• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ದೇಶದಲ್ಲಿ ಸುಧಾರಣಾ ಪರ್ವ ಆರಂಭವಾಗಿದೆ: ಸಿ ಟಿ ರವಿ

ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ದೇಶದಲ್ಲಿ ಸುಧಾರಣಾ ಪರ್ವ ಆರಂಭವಾಗಿದೆ: ಸಿ ಟಿ ರವಿ

 ಸಿ ಟಿ ರವಿ

ಸಿ ಟಿ ರವಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಬರ, ಅತಿವೃಷ್ಟಿ, ಕೋವಿಡ್ ಸಮಸ್ಯೆ ಎದುರಾಗಿದೆ. ಸಂಕಷ್ಟಗಳ ನಡುವೆಯೂ ಸಿಎಂ ಯಡಿಯೂರಪ್ಪನವರ ನೇತ್ರತ್ವದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗುತ್ತಿದೆ.

  • Share this:

ಹುಬ್ಬಳ್ಳಿ(ಅಕ್ಟೋಬರ್​. 20): ವಿಧಾನ ಪರಿಷತ್‌ ಚುನಾವಣೆ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾ‌ನ ಕಾರ್ಯದರ್ಶಿ ಸಿ.ಟಿ‌. ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ್ ಗೆಲುವು ನಿಶ್ಚಿತ ಎಂದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ದೇಶದಲ್ಲಿ ಸುಧಾರಣಾ ಪರ್ವ ಆರಂಭವಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದೇವೆ. ಕಾಶ್ಮೀರದಲ್ಲಿ ಪ್ರತ್ಯೇಕತಾ ವಾದವನ್ನು ಅಂತ್ಯಗೊಳಿಸಿದ್ದೇವೆ. ಕಾಂಗ್ರೆಸ್ ಸರ್ಕಾರವಿದ್ದಾಗ ವ್ಯಾಪಕ ಭ್ರಷ್ಟಾಚಾರವಿತ್ತು. ಈಗ ಭ್ರಷ್ಟಾಚಾರ, ವಿಳಂಭಕ್ಕೆ ಆಸ್ಪದವಿಲ್ಲದಂತೆ ಆಡಳಿತ ಸುಧಾರಣೆಯಾಗಿದೆ. ಕಾರ್ಮಿಕ ಕಾಯ್ದೆ ತಿದ್ದುಪಡಿಯಿಂದ ದುಡಿಯುವ ವರ್ಗಕ್ಕೆ ಅನುಕೂಲವಾಗಿದೆ. ನಿರುಪಯುಕ್ತ ಕಾಯ್ದೆಗಳನ್ನು ರದ್ದುಪಡಿಸಲಾಗಿದೆ. ಎಲ್ಲದಕ್ಕೂ ಕಲಶಪ್ರಾಯವಾದ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಪ್ರಧಾನಿಗಳು ಮತ್ತು ಸರ್ಕಾರದ ಜನಪ್ರಿಯತೆ ಏರು ಗತಿಯಲ್ಲಿ ಸಾಗಿದೆ. ಸಂಕಷ್ಟದ ಕಾಲದಲ್ಲೂ ಪ್ರಾಮಾಣಿಕ ಆಡಳಿತ ನೀಡುತ್ತಿದ್ದೇವೆ ಎಂದು ತಿಳಿಸಿದರು.


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಬರ, ಅತಿವೃಷ್ಟಿ, ಕೋವಿಡ್ ಸಮಸ್ಯೆ ಎದುರಾಗಿದೆ. ಸಂಕಷ್ಟಗಳ ನಡುವೆಯೂ ಸಿಎಂ ಯಡಿಯೂರಪ್ಪನವರ ನೇತ್ರತ್ವದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗುತ್ತಿದೆ. ಕೊವಿಡ್ ಸಂಕಷ್ಟದಿಂದ ಆರ್ಥಿಕತೆ ಸುಸ್ಥಿಗೆ ಬಂದಿಲ್ಲ. ಪ್ರತಿ ಶಾಸಕರ ಕ್ಷೇತ್ರಕ್ಕೆ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ. ಇರುವ ಅನುದಾನ ಬಳಸಿಕೊಂಡು ಕೆಲಸ ಮಾಡಬೇಕಾಗುತ್ತೆ. ಆದ್ಯತಾ ವಲಯಗಳಿಗೆ ಹಣಕಾಸು ಬಿಡುಗಡೆ ಮಾಡಲಾಗುತ್ತಿದೆ ಎಂದರು.


ರಾಜ್ಯದಲ್ಲಿ ನೆರೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿದೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಚರ್ಚೆಯ ನಂತರ ಕೇಂದ್ರವೇ ಸಾಲ ಪಡೆದು ರಾಜ್ಯಕ್ಕೆ ಕೊಡುತ್ತಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಾವಳಿಗಳಂತೆ ರೈತರಿಗೆ ಪರಿಹಾರ ಹಣ ಬಂದಿದೆ ಎಂದು ತಿಳಿಸಿದರು.


ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಲವು ಕಾರಣಕ್ಕೆ ಯತ್ನಾಳ್​​ ಅವರು ಆಗಾಗ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಅವರ ಹೇಳಿಕೆಗಳಿಗೆ ನಾನು ಹೆಚ್ಚಿನ ಪ್ರತಿಕ್ರಿಯೆ ಕೊಡಲ್ಲ‌ ಎಂದಿದ್ದಾರೆ. ಪಕ್ಷ ಯಾವ ಸಂದರ್ಭದಲ್ಲಿ ಏನೇನು ಶಿಸ್ತು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೆ‌. ಪಕ್ಷದ ಆಂತರಿಕ ವಿಚಾರಗಳನ್ನು ಸೂಕ್ತ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದವರು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ : ಮೈಸೂರು ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದ ಕೊರೋನಾ ಸೋಂಕು: ಹೇಳಿದಂತೆ ಮಾಡಿಬಿಟ್ಟರಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ


‌ಮಾಜಿ ಸಚಿವರಾದ ವಿನಯ್ ಕುಲಕರ್ಣಿ ಮತ್ತು ಎಂ‌.ಬಿ‌. ಪಾಟೀಲ್ ಬಿಜೆಪಿ ಸೇರ್ಪಡೆ ಬಗ್ಗೆ ಇದುವರೆಗೂ ಯಾವುದೇ ಚರ್ಚೆ ನಡೆದಿಲ್ಲಾ, ನಮ್ಮ‌ ಗಮನಕ್ಕೆ ಬಂದಿಲ್ಲ. ರಾಷ್ಟ್ರೀಯ ಅಧ್ಯಕ್ಷರ ಬಳಿಯೂ ಈ ಬಗ್ಗೆ ಚರ್ಚೆ ಆಗಿಲ್ಲ ಎಂದರು.


ಯಾರೇ ಪಕ್ಷ ಸೇರ್ಪಡೆ ಆಗಬೇಕೆಂದರೆ ಮೊದಲು ಸ್ಥಳೀಯ ಘಟಕದ ಅಭಿಪ್ರಾಯ ಪಡೆಯುತ್ತೇವೆ. ಬಿಜೆಪಿ ರಾಜಕೀಯ ಮತ್ತು ಸಾಮಾಜಿಕ ಅಸ್ಪೃಶ್ಯತೆ ಬಗ್ಗೆ ವಿಶ್ವಾಸ ಇಡುವ ಪಕ್ಷವಲ್ಲ. ಯಾರೇ ಆಗಲಿ‌ ಪಕ್ಷಕ್ಕೆ ಆಸ್ತಿ ಆಗುವುದಾದರೆ ಸೇರಿಸಿಕೊಳ್ಳುತ್ತೇವೆ. ಪಕ್ಷಕ್ಕೆ ಹೊರೆ ಆಗುವುದಾದರೆ ಸೇರಿಸಿಕೊಳ್ಳಲ್ಲ ಎಂದು ತಿಳಿಸಿದರು.

Published by:G Hareeshkumar
First published: