• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Youth Congress ರಾಷ್ಟ್ರೀಯ ಅಧ್ಯಕ್ಷರಿಗೆ ಒಳ್ಳೆ ಭವಿಷ್ಯವಿದೆ; ರಾಜಕೀಯದಲ್ಲಲ್ಲ, ರನ್ನಿಂಗ್‌ನಲ್ಲಿ! ಶ್ರೀನಿವಾಸ್ ವಿರುದ್ಧ ಸಿಟಿ ರವಿ ವ್ಯಂಗ್ಯ

Youth Congress ರಾಷ್ಟ್ರೀಯ ಅಧ್ಯಕ್ಷರಿಗೆ ಒಳ್ಳೆ ಭವಿಷ್ಯವಿದೆ; ರಾಜಕೀಯದಲ್ಲಲ್ಲ, ರನ್ನಿಂಗ್‌ನಲ್ಲಿ! ಶ್ರೀನಿವಾಸ್ ವಿರುದ್ಧ ಸಿಟಿ ರವಿ ವ್ಯಂಗ್ಯ

ಸಿಟಿ ರವಿ

ಸಿಟಿ ರವಿ

"ಶ್ರೀನಿವಾಸ್ ಅವರಿಗೆ ಉತ್ತಮ ಭವಿಷ್ಯ ಇದೆ, ಆದರೆ ರಾಜಕೀಯದಲ್ಲಿ ಅಲ್ಲ, ರನ್ನಿಂಗ್ ರೇಸ್‌ನಲ್ಲಿ" ಅಂತ ಸಿ.ಟಿ. ರವಿ ವ್ಯಂಗ್ಯವಾಡಿದ್ರು. "ಯಾವುದಾದರೂ ಅಥ್ಲೆಟಿಕ್ಸ್, ರನ್ನಿಂಗ್ ರೇಸ್‌ನಲ್ಲಿ ನಿಂತರೆ ಶ್ರೀನಿವಾಸ್ ಖಂಡಿತ ಗೆಲ್ಲುತ್ತಾರೆ" ಅಂತ ಕಾಲೆಳೆದರು!

  • Share this:

ಬೆಂಗಳೂರು: ನಿನ್ನೆ ನವದೆಹಲಿಯಲ್ಲಿ (New Delhi) ಇಡಿ (ED) ವಿರುದ್ಧ ಕಾಂಗ್ರೆಸ್‌ ನಾಯಕರು (Congress Leaders), ಕಾರ್ಯಕರ್ತರು ನಿನ್ನೆಯಿಂದ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ನಿನ್ನೆ ದೆಹಲಿಯಲ್ಲಿ ಯೂತ್ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ (Youth Congress National President) ಬಿವಿ ಶ್ರೀನಿವಾಸ್ (BV Srinivas) ಪೊಲೀಸರು (Police) ವಶಕ್ಕೆ ಪಡೆಯಲು ಬಂದಾಗ, ಎದ್ದೆನೋ ಬಿದ್ದೆನೋ ಅಂತ ಓಡಿ ಹೋಗಿದ್ದರು. ಶ್ರೀನಿವಾಸ್ ಎಸ್ಕೇಪ್ ಆಗುತ್ತಿರುವ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಫುಲ್ ವೈರಲ್ (Viral) ಆಗಿತ್ತು. ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP national general secretary) ಸಿ.ಟಿ. ರವಿ (C.T. Ravi) ವ್ಯಂಗ್ಯವಾಡಿದ್ದಾರೆ. “ಮೇವು ತಿಂದವರು ಜೈಲಿನಲ್ಲಿದ್ದಾರೆ. ಈಗ ಪೇಪರ್ ತಿಂದವರು ಜೈಲಿಗೆ ಹೋಗ್ತಾರೆ ಎಂದು ಹೇಳಿದ್ದಾರೆ. ಇ.ಡಿ ವಿರುದ್ಧ‌ ಕಾಂಗ್ರೆಸ್ ಹೋರಾಟವನ್ನು ಟೀಕಿಸಿದ ಅವರು, ಕಾಂಗ್ರೆಸ್ ನಾಯಕರು ಸಂವಿಧಾನಕ್ಕಿಂತ ಮೇಲಿನವರಾ? ನಿಮಗೆ ಯಾಕೆ ಭಯ? ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎನ್ನುವಂತೆ ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟಾಚಾರ ನಡೆಸುವವರಿಗೆ ಕಾಂಗ್ರೆಸ್ ಬೆಂಬಲ ಕೊಡ್ತಿದೆ ಎಂದು ಆರೋಪಿಸಿದ್ದಾರೆ.


“ಬಿವಿ ಶ್ರೀನಿವಾಸ್‌ಗೆ ಒಳ್ಳೆ ಭವಿಷ್ಯವಿದೆ” ಎಂದ ಸಿಟಿ ರವಿ!


ಯೂತ್ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಅವರಿಗೆ ಉತ್ತಮ ಭವಿಷ್ಯ ಇದೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ನಿನ್ನೆ ಶ್ರೀನಿವಾಸ್ ಅವರು ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗುತ್ತಿರುವ ವಿಡಿಯೋ ನಾನು ನೋಡಿದ್ದೆ. ಅವರು ಮಿಂಚಿನ ವೇಗದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ ಅಂತ ರವಿ ವ್ಯಂಗ್ಯವಾಡಿದ್ದಾರೆ.


“ರನ್ನಿಂಗ್ ರೇಸ್‌ಗೆ ಹೋದ್ರೆ ಶ್ರೀನಿವಾಸ್ ಗೆಲ್ಲುತ್ತಾರೆ”


ಶ್ರೀನಿವಾಸ್ ಅವರಿಗೆ ಉತ್ತಮ ಭವಿಷ್ಯ ಇದೆ, ಆದರೆ ರಾಜಕೀಯದಲ್ಲಿ ಅಲ್ಲ, ರನ್ನಿಂಗ್ ರೇಸ್‌ನಲ್ಲಿ ಅಂತ ಸಿಟಿ ರವಿ ವ್ಯಂಗ್ಯವಾಡಿದ್ರು. ಯಾವುದಾದರೂ ಅಥ್ಲೆಟಿಕ್ಸ್, ರನ್ನಿಂಗ್ ರೇಸ್‌ನಲ್ಲಿ ನಿಂತರೆ ಶ್ರೀನಿವಾಸ್ ಖಂಡಿತ ಗೆಲ್ಲುತ್ತಾರೆ. ಅವರು ಮಿಂಚಿನ ವೇಗದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಅವರಿಗೆ ಓಟದಲ್ಲಿ ಗೆಲ್ಲುವ ಅರ್ಹತೆ ಇದೆ ಅಂತ ರವಿ ಕಾಲೆಳೆದಿದ್ದಾರೆ.


ಇದನ್ನೂ ಓದಿ: Youth Congress Protest: ಪೊಲೀಸರನ್ನು ನೋಡಿ ಎದ್ದೂ ಬಿದ್ದು ಓಡಿದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ! ಫುಲ್ ಟ್ರೋಲ್ ಆಯ್ತು ವಿಡಿಯೋ


“ನಾನು ಯಾವತ್ತೂ ಬೆನ್ನು ತೋರಿಸಿ ಓಡಿ ಹೋಗಿಲ್ಲ”


ಇನ್ನು ನಾನು ಹಲವು ಬಾರಿ, ಬೇರೆ ಬೇರೆ ಪ್ರತಿಭಟನೆಗಳಲ್ಲಿ ಜೈಲು ಸೇರಿದ್ದೇನೆ. ಪೊಲೀಸರಿಂದ ಏಟನ್ನೂ ತಿಂದಿದ್ದೇನೆ. ಆದರೆ ಯಾವತ್ತೂ ಶ್ರೀನಿವಾಸ್ ಅವರಂತೆ ಪೊಲೀಸರಿಗೆ ಬೆನ್ನು ತೋರಿಸಿ ಓಡಿಹೋಗಿಲ್ಲ ಅಂತ ಸಿಟಿ ರವಿ ಟೀಕಿಸಿದ್ದಾರೆ.


“ಈಗ ಪೇಪರ್ ತಿಂದವರು ಜೈಲಿಗೆ ಹೋಗುತ್ತಾರೆ!”


ಈಗಾಗಲೇ ಮೇವು ತಿಂದವರು ಜೈಲಿನಲ್ಲಿದ್ದಾರೆ. ಈಗ ಪೇಪರ್ ತಿಂದವರು ಜೈಲಿಗೆ ಹೋಗ್ತಾರೆ ಅಂತ ಸಿಟಿ ರವಿ ಹೇಳಿದ್ರು. ಇಡಿ ವಿರುದ್ಧ‌ ಕಾಂಗ್ರೆಸ್ ಹೋರಾಟ ಮಾಡ್ತಾ ಇದೆ. ಕಾಂಗ್ರೆಸ್ ನಾಯಕರು ಸಂವಿಧಾನಕ್ಕಿಂತ ಮೇಲಿನವರಾ? ನಿಮಗೆ ಯಾಕೆ ಭಯ? ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎನ್ನುವಂತೆ ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟಾಚಾರ ನಡೆಸುವವರಿಗೆ ಕಾಂಗ್ರೆಸ್ ಬೆಂಬಲ ಕೊಡ್ತಿದೆ ಎಂದು ಆರೋಪಿಸಿದರು.


ಇದನ್ನೂ ಓದಿ: DK Suresh: ನವದೆಹಲಿಯಲ್ಲಿ ಜೋರಾಯ್ತು ಕೈ ಪ್ರೊಟೆಸ್ಟ್, ಸಂಸದ ಡಿಕೆ ಸುರೇಶ್‌ರನ್ನು ವ್ಯಾನ್‌ಗೆ ತಳ್ಳಿದ ಪೊಲೀಸ್!


ಡಿಕೆಶಿಗೆ ಪರೋಕ್ಷ ಟಾಂಗ್


ಇನ್ನೊಬ್ಬರು ಕೃಷಿ ಮಾಡಿ ಆಸ್ತಿ ಮಾಡಿದವರು. ಅವರ ಹೆಸರು ಬೇಡ. ಅವರು ಬೇಲ್ ಮೇಲೆ ಹೊರಗೆ ಇದ್ದಾರೆ. ರೈತರು ಕಷ್ಟದಲ್ಲಿದ್ದಾಗ ಇವರು ಮಾತ್ರ ಕೃಷಿಯಲ್ಲಿ ಸಾವಿರಾರು ಕೋಟಿ ಹಣ ಮಾಡಿದವರು. ಅವರು ಕಾಂಗ್ರೆಸ್ ನಾಯಕರು ಎಂದು ಡಿಕೆಶಿ ಹೆಸರೇಳದೆ ಟಾಂಗ್ ಕೊಟ್ಟರು.

top videos
    First published: