ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ನಡುವಿನ ವಾಗ್ದಾಳಿ ಜೋರಾಗಿದೆ. ಚುನಾವಣಾ ಪ್ರಚಾರವನ್ನು (Election Campaign) ಬೀಸಿಗೊಳಿಸಿರುವ ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ (BJP) ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ (CT Ravi) ಅವರು ಕಾಂಗ್ರೆಸ್ (Congress) ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದು, ಬಿಜೆಪಿಗೂ ಕಾಂಗ್ರೆಸ್ ನಾಯಕರಿಗೂ ಇರುವ ವ್ಯತ್ಯಾಸ (Difference) ಏನು ಎಂದು ತಿಳಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ತಯಾರಾಗಿದ್ದೇವೆ
ಬ್ಯಾಡಗಿ ಪಟ್ಟಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಸಿ.ಟಿ ರವಿ ಅವರು, ಬಿಜೆಪಿಗೂ ಕಾಂಗ್ರೆಸ್ ಗೂ ನಮಗೂ ಅವರಿಗೂ ವ್ಯತ್ಯಾಸ ಗೊತ್ತಾ? ಮುಸ್ಲಿಮರಿಗೂ ಆಯ್ಕೆಯಿದೆ, ಶಿಶುನಾಳ ಷರೀಪ್ ಅವರೊಂದಿಗೆ ಗುರುತಿಸಿಕೊಂಡರೆ ನೀವೂ ನಮ್ಮವರೆ.
ಬಿನ್ ಲಾಡೆನ್ ಥರ ಗುರುತಿಸಿಕೊಂಡರೆ ನಾವು ರೆಡಿ ಇಟ್ಟುಕೊಂಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ತಯಾರಾಗಿದ್ದೇವೆ. ಬೆಂಕಿ ಹಾಕಲು ಬಂದರೆ ಯೋಗಿ ಆದಿತ್ಯನಾಥ್ ಥರ ಕರ್ನಾಟಕದಲ್ಲಿ ಬುಲ್ಡೋಜರ್ ಚಾಲು ಮಾಡುತ್ತೇವೆ.
ಇದನ್ನೂ ಓದಿ: Shivamogga ಡಿಸಿ ಕಚೇರಿ ಮುಂದೆ ಅಜಾನ್ ಕೂಗಿದ ಯುವಕ; ಇದಕ್ಕೆ BJP ಕಾರಣ ಎಂದ HDK
ನೀವು ಎಚ್ಚರಿಕೆಯಿಂದ ಯೋಚನೆ ಮಾಡಿ
ಒಂದು ವೇಳೆ ನೀವೂ ಒಸಾಮಾ ಬಿನ್ ಲಾಡೆನ್ ಆಗಿ ಬಂದರೆ ಮಟಾಸ್ ಆಗೋದು ಗ್ಯಾರಂಟಿ. ಜಿನ್ನಾನ ಮನಸ್ಥಿತಿ ಇಟ್ಟುಕೊಂಡು ಸಂಚು ಮಾಡಿದರೆ. ಒಪ್ಪಂದಕ್ಕೆ ಸಹಿ ಹಾಕಲು ಕಾಂಗ್ರೆಸ್ ಮತ್ತು ನೆಹರು ಈಗ ಇಲ್ಲ. ಇವತ್ತು ಇರೋದು ಬಿಜೆಪಿ, ಕೇಂದ್ರದಲ್ಲಿ ಮೋದಿ ಇದ್ದಾರೆ. ಹೀಗಾಗಿ ನೀವು ಎಚ್ಚರಿಕೆಯಿಂದ ಯೋಚನೆ ಮಾಡಿ ಎಂದು ಹಿಂದೂ ವಿರೋಧಿಗಳಿಗೆ ಖಡಕ್ ವಾರ್ನ್ ಮಾಡಿದರು.
ನಮ್ಮ ಊರಿನಲ್ಲಿ ಕರೆಂಟ್ ಇಲ್ಲ ಅಂತ ಓರ್ವ ಇಂಧನ ಸಚಿವರಾಗಿದ್ದ ಡಿಕೆ ಶಿವಕುಮಾರ್ಗೆ ಕರೆ ಮಾಡಿದ್ದ. ಅಂದು ಇಂಧನ ಸಚಿವನಾಗಿ ಕರೆಂಟ್ ಕೊಡುವ ಕೆಲಸ ಮಾಡಬೇಕಿತ್ತು. ಆದರೆ ಅಂದು ಮನಸ್ಸಿನಲ್ಲಿ ಕೊತವಾಲ್ ಬಂದ, ಪೋನ್ ಮಾಡಿದವನ್ನು ಬೆದರಿಸಿದ್ದರು. ಇಂತವರು ನಾಳೆ ಅಧಿಕಾರಕ್ಕೆ ಬಂದ ಬಳಿಕ ಉಚಿತ ವಿದ್ಯುತ್ ಕೊಡ್ತಾರಂತೆ.
ಬಾಂಬ್ ಇಡುವ ಜನ ನಮಗೆ ಬೇಡ
ನಾವು ಮುಸ್ಲಿಂ ವಿರೋಧಿಗಳಲ್ಲ, ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ. ಬಾಂಬ್ ಇಡುವ ಜನ ನಮಗೆ ಬೇಡ. ಸಂತ ಶಿಶುನಾಳ ಶರೀಫರ ರೀತಿಯ ಜನ ಬಂದರೆ ಬಾರಪ್ಪ ಅಂತ ಪೂಜೆ ಮಾಡುತ್ತೇವೆ. ಕುಕ್ಕರ್ ಬಾಂಬ್ ಹಾಕೋರು, ಬಿನ್ ಲಾಡಿನ್, ದಾವೂದ್ ಇಬ್ರಾಹಿಂ ಅಂತಹವರು ಕೆ.ಜಿ ಹಳ್ಳಿ ಡಿ ಜೆ ಹಳ್ಳಿ ಗಲಾಟೆ ಮಾಡಿದವರು ಡಿ ಕೆ ಬ್ರದರ್ಸ್. ನೀವು ಇಬ್ರಾಹಿಂ ಸೂತಾರ, ಶಿಶುನಾಳ ಶರೀಫ, ಅಬ್ದುಲ್ ಕಲಾಂ, ಅಬ್ದುಲ್ ಹಮೀದ್ ಆಗಿ ಬಂದರೆ ತಲೆ ಮೇಲೆ ಇಟ್ಟುಕೊಂಡು ಮೆರೆಸುತ್ತೇವೆ ಎಂದು ಹೇಳಿದರು.
ಹೊಸ ಮಸೀದಿ ಕಟ್ಟಿ, ನಾವು ಖುಷಿ ಪಡುತ್ತೇವೆ
ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಸಿ.ಟಿ ರವಿ ಅವರು, ಕಾಲ ಎಲ್ಲವನ್ನೂ ನಿರ್ಣಯ ಮಾಡುತ್ತೆ, ಕಾಲ ಎಲ್ಲವನ್ನೂ ನಿರ್ಣಯ ಮಾಡುತ್ತೆ. ಸ್ಪಷ್ಟವಾಗಿ ಹೇಳಿದ್ದೇನೆ, ಹೊಸ ಮಸೀದಿ ಕಟ್ಟಿ, ನಾವು ಖುಷಿ ಪಡುತ್ತೇವೆ. ದೇವಾಲಯ ಒಡೆದು ಮಸೀದಿ ಕಟ್ಟಿ ನಮಾಜ್ ಮಾಡಿದರೆ ಒಳ್ಳೆಯದು ಆಗಲು ಸಾಧ್ಯವೇ ಇಲ್ಲ.
ಏಕೆಂದರೆ ಹಿಂದೂಗಳ ಶಾಪ, ಆಕ್ರೋಶ, ನೋವು ಅವರಿಗೆ ಕಾಡಿರುತ್ತದೆ, ಅಲ್ಲಿ ಒಳ್ಳೆಯದಾಗಲ್ಲ. ಭೂಮಿ ವಿಶಾಲವಾಗಿದೆ, ದೊಡ್ಡ ಮಸೀದಿ ಕಟ್ಟಲಿ, ಪ್ರಾರ್ಥನೆ ಮಾಡಲಿ. ಹಿಂದೂಗಳ ದೇವಾಲಯ ಒಡೆದಿರುವುದು ನೋವು ಆಗಿರುತ್ತೆ, ಶಾಪ ಹಾಕುತ್ತಿರುತ್ತೇವೆ ಅದರಿಂದ ಅವರು ಉದ್ಧಾರ ಆಗಲ್ಲ. ಎಲ್ಲೆಲ್ಲಿ ದೇವಾಲಯಗಳನ್ನ ನಾಶ ಮಾಡಿ ಮಸೀದಿ ಕಟ್ಟಿದ್ದಾರೆ ಅವರ ಒಳ್ಳೆದಕ್ಕೆ ಬಿಟ್ಟುಕೊಡುವುದು ಒಳ್ಳೆದಾರಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: BS Yediyurappa: ಮಾದಪ್ಪನ ದರ್ಶನಕ್ಕೆ ಬರಲಿಲ್ಲ ಬಿಎಸ್ವೈ: ಬಿಜೆಪಿಯಲ್ಲಿ ನಿಲ್ಲದ ಯಡಿಯೂರಪ್ಪ, ಸೋಮಣ್ಣ ಮುನಿಸು!
ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ
ಶಿವಮೊಗ್ಗ ಡಿ.ಸಿ. ಕಚೇರಿ ಮೇಲೆ ಆಜಾನ್ ಕೂಗಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಇದರಿಂದ ಅವರ ಮಾನಸಿಕತೆ ಏನಿದೆ ಅಂತ ವ್ಯಕ್ತಗೊಳ್ಳುತ್ತದೆ. ವಿಧಾನಸೌಧದ ಮೇಲೆ ಕೂಗುತ್ತೇವೆ ಎಂಬ ದಾಸ್ಯ, ಜಿನ್ನಾ, ಬಿನ್ ಲಾಡೆನ್ ಮಾನಸಿಕತೆಗಿಂತ ಭಿನ್ನವಾಗಿಲ್ಲ. ಆ ಮಾನಸಿಕತೆಯನ್ನು ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ