HOME » NEWS » State » CT RAVI SAYS WE ARE NOT ACCEPT SONIA RAHUL PRIYANKA AS A LEADER VCTV SESR

ಸಿದ್ದರಾಮಯ್ಯ, ಯಡಿಯೂರಪ್ಪರನ್ನು ಲೀಡರ್ ಎಂದು ಒಪ್ಪುತ್ತೇನೆ, ರಾಹುಲ್, ಸೋನಿಯಾರನ್ನಲ್ಲ; ಸಿಟಿ ರವಿ

ಕಾಂಗ್ರೆಸ್‍ಗೆ ರಾಷ್ಟ್ರಮಟ್ಟದಲ್ಲಿ ಜನನಾಯಕತ್ವ ಇಲ್ಲ. ಆ ಪಕ್ಷ ಮುಳುಗುತ್ತಿರುವ ಹಡಗು, ಅಲ್ಲಿರೋದು ಕುಟುಂಬ ನಾಯಕತ್ವ ಮಾತ್ರ

news18-kannada
Updated:April 14, 2021, 6:40 PM IST
ಸಿದ್ದರಾಮಯ್ಯ, ಯಡಿಯೂರಪ್ಪರನ್ನು ಲೀಡರ್ ಎಂದು ಒಪ್ಪುತ್ತೇನೆ, ರಾಹುಲ್, ಸೋನಿಯಾರನ್ನಲ್ಲ; ಸಿಟಿ ರವಿ
ಸಿ ಟಿ ರವಿ.
  • Share this:
ಚಿಕ್ಕಮಗಳೂರು (ಏ. 14) : ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ನರೇಂದ್ರ ಮೋದಿಯವರನ್ನು ನಾಯಕ  ಎಂದು ಒಪ್ಪಿಕೊಳ್ಳಬಹುದು. ಆದರೆ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಸೋನಿಯ ಗಾಂಧಿಯವರನ್ನು ಲೀಡರ್ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ  ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಕೇರಳದಲ್ಲಿ ಕಮ್ಯುನಿಸ್ಟರನ್ನು ವಿರೋಧಿಸಿ, ತಮಿಳುನಾಡು, ಪ.ಬಂಗಾಳದಲ್ಲಿ ಅವರ ಜೊತೆಯೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್‍ನದ್ದು ನಿರ್ದಿಷ್ಟತೆ ಇಲ್ಲದ ಎಡಬಿಡಂಗಿತನ ಎಂದು ಲೇವಡಿ ಮಾಡಿದರು. ಕಾಂಗ್ರೆಸ್​ ನಾಯಕರು ಅವರು ಕುಟುಂಬದ ನಾಯಕತ್ವವನ್ನ ಒಪ್ಪಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ, ಜನ ಒಪ್ಪಲ್ಲ. ಕಾಂಗ್ರೆಸ್‍ಗೆ ರಾಷ್ಟ್ರಮಟ್ಟದಲ್ಲಿ ಜನನಾಯಕತ್ವ ಇಲ್ಲ. ಆ ಪಕ್ಷ ಮುಳುಗುತ್ತಿರುವ ಹಡಗು, ಅಲ್ಲಿರೋದು ಕುಟುಂಬ ನಾಯಕತ್ವ ಮಾತ್ರ ಎಂದು ಟೀಕಿಸಿದರು

ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವ್ಯಂಗ್ಯ

ಲಾಕ್ ಡೌನ್ ಮಾಡೋದಾದರೆ ಪ್ರತಿ ಕುಟುಂಬಕ್ಕೆ 10 ಸಾವಿರ ನೀಡಲಿ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಟೀಕಿಸಿದ ಅವರು,  ಮಾಜಿ ಸಿಎಂ ಸರ್ಕಾರದ ಖಜಾನೆಯನ್ನ ಭರ್ತಿ ಮಾಡಿ ಹೋಗಿಲ್ಲ. ಖಾಲಿ ಮಾಡಿ ಹೆಚ್ಚುವರಿ ಸಾಲ ಮಾಡಿ ಹೋಗಿದ್ದಾರೆ. ವಿಜಯನಗರದ ಅರಸರಂತೆ ಚಿನ್ನ-ಬೆಳ್ಳಿಯನ್ನ ರಸ್ತೆಯಲ್ಲಿ ಮಾರುವಂತಹಾ ಶ್ರೀಮಂತಿಕೆ ತುಂಬಿಸಿ ಹೋಗಿದರೆ ಈ ರೀತಿ ಹೇಳಬಹುದಿತ್ತು. ಅವರ ಮನೆ ಖಜಾನೆ ತುಂಬಿಸಿಕೊಂಡು ಹೋದರು. ಪಾರ್ಟಿ ಖಜಾನೆ ತುಂಬಿಸಿ, ರಾಜ್ಯದ ಖಜಾನೆ ಖಾಲಿ ಮಾಡಿ ಹೋಗಿದ್ದಾರೆ. ಅವರು ಇದ್ದಾಗ ಏನೇನು ಕೊಟ್ಟರು ಎನ್ನುವುದರ ಪಟ್ಟಿ ನಮ್ಮ ಬಳಿ ಇದೆ ಎಂದು ಮಾಜಿ ಸಿಎಂ ಅನ್ನು ಕುಟುಕಿದರು.
Youtube Video

ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತಃ ಖರ್ಗೆಯೇ ಗೆಲ್ಲಲಿಲ್ಲ,

ಲೋಕಸಭಾ  ಚುನಾವಣೆ ವೇಳೆ ರಾಹುಲ್ ಗಾಂಧಿಯನ್ನು ಕರೆದುಕೊಂಡು ಬಂದು ಕನಕಪುರದಲ್ಲಿ ಪ್ರಚಾರ ಮಾಡಿ ಅಲ್ಲು ಗೆಲುತ್ತಿದ್ದೇವು. ನಮ್ಮ ಪೂರ್ವ ತಯಾರಿಯ ಕೊರತೆಯಿಂದ ಆ ಒಂದು ಕ್ಷೇತ್ರ ಕಾಂಗ್ರೆಸ್‍ನವರು ಗೆದ್ದರು ಅಷ್ಟೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತಃ ಮಲ್ಲಿಕಾರ್ಜುನ ಖರ್ಗೆಯೇ ಗೆಲ್ಲಲಿಲ್ಲ.  ರಾಹುಲ್ ನೇತೃತ್ವದಲ್ಲಿ ಯಾವ ಚುನಾವಣೆ ಗೆದ್ದಿದ್ದಾರೆ ಎಂದು ನಮಗೆ ಭಯ ಎಂದು ಸಿ.ಟಿ ರವಿ ಪ್ರಶ್ನಿಸಿದ್ದಾರೆ. ರಾಹುಲ್ ನೇತೃತ್ವದ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿಕ್ಕಿದ್ದು ಒಂದೇ ಕ್ಷೇತ್ರ. ಬಲವಾದ ಅಭ್ಯರ್ಥಿ ಹಾಕಿ ಪ್ರಚಾರ ನಡೆಸಿದ್ದರೆ ಅದನ್ನ ನಾವು ಬಿಡ್ತಿರ್ಲಿಲ್ಲ ಎಂದು ಕಾಂಗ್ರೆಸ್ ನಾಯಕತ್ವದ ವೈಫಲ್ಯದ  ವಿರುದ್ಧ ಲೇವಡಿ ಮಾಡಿದ್ದಾರೆ.
Published by: Seema R
First published: April 14, 2021, 6:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories