ಮಂಡ್ಯ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ (BJP National General Secretary CT Ravi) ಮಾಂಸ ತಿಂದು ನಾಗಬನ (Nagabana) ಮತ್ತು ಹನುಮ ದೇಗುಲಕ್ಕೆ (Hanuma Temple) ಭೇಟಿ ನೀಡಿದ್ರಾ ಅನ್ನೋ ಪ್ರಶ್ನೆ ಉತ್ತರಕ್ಕೆ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಮಂಡ್ಯದಲ್ಲಿ (Mandya) ಸ್ಪಷ್ಟನೆ ನೀಡಿರುವ ಸಿ.ಟಿ ರವಿ ಅವರು, ನನಗೆ ದೇವರಲ್ಲಿ (God) ಶ್ರದ್ಧೆ ಇದೆ. ಕಂಡಿತ ನಾನು ಮಾಂಸಾಹಾರ (Non-Veg) ಸೇವಿಸಿ ದೇವಸ್ಥಾನಕ್ಕೆ ಹೋಗಿಲ್ಲ. ಹೊರಗೆ ಬೀಗ ಹಾಕಿತ್ತು ರೋಡಲ್ಲೆ ನಿಂತು ಕೈ ಮುಗಿದು ಬಂದೆ ಎಂದು ತಿಳಿಸಿದ್ದಾರೆ.
ನಾನು ಹುಟ್ಟಿರುವುದು ಮಾಂಸ ತಿನ್ನುವ ಜಾತಿಯಲ್ಲಿ
ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ ರವಿ ಅವರು, ಕಂಡಿತ ನಾನು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿಲ್ಲ. ನನಗೆ ದೇವರಲ್ಲಿ ಶ್ರದ್ಧೆ ಇದೆ. ಮಾಂಸ ತಿಂದು ನಾನು ಹೋಗಿಲ್ಲ. ಹೊರಗೆ ಬೀಗ ಹಾಕಿತ್ತು, ರೋಡಿನಲ್ಲೇ ನಿಂತು ಕೈ ಮುಗಿದು ಬಂದೆ.
ನಾನು ಹುಟ್ಟಿರುವುದು ಮಾಂಸ ತಿನ್ನುವ ಜಾತಿಯಲ್ಲಿ ಎಂದು ಹೇಳಿದರು. ಅಲ್ಲದೆ, ಸುಮ್ಮನೆ ವಿವಾದ ಮಾಡಲೇ ಬೇಕು ಅಂತ ಮಾಂಸಾಹಾರದ ವಿಚಾರ ಮಾತನಾಡುತ್ತಿದ್ದಾರೆ. ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಅನ್ನುವವ ನಾನಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Kodagu Temple: ಸಿದ್ದರಾಮಯ್ಯ ಭೇಟಿ ಬಳಿಕ ದೇವಸ್ಥಾನದ ಶುದ್ಧೀಕರಣ, ವಿಶೇಷ ಪೂಜೆ
ಇದೇ ವೇಳೆ ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂಬ ಟೀಕೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಮ್ಮ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ. ಆದರೆ ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ, ಟ್ರಾನ್ಸ್ ಫರ್ ಆಗುವುದು ಮನೆಯಲ್ಲಿ ಅಲ್ಲ. ಪಾರ್ಲಿಮೆಂಟ್ ಬೋರ್ಡ್ ನಲ್ಲಿ ತೀರ್ಮಾನ ಆಗುತ್ತದೆ. ಮಂಡ್ಯದ ಅಭಿವೃದ್ಧಿ ಮಾಡಿದ್ದೇವೆ, ಬರಿ ವೋಟ್ ತೆಗೆದುಕೊಂಡ ಸೋ ಕಾಲ್ಡ್ ನಾವಲ್ಲ. ನನಗೆ ಪಕ್ಷ ಎಲ್ಲಿ ಹೇಳಿದರೂ ಸ್ಪರ್ಧೆ ಮಾಡಲು ಸಿದ್ಧ. ಪಾರ್ಟಿ ಹೇಳಿದರೆ ಜಮ್ಮು ಕಾಶ್ಮೀರದಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.
ಏನಿದು ವಿವಾದ?
ಫೆಬ್ರವರಿ 19 ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ ರವಿ ಆಗಮಿಸಿದ್ದರು. ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ಭಟ್ಕಳಕ್ಕೆ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸವಿದಿದ್ದರು. ಬಾಡೂಟ ಸವಿದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಡೂಟ ಸವಿದು ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ್ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಸಿ.ಟಿ.ರವಿ ದೇವಸ್ಥಾನಕ್ಕೆ ತೆರಳಿದ್ದರು. ನಾಗಬನದ ಬಾಗಿಲು ಹಾಕಿದ್ದರಿಂದ ಗೇಟ್ ಮುಂಭಾಗದಲ್ಲಿ ದೇವರಿಗೆ ಸಿ.ಟಿ.ರವಿ ನಮಸ್ಕಾರ ಸಲ್ಲಿಸಿದ್ದರು. ನಂತರ ಗೇಟ್ ಮುಂಭಾಗದಲ್ಲಿಯೇ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಸಿ.ಟಿ.ರವಿ ಅವರನ್ನು ಸನ್ಮಾನಿಸಿದ್ದರು.
ನಂತರ ಅಲ್ಲಿಂದ ಸಿ.ಟಿ.ರವಿ ಅವರು ಸಮೀಪ ಕರಿಬಂಟ ಹನುಮ ದೇಗುಲಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದೊಳಗೆ ಪ್ರವೇಶಿಸಿ ಪ್ರದಕ್ಷಿಣೆ ಸಹ ಹಾಕಿರುವ ವಿಡಿಯೋ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಶಾಸಕರ ಜೊತೆ ಸಿ.ಟಿ.ರವಿ ಬಾಡೂಟ ಸವಿಯುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋಗಳು ಕೊಲ್ಯಾಜ್ ಆಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ