• Home
  • »
  • News
  • »
  • state
  • »
  • C T Ravi: ಗ್ಲಿಸರಿನ್ ಹಾಕದೆ ಕಣ್ಣೀರು ಸುರಿಸೋ ಡಿ ಕೆ ಶಿವಕುಮಾರ್​ಗೆ ಆಸ್ಕರ್​ ಕೊಡಬೇಕು

C T Ravi: ಗ್ಲಿಸರಿನ್ ಹಾಕದೆ ಕಣ್ಣೀರು ಸುರಿಸೋ ಡಿ ಕೆ ಶಿವಕುಮಾರ್​ಗೆ ಆಸ್ಕರ್​ ಕೊಡಬೇಕು

ಸಿಟಿ ರವಿ- ಡಿಕೆ ಶಿವಕುಮಾರ್​​​

ಸಿಟಿ ರವಿ- ಡಿಕೆ ಶಿವಕುಮಾರ್​​​

ಡಿ.ಕೆ ಶಿವಕುಮಾರ್​ ತುಂಬಾ ಚೆನ್ನಾಗಿ ನಟನೆ ಮಾಡ್ತಾರೆ. ಬಣ್ಣ ಹಾಕದೆ, ಗ್ಲಿಸರಿನ್ ಹಾಕದೆ ಕಣ್ಣೀರು ಸುರಿಸುವ ನಟನೆ ಅವರಿಗೆ ಒಲಿದು ಬಂದಿದೆ. ಈ ನಟನೆ ಡಿ. ಕೆ ಶಿವಕುಮಾರ್ ಅವರಿಗೆ ಬೈ ಬರ್ತ್ ಬಂದಿದೆ. ಬೈ ಮಿಸ್ಟೇಕ್ ಅವರು ರಾಜಕೀಯಕ್ಕೆ ಬಂದುಬಿಟ್ಟಿದ್ದಾರೆ ಎಂದು ಸಿಟಿ ರವಿ ಗೇಲಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು (ಅ.02): ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ (D K Shivakumar) ಸಿಟಿ ರವಿ ಟಾಂಗ್​ ಕೊಟ್ಟಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ (Bharth Jodo Yatre) ಡಿಕೆ ಶಿವಕುಮಾರ್​ ಕಣ್ಣೀರು ಹಾಕಿರುವುದಕ್ಕೆ ಸಿಟಿ ರವಿ (C T Ravi) ವ್ಯಂಗ್ಯವಾಡಿದ್ದಾರೆ. ಡಿ.ಕೆ ಶಿವಕುಮಾರ್​ ಒಳಗಡೆ ಇಂತಹ ಕಲಾವಿದ ಇದ್ದಾನೆಂದು ನಾನು  ಅಂದುಕೊಂಡಿರಲಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅಪಹಾಸ್ಯ ಮಾಡಿದ್ದಾರೆ. 


ಡಿಕೆಶಿ ನಟರಾಗಿದ್ದರೆ ಆಸ್ಕರ್ ಪ್ರಶಸ್ತಿ ಸಿಗ್ತಿತ್ತು


ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ನಟರಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು. ಅವರು ತುಂಬಾ ಚೆನ್ನಾಗಿ ನಟನೆ ಮಾಡ್ತಾರೆ. ಬಣ್ಣ ಹಾಕದೆ, ಗ್ಲಿಸರಿನ್ ಹಾಕದೆ ಕಣ್ಣೀರು ಸುರಿಸುವ ನಟನೆ ಅವರಿಗೆ ಒಲಿದು ಬಂದಿದೆ. ಈ ನಟನೆ ಡಿ. ಕೆ ಶಿವಕುಮಾರ್ ಅವರಿಗೆ ಬೈ ಬರ್ತ್ ಬಂದಿದೆ. ಬೈ ಮಿಸ್ಟೇಕ್ ಅವರು ರಾಜಕೀಯಕ್ಕೆ ಬಂದುಬಿಟ್ಟಿದ್ದಾರೆ ಎಂದು ಗೇಲಿ ಮಾಡಿದರು.


ಹೀರೋ ಆಗುವ ವಯಸ್ಸು ಇಲ್ಲ, ವಿಲನ್​ ಆಗುವ ತಾಕತ್ತು ಇಲ್ಲ


ಡಿ ಕೆ ಶಿವಕುಮಾರ್ ಅವರಿಗೆ ಹೀರೋ ಆಗುವ ವಯಸ್ಸು ಮುಗಿದು ಹೋಗಿದೆ. ವಿಲನ್ ಆಗೋಕೂ ತಾಕತ್ತು ಇಲ್ಲದಂತಾಗಿದೆ. ಆದರೆ, ಪ್ರಯತ್ನಪಟ್ಟರೆ ನಟನಾಗೋಕೆ ಪೋಷಕ ಪಾತ್ರಗಳು ಸಿಗುತ್ತವೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಕಾಂಪಿಟೇಟರ್ ಹುಟ್ಕೊಂಡಿದ್ದಾರೆ. ರಿಷಬ್ ಶೆಟ್ಟಿಗೂ ಅವಕಾಶ ಸಿಗದಂತೆ ಡಿಕೆಶಿ ಮಾಡಿದ್ದಾರೆ. ಇನ್ಮುಂದೆ ಪ್ರಶಸ್ತಿ ಏನಿದ್ರೂ ಡಿಕೆಶಿ ಪಾಲಿಗೆ. ಈ ರೀತಿಯ ಕಮೆಂಟ್​ಗಳನ್ನು ನಾನು ನೋಡಿದ್ದೇನೆ. ಲೇಟಾಗಿದೆ, ಆದ್ರೂ ಕೂಡ ಕಡೆ ಅವಕಾಶ ಸಿಕ್ಕರೂ ಸಿಗಬಹುದು. ಸಿನಿಮಾದಲ್ಲಿ ನಟಿಸಲು ಡಿ ಕೆ ಶಿವಕುಮಾರ್ ಟ್ರೈ ಮಾಡೋದು ಒಳ್ಳೆಯದು ಎಂದು ಸಿಟಿ ರವಿ ಹೇಳಿದ್ದಾರೆ.


ಇದನ್ನೂ ಓದಿ: D K Shivakumar: ಪೇಸಿಎಂ ಪೋಸ್ಟರ್​ ಅಂಟಿಸ್ತೇವೆ, ಟೀ-ಶರ್ಟ್​ ಧರಿಸುತ್ತೇವೆ; ಯಾರಿಗೂ ಹೆದರೋದಿಲ್ಲ ಎಂದ್ರು ಡಿಕೆಶಿ


ಕಾಂಗ್ರೆಸ್ಸಿಗೆ ಪಶ್ಚಾತ್ತಾಪ ಇದೆಯಾ


ಭಾರತವನ್ನ ತುಂಡರಿಸುವಾಗ ಸಹಿ ಹಾಕಿದ್ದು ಕಾಂಗ್ರೆಸ್, ಬಿಜೆಪಿಯಲ್ಲ, ಕೋಟ್ಯಾಂತರ ಜೀವವನ್ನ ಮತಾಂದರ ಕೈಗೆ ಕೊಟ್ಟು ಬಂದರು. ಮಹಿಳೆಯರು ಮಾನ-ಪ್ರಾಣ ಉಳಿಸಿಕೊಳ್ಳಲಾಗದೆ ಸಾಯಬೇಕಾಯ್ತು. ಇಂತಹ ವಿಭಜಿತ ಭಾರತವನ್ನ ಸ್ವತಂತ್ರ್ಯ ಹೋರಾಟಗಾರರು ನಿರೀಕ್ಷಿಸಿರಲಿಲ್ಲ. ಅದಕ್ಕೆ ಕಾಂಗ್ರೆಸ್ಸಿಗೆ ಪಶ್ಚಾತ್ತಾಪ ಇದೆಯಾ ಎಂದು ಕಾಂಗ್ರೆಸ್ಸಿಗೆ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿSonia Gandhi: ಇಂದು ಸಂಜೆ ಮೈಸೂರಿಗೆ ಸೋನಿಯಾ ಗಾಂಧಿ; ನಾಳೆ ಭಾರತ್ ಜೋಡಿ ಯಾತ್ರೆಯಲ್ಲಿ ಭಾಗಿ


ಈ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಾದಯಾತ್ರೆ ಮುಂದುವರಿಸಿ


ತುರ್ತು ಪರಿಸ್ಥಿತಿ ಹೇರಿಕೆ ತಮ್ಮಿಂದಾದ ಅಪರಾಧ ಅಂತ ವರ್ಷಗಳ ಬಳಿಕ ಪಶ್ಚಾತ್ತಾಪಪಡ್ತು. ಭಾರತ ವಿಭಜನೆಗೆ ಸಹಿ ಹಾಕಿದ್ದು ಅಪರಾಧ ಅಂತ ಕಾಂಗ್ರೆಸ್ಸಿಗೆ ಅನ್ನಿಸುತ್ತಾ? ಈ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಾದಯಾತ್ರೆ ಮುಂದುವರೆಸಲಿ, ಆಗ ಅದಕ್ಕೊಂದು ಅರ್ಥವಿರುತ್ತೆ ಎಂದು ಸಿಟಿ ರವಿ ಹೇಳಿದ್ದಾರೆ.


ನೀತಿ, ನಿಯತ್ತು, ನೇತೃತ್ವ ಇಲ್ಲದ ಕಡೆ ಬಲ ಸಿಗಲ್ಲ


ಕಾಂಗ್ರೆಸ್ ನಿರ್ಬಲವಾಗುತ್ತಿದೆ ಅದಕ್ಕೆ ರಾಹುಲ್ ಗಾಂಧಿಗೆ ಬಲ ತುಂಬಲು ಹೊರಟಿದ್ದಾರೆ. ಪ್ರಿಯಾಂಕ ವಾದ್ರಾ ಅವರೇ ನೇತೃತ್ವ ವಹಿಸಿದ್ರು 387 ಸ್ಥಾನದಲ್ಲಿ ಡೆಪಾಜಿಟ್ ಹೊಯ್ತು. ನೀತಿ, ನಿಯತ್ತು, ನೇತೃತ್ವ ಇಲ್ಲದ ಕಡೆ ಬಲ ಸಿಗಲ್ಲ, ಕಾಂಗ್ರೆಸ್ಸಿಗೆ ಈ ಮೂರು ಇಲ್ಲ ಎಂದು ಚಿಕ್ಕಮಗಳೂರಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: