ಬೆಳಗಾವಿ: ಬಿಜೆಪಿಯ (BJP) ಒಂದು ನಾಯಿಯೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಹೇಳಿಕೆ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (BJP National General Secretary CT Ravi) ತಿರುಗೇಟು ನೀಡಿದರು. ಬೆಳಗಾವಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಆ ಕಾಂಗ್ರೆಸ್ (Congress) ಶಕೆ ಮುಗಿದು, ಈಗ ಇರೋದು ಇಟಲಿ ಕಾಂಗ್ರೆಸ್ ಎಂದು ವ್ಯಂಗ್ಯ ಮಾಡಿದರು. ಇಟಲಿ ಕಾಂಗ್ರೆಸ್ ಒಂದು ನಾಯಿಯೂ ಭಾರತ ಪರ ಬೊಗಳಿಲ್ಲ. ಅದು ಚೀನಾ ಮತ್ತು ಪಾಕ್ (China And Patistan) ಪರ ಬೊಗಳುತ್ತೆ. ಇಟಲಿ ಕಾಂಗ್ರೆಸ್ ಒಂದೂ ನಾಯಿಯೂ ಇದುವರೆಗೆ ಭಾರತ ಪರ ಬಾಲ ಅಲ್ಲಾಡಿಸಿಲ್ಲ ಹಾಗೂ ಬೊಗಳಿಲ್ಲ. ಭಾರತದ ರಕ್ಷಣೆ ಕೆಲಸ ಮಾಡಿಲ್ಲ. ಅದು ಚೀನಾ, ಪಾಕಿಸ್ತಾನದ ಎಂಜಲು ತಿಂದಿದೆ ಎಂದು ವಾಗ್ದಾಳಿ ನಡೆಸಿದರು.
ಪಾಕ್ ಪರ ಬಾಲ ಅಲ್ಲಾಡಿಸಿ ಬೊಗಳುತ್ತೆ. ಆ ನಾಯಿಯನ್ನು ಇವತ್ತು ನೀವು ಸಾಕಿದ್ದು. ಈಗಿರೋದು ನಾಯಿ ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ನಾಯಿ ಅಲ್ಲ. ಈಗ ಇರುವ ಇಟಲಿ ಕಾಂಗ್ರೆಸ್ ನಾಯಿ ಚೀನಾ, ಪಾಕ್ ಪರ ಬಾಲ ಅಲ್ಲಾಡಿಸುತ್ತಾ ಭಾರತ ಹಾಗೂ ಭಾರತೀಯ ಸೈನ್ಯದ ವಿರುದ್ಧ ಬೊಗಳುತ್ತೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಆ ನಾಯಿ ಭಾರತ ಪರ ನಿಲ್ಲಲ್ಲ
ಸರ್ಜಿಕಲ್ ಸ್ಟ್ರೈಕ್ ವಿರುದ್ಧ ಬೊಗಳುತ್ತೆ. ತವಾಂಗ್ನಲ್ಲಿ ಭಾರತ ಚೀನಾ ಸಂಘರ್ಷ ನಡೆದ್ರೆ ಭಾರತ ವಿರುದ್ಧ ಬೊಗಳುತ್ತೆ ಆ ನಾಯಿ ನೀವು ಸಾಕಿರೋದು. ಆ ನಾಯಿ ಯಾವತ್ತೂ ಭಾರತ ಪರ ನಿಂತಿಲ್ಲ ಅರ್ಥ ಮಾಡಿಕೊಳ್ಳಿ. ನೀವು ಆ ನಾಯಿಯ ಪರ ವಕಾಲತ್ತು ವಹಿಸುತ್ತಿದ್ದೀರಿ ಎಂದು ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದರು.
ನೀವು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನ ಇಟಲಿ ನಾಯಿ ಅಂತಿದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಅವರವರ ಭಾವಕ್ಕೆ ತಕ್ಕಂತೆ ಎಂದು ಉತ್ತರ ನೀಡಿದರು.
ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ
1951ರಲ್ಲಿ ಜನಸಂಘ, 1980ರಲ್ಲಿ ಬಿಜೆಪಿ ಹುಟ್ಟಿತು.1951ರ ಬಳಿಕ ತುರ್ತು ಪರಿಸ್ಥಿತಿ ಹೇರಿದಾಗ ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ಮಾಡಲಾಯ್ತು. ಲಕ್ಷಾಂತರ ಜನಸಂಘ ಕಾರ್ಯಕರ್ತರು ಪ್ರಜಾಪ್ರಭುತ್ವ ರಕ್ಷಣೆಗೆ ಹೋರಾಟ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ವಾಧಿಕಾರಿಯಾದಂತಹ ಇಂದಿರಾ ಗಾಂಧಿಯನ್ನು ಅಧಿಕಾರದಿಂದ ಕೆಳಗಿಳಿಸಿ ಜನತಾ ಪಕ್ಷ ಅಧಿಕಾರಕ್ಕೆ ತಂದರು. ನಾವು ಸಂವಿಧಾನ ರಕ್ಷಣೆಗೆ ಹೋರಾಟ ಮಾಡಿದ್ದೀವಿ. ನೀವು ಆಗ ಯಾರರ ಓಲೈಕೆಯಲ್ಲಿ ತೊಡಗಿದ್ರಿ ಅಂತಾ ಆ ಸಂದರ್ಭದ ದಿನಮಾನ ನೆನಪಿಸಿಕೊಂಡರೆ ಅರ್ಥ ಆಗುತ್ತೆ ಎಂದರು.
ರಮೇಶ್ ಕುಮಾರ್ ಹೇಳಿಕೆ ಉಲ್ಲೇಖಿಸಿ ಟಾಂಗ್
ಸ್ವತಂತ್ರ ಭಾರತಕ್ಕೆ ಕಾಂಗ್ರೆಸ್ ಕೊಡುಗೆ ಕೊಟ್ಟಿದೆ ಅಂತಾ ಒಪ್ಪಿಕೊಳ್ಳೋಣ. ಆ ಕೊಡುಗೆ ಕೊಟ್ಟಿದ್ದು ಸ್ವಾತಂತ್ರ್ಯ ಭಾರತ ಲೂಟಿ ಮಾಡಕ್ಕಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದಂತೆ ನಾಲ್ಕೈದು ತಲೆಮಾರು ಜಮಾಯಿಸಿಕೊಳ್ಳೋದಕ್ಕಾ? ಬಿಜೆಪಿಯ ಒಂದು ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ ಅಂತಾ ಹೇಳ್ತಾ ಕಾಂಗ್ರೆಸ್ ನಾಯಿಗಳಿಗೆ ಸ್ವತಂತ್ರ ಭಾರತದಲ್ಲಿ ಫೈವ್ಸ್ಟಾರ್ ಸೌಲಭ್ಯ ಸಿಗಬೇಕು ಅಂತಾ ಲೂಟಿ ಹೊಡೆದಿದ್ದೀರಾ ಎಂದು ಪ್ರಶ್ನೆ ಮಾಡಿದರು.
ನಿಮ್ಮ ಮಾತು ನಾವು ಸ್ವತಂತ್ರ ಗಳಿಸಿಕೊಟ್ಟಿದ್ದೇವೆ. ನಾವು ಲೂಟಿ ಹೊಡೆಯೋಕೆ ಇರೋದು ಎಂಬ ಭಾವನೆ ವ್ಯಕ್ತಪಡಿಸುತ್ತಿದೆ. ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆಯಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ಕಾಂಗ್ರೆಸ್ ರೂಪಾಂತರಗೊಂಡಿದೆ.
ಇದನ್ನೂ ಓದಿ: Karnataka Politics: ನಿರಾಣಿ ನನ್ನ ಮುಂದೆ ಬಚ್ಚಾ, ಟಿಕೆಟ್ ಕೇಳೋಕೆ ನಮ್ಮ ಮನೆಗೆ ಬರ್ತಿದ್ದ; ಶಾಸಕ ಯತ್ನಾಳ್
ನೆಹರು ವಂಶಪಾರಂಪರೆಯ ಕಾಂಗ್ರೆಸ್
ಎ.ಓ.ಹ್ಯೂಮ್ 1885ರಲ್ಲಿ ಸ್ಟಾರ್ಟ್ ಮಾಡಿದ್ದ ಕಾಂಗ್ರೆಸ್, ಅದು ಸ್ವತಂತ್ರ ಭಾರತದ ಕನಸಿನ ಕಾಂಗ್ರೆಸ್ ಆಗಿರಲಿಲ್ಲ. ಸ್ವತಂತ್ರ ಗಳಿಸಿಕೊಡುವ ಕಾಂಗ್ರೆಸ್ ಆಗಿರಲಿಲ್ಲ. ಇನ್ನಷ್ಟು ಕಾಲ ಗುಲಾಮಗಿರಿ ನಡೆಯಬೇಕು. ಇಲ್ಲಿಯವರಿಗೆ ವೇದಿಕೆ ಕಲ್ಪಿಸಬೇಕು ಅಂತಾ ಎ.ಓ.ಹ್ಯೂಮ್ ತನ್ನ ಬುದ್ಧಿ ಉಪಯೋಗಿಸಿ ಸ್ಥಾಪಿಸಿದ್ದರು.
ಲಾಲ್-ಬಾಲ್-ಪಾಲ್ ಪ್ರವೇಶ ನಂತರ ಆ ಕಾಂಗ್ರೆಸ್ ಸತ್ತೋಯ್ತು. ಅದರ ನಂತರ ಗೋಪಾಲ ಕೃಷ್ಣ ಗೋಖಲೆ, ಮಹಾತ್ಮ ಗಾಂಧಿ ನೇತೃತ್ವ ಸಿಕ್ಕಿತು. ಅದರ ನಂತರ ಬಂದಿದ್ದು ನೆಹರು ವಂಶಪಾರಂಪರೆ, ಭ್ರಷ್ಟಾಚಾರ ಪ್ರೋತ್ಸಾಹಿಸಿದ್ದು ಎಂದು ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ