CM Ibrahim ಯಾವ ಪಾತ್ರಕ್ಕೂ ಬೇಕಾದ್ರು ಸೂಕ್ತವಾಗುವ ವ್ಯಕ್ತಿ: CT Ravi ವ್ಯಂಗ್ಯ

ಡಿಕೆ ಶಿವಕುಮಾರ್ ಗೆ ಸೋನಿಯಾ ಗಾಂಧಿ, ಬೊಮ್ಮಾಯಿಗೆ ಮೋದಿಯೇ ದೇವರು ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಸಿಟಿ ರವಿ

ಸಿಟಿ ರವಿ

  • Share this:
ದೇಶದ ಜನರೇ ಕಾಂಗ್ರೆಸ್ (Congress) ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ಡಿಕೆ ಶಿವಕುಮಾರ್ ಅವರು ತಮ್ಮನ್ನ ತಾವು ವೈಭವೀಕರಿಸಿಕೊಳ್ಳಬಹುದು. ಆದ್ರೆ ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ. ಅವರ ರಾಜಕೀಯ ಸಾಮರ್ಥ್ಯ ಸಾಬೀತು ಮಾಡಿರೋದು ಕನಕಪುರದಲ್ಲಷ್ಟೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (BJP Leader CT Ravi) ವಾಗ್ದಳಿ ನಡೆಸಿದರು. ಉಪ್ಪು ತಿಂದವ ನೀರು ಕುಡೀತಾರೆ, ತಪ್ಪು ಮಾಡಿದವ ಶಿಕ್ಷೆ ಅನುಭವಿಸುತ್ತಾರೆ. ಅವರು ಏನೂ ತಪ್ಪು ಮಾಡಿಲ್ಲ ಅಂದ್ರೆ ಆತಂಕ ಪಡುವ ಅವಶ್ಯಕತೆ ಇಲ್ಲ. ರಾಜಕೀಯದಲ್ಲಿ ಇದ್ದೇನೆಂದು ಶೆಲ್ಟರ್ ತೆಗೆದುಕೊಳ್ಳಲು ಆಗಲ್ಲ. ತಪ್ಪು ಮಾಡದೆ ಜೈಲಿಗೆ ಹೋದರೆ  ಅದೊಂದು ಶಕ್ತಿ ಆಗುತ್ತೆ. ತಪ್ಪು ಮಾಡಿದವರದ್ದು ರಾಜಕೀಯ ಅಂತ್ಯ ಆಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಯುಪಿಯಲ್ಲಿ ಮೈ ಲಡಕಿ ಹೂಂ, ಲಡ್ ಸಕ್ತಾ ಹೈ ಹೇ ಅಂತ ಪ್ರಿಯಾಂಕ ಗಾಂಧಿ ನೇತೃತ್ವ ಚುನಾವಣೆ ವಹಿಸಿದ್ರು. ಏನಾಯ್ತು..? 387 ಕ್ಷೇತ್ರದಲ್ಲಿ ಕಾಂಗ್ರೆಸ್ ಡೆಪಾಸಿಟ್ ಹೋಯ್ತು. ಅವರೇ ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಹೀನಾಯವಾಗಿ ಸೋತರು. ಆಮ್ ಆದ್ಮಿಗೆ ರೆಡ್ ಕಾರ್ಪೇಟ್ ಹಾಸಿ ಕರ್ಕೊಂಡ್ ಬಂದು ಅಧಿಕಾರದಲ್ಲಿ ಕೂರಿಸಿದರು. ದೇಶದ ಜನರೇ ಕಾಂಗ್ರೆಸ್ ತಿರಸ್ಕರಿಸಿರುವಾಗ ಡಿಕೆಶಿ ಟಾರ್ಗೆಟ್ ಮಾಡಿ ಏನಾಗಬೇಕು ಎಂದು ಪ್ರಶ್ನೆ ಮಾಡಿದರು.

ಸಿ.ಎಂ.ಇಬ್ರಾಹಿಂ ಹೇಳಿಕೆಗೆ ತಿರುಗೇಟು

ಡಿಕೆ ಶಿವಕುಮಾರ್ ಗೆ ಸೋನಿಯಾ ಗಾಂಧಿ, ಬೊಮ್ಮಾಯಿಗೆ ಮೋದಿಯೇ ದೇವರು ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಸಿ.ಟಿ.ರವಿ ಪ್ರತಿಕ್ರಿಯಿಸಿದರು. ಇಬ್ರಾಹಿಂ ಅವರನ್ನ ರಾಜಕೀಯ ವಿಧೂಷಕ ಅಂತಾರೆ, ನಾನು ಹಾಗೇ ಹೇಳಲ್ಲ. ಅವರನ್ನ ರಾಜಕೀಯದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಳ್ಳಲ್ಲ. ಸಿ.ಎಂ.ಇಬ್ರಾಹಿಂ ಅವರು ಎಲ್ಲಿ, ಯಾವ ಪಾತ್ರಕ್ಕೆ ಬೇಕಾದ್ರು ಸೂಕ್ತವಾಗುವ ವ್ಯಕ್ತಿ ಎಂದು ವ್ಯಂಗ್ಯ ಮಾಡಿದರು.

ಇದನ್ನೂ ಓದಿ:  PSI Scam: ಜೈಲಿನಲ್ಲಿ ಮುಖಾಮುಖಿಯಾದ ದಿವ್ಯಾ ಹಾಗರಗಿ & ಪತಿ ರಾಜೇಶ್; ಗಳಗಳನೇ ಕಣ್ಣೀರಿಟ್ಟ ದಂಪತಿ

ಇಬ್ರಾಹಿಂ ಅವರ ಹಳೆ ಕ್ಯಾಸೆಟ್ ಹಾಕಿ ನೋಡಿ

ಜನತಾ ಪಕ್ಷದಲ್ಲಿದ್ದಾಗ ಇಂದಿರಾಗಾಂಧಿ ಬಗ್ಗೆ  ಹೇಳಿದ್ದನ್ನ ನೆನಪು ಮಾಡಲು ನನ್ನಿಂದ ಆಗಲ್ಲ. ಕಾಂಗ್ರೆಸ್ ಬಂದಾಗ ದೇವೇಗೌಡರ ಬಗ್ಗೆ ಮಾತನಾಡಿದ್ದ ಹಳೇ ಕ್ಯಾಸೆಟ್ ಹಾಕಿ ನೋಡಿ. ಆಗ ಇಬ್ರಾಹಿಂಗೆ ದೇವೇಗೌಡರ ಮೇಲಿರೋ ಪ್ರಾಮಾಣಿಕ ಭಾವನೆ ಏನೆಂದು ವ್ಯಕ್ತವಾಗುತ್ತೆ ಎಂದು ತಿರುಗೇಟು ನೀಡಿದರು.

ನಾಯಕರನ್ನು ದೇವರ ಸ್ಥಾನದಲ್ಲಿ ನೋಡಲ್ಲ

ನಮಗೆ ಭಾರತ ಮಾತೆಯೇ ದೇವರು, ಎಲ್ಲಾ ದೇವರಿಗಿಂತ ಭಾರತಮಾತೆಯೇ ದೊಡ್ಡವಳು. ಅಟಲ್ ಜೀ, ಮೋದಿ, ಅಡ್ವಾಣಿ, ಅಮಿತ್ ಶಾ ನಮ್ಮ ನಾಯಕರು. ನಾಯಕರನ್ನ ನಾಯಕರ ಸ್ಥಾನದಲ್ಲೇ ನೋಡುತ್ತೇವೆ, ದೇವರ ಸ್ಥಾನದಲ್ಲಿ ಅಲ್ಲ ಎಂದರು.

ಇದನ್ನೂ ಓದಿ:   Child Adoption: ಇನ್ಮುಂದೆ ಪೋಷಕರಿಂದ ನೇರವಾಗಿ ಮಗುವನ್ನು ದತ್ತು ಪಡೆದುಕೊಳ್ಳುವುದು ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ

ದಲಿತ ಅಧಿಕಾರಿಯನ್ನು ಬಲಿ ಹಾಕಲು ರಾಷ್ಟ್ರೀಯ ಪಕ್ಷಗಳ ಷಡ್ಯಂತ್ರ: HDK ಆರೋಪ

ಕರ್ನಾಟಕದಲ್ಲಿ (Karnataka) ಸೇವೆ ಸಲ್ಲಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿಯೋರ್ವರು (Senior IPS Officer Resign)  ರಾಜೀನಾಮೆ ಸಲ್ಲಿಸಿದ್ದಾರೆ. ಅವಧಿಪೂರ್ವ ವರ್ಗಾವಣೆ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿದ್ದ  ರವೀಂದ್ರನಾಥ್ (Dr. P Ravindranath Resign) ರಾಜೀನಾಮೆ ಸಲ್ಲಿಸಿದ್ದಾರೆ. ರವೀಂದ್ರನಾಥ್ ರಾಜೀನಾಮೆ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಪ್ರತಿಕ್ರಿಯಿಸಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿಗಳು, ಸರ್ಕಾರ ಅವರ ರಾಜೀನಾಮೆಯನ್ನು (Resignation) ಅಂಗೀಕರಿಸಬಾರದು ಎಂದು ಆಗ್ರಹಿಸಿದ್ದಾರೆ.
Published by:Mahmadrafik K
First published: