• Home
  • »
  • News
  • »
  • state
  • »
  • C T Ravi: ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ರಸ್ತೆ ಬದಿ ಕುಳಿತು ಗಿಳಿಶಾಸ್ತ್ರ ಕೇಳಿದ ಸಿ ಟಿ ರವಿ!

C T Ravi: ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ರಸ್ತೆ ಬದಿ ಕುಳಿತು ಗಿಳಿಶಾಸ್ತ್ರ ಕೇಳಿದ ಸಿ ಟಿ ರವಿ!

ಗಿಳಿಶಾಸ್ತ್ರ ಕೇಳಿದ ಸಿ ಟಿ ರವಿ

ಗಿಳಿಶಾಸ್ತ್ರ ಕೇಳಿದ ಸಿ ಟಿ ರವಿ

ಸಿಟಿ ರವಿ ಕೈ ರೇಖೆ ನೋಡಿ ಶಾಸ್ತ್ರ ಹೇಳಿದ ವ್ಯಕ್ತಿ, ನಿಮ್ಮ ಕೈ ರೇಖೆ ಚೆನ್ನಾಗಿದೆ. ನಿಮಗೆ ಎಲ್ಲೇ ಹೋದರೂ ಅನ್ನ ಸಿಗುತ್ತದೆ. ಬಟ್ಟೆ, ಅನ್ನಕ್ಕೆ ನಿಮಗೆ ಯಾವುದೇ ತೊಂದರೆಯಿಲ್ಲ. ನಿಮಗೆ ಎಲ್ಲವೂ ಒಳ್ಳೆಯದ್ದೇ ಆಗುತ್ತೆ ಎಂದು ನುಡಿದಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಹಾಸನ (ಅ.26): ಹಾಸನಾಂಬ ದೇವಿಯ (Hasanamba Temple) ದರ್ಶನದ ಕೊನೆಯ ದಿನವಾದ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕುಟುಂಬ (Family) ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ದೇವರ ದರ್ಶನ ಪಡೆದು ಹೊರಬಂದ ಸಿ.ಟಿ ರವಿ (C.T Ravi) ಹಾಸನಾಂಬೆಯ ದೇವಾಲಯ ಬಳಿ ಗಿಳಿ ಶಾಸ್ತ್ರ ಕೇಳಿದ್ದಾರೆ. ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಳಿ ಕಾರಿನಿಂದ ಇಳಿದು ಬಂದು ಶಾಸ್ತ್ರ (Shastra) ಕೇಳಿದ್ದಾರೆ. ಶಾಸ್ತ್ರ ಕೇಳುವ ಮುನ್ನ ಶಾಸ್ತ್ರ ಹೇಳುವವನ ಹೆಸರು, ಊರು, ಎಷ್ಟು ವರ್ಷದಿಂದ ಈ ವೃತ್ತಿಯನ್ನು ಮಾಡುತ್ತಿದ್ದೀರಾ ಎಂದು ವಿಚಾರಿಸಿದ್ದಾರೆ. ಸಿಟಿ ರವಿ ಕೈ ರೇಖೆ ನೋಡಿ ಶಾಸ್ತ್ರ ಹೇಳಿದ ವ್ಯಕ್ತಿ, ನಿಮ್ಮ ಕೈ ರೇಖೆ ಚೆನ್ನಾಗಿದೆ. ನಿಮಗೆ ಎಲ್ಲೇ ಹೋದರೂ ಅನ್ನ ಸಿಗುತ್ತದೆ. ಬಟ್ಟೆ, ಅನ್ನಕ್ಕೆ ನಿಮಗೆ ಯಾವುದೇ ತೊಂದರೆಯಿಲ್ಲ. ನಿಮಗೆ ಎಲ್ಲವೂ ಒಳ್ಳೆಯದ್ದೇ ಆಗುತ್ತೆ ಎಂದು ನುಡಿದಿದ್ದಾರೆ.


ನಿಮ್ಮ ಆರೋಗ್ಯದ ಬಗ್ಗೆ ಇರಲಿ ಜಾಗ್ರತೆ


ಅಷ್ಟೇ ಅಲ್ಲದೇ ನಿಮ್ಮ ಆರೋಗ್ಯ ಹಾಗೂ ನೀವು ಮಾಡುವ ಕೆಲಸದ ಬಗ್ಗೆ ನೀವು ಹೆಚ್ಚು ಜಾಗ್ರತೆ ವಹಿಸಬೇಕಿದೆ. ದಾನಧರ್ಮ ಮಾಡೋದ್ರಲ್ಲಿ ಉದಾರತೆ ಬೇಡ, ತಿಥಿ ಊಟ ಮಾಡೋದಕ್ಕೆ ಹೋಗಬೇಡಿ ಎಂದು ಕೈ ರೇಖೆ ನೋಡಿ ವ್ಯಕ್ತಿಯೊಬ್ಬರು ಸಿಟಿ ರವಿ ಭವಿಷ್ಯ ನುಡಿದಿದ್ದಾರೆ.


ಪ್ರೀತಂಗೌಡ ಪರ ಸಿ.ಟಿ.ರವಿ ಬ್ಯಾಟಿಂಗ್​


ಹಾಸನಾಂಬೆ ದೇವಿ ದರ್ಶನ ಪಡೆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕುಟುಂಬ ಸಮೇತವಾಗಿ ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ. ಸಿ.ಟಿ. ರವಿಗೆ ಶಾಸಕ ಪ್ರೀತಂಗೌಡ ಸಾಥ್ ನೀಡಿದ್ರು. ಸಚಿವ ಸಂಪುಟ ಪುನರ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಸಿಟಿ ರವಿ, ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಪ್ರೀತಂಗೌಡ್ರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಎಂಎಲ್‌ಎ ಆಗಿ ಇಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಮಂತ್ರಿಯಾದರೆ ಇನ್ನಷ್ಟು ಒಳ್ಳೆಯ ಕೆಲಸ ಮಾಡ್ತಾರೆ. ಮಂತ್ರಿ ಆಗುವ ಅವಕಾಶವಿದ್ದರೆ ಶುಭ ಹಾರೈಸುತ್ತೇನೆ ಎಂದು ಶಾಸಕ ಪ್ರೀತಂಗೌಡ ಪರ ಸಿ.ಟಿ.ರವಿ ಬ್ಯಾಟಿಂಗ್ ಮಾಡಿದ್ರು.


ಇದನ್ನೂ ಓದಿ:  Hubballi: ಚಿನ್ನದ ಆಸೆಗೆ ದೊಡ್ಡಮ್ಮನ ಕಿವಿಯನ್ನೇ ಕತ್ತರಿಸಿದ ಭೂಪ; ಕೊಲೆ ಮಾಡಿ ಬೀಗ ಹಾಕ್ಕೊಂಡು ಎಸ್ಕೇಪ್!


ಗಿಳಿಶಾಸ್ತ್ರ ಕೇಳಿದ ಸಿ ಟಿ ರವಿ


ಪಕ್ಷವನ್ನು ಮತ್ತೆ ಗೆಲ್ಲಿಸಿಕೊಂಡು ಬರುವವರಿಗೆ ಅವಕಾಶ


ಯಾವಾಗಲೂ ಲಾಸ್ಟ್ ಓವರ್‌ನಲ್ಲಿ ಸಿಕ್ಸರ್ ಹೊಡೆಯೋರು, ಫೋರ್ ಹೊಡೆಯೋರು ಬೇಕಾಗುತ್ತೆ. ಡಿಫೆನ್ಸ್ ಆಡೋಕೆ ಆಗಲ್ಲ, ಆರಂಭದಲ್ಲಿ ಕ್ರಿಕೆಟ್‌ನಲ್ಲಿ ಡಿಫೆನ್ಸ್ ಆಡಿಕೊಂಡು ಹೋಗಬಹುದು. ಸ್ಲಾಗ್ ಓವರ್ ಇದೆಯಲ್ಲಾ ಆಗ ಫೋರ್​, ಸಿಕ್ಸರ್ ಹೊಡೆಯಬೇಕಾಗುತ್ತೆ. ತಂಡ ಗೆಲ್ಲಬೇಕು ಅಂದಾಗ ಡಿಫೆನ್ಸ್‌ ಆಡೋರನ್ನ ಕಡೆಗೆ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್‌ನಲ್ಲಿ ಕಳ್ಸಲ್ಲ, ಕಡೆಗೆ ಕಳ್ಸೋದು ಫೋರು, ಸಿಕ್ಸರ್ ಹೊಡೆಯೋರನ್ನ. ಈಗ ಸಂಪುಟ ಪುನರ್ ರಚನೆ ಅಂತ ಆದರೆ ಇರುವ ಆರೇಳು ತಿಂಗಳಲ್ಲಿ ಫೋರು, ಸಿಕ್ಸರ್ ಹೊಡೆದು ಪಕ್ಷವನ್ನು ಮತ್ತೆ ಗೆಲ್ಲಿಸಿಕೊಂಡು ಬರುವವರಿಗೆ ಅವಕಾಶ ಸಿಗಬೇಕು ಎಂದು ಸಿಟಿ ರವಿ ಹೇಳಿದ್ರು.
ಇದನ್ನೂ ಓದಿ: Ramya Politics: ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರಾ ರಮ್ಯಾ? ಕುತೂಹಲಕ್ಕೆ ಕಾರಣವಾಯ್ತು ಪದ್ಮಾವತಿ ಟ್ವೀಟ್


ಸೋನಿಯಾ, ರಾಹುಲ್ ರಿಮೋಟ್ ಪರದಿ ಒಳಗೆ ಇರಿ


ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ರಾಜ್ಯದ ಒಬ್ಬರು ಐವತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಾನು ಅವರಿಗೆ, ಅವರ ಹಿರಿಯ ಅನುಭವವನ್ನು ಗಮನದಲ್ಲಿಟ್ಟುಕೊಂಡು ನಾನು ಕಿರಿಯನಾಗಿ ಒಂದು ಮಾತು ಹೇಳಲು‌ ಬಯಸುತ್ತೇನೆ. ಸೋನಿಯಾ, ರಾಹುಲ್ ರಿಮೋಟ್ ಪರದಿ ಒಳಗೆ ಇರಿ, ಹಾಗಿದ್ರೆ ಮಾತ್ರ ನಿಮ್ಮನ್ನ ಉಳಿಸುತ್ತಾರೆ. ನೀವು ಸ್ವಂತಿಕೆ ತೋರಿಸುವ ಪ್ರಯತ್ನ ಮಾಡಿದ್ರೆ, ಆ ಗಳಿಗೆ ಅಪಮಾನ ಮಾಡಿ ಕಿತ್ತಾಕುತ್ತಾರೆ. ಈ‌ ಹಿಂದೆ ನಿಜಲಿಂಗಪ್ಪ, ಸೀತಾರಂ ಕೇಸರಿ ಅವರಿಗೆ ಹೀಗೆ ಮಾಡಿದ್ರು ಎಂದು ಸಿಟಿ ರವಿ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: