• Home
  • »
  • News
  • »
  • state
  • »
  • CT Ravi: ಸಿದ್ದರಾಮಯ್ಯ ತಾವು ಉಡುವ ಪಂಚೆಯಷ್ಟೇ ಪರಿಶುದ್ಧವಾಗಿದ್ದಾರಾ?

CT Ravi: ಸಿದ್ದರಾಮಯ್ಯ ತಾವು ಉಡುವ ಪಂಚೆಯಷ್ಟೇ ಪರಿಶುದ್ಧವಾಗಿದ್ದಾರಾ?

ಸಿದ್ದರಾಮಯ್ಯ, ಸಿಟಿ ರವಿ

ಸಿದ್ದರಾಮಯ್ಯ, ಸಿಟಿ ರವಿ

ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರಕ್ಕೆ ಇವರನ್ನಲ್ಲೇ ಕೇವಲ ಪರಪ್ಪನ ಅಗ್ರಹಾರಕ್ಕೆ‌ ಹಾಕೋದಲ್ಲ. ಕಾಂಗ್ರೆಸ್ ನಾಯಕರು ತಿಹಾರ್ ಜೈಲಲ್ಲೇ ಇರಬೇಕು ಎಂದು ಸಿಟಿ ರವಿ ಹೇಳಿದ್ದಾರೆ.

  • Share this:

ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ಸಿಟಿ ರವಿ (C T Ravi ಅವರು ಕಿಡಿಕಾರಿದ್ದಾರೆ. ಅರ್ಕಾವತಿ ರೀಡು ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ ಸಿದ್ದರಾಮಯ್ಯ, ಹಗಲು ದರೋಡೆ ಮಾಡಿದವರು ಎಂದ್ರು. ಸಿದ್ದರಾಮಯ್ಯ ಕೈಗೆ ಹ್ಯಾಂಡ್ ಗ್ಲೌಸ್ (Hand Gloves) ಹಾಕಿ ಅಕ್ರಮ ಮಾಡಿದ್ದಾರೆ. ಹೀಗಾಗಿ ಅವರ ಫಿಂಗರ್ ಪ್ರಿಂಟ್ ಕಾಣ್ತಾ ಇಲ್ಲ. ಅವ್ರು ಅಕ್ರಮ (Scam) ಮಾಡಿದ್ದು ಸುಳ್ಳಾ? ಸಿದ್ದರಾಮಯ್ಯ ಉಡುವಷ್ಟು ಪಂಚೆಯಷ್ಟೇ ಕ್ಲೀನ್ ಇದ್ದಾರಾ? ಎಂದು ಸಿಟಿ ರವಿ ಪ್ರಶ್ನೆ ಮಾಡೋ ಮೂಲಕ ವಾಗ್ದಾಳಿ ನಡೆಸಿದ್ದಾರೆ.


ಡಿ.ಕೆ ಶಿವಕುಮಾರ್ ಭ್ರಷ್ಟರು ಹೌದಾ? ಇಲ್ವಾ?


ಡಿ.ಕೆ ಶಿವಕುಮಾರ್ ಭ್ರಷ್ಟರು ಹೌದೋ? ಇಲ್ಲವೋ ಎನ್ನುವುದನ್ನು ಜನಸಾಮಾನ್ಯರನ್ನೇ ಒಮ್ಮೆ ಕೇಳಿ ಅಥವಾ ಮಾಧ್ಯಮ ನೀವೇ ಹೇಳಿ ಡಿಕೆಶಿ ಕ್ಲೀನಾ? ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ರು. ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರಕ್ಕೆ ಇವರನ್ನಲ್ಲೇ ಕೇವಲ ಪರಪ್ಪನ ಅಗ್ರಹಾರಕ್ಕೆ‌ ಹಾಕೋದಲ್ಲ. ಕಾಂಗ್ರೆಸ್ ನಾಯಕರು ತಿಹಾರ್ ಜೈಲಲ್ಲೇ ಇರಬೇಕು ಎಂದು ಸಿಟಿ ರವಿ ಹೇಳಿದ್ದಾರೆ.


ಕಾಂಗ್ರೆಸ್ ಮುಟ್ಟಾಳರು – ಸಿಟಿ ರವಿ


ಕಾಂಗ್ರೆಸ್ ಮುಟ್ಟಾಳರು ಭಜರಂಗದಳ, ಆರ್ ಎಸ್ ಬ್ಯಾನ್​ ಯಾವಾಗ ಅಂತಾರೆ. RSS, ಭಜರಂಗದಳ ದೇಶ ಪ್ರೇಮ, ದೇಶ ಸೇವೆ ಮಾಡುವ ಸಂಘಟನೆ, ಇವರದ್ದು ದೇಶ ಒಡೆಯುವ ಸಂಘಟನೆ, ಒಮ್ಮೆ ಪಾಕಿಸ್ತಾನವಾಗಿ ಇಬ್ಭಾಗ ಆಗಿದೆ. ಈಗ ಮತ್ತೆ ದೇಶ ಒಡೆಯುವ ಪ್ರಯತ್ನ ಸಹಿಸಲ್ಲ. ಕೆಲಸ ಇಲ್ಲದೆ ಭಯೋತ್ಪಾದಕ ಕೆಲಸ ಮಾಡ್ತಾರೆ ಅಂದ್ರೆ ಅಂತಹವರನ್ನು ಪಾಕಿಸ್ತಾನಕ್ಕೆ ಕಳಿಸೋಣ , ಅಲ್ಲೇ ಇರಲಿ ‌.. ಅಲ್ಲೇ ಜನ್ನತ್ ಸಿಗಲಿ (ಸ್ವರ್ಗ) ಎಂದು ಸಿಟಿ ರವಿ ಹೇಳಿದ್ದಾರೆ.
ಸಿದ್ದರಾಮಯ್ಯ ಇದೊಂದಕ್ಕೆ ಉತ್ತರ ಕೊಡಲಿ


ಅನ್ವರ್ ಮಾನಪಾಡಿ ವರದಿಯನ್ನು 2017ರಲ್ಲಿ ಸಿದ್ದರಾಮಯ್ಯ ಮುಚ್ಚಿ ಹಾಕಿದ್ದು ಯಾಕೆ? ಲೋಕಾಯುಕ್ತ ವರದಿ ನೀಡಿದ್ದನ್ನೇ ಮುಚ್ಚಿಹಾಕಿದ್ದು ಯಾಕೆ? ಸಿದ್ದರಾಮಯ್ಯರಿಗೆ ಇಂದೊಂದು ಕೇಳಿ ಸಾಕು, ರೀಡು ಎಂಬ ಹೊಸ ಹೆಸರು ನೀಡಿದ್ದು ಯಾಕೆ? ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಲಿ ಸಾಕು, ಅನ್ವರ್ ಮಾನಪಾಡಿ ವರದಿ ನಮ್ಮ ಸರ್ಕಾರ ಮಂಡಿಸಿದೆ ಎಂದು ಸಿಟಿ ರವಿ ಹೇಳಿದ್ದಾರೆ.


ರೀಡೂ ಪ್ರಕರಣ ಕುರಿತ ವರದಿ ಮಂಡನೆಗೆ ಆಗ್ರಹ


ರೀಡೂ ಪ್ರಕರಣ ಕುರಿತು ನ್ಯಾ. ಕೆಂಪಣ್ಣ ವರದಿ ಮಂಡನೆ ಮಾಡಿ, ಕೆಂಪಣ್ಣ ವರದಿಯನ್ನು ಸದನದಲ್ಲಿ ಮಂಡನೆ ಮಾಡಲಿ ಆಗ ಭ್ರಷ್ಟರು ಯಾರು ಅಂತ ಗೊತ್ತಾಗುತ್ತೆ. ಸಿದ್ದರಾಮಯ್ಯ ಭ್ರಷ್ಟರಾ ಅಥವಾ ಪ್ರಾಮಾಣಿಕರಾ ಅಂತ ಗೊತ್ತಾಗಲಿ. ಜನಕ್ಕೂ ಗೊತ್ತಾಗಲಿ ಎನ್ನುವ ಮೂಲಕ ಅರ್ಕಾವತಿ ರೀಡೂ ಪ್ರಕರಣ ಕುರಿತ ವರದಿ ಮಂಡನೆಗೆ ಸಿಟಿ ರವಿ ಆಗ್ರಹಿಸಿದ್ದಾರೆ.


ಸಾಕ್ಷ್ಯಾಧಾರ ಸಿಕ್ಕಿದ್ರೆ ಪಿಎಫ್ಐ ನಿಷೇಧ


ಈಗಷ್ಟೇ ಎನ್ಐಎ ದಾಳಿ ನಡೆದಿದ್ದು, ಪಿಎಫ್ಐ ವಿರುದ್ಧ ಸಾಕ್ಷಾಧಾರ ಸಂಗ್ರಹಿಸ್ತಿದ್ದಾರೆ. ಹಿಂದಿನ ಘಟನೆಗಳಲ್ಲಿ ಸಾಕ್ಷ್ಯ ಸಂಗ್ರಹ ನಡೀತಿದೆ ಪಿಎಫ್ಐ ನಿಷೇಧ ಬಗ್ಗೆ ಈಗಲೇ ನಾನು ಏನೂ ಹೇಳಲ್ಲ. ಹಿಂದೆ ಸಿಮಿ ಸಂಘಟನೆ ಇತ್ತು. ಅದರ ದೇಶದ್ರೋಹದ ಕಾರಣಕ್ಕಾಗಿ ನಿಷೇಧ ಆಯ್ತು. ಪಿಎಫ್ಐ ವಿರುದ್ಧವೂ ಸಾಕ್ಷ್ಯಾಧಾರ ಸಿಕ್ಕಿದರೆ ಅದೂ ಕೂಡಾ ನಿಷೇಧ ಆಗುತ್ತೆ ಎಂದು ಸಿಟಿ ರವಿ ಹೇಳದ್ರು.


ಇದನ್ನೂ ಓದಿ: Congress Leaders: ಮೊದಲು ಕಮಿಷನ್ ಆರೋಪ ಮಾಡಿದ್ದು ಮೋದಿ; ಈಗ ಹೇಳಿ ಡರ್ಟಿ ಪಾಲಿಟಿಕ್ಸ್​ ಮಾಡಿದ್ದು ಯಾರು?


ಗುಂಡೂರಾವ್ ಸಿಎಂ ಆಗಿದ್ದಾಗ ಅವರ ಕಾಲಘಟ್ಟದಲ್ಲಿ ಆಗಿರುವ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಇತ್ತು ಅಂತ ನಾನು ಹೇಳಲ್ಲ, ಆದರೆ ಇವರ ಕಾಲಘಟ್ಟದಲ್ಲಿ ಆಗಿರುವ ಹಗರಣಕ್ಕೆ ಇವರೇ ಜವಾಬ್ದಾರಿ ಹೊರಬೇಕು ಜನರು ಕಾಂಗ್ರೆಸ್ ಪಕ್ಷವನ್ನು ಭ್ರಷ್ಟರು.. ಒಂದು ಧರ್ಮಕ್ಕೆ ಸುಣ್ಣ ಇನ್ನೊಂದು ಧರ್ಮಕ್ಕೆ ಬೆಣ್ಣೆ ನೀತಿ ಅನುಸರಿಸುತ್ತಾರೆ ಅಂತಾನೇ ಅಧಿಕಾರದಿಂದ ಕೆಳಗಡೆ ಇಳಿಸಿದ್ದು ಎಂದು ಸಿಟಿ ರವಿ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: