Amit Shah ಹೇಳಿಕೆ ತಿರುಚಲಾಗಿದೆ, ಇಂಗ್ಲಿಷ್ ಗುಲಾಮಿತನದ ಭಾಷೆ: ಮತ್ತೆ Hindi ಪರ ಒಲವು ತೋರಿಸಿದ CT Ravi

ಅಮಿತ್ ಶಾ ಹೇಳಿದ ಮಾತನ್ನು ಅವರು ತಿರುಚಿ ಹೇಳುದಾದರೆ, ಸ್ವತಃ ಸಿದ್ದರಾಮಯ್ಯನವರು ನಾನು ಇಂಗ್ಲಿಷನ್ ಗುಲಾಮ.. ಸೋನಿಯಾ ಗಾಂಧಿ ಗುಲಾಮ ಅಂತ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ಅಮಿತ್ ಶಾ ಮತ್ತು ಸಿ.ಟಿ.ರವಿ

ಅಮಿತ್ ಶಾ ಮತ್ತು ಸಿ.ಟಿ.ರವಿ

  • Share this:
ಬಿಜೆಪಿ ನಾಯಕರೇ ಅಮಿತ್ ಶಾ (Amit Shah) ಗುಲಾಮರಾಗಬೇಡಿ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah)  ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ  (CT Ravi) ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಇಂಗ್ಲಿಷ್ ನ (English)  ಹಾಗೂ ಸೋನಿಯಾ ಗಾಂಧಿ (Sonia Gandhi) ಗುಲಾಮ ಎಂದು ಘೋಷಣೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.  ತುಮಕೂರಿನಲ್ಲಿ (Tumakuru) ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿ.ಟಿ.ರವಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕನ್ನಡದಲ್ಲಿ (Kannada) ಕನ್ನಡವೇ ಸರ್ವ ಶ್ರೇಷ್ಠ. ಇದರಲ್ಲಿ ಗುಲಾಮರಾಗುವ ಪ್ರಶ್ನೇಯೆ ಇಲ್ಲ. ಸಿದ್ದರಾಮಯ್ಯನವರು ಸೋನಿಯಾ ಗಾಂಧಿ ಅವರ ಗುಲಾಮರಾಗಿದ್ದಾರೆ. ಸಿದ್ದರಾಮಯ್ಯ ರಾಷ್ಟ್ರದಲ್ಲಿನ ಭಾಷೆ ಒಪ್ಪಿಕೊಳ್ತಾರೋ ಅಥವಾ ನಮ್ಮ ದೇಶದ ಮೇಲೆ ಅತಿಕ್ರಮಣ ಮಾಡಿ ಹೇರಿರುವ ಗುಲಾಮಗಿರಿಯ‌ ಭಾಷೆಗೆ ಪ್ರಾಧಾನ್ಯತೆ ಕೊಡ್ತಾರೋ ಎಂದು ಪ್ರಶ್ನೆ ಮಾಡಿದರು.

ಅಮಿತ್ ಶಾ ಹೇಳಿದ್ದು ಮಾತೃ ಭಾಷೆಗೆ ಮನ್ನಣೆ ಕೊಡಿ ಎಂದು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬದಲಿಗೆ ಹಿಂದಿ ಉಪಯೋಗಿಸಿ ಅಂತ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ. ಕನ್ನಡವನ್ನು ಕಡೆಗಣಿಸಿ ಎಂದು ಹೇಳಿಲ್ಲ.  ಕನ್ನಡ ಬಿಟ್ಟು ಹಿಂದಿಯಲ್ಲೇ ಮಾತಾಡಿ ಅಂದರೆ ನಾವೂ ಧ್ವನಿ ಎತ್ತುತಿದ್ವಿ. ಇಂಗ್ಲಿಷ್ ಗುಲಾಮಿತನದ ಭಾಷೆ ಅನ್ನೋದು ನೂರಕ್ಕೆ ನೂರು ಸತ್ಯ ಎಂದರು.

ಸಿದ್ದರಾಮಯ್ಯ ಇಂಗ್ಲಿಷ್ ಗುಲಾಮ

ಈ ಮಾನಸಿಕತೆಯಲ್ಲಿ ಯೋಚನೆ ಮಾಡೋದಾದ್ರೆ, ಸಿದ್ದರಾಮಯ್ಯ ತಾನು ಇಂಗ್ಲಿಷನ್ ಗುಲಾಮ ಎಂದು ಒಪ್ಪಿಕೋಬೇಕು. ಅಮಿತ್ ಶಾ ಹೇಳಿದ ಮಾತನ್ನು ಅವರು ತಿರುಚಿ ಹೇಳುದಾದರೆ, ಸ್ವತಃ ಸಿದ್ದರಾಮಯ್ಯನವರು ನಾನು ಇಂಗ್ಲಿಷನ್ ಗುಲಾಮ.. ಸೋನಿಯಾ ಗಾಂಧಿ ಗುಲಾಮ ಅಂತ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:  Kannada: ಬಿಜೆಪಿ ನಾಯಕರೇ, ಅಮಿತ್ ಶಾ ಅವರ ಗುಲಾಮರಾಗಬೇಡಿ, ಕನ್ನಡ ತಾಯಿಯ‌ ಸ್ವಾಭಿಮಾನಿ ಮಕ್ಕಳಾಗಿ: ಸಿದ್ದರಾಮಯ್ಯ

ಮೊದಲು ತಾನು ಗುಲಾಮ ಎಂದು ಒಪ್ಪಿಕೊಂಡು ಆ ಮೇಲೆ ನಮಗೆ ಪಾಠ ಮಾಡಲಿ. ಭ್ರಷ್ಟಾಚಾರ ಬಿತ್ತಿದ್ದು ಬೆಳಸಿದ್ದು ಕಾಂಗ್ರೆಸ್. ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಸೇರಿ ಹೋಗಿದೆ. ಅದನ್ನು ನಿಯಂತ್ರಿಸಬೇಕು. ಪಿಎಸ್ಐ ಪರೀಕ್ಷೆ ಅಕ್ರಮದ ವಿರುದ್ಧ ಬಿಜೆಪಿ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಕ್ರಮ ತೆಗೆದುಕೊಂಡರೂ ಅಪರಾಧ ಹೇಗಾಗುತ್ತದೆ. ಮುಚ್ಚಿ ಹಾಕಿದ್ರೆ ಅಪರಾಧ ಆಗ್ತಿತ್ತು. ಮುಚ್ಚಿ ಹಾಕುವ ಕೆಲಸ ಮಾಡಿಲ್ಲ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.

ಕದ್ದಿದ್ದ ವಾಚನ್ನು ಕಟ್ಟಿಕೊಂಡಿದ್ದವರು ಯಾರು?

ಮುಚ್ಚಿಹಾಕುವ ಕೆಲಸವನ್ನು ಬಹಳ ಹಿಂದಿನಿಂದ ವ್ಯವಸ್ಥಿತವಾಗಿ ಕಾಂಗ್ರೆಸ್ ಮಾಡಿಕೊಂಡು ಬಂದಿದೆ ಸ್ವತಃ ಅರ್ಕಾವತಿ ಹಗರಣದಲ್ಲಿ ಸಿದ್ದರಾಮಯ್ಯ ಮಾಡಿದ್ದೇನು? ರಿಡ್ಯೂ ಎನ್ನುವ ಹೊಸ ಪರಿಭಾಷೆ ಹುಟ್ಟು ಹಾಕಿದ್ರಿ. ಕದ್ದಿದ್ದ ವಾಚನ್ನು ಕಟ್ಟಿಕೊಂಡಿದ್ದವರು ಯಾರು? ಅದನ್ನು ಹೇಗೆ ಮುಚ್ಚಿ ಹಾಕಿದ್ರು. ಬೇರೆ ಯಾರೋ ವಿಪಕ್ಷ ನಾಯಕರು ಕದ್ದು ವಾಚು ಕಟ್ಟಿಕೊಂಡಿದ್ದರೆ ಇವರು ಬಿಡ್ತಿದ್ರಾ ಎಂದು ಪ್ರಶ್ನೆ ಮಾಡಿದರು.

40% ಕಮಿಷನ್ ಅನ್ನೋದು ಸುಳ್ಳು. ಅಷ್ಟೊಂದು ಹಣ ಕೊಟ್ಟು ಕೆಲಸ ಮಾಡಲು ಸಾಧ್ಯ ಇದೆಯಾ. ಕೆಲಸ ಮಾಡೋದೇ ಕಷ್ಟ ಅನ್ನೋ ಸ್ಥಿತಿಯಲ್ಲಿ 40% ಕೊಟ್ಟು ಕೆಲಸ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಎಲ್ಲ ಗಲಭೆಗಳಲ್ಲಿಯೂ ಕಾಂಗ್ರೆಸ್ ಪಾತ್ರ

ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಅನ್ನುವ ಉದ್ದೇಶ ದಿಂದ ವ್ಯವಸ್ಥಿತವಾಗಿ ಷಡ್ಯಂತ್ರ ನಡೀತಿದೆ.  ಹುಬ್ಬಳಿ ಪ್ರಕರಣ ಮಾತ್ರ ಅಲ್ಲ. ಪಾದಯಾರನಪುರ, ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೇ ರಾಜ್ಯದ ಉದ್ದಗಲಕ್ಕೂ ನಡೆದ ಗಲಭೆ ಹಿಂದೆ ಕಾಂಗ್ರೆಸ್ ಪಾತ್ರ ಇರೋದು ಸ್ಪಷ್ಟವಾಗಿ ಕಾಣುತ್ತದೆ. ಹಿಜಾಬ್ ಗಲಾಟೆಯಿಂದ ಮೊದಲುಗೊಂಡು ಎಲ್ಲಾ ಗಲಭೆಯಲ್ಲಿಯೂ ಕಾಂಗ್ರೆಸ್ ಪಾತ್ರ ಇದೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ:  PSI Recruitment Scam: 54 ಸಾವಿರ ಅಭ್ಯರ್ಥಿಗಳಿಗೆ ಪಿಎಸ್ಐ ಮರು ಪರೀಕ್ಷೆ: ಅಕ್ರಮ ನಡೆದಿರೋದನ್ನ ಒಪ್ಪಿಕೊಂಡ ಸರ್ಕಾರ

ಏಕರೂಪ ನಾಗರೀಕ ಸಂಹಿತೆ ವಿಚಾರ ಎತ್ತಿದ ಸಿ.ಟಿ.ರವಿ

ಏಕರೂಪ ನಾಗರೀಕ ಸಂಹಿತೆ ಬಗ್ಗೆ ಅಂಬೇಡ್ಕರ್ ಅವರೇ ಪ್ರತಿಪಾದನೆ ಮಾಡಿದ್ದಾರೆ. ಈ ಕುರಿತು ಸಾರ್ವಜನಿಕ ಚರ್ಚೆ ಆಗಲಿ. ಯಾವಾಗ ಸಂವಿಧಾನ ರಚನೆ ಆಯ್ತೋ ಆ ವೇಳೆಯೇ ಏಕರೂಪ ನಾಗರಿಕ ಸಂಹಿತೆ ಕುರಿತು ಡಿಬೆಟ್ ನಡೆದಿದೆ. ಅಂಬೇಡ್ಕರ್ ಈ ಬಗ್ಗೆ ಬಲವಾಗಿ ಪ್ರತಿಪಾದನೆ ಮಾಡಿದ್ರು. ಸಾರ್ವಜನಿಕ ಚರ್ಚೆಯಲ್ಲಿ ಅಭಿಪ್ರಾಯ ರೂಪಿಸಿ, ಅಭಿಪ್ರಾಯ ಏಕರೂಪ ನಾಗರಿಕ ಸಂಹಿತೆ ಪರವಾಗಿದ್ರೆ ಜಾರಿ ತರಬೇಕು ಎಂದರು.
Published by:Mahmadrafik K
First published: