CT Ravi: ಅವರು ಈಸ್ಟಮನ್ ಕಲರ್, ನಾನು ಬ್ಲಾಕ್ ಆ್ಯಂಡ್ ವೈಟ್: ಸಿ ಟಿ ರವಿ ಹೀಗಂದಿದ್ದು ಯಾರಿಗೆ ಗೊತ್ತೆ?

ಯತ್ನಾಳ್ ಅವರು ಈಸ್ಟ್ ಮನ್ ಕಲರ್, ನಾನು ಕಪ್ಪು ಬಿಳುಪು ಅನ್ನೋ ಮೂಲಕ ಸಿ.ಟಿ.ರವಿ ಸ್ವಪಕ್ಷೀಯ ನಾಯಕನಿಗೇ ಟಾಂಗ್ ಕೊಟ್ಟಿದ್ದಾರೆ. ಮುರುಘಾಶ್ರೀ ಕುರಿತು ಹೇಳಿರೋದನ್ನು ಯತ್ನಾಳ ದಕ್ಕಿಸಿಕೊಳ್ತಾರೆ, ಆ ಶಕ್ತಿ ನನಗಿಲ್ಲ ಎಂದಿದ್ದಾರೆ.

ಸಿ ಟಿ ರವಿ

ಸಿ ಟಿ ರವಿ

  • Share this:
ಹುಬ್ಬಳ್ಳಿ - ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ ಯತ್ನಾಳ (MLA Basanagowda Patil Yatnal) ಈಸ್ಟ್ ಮನ್ ಕಲರ್, ನಾನು ಬ್ಲಾಕ್ ಆ್ಯಂಡ್ ವೈಟ್ ಅನ್ನೋ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (BJP General Secretary CT Ravi) ಸ್ವಪಕ್ಷೀಯ ನಾಯಕನಿಗೇ ಪರೋಕ್ಷ ಟಾಂಗ್ ನೀಡಿದ್ದಾರೆ. ಹುಬ್ಬಳ್ಳಿಗೆ (Hubballi) ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ರವಿ, ಮುರಘಾಶ್ರೀಗಳ (Muruha Shri) ಈ ದುರ್ಗತಿಗೆ ಟಿಪ್ಪು ಸುಲ್ತಾನ್ ಹೊಗಳಿಕೆಯೇ ಕಾರಣ ಎಂದ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಮುರಘಾ ಶ್ರೀಗಳು ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯಿಂದ ಸತ್ಯ ಏನೂ ಅನ್ನುವುದು ಹೊರ ಬರುತ್ತದೆ. ಸತ್ಯ ಹೊಸ್ತಿಲು ದಾಟುವದರೊಳಗೆ, ಸುಳ್ಳು ಊರು ಸುತ್ತಿ ಬಂದಿರುತ್ತದೆ. ಇಲ್ಲಿ ಅಂತಿಮವಾಗಿ ಗೆಲ್ಲುವುದು ಸತ್ಯ ಎಂದರು.

ಸನಾತನ ಧರ್ಮದಲ್ಲಿ ಸತ್ಯಕ್ಕೆ ಗೆಲುವಿದೆ. ಟಿಪ್ಪುವಿನ‌ ಹೊಗಳಿಕೆ ಹಿನ್ನೆಲೆ ಸ್ವಾಮೀಜಿ ಈ ಸ್ಥಿತಿಗೆ ಕಾರಣ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,  ಅವರ ಈಸ್ಟಮನ್ ಕಲರ್ ವ್ಯಕ್ತಿ, ನಾನು ಬ್ಲ್ಯಾಕ್ ಆ್ಯಂಡ್ ವೈಟ್. ಅವರು ಏನೂ ಹೇಳಿದ್ರು ಅರಗಿಸಿಕೊಳ್ಳುವ ಶಕ್ತಿ ಇದೆ, ನನಗೆ ಆ ಶಕ್ತಿ ಇಲ್ಲ ಎಂದರು.

ಲಿಂಬಾವಳಿ ವರ್ತನೆಗೆ ಸಿ.ಟಿ.ರವಿ ಪರೋಕ್ಷ ಸಮರ್ಥನೆ

ಶಾಸಕ ಅರವಿಂದ್ ಲಿಂಬಾವಳಿ ಮಹಿಳೆ ಜೊತೆ ಯಾವ ಸಂದರ್ಭದಲ್ಲಿ ಅನುಚಿತ ವರ್ತನೆ ಮಾಡಿದ್ದಾರೆ ಅನ್ನೋದನ್ನು ನಾವು ತಿಳಿದುಕೊಳ್ಳಬೇಕು ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

BJP MLA Aravind Limbavali Yelling on woman mrq
ಮಹಿಳೆ ಮೇಲೆ ಲಿಂಬಾವಳಿ ದರ್ಪ


ಲಿಂಬಾವಳಿ ಘಟನೆಯ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ನಾವು? ಸಣ್ಣ ಪುಟ್ಟ ಘಟನೆಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕಾಗುತ್ತದೆ. ಸಮಾಜ ಒಪ್ಪುವ ರೀತಿಯಲ್ಲಿ ನಾವು ನಡೆದುಕೊಳ್ಳಬೇಕು. ಲಿಂಬಾವಳಿ ಯಾವ ಸಂದರ್ಭದಲ್ಲಿ ಹಾಗೆ ಮಾತನಾಡಿದರೆ ಅನ್ನೋದನ್ನ ನಾವು ಗಮನಿಸಬೇಕು ಅನ್ನೋ ಮೂಲಕ ಅರವಿಂದ್ ಲಿಂಬಾವಳಿ ಅವರನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ಇದನ್ನೂ ಓದಿ:  Murugha Mutt Case: ಮುರುಘಾ ಸ್ವಾಮೀಜಿಯ ಪ್ರಕರಣದ ಬಗ್ಗೆ ಮಾತನಾಡೋಕೆ ವಾಕರಿಕೆ ಎಂದ ಈಶ್ವರಪ್ಪ!

ಲಿಂಬಾವಳಿ ಹೇಳಿಕೆಯ ಮುಖಾಂತರ ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಳ್ಳುತ್ತಾರೆ? ಆದ್ರೆ ಪ್ರಿಯಾಂಕ್ ಖರ್ಗೆ ಹೇಳಿದ್ದೇ ಬೇರೆ, ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ್ದರು. ಅರವಿಂದ್ ಲಿಂಬಾವಳಿ ಸಂದರ್ಭವೇ ಬೇರೆ ಎಂದರು.

ಆಮ್ ಆದ್ಮಿ ಅಣಬೆ ರೀತಿಯ, ದಿಢೀರ್ ಹಂತ ಹುಟ್ಟಿ ದಿಢೀರನೇ ಸಾಯುತ್ತೆ

ನಾವು ರಾಷ್ಟ್ರವಾದ ಮತ್ತು ಅಭಿವೃದ್ಧಿ ಮೇಲೆ ಚುನಾವಣೆ ಮಾಡುತ್ತೇವೆ. ಆಮ್ ಆದ್ಮಿ ಹುಟ್ಟಿದ್ದು ಭ್ರಷ್ಟಾಚಾರದ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಅಲ್ಲ, ಕೇಜ್ರಿವಾಲ್ ಅಣ್ಣಾ ಹಜಾರೆಯವರನ್ನು ಮುಂದಿಟ್ಟುಕೊಂಡು ಯಾವ ಉದ್ದೇಶಕ್ಕೆ ಅಧಿಕಾರಿಕ್ಕೆ ಬಂದ್ರು. ಆ ಪಕ್ಷ ತನ್ನಷ್ಟಕ್ಕೆ ತಾನೇ ಮುಳುಗಿ ಹೋಗುತ್ತದೆ. ಆಮ್ ಆದ್ಮಿ ಅಣಬೆ ರೀತಿಯ, ದಿಢೀರ್ ಹಂತ ಹುಟ್ಟಿ ದಿಢೀರನೇ ಸಾಯುತ್ತದೆ. ಅದೇ ರೀತಿ ಬೇಗ ಬೆಳೆದು ಬಂದಿರುವುದು ಬೇಗ ಸಾಯುತ್ತದೆ. ಅದನ್ನ ನಾವು ಹತ್ಯೆ ಮಾಡುವುದು ಬೇಡ. ಅಪಾಯ ಏನಾದ್ರೂ ಇದ್ದರೆ ಆಮ್ ಆದ್ಮಿ ಪಕ್ಷದಲ್ಲಿದೆ. ನಮ್ಮಿಂದ ಅಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಜೋಡೋ ಬದ್ಲಿಗೆ ಚೋಡೋ ಯಾತ್ರೆ ಜೋರು

ಕಾಂಗ್ರೆಸ್ ಭಾರತ ಜೋಡೋ ನಡೆಸುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಚೋಡೋದಲ್ಲಿ ಮಗ್ನರಾಗಿದ್ದಾರೆ. ಮೊದಲು ಕಾಂಗ್ರೆಸ್ ನವರು ಪಕ್ಷ ಚೋಡೋ ದನ್ನು ಸರಿ ಮಾಡಿಕೊಳ್ಳಬೇಕಿದೆ. ಇಲ್ಲವಾದ್ರೆ ಪಕ್ಷದ ಬೋರ್ಡ್ ಹಾಕಲು ಕಾರ್ಯಕರ್ತರು ಸಿಗುವುದಿಲ್ಲ. ಕಾಂಗ್ರೆಸ್ ನೇತೃತ್ವ ಹೀನವಾಗಿದೆ. ಸಂಘಟನೆಗೆ ಸಂಬಂಧಿಸಿದಲ್ಲವವರು ಹೇಳಿಕೆ ನೀಡುತ್ತಿದ್ದಾರೆ. ಕೋವಿಡ್ ಬಂದಾಗ, 75 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಜನರ ಭಾವನೆಗಳನ್ನು ಕೂಡಿಸುವ ಪ್ರಯತ್ನವನ್ನ ಮೋದಿಯವರು ಮಾಡಿದ್ದಾರೆ.

ಕಾಂಗ್ರೆಸ್‌ಗೆ ನೀತಿ, ನೇತೃತ್ವ, ನಿಯತ್ತಿನ ಅವಶ್ಯಕತೆ

ಕಾಂಗ್ರೆಸ್​​ನವರಿಗೆ ಈಗ ಅವಶ್ಯಕತೆ ಇರುವುದು ಪಕ್ಷ ಜೋಡಿಸುವುದು. ಕಾಂಗ್ರೆಸ್‌ಗೆ ನೀತಿ, ನೇತೃತ್ವ, ನಿಯತ್ತಿನ ಅವಶ್ಯಕತೆ ಇದೆ. ಇಲ್ಲವಾದ್ರೇ ಪಕ್ಷಗಳು ಉಳಿದಿರುವ ಉದಾಹರಣೆ ಇಲ್ಲ. ಇವತ್ತಿನ ಕಾಂಗ್ರೆಸ್‌ಗೆ ನೀತಿ, ನೇತೃತ್ವ, ನಿಯತ್ತಿನ ಅವಶ್ಯಕತೆ ಇದೆ. ಹಿಮಾಚಲ, ಮಧ್ಯಪ್ರದೇಶ ಚುನಾವಣೆ ಫಲಿತಾಂಶ ಬಂದ ಮಾರನೆಯ ದಿನವೇ ಸಾಕಷ್ಟು ಕಾಂಗ್ರೆಸ್ ನಾಯಕರು ನಮ್ಮ ಪಕ್ಷ ಬರ್ತಾರೆ. ನವೆಂಬರ್ ನಂತ್ರ ನಮ್ಮ ರಾಜ್ಯದಲ್ಲಿ ಅನೇಕ ನಾಯಕರು ಕಾಂಗ್ರೆಸ್ ತೊರೆಯಲಿದ್ದಾರೆ ಎಂದು ಭವಿಷ್ಯ ನುಡಿದರು.

Bharat jodo yatra route map in Karnataka mrq
ರೂಟ್ ಮ್ಯಾಪ್


ಬಿಜೆಪಿಯ ನಾಯಕರು ಕಾಂಗ್ರೆಸ್ ಸೇರುವ ಪ್ರಶ್ನೆ ಇಲ್ಲ, ಯಾರು ಸಹ ಆತ್ಮಹತ್ಯೆಯ ಹಾದಿ ಹಿಡಿಯಲು ಮನಸ್ಸು ಮಾಡುವುದಿಲ್ಲ. ರಾಜ್ಯಧ್ಯಕ್ಷರ ಬದಲಾವಣೆ ಸದ್ಯಕ್ಕೆ ಇಲ್ಲ. ನಮ್ಮದು ವಂಶಪಾರಂಪರ್ಯ ಪಕ್ಷ ಅಲ್ಲ, ಪ್ರತಿ ಮೂರು ವರ್ಷಕ್ಕೊಮ್ಮೆ ನಮ್ಮ ಪಕ್ಷದ ಅಧ್ಯಕ್ಷರ ಚುನಾವಣೆ ನಡೆದಿದ್ದು ಇದೆ.

ಇದನ್ನೂ ಓದಿ: MLA Manjunath: ಸಂಸದರೇ ಬನ್ನಿ ಮಿಸ್ಟೇಕ್ ತೋರಿಸ್ತೀವಿ, ನೀವ್ ಯಾರಿಗೆ ಅಂಬಾಸಿಡರ್? JDS ಶಾಸಕ ಪ್ರಶ್ನೆ

ಯಡಿಯೂರಪ್ಪನವರನ್ನ ಕಟ್ಟಿ ಹಾಕವವರು ಯಾರು ಇಲ್ಲ

ಕಾಂಗ್ರೆಸ್ ಭಾರತ ಜೋಡೋ ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಭಾರತ ಜೋಡೋದಿಂದ ನಮಗೆ ಯಾವುದೇ ಭಯವಿಲ್ಲ. ಕಾಂಗ್ರೆಸ್ ಬಗ್ಗೆ ನಮಗೆ ಮರುಕ ಇದೆ, ಭಯವಿಲ್ಲ. ಆ ಪಕ್ಷದಲ್ಲಿ ಇರುವವರು ಆದಷ್ಟು ಬೇಗ ಆ ಪಕ್ಷ ತೊರೆಯಲಿ. ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಬದಲಾವಣೆ ಏನೂ ಇಲ್ಲ. ನಮ್ಮಲ್ಲಿ ನೀತಿಯೂ ಇದೆ, ನೇತೃತ್ವವೂ ಇದೆ.

ಯಡಿಯೂರಪ್ಪನವರು ಬಿಜೆಪಿಯನ್ನ ಬೆಳೆಸಿದ ನಾಯಕರು. ಬಿಜೆಪಿ ಯಡಿಯೂರಪ್ಪನವರು ಬೆಳೆಸಿದ ಪಕ್ಷ. ಯಡಿಯೂರಪ್ಪನವರನ್ನ ಕಟ್ಟಿ ಹಾಕವವರು ಯಾರು ಇಲ್ಲ. ಯಡಿಯೂರಪ್ಪನವರ ಪ್ರವಾಸ ಯೋಜನೆ ನಿಶ್ಚಿತವಾಗಿದೆ. ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅವರ ನೇತೃತ್ವದಲ್ಲಿ ಚುನಾವಣೆ ಎದುರುಸುತ್ತೇವೆ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯುತ್ತದೆ.  ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ಎಂದರು.
Published by:Mahmadrafik K
First published: