HOME » NEWS » State » CT RAVI LEAVES TO DELHI AFTER HIS RESIGNATION TO BSY CABINET GETS ACCEPTED KGV SNVS

ಸಚಿವ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರ ಬೆನ್ನಲ್ಲೇ ದೆಹಲಿಗೆ ತೆರಳಿದ ಸಿ.ಟಿ. ರವಿ

ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ ಸಿಟಿ ರವಿ ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಅವರು ವರಿಷ್ಠರೊಂದಿಗೆ ಪಕ್ಷದ ಜವಾಬ್ದಾರಿ ಬಗ್ಗೆ ಮಾತನಾಡಲಿದ್ದಾರೆ.

news18-kannada
Updated:November 8, 2020, 10:21 AM IST
ಸಚಿವ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರ ಬೆನ್ನಲ್ಲೇ ದೆಹಲಿಗೆ ತೆರಳಿದ ಸಿ.ಟಿ. ರವಿ
ಸಚಿವ ಸಿ ಟಿ ರವಿ
  • Share this:
ಬೆಂಗಳೂರು(ನ. 08): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ನಿನ್ನೆ ಸಂಜೆಯ ಬಳಿಕ ಅಂಗೀಕಾರವಾಗಿದೆ. ಇದರ ಬೆನ್ನಲ್ಲೇ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಪಕ್ಷದ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅವರು ಮುಂದಾಗಿದ್ದಾರೆ.

ಸಿ ಟಿ ರವಿ ಅವರು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು. ಇತ್ತೀಚೆಗೆ ನಡೆದ ಪಕ್ಷದ ಪುನಾರಚನೆಯಲ್ಲಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿತ್ತು. ಪಕ್ಷದ ಹೊಣೆಗಾರಿಕೆ ಮತ್ತು ಸಚಿವ ಸ್ಥಾನ ಎರಡನ್ನೂ ಏಕಕಾಲಕ್ಕೆ ನಿಭಾಯಿಸಲು ಸಾಧ್ಯವಿಲ್ಲದ ಕಾರಣಕ್ಕೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಹಲವು ದಿನಗಳವರೆಗೆ ಅವರ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ನಿನ್ನೆ ಅಂಗೀಕಾರವಾಗಿದೆ.

ಇದನ್ನೂ ಓದಿ: ಆರ್ ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ: ಸಿಎಂ ಯಡಿಯೂರಪ್ಪ

ಸಿ.ಟಿ. ರವಿ ಅವರು ತಮಗೆ ಸಚಿವ ಸ್ಥಾನಕ್ಕಿಂತ ಪಕ್ಷದ ಸಂಘಟನೆಯಲ್ಲಿ ಹೆಚ್ಚು ಆಸಕ್ತಿ ಎಂದು ಹಲವು ಬಾರಿ ಹೇಳಿಕೊಂಡಿದ್ದುಂಟು. ಸಚಿವ ಸ್ಥಾನ ತಮ್ಮ ಶ್ರಮಕ್ಕೆ ಸಿಕ್ಕ ಫಲವಾಗಿತ್ತು. ತಾವು ಯಾವತ್ತೂ ಬಕೆಟ್ ಹಿಡಿದು ಸಚಿವ ಸ್ಥಾನ ಪಡೆದವನಲ್ಲ. ಹಾಗೆ ಮಾಡಿದ್ದರೆ 2012ಕ್ಕಿಂತ ಮುಂಚೆಯೇ ಸಚಿವನಾಗಬಹುದಿತ್ತು ಎಂದೂ ತಮ್ಮ ವಿರೋಧಿಗಳನ್ನ ಅವರು ಕುಟುಕಿದ್ದರು.

ವರದಿ: ಕೃಷ್ಣ ಜಿ.ವಿ.
Published by: Vijayasarthy SN
First published: November 8, 2020, 10:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading