‘ನಮ್ಮ ಪಕ್ಷ ನಿಷ್ಠೆ ಪ್ರಶ್ನಿಸೋಕೆ ಯಾರಿಗೂ ಅವಕಾಶ ಕೊಟ್ಟಿಲ್ಲ’ - ಸಚಿವ ಸಿ.ಟಿ ರವಿ

ರಾಜಕೀಯದಲ್ಲಿ ವ್ಯಂಗ್ಯ, ಆರೋಪ, ಟೀಕೆಯಂತಹ ಹೇಳಿಕೆಗಳು ಸಾಮಾನ್ಯ. ನಾವು ರಾಜಕೀಯ ವಿರೋಧಿಗಳು ನಿಜ. ಆದ್ರೆ ವೈಯಕ್ತಿಕ ಶತ್ರುಗಳಲ್ಲ ಎಂದು ಸಿ ಟಿ ಹೇಳಿದ್ದಾರೆ. ಆದರೆ ಸಿ.ಟಿ‌ ರವಿ ಅವರ ಹೇಳಿಕೆಯನ್ನ ಪಕ್ಷ ಯಾವ ಅರ್ಥದಲ್ಲಿ ಪರಿಗಣಿಸುತ್ತೋ ಕಾದು ನೋಡಬೇಕು

news18-kannada
Updated:July 30, 2020, 5:50 PM IST
‘ನಮ್ಮ ಪಕ್ಷ ನಿಷ್ಠೆ ಪ್ರಶ್ನಿಸೋಕೆ ಯಾರಿಗೂ ಅವಕಾಶ ಕೊಟ್ಟಿಲ್ಲ’ - ಸಚಿವ ಸಿ.ಟಿ ರವಿ
ಸಿ.ಟಿ. ರವಿ
  • Share this:
ಬೆಂಗಳೂರು(ಜು.30): ನೂತನ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೀಶ್ವರ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಸರ್ಕಾರಕ್ಕೆ ಕುಮಾರಸ್ವಾಮಿ ಬೆಂಬಲವಿದೆ. ಎಚ್​​ಡಿಕೆ ತಮ್ಮ ಕಾರ್ಯಕರ್ತರೊಂದಿಗೆ ಬಿಜೆಪಿಗೆ ಬರಲಿ ಎಂದಿದ್ದರು ಸಿ.ಪಿ ಯೋಗೇಶ್ವರ್​​.

ಇನ್ನು, ಡಿ.ಕೆ ಶಿವಕುಮಾರ ಹಗಲಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ಸಿಎಂ‌ ಬಿ.ಎಸ್​​ ಯಡಿಯೂರಪ್ಪನವರಿಗೆ ಫೋನ್​​​ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಹೀಗಿರುವಾಗಲೇ ಸಿ.ಪಿ ಯೋಗೇಶ್ವರ್​​​ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಅಂತರ ಕಾಯ್ದುಕೊಳ್ಳಲು ಪ್ರಯತ್ನ ಮಾಡ್ತಿದ್ದಾರಾ‌? ಅನ್ನೋ  ಅನುಮಾನ ಶುರುವಾಗಿದೆ.

ಕಂದಾಯ ಸಚಿವ ಆರ್. ಅಶೋಕ್​​ ವಿಧಾನಸೌಧದಲ್ಲಿ ಮಾತನಾಡುವ ವೇಳೆ, ಯೋಗೀಶ್ವರ್ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಯಡಿಯೂರಪ್ಪ ನಮ್ಮ ನಾಯಕರೆಂದಷ್ಟೇ ಹೇಳಿ ಸುಮ್ಮನಾದರು. ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ನಮ್ಮ‌ ಪಕ್ಷನಿಷ್ಠೆ ಪ್ರಶ್ನಿಸುವುದಕ್ಕೆ ನಾವು ಅವಕಾಶ ಕೊಟ್ಟಿಲ್ಲ ಎಂದರು.

ಇನ್ನು, ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ನಮಗೆ ಗೊತ್ತಿಲ್ಲ ಎನ್ನುತ್ತಾ ಪರೋಕ್ಷವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿ.ಟಿ ರವಿ ಯೋಗೀಶ್ವರ್​​ಗೂ ಟಾಂಗ್ ನೀಡಿದ್ದಾರೆ ಎನ್ನಬಹುದು. ನಮ್ಮದು ಪಾರ್ಟಿ ಹಿತ ಅಷ್ಟೇ. ನಾವು ಯಾರಿಗಾದ್ರೂ ಚೂರಿ ಹಾಕೋದಿದ್ರೆ ನೇರವಾಗಿ ಹಾಕ್ತೇವೆ. ಹಿಂಭಾಗದಲ್ಲಿ ಬಂದು ಚೂರಿ ಹಾಕಲ್ಲ. ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಅನಾನುಭವಿ ರಾಜಕಾರಣಿಗಳು ಅಲ್ಲ. ಅವರು ಹೇಳುವ ಮಾತಿಗೆ ನಾವು ತಕ್ಷಣ ಪ್ರತಿಕ್ರಿಯೆ ನೀಡೋದು ತಪ್ಪಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ‘ಮಾತಿನ ಮೇಲೆ ನಿಂತ ನಾಯಕ ಯಡಿಯೂರಪ್ಪ; ಸಿಎಂ ಬೆಂಬಲಕ್ಕೆ ನಾವಿದ್ದೇವೆ‘ - ನೂತನ ಎಂಎಲ್​​ಸಿ ಎಚ್​. ವಿಶ್ವನಾಥ್​​​

ರಾಜಕೀಯದಲ್ಲಿ ವ್ಯಂಗ್ಯ, ಆರೋಪ, ಟೀಕೆಯಂತಹ ಹೇಳಿಕೆಗಳು ಸಾಮಾನ್ಯ. ನಾವು ರಾಜಕೀಯ ವಿರೋಧಿಗಳು ನಿಜ. ಆದ್ರೆ ವೈಯಕ್ತಿಕ ಶತ್ರುಗಳಲ್ಲ ಎಂದು ಸಿ ಟಿ ಹೇಳಿದ್ದಾರೆ. ಆದರೆ ಸಿ.ಟಿ‌ ರವಿ ಅವರ ಹೇಳಿಕೆಯನ್ನ ಪಕ್ಷ ಯಾವ ಅರ್ಥದಲ್ಲಿ ಪರಿಗಣಿಸುತ್ತೋ ಕಾದು ನೋಡಬೇಕು
Published by: Ganesh Nachikethu
First published: July 30, 2020, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading