ನಾಳಿನ ಕರ್ನಾಟಕ ಬಂದ್​ಗೆ ಸಿದ್ದರಾಮಯ್ಯ ಬೆಂಬಲ ಹಾಸ್ಯಸ್ಪದ; ಸಿಟಿ ರವಿ ವ್ಯಂಗ್ಯ

ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂಬ ಸರೋಜಿನಿ ಮಹಿಷಿ ವರದಿ  ಒತ್ತಾಯಿಸಿ ನಾಳೆ ನಡೆಯಲಿರುವ ಬಂದ್​ಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಿದ್ದರಾಮಯ್ಯ ಟ್ವೀಟ್​ ಮೂಲಕ ತಿಳಿಸಿದ್ದರು.

ಸಿಟಿ ರವಿ- ಸಿದ್ದರಾಮಯ್ಯ

ಸಿಟಿ ರವಿ- ಸಿದ್ದರಾಮಯ್ಯ

  • Share this:
ಬೆಂಗಳೂರು (ಫೆ.12): ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿರುವುದು ಹಾಸ್ಯಸ್ಪದವಾಗಿದೆ ಎಂದು ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿ ಆಗ್ರಹಿಸಿ ನಾಳೆ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಆದರೆ, ಈ ವರದಿ ಮಂಡನೆ ದಿನ  ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್​​ ಸರ್ಕಾರ ಅಧಿಕಾರದಲ್ಲಿತ್ತು. ಆಗ ಅವರೇ ಈ ವರದಿ ಜಾರಿಗೆ ಪ್ರಯತ್ನ ಮಾಡಬಹುದಿತ್ತು. ಆದರೆ, ಮಾಡಲಿಲ್ಲ. ಈಗ ಅಧಿಕಾರದಿಂದ ಇಳಿದ ತಕ್ಷಣ ವರದಿ ಜಾರಿಗೆ ಒತ್ತಾಯ ಮಾಡುತ್ತಿದ್ದಾರೆ ಎಂದರು.

ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂಬ ಸರೋಜಿನಿ ಮಹಿಷಿ ವರದಿ  ಒತ್ತಾಯಿಸಿ ನಾಳೆ ನಡೆಯಲಿರುವ ಬಂದ್​ಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಿದ್ದರಾಮಯ್ಯ ಟ್ವೀಟ್​ ಮೂಲಕ ತಿಳಿಸಿದ್ದರು.

ಖಾತೆ ಬದಲಾವಣೆ ಸಿಎಂ ಪರಮಾಧಿಕಾರ

ಇನ್ನು ತಮ್ಮ ಬಳಿಯಿದ್ದ ಸಕ್ಕರೆ ಖಾತೆಯನ್ನು ಸಿಎಂ ವಾಪಸ್​ ಪಡೆದ ಕುರಿತು ಪ್ರತಿಕ್ರಿಯಿಸಿದ ಅವರು, ಖಾತೆ ಬದಲಾವಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಯಾವ ಖಾತೆ ನೀಡಿದರು ಪ್ರಶ್ನಿಸುವಂತಿಲ್ಲ. ನನ್ನ ಸಕ್ಕರೆ ಖಾತೆ ವಾಪಸ್ ಪಡೆದಿದ್ದಾರೆ. ಅನುದಾನ ಕೊಟ್ಟರೆ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ಯಶಸ್ವಿಯಾಗಿ ಖಾತೆ ನಿರ್ವಹಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನು ಓದಿ: ನನಗೆ ಸಚಿವ ಸ್ಥಾನ ಇಲ್ಲ; ರಮೇಶ್ ಕತ್ತಿಯನ್ನಾದರೂ ರಾಜ್ಯಸಭೆಗೆ ಕಳುಹಿಸಿ: ಉಮೇಶ್ ಕತ್ತಿ ಹೊಸ ಪಟ್ಟು

ಇದೇ ವೇಳೆ ಅರಣ್ಯ ಕಾಯ್ದೆ ನಿಯಮಾವಳಿ ಉಲ್ಲಂಘನೆ ಮಾಡಿದ ಆರೋಪ ಹೊಂದಿರುವ ಸಚಿವ ಆನಂದ್​ ಸಿಂಗ್ ಅವರಿಗೆ ಅರಣ್ಯ ಖಾತೆ ವಹಿಸಿದ ಕುರಿತ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ . ಇದು ಸಿಎಂಗೆ ಸಂಬಂಧಿಸಿದ ವಿಷಯ  ಎಂದು ಹೊರ ನಡೆದರು.
First published: