HOME » NEWS » State » CT RAVI REQUEST TO CENTRAL GOVERNMENT FOR INDIAN HERITAGE AND CONSERVATION VV START IN MYSURU RH

ಮೈಸೂರಿನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿವಿ ಆರಂಭಿಸುವಂತೆ ಕೇಂದ್ರಕ್ಕೆ ಸಿ.ಟಿ.‌ ರವಿ ಮನವಿ

ಸಚಿವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿರ್ಮಲಾ ಸೀತಾರಾಮನ್ ಅವರು, ಈ ಸಂಬಂಧ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರೊಂದಿಗೆ ಚರ್ಚೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕದಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವ ಬಗ್ಗೆ ನಾನೂ ಕೂಡ ಸಕಾರಾತ್ಮಕವಾಗಿ ಇದ್ದೇನೆ ಎಂದು ಆಶ್ವಾಸನೆ ನೀಡಿದರು ಎನ್ನಲಾಗಿದೆ.

news18-kannada
Updated:August 18, 2020, 8:49 PM IST
ಮೈಸೂರಿನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿವಿ ಆರಂಭಿಸುವಂತೆ ಕೇಂದ್ರಕ್ಕೆ ಸಿ.ಟಿ.‌ ರವಿ ಮನವಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಸಚಿವ ಸಿ.ಟಿ.ರವಿ.
  • Share this:
ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‍ನಲ್ಲಿ ಘೋಷಿಸಿರುವ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭಿಸಬೇಕೆಂದು ಕನ್ನಡ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ರವಿ ಅವರು, ಮೈಸೂರಿನಲ್ಲಿ ಈ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು  ಆರಂಭಿಸಿದರೆ ರಾಜ್ಯ ಸರ್ಕಾರ ಜಾಗ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲಿದೆ ಎಂದು ಆಶ್ವಾಸನೆ ನೀಡಿದರು.

ಮೈಸೂರು ಸಾಂಸ್ಕೃತಿಕ ನಗರವಾಗಿದ್ದು, ವಿಶ್ವ ಪಾರಪಂರಿಕ ತಾಣಗಳಲ್ಲಿ ಒಂದಾಗಿದೆ. ಪ್ರತಿ ದಿನ ಇಲ್ಲಿನ ಅರಮನೆ, ಚಾಮುಂಡಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ತಾಣಗಳಿಗೆ ದೇಶ-ವಿದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು ತೆರೆಯುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಮನವರಿಕೆ ಮಾಡಿಕೊಟ್ಟರು.

ಒಂದು ವೇಳೆ ಕೇಂದ್ರ ಸರ್ಕಾರ ಮೈಸೂರಿನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು ಆರಂಭಿಸಿದರೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ. ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು  ಪ್ರಾರಂಭಿಸುವುದರಿಂದ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೂ ಇದು ಅನುಕೂಲವಾಗಲಿದೆ ಎಂದು ಹೇಳಿದರು.

ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಲು ಮೈಸೂರು ಅತ್ಯಂತ ಸೂಕ್ತ ತಾಣವಾಗಿದೆ. ಏಕೆಂದರೆ, ಮೈಸೂರು ಅರಮನೆಗಳ ನಗರ ಎಂದೇ ಖ್ಯಾತಿಯಾಗಿದೆ. ಸಂಕೀರ್ಣವಾದ ವಾಸ್ತುಶಿಲ್ಪ, ಪ್ರಸಿದ್ಧ ರೇಷ್ಮೆ ಸೀರೆಗಳು, ಯೋಗ ಮತ್ತು ಶ್ರೀಗಂಧದ ಇತಿಹಾಸದಿಂದ ತುಂಬಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ಕರ್ನಾಟಕ ರಾಜ್ಯದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ವರ್ಷಪೂರ್ತಿ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ ಎಂದು ವಿವರಿಸಿದರು.

ಮೈಸೂರು ವಿಶ್ವಪ್ರಸಿದ್ಧ ದಸರಾವನ್ನು ಆಯೋಜಿಸುತ್ತದೆ. ಅದು ಭಾರತದ ಸಂಸ್ಕೃತಿ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ  ಪಾರಂಪರಿಕ ಕಟ್ಟಡಗಳು, ಪಾರಂಪರಿಕ ಸಂರಕ್ಷಣಾ ಪ್ರದೇಶಗಳಲ್ಲಿ ನಡೆಸಿರುವ ಸಂಶೋಧನೆಗಳು ಮತ್ತು ಭಾರತದ ಪರಂಪರೆ ಮತ್ತು ಸಂಸ್ಕೃತಿಯನ್ನು ಪೋಷಿಸಿ ಬೆಳೆಸಲು ಕಾರಣವಾಗಿದೆ. ಮೈಸೂರಿನಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಲು ಸಾಕಷ್ಟು ಭೂಮಿ ಲಭ್ಯವಿದೆ ಎಂದು  ಮಾಹಿತಿ ನೀಡಿದರು.

ಇದನ್ನು ಓದಿ: ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಚಿವ ಸಿ.ಟಿ. ರವಿ ಒತ್ತಾಯ

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿರ್ಮಲಾ ಸೀತಾರಾಮನ್ ಅವರು, ಈ ಸಂಬಂಧ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರೊಂದಿಗೆ ಚರ್ಚೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕದಲ್ಲಿ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವ ಬಗ್ಗೆ ನಾನೂ ಕೂಡ ಸಕಾರಾತ್ಮಕವಾಗಿ ಇದ್ದೇನೆ ಎಂದು ಆಶ್ವಾಸನೆ ನೀಡಿದರು ಎನ್ನಲಾಗಿದೆ.
Published by: HR Ramesh
First published: August 18, 2020, 8:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories