಮೇಲ್ವರ್ಗದವರ ಪಕ್ಷ. ಗರ್ಭಗುಡಿ ಸಂಸ್ಕೃತಿ ಇರುವಂತಹ ಪಕ್ಷ. ಅಲ್ಲಿ ಬಡವರಿಗೆ, ಹಿಂದುಳಿದವರಿಗೆ, ದಲಿತರಿಗೆ ಜಾಗ ಇಲ್ಲ. ಇಂಥ ಬಿಜೆಪಿಯಲ್ಲಿ ಸುಧಾಕರ್ ಹೆಚ್ಚು ದಿನ ಉಳಿಯುವುದಿಲ್ಲ. ಸುಧಾಕರ್ ಅವರ ಸಂಸ್ಕೃತಿ ಯಾವ ಪಕ್ಷಕ್ಕೂ ವರ್ಕೌಟ್ ಆಗಲ್ಲ ಎಂದು ಶಿವಶಂಕರ್ ರೆಡ್ಡಿ ಲೇವಡಿ ಮಾಡಿದರು.

ಇದನ್ನೂ ಓದಿ: ಅತ್ಯಾಚಾರ ಆರೋಪಿ ನಿತ್ಯಾನಂದ ದೇಶದಿಂದ ಪರಾರಿ?; ಇಲ್ಲಿದೆ ಸ್ವಘೋಷಿತ ದೇವಮಾನವನ ಸಂಪೂರ್ಣ ಸ್ಟೋರಿ

ಸುಧಾಕರ್ ಒಬ್ಬ ಬ್ರೋಕರ್, ಕಪಟಿ, ಏಜೆಂಟ್. ಆತ ನಿಜವಾದ ರಾಜಕಾರಣಿಯಲ್ಲ, ವ್ಯಾಪಾರಸ್ಥ. ಹಣಕ್ಕಾಗಿ ರಾಜಕಾರಣ ಮಾಡುವ ಬ್ರೋಕರ್. ಆತ ವಚನ ಭ್ರಷ್ಟ, ಪಕ್ಷ ದ್ರೋಹಿ. ಸುಪ್ರೀಂ ಕೋರ್ಟ್ ಹೇಳಿದ ಹಾಗೆ ಆತನನ್ನು ಶಾಶ್ವತವಾಗಿ ಅನರ್ಹ ಮಾಡಬೇಕಿದೆ ಎಂದು ಮಾಜಿ ಕಾಂಗ್ರೆಸ್ ಶಾಸಕರಾದ ಸುಧಾಕರ್ ವಿರುದ್ಧ ರೆಡ್ಡಿ ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸ್ ಪಕ್ಷವು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಸಮಸ್ತ ವರ್ಗದ ಜನರು ರಾಜಕಾರಣ ಮಾಡಲು ಕಾಂಗ್ರೆಸ್ ವೇದಿಕೆಯಾಗಿದೆ. ಸುಧಾಕರ್​ನನ್ನು ಬೆಳೆಸಿದ್ದೇ ಕಾಂಗ್ರೆಸ್. ಆದರೆ ಆತನಿಗೆ ಕಾಂಗ್ರೆಸ್ ಸಂಸ್ಕೃತಿಯೇ ಗೊತ್ತಿಲ್ಲ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ, ರಾಜ್ಯಪಾಲರು ಆಗಿದ್ದು ಕಾಂಗ್ರೆಸ್​ನ ಕೊಡುಗೆ. ಇವರೆಲ್ಲಾ ಬೆಳೆದದ್ದು ಕಾಂಗ್ರೆಸ್​ನಿಂದಲೇ. ಕಾಂಗ್ರೆಸ್ ಋಣ ತಿಂದೂ ಇವರು ದ್ರೋಹ ಬಗೆಯುತ್ತಿದ್ದಾರೆ ಎಂದು ಕಾಂಗ್ರೆಸ್ ತೊರೆದುಹೋದ ಮುಖಂಡರಿಗೆ ಶಿವಶಂಕರ್ ರೆಡ್ಡಿ ಛೀಮಾರಿ ಹಾಕಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಂಗ್ಲಾ ಉಗ್ರರ ಕರಿನೆರಳು; ನಗರದ ಪಿಜಿಯಲ್ಲಿ ವಾಸವಿದ್ದ ಅನ್ಸರುಲ್ಲಾ ಟೀಮ್ ಸದಸ್ಯರು; ಎನ್ಐಎ ತನಿಖೆ

ಸಿದ್ದರಾಮಯ್ಯ ದೊಡ್ಡ ಶಕ್ತಿ. ಅವರು ಏಕಾಂಗಿ ಅಲ್ಲ. ಪಕ್ಷ ಹಾಗೂ ಹೈಕಮಾಂಡ್ ಸೇರಿ ನಾವೆಲ್ಲಾ ಸಿದ್ದರಾಮಯ್ಯ ಮೇಲೆ ನಂಬಿಕೆ ಇಟ್ಟಿದ್ದೇವೆ. ಡಿಕೆಶಿ, ಖರ್ಗೆ, ಪರಮೇಶ್ವರ್, ಎಂಬಿ ಪಾಟೀಲರು ತಮಗೆ ವಹಿಸಿರುವ ಕೆಲಸಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ಧಾರೆ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಆದರೆ, ಎಲ್ಲರ ಶಕ್ತಿಯನ್ನೂ ಒಗ್ಗೂಡಿಸಿ ಕಾಂಗ್ರೆಸ್ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಶಿವಶಂಕರ್ ರೆಡ್ಡಿ ಅಭಿಪ್ರಾಯಪಟ್ಟರು.ಮಂಚೇನಹಳ್ಳಿ ನೂತನ ತಾಲೂಕು ರಚನೆಗೆ ಮುಂದಾಗಿರುವ ಸುಧಾಕರ್ ನಡೆಯನ್ನು ಶಿವಶಂಕರ್ ರೆಡ್ಡಿ ಬಲವಾಗಿ ವಿರೋಧಿಸಿದರು. “ತಾಲೂಕು ಆದಾಕ್ಷಣ ಮೇಲಿನಿಂದ ಏನೂ ಉದುರೋದಿಲ್ಲ. ತಾಲೂಕು ಕೇಂದ್ರಕ್ಕೆ ಮೂಲಭೂತ ಸೌಕರ್ಯ ಕೊಡಬೇಕಾಗುತ್ತದೆ. ಮೆಡಿಕಲ್ ಕಾಲೇಜು, ಹೊಸ ತಾಲೂಕು ಘೊಷಣೆ ಕೇವಲ ರಾಜಕೀಯ ಪ್ರೇರಿತ ಮಾತ್ರ. ಸಿದ್ದರಾಮಯ್ಯ ಜೊತೆ ಚೆನ್ನಾಗಿದ್ದ ಸುಧಾಕರ್, ಅವರು ಸಿಎಂ ಆಗಿದ್ದಾಗಲೇ ಇವನ್ನು ಯಾಕೆ ಮಾಡಲಿಲ್ಲ? ಈ ಮೊದಲು 50 ಹೊಸ ತಾಲೂಕುಗಳು ಘೋಷಣೆ ಆಗಿವೆ. ಯಾವುದಕ್ಕೂ ಕೂಡ ಗಡಿ ರಚನೆ, ತಹಶೀಲ್ದಾರ್, ಕಟ್ಟಡ, ಮೂಲಭೂತ ಸೌಕರ್ಯ ಕೊಟ್ಟಿಲ್ಲ. ಈಗ ಮಂಚೇನಹಳ್ಳಿ ತಾಲೂಕು ಇನ್ಯಾವ ಪುರುಷಾರ್ಥಕ್ಕೆ?” ಎಂದು ಗೌರಿಬಿದನೂರು ಕಾಂಗ್ರೆಸ್ ಶಾಸಕರೂ ಆದ ಶಿವಶಂಕರ್ ರೆಡ್ಡಿ ಪ್ರಶ್ನಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 22, 2019, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading