• Home
  • »
  • News
  • »
  • state
  • »
  • Amit Shah: ಅಮಿತ್ ಶಾ ಒಳ್ಳೆಯ ಬ್ಯಾಟ್ಸ್​ಮನ್ , ಪಿಚ್ ಯಾವುದಾದರೇನು? ಸಿ ಟಿ ರವಿ ಹೇಳಿಕೆ

Amit Shah: ಅಮಿತ್ ಶಾ ಒಳ್ಳೆಯ ಬ್ಯಾಟ್ಸ್​ಮನ್ , ಪಿಚ್ ಯಾವುದಾದರೇನು? ಸಿ ಟಿ ರವಿ ಹೇಳಿಕೆ

ಸಿ ಟಿ ರವಿ

ಸಿ ಟಿ ರವಿ

ಹಿಂದುತ್ವ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಚುನಾವಣೆ ಎದುರಿಸುತ್ತೇವೆ. ಹಳೆ ಮೈಸೂರು ಭಾಗದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಅದರ ರಿಪೋರ್ಟ್​ ಕಾರ್ಡ್​ ಜನರ ಮುಂದೆ ಇರಿಸಿ ಮತ ಕೇಳುತ್ತೇವೆ ಎಂದು ಹೇಳಿದರು.

  • Share this:

ಇಂದು ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (BJP National General Secretary CT Ravi) ಮಾಧ್ಯಮಗಳ ಜೊತೆ ಮಾತನಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಅವರ ರಾಜ್ಯ ಪ್ರವಾಸದ ಮಾಹಿತಿಯನ್ನು ನೀಡಿದರು. ಒಳ್ಳೆಯ ಬ್ಯಾಟ್ಸ್​​ಮನ್​​ಗೆ ಪಿಚ್ ಯಾವುದಾದರೇನು? ಆ ರೀತಿಯ ಒಳ್ಳೆಯ ಬ್ಯಾಟ್ಸ್​ಮನ್​ ಗಳಲ್ಲಿ ಒಬ್ಬರು ಅಮಿತ್ ಶಾ. ಅವರು ಎಲ್ಲಾ ಪಿಚ್​​​ಗಳಲ್ಲೂ ಚೆನ್ನಾಗಿ ಆಟ ಆಡುತ್ತಾರೆ. ಹಳೆ ಮೈಸೂರು ಭಾಗದಲ್ಲಿ ಒಳ್ಳೆಯ ಆಟ ಇದೆ. ಆ ಜಿಲ್ಲೆಗಳನ್ನು ಯಾರೂ ಯಾರಿಗೂ ಬರೆದುಕೊಟ್ಟಿಲ್ಲ. ಯಾವುದೇ ಜಿಲ್ಲೆಯನ್ನೂ ಯಾರಿಗೂ ಜಹಾಗೀರ್ ಕೊಟ್ಟಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೂ ಜಹಾಗೀರ್ ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.


ಮಂಡ್ಯದ ಜನ ಕುಮಾರಸ್ವಾಮಿ ಅವರಿಗೆ  ಚುನಾವಣೆ ಅನ್ನೋದು ಏನು ಅಂತ ಆಗ್ಗಾಗ್ಗೆ ತೋರಿಸಿದ್ದಾರೆ. ಹೀಗಾಗಿ ಹಳೆ ಮೈಸೂರು ಭಾಗವನ್ನು ಈ ಬಾರಿ ಹೆಚ್ಚು ಫೋಕಸ್ ಮಾಡಿದ್ದೇವೆ. ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆ ಎಂದು ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದರು.


ಹೈದರಾಬಾದ್​​ನಲ್ಲಿ ಬಿಜೆಪಿ ದಕ್ಷಿಣ ಭಾರತದ ವಿಸ್ತಾರಕ್ ಸಭೆಯಲ್ಲಿ ಚುನಾವಣೆ ಮತ್ತು ಪಕ್ಷಸಂಘಟನೆ ಬಗ್ಗೆ ಚರ್ಚೆ ಆಗುತ್ತದೆ ಎಂದು ಹೇಳಿದರು.


ಜೆಡಿಎಸ್ ವಿರುದ್ಧ ವಾಗ್ದಾಳಿ


ಒಂದು ಕಾಲದಲ್ಲಿ ನಾವು ಹೇಗಿದ್ದೀವಿ? ಈಗ ಹೇಗದ್ದೇವೆ ಎಂಬುವುದು ಎಲ್ಲರಿಗೂ ಕಾಣುತ್ತಿದೆ. ಪರಿಶ್ರಮ ಹಾಕಿದ್ರೆ ಮುಂದೊಂದು ದಿನ ಲಾಭ ಖಂಡಿತ ಸಿಗುತ್ತದೆ. ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರದಲ್ಲೂ ನಾವು ಬರುತ್ತೇವೆ. ಮಂಡ್ಯ ಯಾರ ಜಾಗೀರೂ ಅಲ್ಲ ಅನ್ನೋ ವಿಷಯ ಕುಮಾರಸ್ವಾಮಿ ಅವರಿಗೂ ಗೊತ್ತಿದೆ ಎಂದು ಟಾಂಗ್ ನೀಡಿದರು.


ಕುಮಾರಸ್ವಾಮಿ ಅವರ ಎಲ್ಲಾ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕಿಲ್ಲ.ಅವರ ಹೇಳಿಕೆ ಬಗ್ಗೆ ಅವರಿಗೆ ಕಮಿಟ್‌ಮೆಂಟ್ ಇರಲ್ಲ. ಯಾವುದೇ ಜಿಲ್ಲೆಯನ್ನು ಯಾರಿಗೂ ಜಹಾಗೀರ್ ಕೊಟ್ಟಿಲ್ಲ. ಯಾವ ಜಿಲ್ಲೆ ಕೂಡ ಯಾರ ಅಪ್ಪನ ಆಸ್ತಿಯೂ ಅಲ್ಲ. ನಮ್ಮದು 5 ಜಿಲ್ಲೆ ಮಾತ್ರ ಅದನ್ನು ಕಳೆದುಕೊಳ್ಳುತ್ತೇವೆ ಅನ್ನೋ ಆತಂಕ ಜೆಡಿಎಸ್​ ಅವರಿಗಿದೆ ಎಂದು ವಾಗ್ದಾಳಿ ನಡೆಸಿದರು.


ಜನರ ಮುಂದೆ ರಿಪೋರ್ಟ್​ ಕಾರ್ಡ್ ಇಡುತ್ತೇವೆ


ಹಿಂದುತ್ವ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಹಳೆ ಮೈಸೂರು ಭಾಗದಲ್ಲಿ ಚುನಾವಣೆ ಎದುರಿಸುತ್ತೇವೆ. ಹಳೆ ಮೈಸೂರು ಭಾಗದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಅದರ ರಿಪೋರ್ಟ್​ ಕಾರ್ಡ್​ ಜನರ ಮುಂದೆ ಇರಿಸಿ ಮತ ಕೇಳುತ್ತೇವೆ ಎಂದು ಹೇಳಿದರು.


ದೇವೆಗೌಡ್ರು ಪ್ರಧಾನಿಯಾದಗಿಂದಲೂ ಹಾಸನಕ್ಕೆ ವಿಮಾನ ನಿಲ್ದಾಣದ ಕನಸಿತ್ತು. ಆದ್ರೆ ವಿಮಾನ ನಿಲ್ದಾಣ ಆಗಲು ಡಬಲ್ ಇಂಜಿನ್ ಸರ್ಕಾರ ಬರಬೇಕಾಯಿತು. ಹಾಸನ, ಮಂಡ್ಯ ಎಲ್ಲ ಕಡೆಯೂ ನಮ್ಮ ರಿಪೋರ್ಟ್ ಕಾರ್ಡ್ ಇದೆ ಅದನ್ನು ಮುಂದಿಡುತ್ತೇವೆ ಎಂದರು.


ಇದನ್ನೂ ಓದಿ: JDS Garlands: ಪಂಚರತ್ನ ಯಾತ್ರೆಯಲ್ಲಿ ನೆಟ್ಟಿಗರ ಗಮನ ಸೆಳೆದ ಹಾರಗಳ ಫೋಟೋಗಳು ಇಲ್ಲಿವೆ


ಸಮಗ್ರ ಕರ್ನಾಟಕದ ದೃಷ್ಟಿಯಿಂದ ಅಧಿವೇಶನ


ಒಕ್ಕಲಿಗ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಮಾಡುತ್ತೇವೆ ಎಂದರು. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಲ್ಲ. ಸಮಗ್ರ ಕರ್ನಾಟಕದ ದೃಷ್ಟಿಯಿಂದ ಅಧಿವೇಶನ ನಡೆಸಲಾಗಿದೆ. ಬಜೆಟ್ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆಯಾಗಲಿದೆ ಎಂದು ಹೇಳಿದರು.


ಡಿಜೆ ಹಳ್ಳಿ ಗಲಭೆ ಎಸ್​​ಡಿಪಿಐ ಕೃತ್ಯ


ಡಿಜೆ ಹಳ್ಳಿ ಗಲಭೆ ಎಸ್​​ಡಿಪಿಐ ಕೃತ್ಯ ಎಂದು ಮಾಜಿಸ್ಟ್ರೇಟ್ ವರದಿ ನೀಡಿದೆ. ಇಂದೊಂದು ವ್ಯವಸ್ಥಿತವಾದ ಷಡ್ಯಂತ್ರ ಅಂತ ಮೊದಲೇ ಹೇಳಿದ್ದೆವು. ಇಲ್ಲಾಂದ್ರೆ ಅಷ್ಟು ಸಂಘಟಿತವಾಗಿ  ದಾಳಿ ನಡೆಸಲು ಆಗ್ತಿರಲಿಲ್ಲ. ನಾವು ಹಿಂದೆ ಎಸ್​​ಡಿಪಿಐ ಕೃತ್ಯ ಅಂತ ಹೇಳಿದ್ದೇವು. ಈಗ ವರದಿ ಅದನ್ನು ಸಾಕ್ಷಿಕರಿಸಿದೆ ಎಂದರು.

Published by:Mahmadrafik K
First published: