HOME » NEWS » State » CT RAVI SAYS HE IS COMMITTED HIS STATEMENT ON JUDICIARY VCTV SESR

ನ್ಯಾಯಾಲಯದ ಬಗ್ಗೆ ಗೌರವವಿದೆ; ನನ್ನ ಮಾತಿಗೂ ಬದ್ಧನಿದ್ದೇನೆ: ಸಿಟಿ ರವಿ

ನ್ಯಾಯಾಲಯದ ಬಗ್ಗೆ ಅಗೌರದ ಮಾತನಾಡಿಲ್ಲ, ನ್ಯಾಯಾಲಯದ ಬಗ್ಗೆ ಗೌರವ ಇದೆ, ಇರುತ್ತೆ, ನ್ಯಾಯಧೀಶರು ಸರ್ವಜ್ಞರಲ್ಲ ಎಂದು ಹೇಳಿದ್ದೇನೆ, ನನ್ನ ಹೇಳಿಕೆಯಲ್ಲಿ ಅಗೌರವ, ಅಪನಂಬಿಕೆಯ ಹುಟ್ಟಿಸುವ ಹೇಳಿಕೆ ಏನಿದೆ-ಸಿ.ಟಿ.ರವಿ ಪ್ರಶ್ನೆ  

news18-kannada
Updated:May 14, 2021, 7:59 PM IST
ನ್ಯಾಯಾಲಯದ ಬಗ್ಗೆ ಗೌರವವಿದೆ; ನನ್ನ ಮಾತಿಗೂ ಬದ್ಧನಿದ್ದೇನೆ: ಸಿಟಿ ರವಿ
ಸಿ ಟಿ ರವಿ.
  • Share this:
ಚಿಕ್ಕಮಗಳೂರು (ಮೇ. 14):  ನ್ಯಾಯಾಲಯದ ಬಗ್ಗೆ ನಾನು ಅಗೌರದ ಮಾತನಾಡಿಲ್ಲ, ನ್ಯಾಯಾಲಯದ ಬಗ್ಗೆ ಗೌರವ ನಿನ್ನೆಯೂ ಇತ್ತು. ಇಂದು ಇದೆ. ನಾಳೆಯೂ ಇರುತ್ತದೆ. ನನ್ನ ಒಂದೊಂದು ಶಬ್ಧಕ್ಕೂ ನಾನು ಬದ್ಧನಾಗಿದ್ದೇನೆ ಎಂದು  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ನ್ಯಾಯಧೀಶರು ಸರ್ವಜ್ಞರಲ್ಲ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ. ಅವರು ಕೂಡ ತಾಂತ್ರಿಕ ಸಮಿತಿಯ ವರದಿ ಆಧರಿಸಿ ನಿರ್ದೇಶನ ಕೊಡುತ್ತಾರೆ. ಸುಪ್ರೀಂಕೋರ್ಟ್ ಹೇಳಿಯೇ ಟೆಕ್ನಿಕಲ್ ಕಮಿಟಿ ನೇಮಿಸಿದೆ ಎಂದಿದ್ದೇನೆ. ನನ್ನ ಹೇಳಿಕೆಯಲ್ಲಿ ಅಗೌರವ, ಅಪನಂಬಿಕೆಯ ಹುಟ್ಟಿಸುವ ಹೇಳಿಕೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಸರ್ವಜ್ಞರಲ್ಲ ಎಂಬುದು ಅಪನಂಬಿಕೆಯ ಪದವೇ, ನಿಂದನೆಯೇ, ಟೀಕೆಯೇ ಏನೂ ಅಲ್ಲ. ಇವತ್ತು ಕೂಡ ಭಾವಿಸುತ್ತೇನೆ. ಜಗದ 780 ಕೋಟಿ ಜನರಲ್ಲಿ ಎಲ್ಲಾ ತಿಳಿದ ಸರ್ವಜ್ಞರಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಜಗತ್ತಿನಲ್ಲಿ ಕೆಲವರು ಹೆಚ್ಚು ತಿಳಿದಿರಬಹುದು. ನನ್ನಂಥ ಅಲ್ಪ ತಿಳಿದವರು ಇರಬಹುದು. ಆದರೆ, ಯಾರೂ ಸರ್ವಜ್ಞರಿಲ್ಲ ಎಂದಿದ್ದಾರೆ. ಕೆಲವರು ಪ್ರಧಾನಿ ಮೋದಿಯನ್ನು ನರಹಂತಕ ಎಂದಿದ್ದಾರೆ. ಅದು ಅಸಂವಿಧಾನಿಕ ಪದ. ಅಧಿಕೃತ ಪಕ್ಷಗಳ ಸಾಮಾಜಿಕ ಜಾಲತಾಣದಲ್ಲಿ ಯಮನ ರೂಪದಲ್ಲಿ ಚಿತ್ರಿಸಿ ತೋರಿಸಿದ್ದರು. ತನ್ನ ಸಂಬಂಧಗಳ ಕಾರಣಕ್ಕೆ ದೇಶ-ವಿದೇಶಗಳಿಂದ ವ್ಯಾಕ್ಸಿನ್ ಮೈತ್ರಿ ಮಾಡಿಕೊಂಡು ನೆರವು ಕೊಟ್ಟು ನೆರವು ಪಡೆಯುತ್ತಿದ್ದಾರೆ ಅಂತಹಾ ಮನುಷ್ಯನನ್ನ ಆಪತ್ಬಂಧವ ಎಂದು ಕರೆಯುವ ಬದಲು ಯಮನ ರೂಪದಲ್ಲಿ ತೋರಿಸಿದ್ದಾರೆ. ಅದು ಅವರಿಗಿರುವ ದ್ವೇಷವನ್ನ ತೋರಿಸುತ್ತದೆ ಎಂದು ಟೀಕಿಸಿದರು.

ಸೋನಿಯಾ ಗಾಂಧಿ ಅವರ ತವರು ಮನೆ ಇಟಲಿ. ಅಲ್ಲೂ ಕೋವಿಡ್ ಸೋಂಕು ಕಾಡಿದೆ. ದೊಡ್ಡ ಪ್ರಮಾಣದಲ್ಲಿ ಸತ್ತಿದ್ದಾರೆ. ಅದಕ್ಕೆ ಮೋದಿ ಕಾರಣನಾ. ಅತ್ಯುತ್ತಮವಾದ ಚಿಕಿತ್ಸಾ ವ್ಯವಸ್ಥೆ ಇರುವ ಇಂಗ್ಲೆಂಡ್‍ನಲ್ಲೂ ರೋಗ ಕಾಡಿದೆ. ಸಾವು ಸಂಭವಿಸಿದೆ. ಅದಕ್ಕೂ ಮೋದಿ ಕಾರಣನಾ ಎಂದು ಪ್ರಶ್ನಿಸಿದ ಅವರು ಎಲ್ಲದಕ್ಕೂ ಮೋದಿಯತ್ತ ಬೆಟ್ಟು ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸದಾನಂದಗೌಡ್ರು ಹಾಗೂ ನಾನು ಹಳ್ಳಿಯಿಂದ ಬಂದವರು. ನಾವು ಸ್ವಾಭಾವಿಕವಾದ ಆಡು ಭಾಷೆಯಲ್ಲಿ ಮಾತನಾಡುತ್ತೇವೆ. ಒಬ್ಬ ವ್ಯಕ್ತಿ, ಸರ್ಕಾರ ತನ್ನ ಇತಿಮಿತಿಯಲ್ಲಿ ತನ್ನ ಸಾಮರ್ಥ್ಯ ಕ್ಕೆ ಅನುಗುಣವಾಗಿ ದೇಶಕ್ಕೆ ಏನು ಮಾಡಬಹುದು ಎಲ್ಲಾ ಮಾಡಿದ ಮೇಲೆ ಏನೂ ಮಾಡಿಲ್ಲ ಅಂದರೆ ಹೇಗೆ. ಇದೊಂದು ಸಾಂಕ್ರಾಮಿಕ ರೋಗ. ಇದು ಚೈನಾ ಪಿಡುಗು. ಜಗತ್ತಿನ ಎಲ್ಲಾ ಕಡೆ ಕಾಡಿದೆ. ಅಮೇರಿಕಾದಲ್ಲಿ 33 ಕೋಟಿ ಜನ ಸಂಖ್ಯೆ. ಐದೂವರೆ ಲಕ್ಷ ಜನ ಸತ್ತಿದ್ದಾರೆ. ನಮಗಿಂತ ನಾಲ್ಕನೇ ಒಂದು ಭಾಗ ಜನಸಂಖ್ಯೆ ಇರುವ ಅಮೇರಿಕಾದಲ್ಲಿ ಐದೂವರೆ ಲಕ್ಷ ಜನ ಸತ್ತಿದ್ದಾರೆ.
Youtube Video

ನಮ್ಮಲೂ ಅನೇಕರು ಸಾವನ್ನಪ್ಪುತ್ತಿದ್ದಾರೆ ಒಂದೊಂದು ಸಾವು ಕೂಡ ದುಖಃದ ಸಂಗತಿ. ನಮ್ಮಲ್ಲಿ 2 ಲಕ್ಷದ 54 ಸಾವಿರ ಜನ ಅಸುನೀಗಿದ್ದಾರೆ. ಆ ಸಾವಿಗೂ ನಾವು ಸಂಕಟ ಪಡುತ್ತೇವೆ. ನೋವು ಅನುಭವಿಸುತ್ತೇವೆ. ಆದರೆ, ಹೋಲಿಕೆ ಮಾಡಿದಾಗ ಅಮೇರಿಕಾಕ್ಕಿಂತ ಕಡಿಮೆ. ಆದರೆ, ಇದನ್ನು  ಮೋದಿ ನಿರ್ಲಕ್ಷ್ಯ ಎಂದು ಬಿಂಬಿಸುತ್ತಿದ್ದಾರೆ. ಅದು ಏನು ತೋರಿಸುತ್ತದೆ ಎಂದ ಅವರು, ಇದು ಅವರಲ್ಲಿನ ನೀಚತನ ತೋರಿಸುತ್ತದೆಯೋ  ಇಲ್ವೋ ಎಂದರು

ಯುರೋಪ್, ಅಮೆರಿಕ ಖಂಡದ ಜನಸಂಖ್ಯೆ ಭಾರತಕ್ಕಿಂತ ಕಡಿಮೆ ಇದೆ. ಸಾವು-ಸೋಂಕಿನ ಪ್ರಮಾಣ ಭಾರತಕ್ಕಿಂತ ನಾಲ್ಕು ಪಟ್ಟು ಜಾಸ್ತಿ ಇದೆ. ಅದಕ್ಕೆ ಮೋದಿ ಕಾರಣ ಎಂದು ಹೇಳಿದರೆ ಆ ಜನರಿಗೆ ಏನು ಹೇಳಬೇಕು. ಅವರನ್ನ ಮೂರ್ಖರೂ ಎನ್ನಬೇಕೋ ಏನನ್ನಬೇಕು ಎಂದರು
Published by: Seema R
First published: May 14, 2021, 7:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories