• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chikkamagaluru: ಆಸ್ಪತ್ರೆಗೆ ದಾಖಲಾದ ಸಿ ಟಿ ರವಿ; ವೇದಿಕೆ ಮೇಲೆ ಪತ್ನಿ ಪಲ್ಲವಿ ಭಾವುಕ

Chikkamagaluru: ಆಸ್ಪತ್ರೆಗೆ ದಾಖಲಾದ ಸಿ ಟಿ ರವಿ; ವೇದಿಕೆ ಮೇಲೆ ಪತ್ನಿ ಪಲ್ಲವಿ ಭಾವುಕ

ಸಿಟಿ ರವಿ-ಪಲ್ಲವಿ

ಸಿಟಿ ರವಿ-ಪಲ್ಲವಿ

Pallavi Ravi: ನಿಮ್ಮ ಪ್ರೀತಿ ಮಗನಿಗೆ ಮತ ಹಾಕಿ ಗೆಲ್ಲಿಸಿ. ಬೆಳಗ್ಗೆ 4.30ಕ್ಕೆ ಅವರ ದಿನಚರಿ ಆರಂಭವಾಗೋದು, ರಾತ್ರಿ 12 ಗಂಟೆಗೆ ಮಲಗುತ್ತಾರೆ ಎಂದು ಪಲ್ಲವಿ ರವಿ ಹೇಳಿದರು.

  • Share this:

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ವೀರಶೈವ ಸಮಾವೇಶದಲ್ಲಿ ಪತ್ನಿ ಪಲ್ಲವಿ ರವಿ (Pallavi Ravi) ಭಾಗಿಯಾಗಿ ಭಾವುಕರಾದರು. ಕಿಡ್ನಿ ಸ್ಟೋನ್ ನಿಂದ (Kidney Stone) ಆಸ್ಪತ್ರೆಯಲ್ಲಿ ಸಿ.ಟಿ.ರವಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಐದು ನಿಮಿಷ ಕಳಿಸಿ ಅಂತ ವೈದ್ಯರಿಗೆ ಮನವಿ ಮಾಡಿದೆ. ವೈದ್ಯರು (Doctors) ಬೇಡ ಇನ್ಫೆಕ್ಷನ್ ಆಗುತ್ತೆ ಬೇಡವೇ ಬೇಡ ಅಂದರು ಎಂದು ಪಲ್ಲವಿ ರವಿ ಭಾವುಕರಾದರು. ವೀರಶೈವ ಲಿಂಗಾಯುತ ಸಮಾಜ (Veerashaiva Lingayat Community) ಒಂದು ಸಮಾಜ ಅಲ್ಲ, ಅದೊಂದು ಶಕ್ತಿ. ದೇಶದ ಉದ್ದಗಲಕ್ಕೂ ತನ್ನದೇ ಆದ ಛಾಪು ಮೂಡಿಸಿರೋ ಸಹೃದಯಿ ಸಮುದಾಯ. ಸಿ.ಟಿ.ರವಿ ಅವರು ಬರಲು ಆಗಲಿಲ್ಲ ಎಂದು ಜನರಲ್ಲಿ ಕ್ಷಮೆ ಕೇಳಿದರು.


ನಿಮ್ಮ ಪ್ರೀತಿ ಮಗನಿಗೆ ಮತ ಹಾಕಿ ಗೆಲ್ಲಿಸಿ. ಬೆಳಗ್ಗೆ 4.30ಕ್ಕೆ ಅವರ ದಿನಚರಿ ಆರಂಭವಾಗೋದು, ರಾತ್ರಿ 12 ಗಂಟೆಗೆ ಮಲಗುತ್ತಾರೆ. ನಾನು ಅವರನ್ನ ನೋಡೋದೇ ತಿಂಗಳಿಗೆ ಎರಡ್ಮೂರು ಬಾರಿ ಮಾತ್ರ ಎಂದು ಪಲ್ಲವಿ ರವಿ ಹೇಳಿದರು.




ಸೋಮಣ್ಣ ಪರ ಕೆಲಸ ಮಾಡುವೆ


ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕರೆ ಮಾಡಿದ್ದರು. ನನ್ನ ಬೆಂಬಲಿಗರು, ಹಿತೈಷಿಗಳು ಎಲ್ಲರೂ ಸೋಮಣ್ಣರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಚಾಮರಾಜನಗರ ಬಿಜೆಪಿ ಟಿಕೆಟ್ ವಂಚಿತೆ ನಾಗಶ್ರೀ ಪ್ರತಾಪ್ ಹೇಳಿದ್ದಾರೆ.


ಇದನ್ನೂ ಓದಿ:  BS Yediyurappa: ಶೆಟ್ಟರ್​, ಸವದಿಗೆ ಬಿಜೆಪಿ ಏನು ಕಡಿಮೆ ಮಾಡಿತ್ತು? ಎಲ್ಲರ ಬಣ್ಣ ಬಯಲು ಮಾಡ್ತೀನಿ; ಮಾಜಿ ಸಿಎಂ ಆಕ್ರೋಶ


ಟಿಕೆಟ್ ಕೈ ತಪ್ಪಿದಾಗ ಸಹಜವಾಗಿಯೇ ನೋವಾಗಿತ್ತು. ನನ್ನ ಹಿತೈಷಿಗಳು ಬೆಂಬಲಿಗರು ಅಸಮಧಾನ ವ್ಯಕ್ತಪಡಿಸಿದ್ದರು. ಸಮಯ ತೆಗೆದುಕೊಂಡು ನಿರ್ಧಾರ ತಿಳಿಸು ಅಂತ ಹೇಳಿದ್ದರು. ಅದರಂತೆ ಎರಡು ದಿನದ ನಂತರ ಎಲ್ಲರ ಅಭಿಪ್ರಾಯ ಪಡೆದು ನಾನು ನಿರ್ಧಾರಕ್ಕೆ ಬಂದಿದ್ದೇನೆ‌ ಎಂದಿದ್ದಾರೆ.

top videos
    First published: