ಕನ್ನಡಿಗರ ಅಸ್ಮಿತೆ ಬಗ್ಗೆ ಕೆಣಕಿದರೆ ಸುಮ್ಮನಿರೊಲ್ಲ: ಶಿವಸೇನೆ, ಫಡ್ನವಿಸ್​ಗೆ ಸಿ.ಟಿ. ರವಿ ಎಚ್ಚರಿಕೆ

“ಕೈಲಾಗದವರು ಮೈ ಪರಚಿಕೊಂಡಂತೆ ಶಿವಸೈನಿಕರ ವಾದವಾಗಿದೆ. ಮಹಾರಾಷ್ಟ್ರದಲ್ಲಿರುವ ಬಡತನ, ನಿರುದ್ಯೋಗ ಹಾಗೂ ರೈತರ ಸಮಸ್ಯೆ ಬಗೆಹರಿಸುವ ಕೆಲಸ ಮೊದಲು ಮಾಡಲಿ. ಸಾಧ್ಯವಾಗದ ಕೆಲಸದ ಬಗ್ಗೆ ಮೈ ಪರಚಿಕೊಳ್ಳುವುದನ್ನು ನಿಲ್ಲಿಸಲಿ” ಎಂದು ಸಿಟಿ ರವಿ ಬುದ್ಧಿವಾದ ಹೇಳಿದ್ದಾರೆ.

news18
Updated:December 30, 2019, 11:40 AM IST
ಕನ್ನಡಿಗರ ಅಸ್ಮಿತೆ ಬಗ್ಗೆ ಕೆಣಕಿದರೆ ಸುಮ್ಮನಿರೊಲ್ಲ: ಶಿವಸೇನೆ, ಫಡ್ನವಿಸ್​ಗೆ ಸಿ.ಟಿ. ರವಿ ಎಚ್ಚರಿಕೆ
ಸಿ.ಟಿ. ರವಿ
  • News18
  • Last Updated: December 30, 2019, 11:40 AM IST
  • Share this:
ಬೆಂಗಳೂರು(ಡಿ. 30): ಮಹಾರಾಷ್ಟ್ರದ ಭಾಗವನ್ನು ಕರ್ನಾಟಕ ಆಕ್ರಮಿಸಿಕೊಂಡಿದೆ. ಮರಾಠಿಗರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಶಿವಸೇನೆ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಮಾಡಿರುವ ಆರೋಪವನ್ನು ಸಚಿವ ಸಿ.ಟಿ. ರವಿ ಖಂಡಿಸಿದ್ದಾರೆ. ಪ್ರಾದೇಶಿಕ ಭಾವನೆ ಕೆರಳಿಸುತ್ತಿರುವ ಶಿವಸೈನಿಕರು ಮತ್ತು ದೇವೇಂದ್ರ ಫಡ್ನವಿಸ್ ಹೇಳಿಕೆ ಖಂಡನಾರ್ಹ. ಕನ್ನಡಿಗರ ಅಸ್ಮಿತೆ ಬಗ್ಗೆ ಯಾರಾದರೂ ಕೆಣಕಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆದ ಅವರು ಎಚ್ಚರಿಕೆ ನೀಡಿದ್ಧಾರೆ.

ಮರಾಠಿ ಭಾಷಿಕರು ಹೆಚ್ಚಿರುವ ಬೆಳಗಾವಿ, ಕಾರವಾರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದಾಗಿವೆ. ಅವು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶಗಳಾಗಿವೆ ಎಂದು ನಿನ್ನೆ ಬಿಜೆಪಿ ನಾಯಕ ಹಾಗೂ ಮಾಜಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿಕೆ ನೀಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು ಸಿಟಿ ರವಿ, ಮಹಾರಾಷ್ಟ್ರದಲ್ಲಿ ಕನ್ನಡಿಗರು ಪ್ರಾಬಲ್ಯ ಇರುವ ಪ್ರದೇಶಗಳೂ ಇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮರಾಠಿಗರಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ ಎಂದು ಕರ್ನಾಟಕಕ್ಕೆ ಎಚ್ಚರಿಕೆ ಕೊಟ್ಟ ದೇವೇಂದ್ರ ಫಡ್ನವಿಸ್

“ದೇವೇಂದ್ರ ಫಡ್ನವಿಸ್ ಈ ರೀತಿ ಹೇಳಿಕೆ ನೀಡಿರುವದು ಬಾಲಿಶ ಎನಿಸುತ್ತದೆ. ಅಕ್ಕಲಕೋಟೆ, ಸಾಂಗ್ಲಿ, ಕೊಲ್ಲಾಪುರ ಮೊದಲಾದ ಕಡೆ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ಹಾಗೆಂದು ಆ ಪ್ರದೇಶಗಳನ್ನು ಮಹಾರಾಷ್ಟ್ರ ವಶಪಡಿಸಿಕೊಂಡಿದೆ ಎಂದರೆ ಮೂರ್ಖತನದ್ದಾಗುತ್ತದೆ” ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆದು ಅಖಂಡ ಭಾರತ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ಧಾರೆ. ಈಗ ನಮ್ಮ ನೆರೆ ರಾಜ್ಯಗಳು ಭಾಷೆ ಆಧಾರದ ಮೇಲೆ ದೇಶದೊಳಗೆ ವಿಭಜನೆಗೆ ಪ್ರಯತ್ನಿಸುತ್ತಿರುವುದು ಸರಿಯಲ್ಲ. ಕರ್ನಾಟಕದ ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರವಾಸೋದ್ಯ ಸಚಿವರೂ ಆದ ಅವರು ಮಹಾರಾಷ್ಟ್ರಕ್ಕೆ ಖಡಕ್ ಸಂದೇಶ ರವಾನಿಸಿದ್ಧಾರೆ.

ಇದನ್ನೂ ಓದಿ: ಬೆಳಗಾವಿ ಗಡಿಭಾಗ ಉದ್ವಿಗ್ನ; ಶಿವಸೇನೆ ಪುಂಡಾಡಿಕೆ; ಕನ್ನಡ ಚಿತ್ರ ಪ್ರದರ್ಶನಕ್ಕೆ ಅಡ್ಡಿ; ಬೀದಿಗಿಳಿದ ಕನ್ನಡಪರ ಸಂಘಟನೆಗಳು

ಕನ್ನಡಿಗರು ಮತ್ತು ಬೆಳಗಾವಿ ಬಗ್ಗೆ ಕ್ಯಾತೆ ತೆಗೆಯುತ್ತಿರುವ ಶಿವಸೇನಾ ಪಕ್ಷವನ್ನೂ ತರಾಟೆಗೆ ತೆಗೆದುಕೊಂಡ ಸಿ.ಟಿ. ರವಿ, “ಕೈಲಾಗದವರು ಮೈ ಪರಚಿಕೊಂಡಂತೆ ಶಿವಸೈನಿಕರ ವಾದವಾಗಿದೆ. ಮಹಾರಾಷ್ಟ್ರದಲ್ಲಿರುವ ಬಡತನ, ನಿರುದ್ಯೋಗ ಹಾಗೂ ರೈತರ ಸಮಸ್ಯೆ ಬಗೆಹರಿಸುವ ಕೆಲಸ ಮೊದಲು ಮಾಡಲಿ. ಸಾಧ್ಯವಾಗದ ಕೆಲಸದ ಬಗ್ಗೆ ಮೈ ಪರಚಿಕೊಳ್ಳುವುದನ್ನು ನಿಲ್ಲಿಸಲಿ” ಎಂದು ಬುದ್ಧಿವಾದ ಹೇಳಿದ್ದಾರೆ.ಬೆಳಗಾವಿ ಮತ್ತು ಕಾರವಾರದಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯ ಹೆಚ್ಚಿದೆ. ಈ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ವಾದವಿದೆ. ಅದಕ್ಕಾಗಿಯೇ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆ ಸ್ಥಾಪನೆಯಾಗಿ ರಾಜಕೀಯವಾಗಿಯೂ ಬೆಳೆದಿದೆ. ಹಲವು ವರ್ಷಗಳಿಂದ ಈ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಬೆಳಗಾವಿಯಲ್ಲಿ ಕನ್ನಡಿಗರ ವಿರುದ್ಧ ಪುಂಡಾಟ ನಡೆಸುತ್ತಾ ಬಂದಿದೆ. ಬೆಳಗಾವಿ, ಕಾರವಾರ ಮೊದಲಾದ ಕಡೆ ಮರಾಠಿ ಭಾಷಿಕರು ಪ್ರಾಬಲ್ಯ ಇರುವ ಸುಮಾರು 800 ಗ್ರಾಮಗಳನ್ನು ಗುರುತಿಸಿರುವ ಎಂಇಎಸ್ ಸಂಘಟನೆಯು ಆ ಪಟ್ಟಿಯನ್ನು ಶಿವಸೇನೆಗೂ ನೀಡಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ