HOME » NEWS » State » CT RAVI COMMENTS ABOUT KARNATAKA FLAG GETS TROLLED IN SOCIAL MEDIA RMD

ನಾಡಧ್ವಜ ಬೇಡ ಎನ್ನುವ ಸಿಟಿ ರವಿ ಹೇಳಿಕೆ; ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ

ನಾಡ ಧ್ವಜದ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಸಿಟಿ ರವಿ ಈ ರೀತಿ ಹೇಳಿಕೆ ನೀಡಿರುವುದು ಸಾಕಷ್ಟ ವಿವಾದ ಸೃಷ್ಟಿಸಿದೆ. ಕೆಲ ಸ್ವಪಕ್ಷೀಯರೇ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Rajesh Duggumane | news18-kannada
Updated:August 30, 2019, 11:45 AM IST
ನಾಡಧ್ವಜ ಬೇಡ ಎನ್ನುವ ಸಿಟಿ ರವಿ ಹೇಳಿಕೆ; ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ
ಸಚಿವ ಸಿ.ಟಿ. ರವಿ
  • Share this:
ಬೆಂಗಳೂರು (ಆ.30): ಕರ್ನಾಟಕ್ಕೆ ಪ್ರತ್ಯೇಕವಾದ ಅಧಿಕೃತ ನಾಡ ಧ್ವಜದ ಅಗತ್ಯವಿಲ್ಲ, ನಮಗೆ ರಾಷ್ಟ್ರ ಧ್ವಜವೇ ಒಂದೇ ಸಾಕು ಎನ್ನುವ ಸಚಿವ ಸಿ.ಟಿ. ರವಿ ಹೇಳಿಕೆ ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿದೆ. ಸಚಿವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಿಟಿ ರವಿ ಹೇಳಿಕೆ ವಿರೋಧಿಸಿ ಆಂದೋಲನ ಆರಂಭಗೊಂಡಿದೆ.

ಬಾವುಟದ ವಿಚಾರವಾಗಿ ನಿನ್ನೆ ಮಾತನಾಡಿದ್ದ ರವಿ, “ನಾಡಧ್ವಜವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲು ಅವಕಾಶವಿದೆಯೇ ಹೊರತು ಸಾಂವಿಧಾನಾತ್ಮಕವಾಗಿ ಬಳಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜ ಸಂಹಿತೆಯಲ್ಲಿ ಅವಕಾಶ ಇದೆ,” ಎಂದು ಹೇಳುವ ಮೂಕ ಪ್ರತ್ಯೇಕ ಕನ್ನಡ ನಾಡ ಧ್ವಜ ಪ್ರಸ್ತಾವನೆ ಕೈಬಿಟ್ಟಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.

ಅನೇಕರು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. “ಕನ್ನಡ ಬಾವುಟದ ಹಿರಿಮೆ ಗೊತ್ತಿಲ್ಲದ ಜನಪ್ರತಿನಿಧಿಗಳು ಯಾರೇ ಇರಲಿ ರಾಜ್ಯ ಬಿಟ್ಟು ತೊಲಗಲಿ,” ಎಂದು ಕೆಲವರು ಹೇಳಿದ್ದಾರೆ. “ನೆಲ ಜಲಗಡಿ ಭಾಷೆ ಇವುಗಳ ಮೇಲೆ ಸ್ವಾಭಿಮಾನ ಇಲ್ಲದ ಬಿಜೆಪಿಯವರು ಮಾತ್ರ ಕನ್ನಡದ ಅಸ್ಮಿತೆಗೆ ಕನ್ನಡದ ಧ್ವಜಕ್ಕೆ ಅವಮಾನ ಮಾಡುವ ಆಲೋಚನೆ ಮಾಡಲು ಸಾಧ್ಯ. ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿಯ ಪ್ರತೀಕವು ನಮ್ಮ ಕನ್ನಡದ ಬಾವುಟ,” ಎಂದು ನಟರಾಜ್​ ಗೌಡ ಎನ್ನುವವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಅವಶ್ಯಕತೆ ಇಲ್ಲ; ಸಚಿವ ಸಿ.ಟಿ. ರವಿ ಹೇಳಿಕೆಗೆ ಭುಗಿಲೆದ್ದ ವಿವಾದ, ಆಕ್ರೋಶ ಹೊರಹಾಕಿದ ಕರವೇ!


ಕಳೆದ ಐದು ದಶಕದಿಂದ ರಾಜ್ಯದಲ್ಲಿ ಪ್ರತ್ಯೇಕ ನಾಡ ಧ್ವಜ ಬಳಕೆಯಲ್ಲಿದೆ. ಆದರೆ, ಇದಕ್ಕೆ ಅಧಿಕೃತ ಮಾನ್ಯತೆ ಇರಲಿಲ್ಲ. ಬದಲಾಗಿ ಸಾಂಸ್ಕೃತಿಕ ಬಿಂಬಕವಾಗಿ ಚಳುವಳಿ ಹಾಗೂ ಇತರ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಈ ಧ್ವಜವನ್ನು ಬಳಕೆ ಮಾಡಲಾಗುತ್ತಿತ್ತು. ಹೀಗಾಗಿ ಕಳೆದ ಬಾರಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕೃತ ಧ್ವಜ ವಿನ್ಯಾಸಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ತಂಡವೊಂದನ್ನು ರಚನೆ ಮಾಡಿತ್ತು.



ಈ ತಂಡದ ಶಿಫಾರಸ್ಸಿನ ಮೇರೆ ಹಳದಿ ಬಿಳಿ ಹಾಗೂ ಕೆಂಪು ಬಣ್ಣದ ಧ್ವಜದ ಮಧ್ಯಭಾಗದಲ್ಲಿ ರಾಜ್ಯ ಲಾಂಛನ ಗಂಡಭೇರುಂಡ ಇರುವ ಹಾಗೆ ಧ್ವಜವನ್ನು ವಿನ್ಯಾಸ ಮಾಡಲಾಗಿತ್ತು. ಅಲ್ಲದೆ, ಈ ಧ್ವಜಕ್ಕೆ ರಾಜ್ಯದ ಅಧಿಕೃತ ನಾಡ ಧ್ವಜ ಎಂಬ ಮಾನ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರದ ಎದುರು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈವರೆಗೆ ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ, ಈ ಧ್ವಜಕ್ಕೆ ಮಾನ್ಯತೆಯೂ ನೀಡಿಲ್ಲ.



ಈ ಮಧ್ಯೆ ಸಿಟಿ ರವಿ ಈ ರೀತಿ ಹೇಳಿಕೆ ನೀಡಿರುವುದು ಸಾಕಷ್ಟ ವಿವಾದ ಸೃಷ್ಟಿಸಿದೆ. ಕೆಲ ಸ್ವಪಕ್ಷೀಯರೇ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.











First published: August 30, 2019, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories