ಬೆಂಗಳೂರು: ಮಾಂಸ ತಿಂದು ದೇವರ ದರ್ಶನ ಮಾಡಿದರಾ ಎಂಬ ವಿವಾದ ಭುಗಿಲ್ಲೆದಿರುವ ಬೆನ್ನಲ್ಲೇ ಈ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (BJP National General Secretary CT Ravi), ಮಾಂಸ ತಿಂದಿದ್ದು ನೆನಪು ಇರಲಿಲ್ಲ. ಊಟ ಮಾಡಿ ಬಹಳ ಸಮಯ ಆಗಿತ್ತು. ಆ ವೇಳೆ ದೇವಸ್ಥಾನಕ್ಕೆ ಹೋಗುವ ಬಗ್ಗೆ ಯಾವುದೇ ಪ್ಲ್ಯಾನ್ ಇರಲಿಲ್ಲ. ಆದರೆ ಸ್ಥಳೀಯರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗ ಬೇಕಾಯಿತು. ಆದರೆ ನಾನು ಹೋಗುವ ವೇಳೆ ದೇವಸ್ಥಾನ (Temple) ಕ್ಲೋಸ್ ಆಗಿತ್ತು. ಆದ್ದರಿಂದ ದೇವಸ್ಥಾನದ ಪ್ಯಾಸೇಜ್ಗೆ ನಡುವೆ ಹೋಗಿ ಬಂದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಂತೆ ಇಂದು ಬೆಂಗಳೂರಿನಲ್ಲಿ (Bengaluru) ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ (Controversy) ಇತಿಶ್ರೀ ಆಡಲು ಮುಂದಾಗಿದ್ದಾರೆ.
ಸ್ಥಳೀಯರು ಒತ್ತಾಯ ಮಾಡಿದ್ದ ಕಾರಣ ನಾನು ಅಲ್ಲಿಗೆ ಹೋಗಿದ್ದೆ
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವತ್ತು ನಾನು ನಾನ್ವೆಜ್ ತಿಂದಿದ್ದು ನಿಜ. ಆದರೆ ದೇವಸ್ಥಾನದ ಗರ್ಭ ಗುಡಿಗೆ ಹೋಗಲಿಲ್ಲ. ಸ್ಥಳೀಯರು ದೇವಸ್ಥಾನಕ್ಕೆ ಕರೆದುಕೊಂಡು ಹೋದರು, ಪುಣ್ಯಕ್ಕೆ ದೇವಸ್ಥಾನಕ್ಕೆ ಬೀಗ ಹಾಕಿದ್ದರು.
ನಮ್ಮ ತಲೆಯಲ್ಲಿ ದೇವಸ್ಥಾನಕ್ಕೆ ಹೋಗಬೇಕು ಅಂತ ಇರಲಿಲ್ಲ. ಊಟ ಮಾಡಿ ತುಂಬಾ ಸಮಯ ಆಗಿತ್ತು, ಆದ್ದರಿಂದ ನೆನಪು ಇರಲಿಲ್ಲ. ಅದು ವಿವಾದಿತ ಸ್ಥಳದಲ್ಲಿ ನಿರ್ಮಾಣ ಆಗಿದ್ದ ಕಾರಣ, ಹಲವರು ವಿರೋಧ ಮಾಡಿ ಅಡ್ಡಿಪಡಿಸಿದ್ದರೂ ನಾವು ದೇವಸ್ಥಾನ ನಿರ್ಮಾಣ ಮಾಡಿದ್ದೀವಿ ಎಂದು ಸ್ಥಳೀಯರು ಒತ್ತಾಯ ಮಾಡಿದ್ದ ಕಾರಣ ನಾನು ಅಲ್ಲಿಗೆ ಹೋಗಿದ್ದೆ ಅಷ್ಟೇ.
ಕಾಂಗ್ರೆಸ್ ಪಕ್ಷದ ನಾಯಕರಂತೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಅನ್ನುವವನು ನಾನಲ್ಲ. ವೃತ ಪಾಲನೆ ದೇವಾಲಯಗಳು ಇದೆ, ಮಾಂಸಾಹಾರ ನೈವೇದ್ಯ ಇಡುವ ದೇವಾಲಯಗಳು ಇವೆ. ಇದು ಕಾಂಗ್ರೆಸಿಗರೆ ಅರ್ಥ ಆಗದಿರುವುದು ದುರ್ದೈವ. ಅದು ನನ್ನ ಭೇಟಿಯ ಉದ್ದೇಶವಲ್ಲ, ಅಲ್ಲಿನ ಸ್ಥಳೀಯ ಜನರ ಉದ್ದೇಶ. ನಾನು ಹೋಗಿದ್ದು ದೈವ ದರ್ಶನಕ್ಕಲ್ಲ, ಎದೆ ಬಗೆದು ತೋರಿಸಲು ನಾನು ಹನುಮಂತ ಅಲ್ಲ ಎಂದರು.
ಇದನ್ನೂ ಓದಿ: CT Ravi: 'ಸಿ ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋದರೂ ಮಠಾಧೀಶರ ಮೌನ' -ಮಾಜಿ ಸಿಎಂ ಸಿದ್ದರಾಮಯ್ಯ ಅಚ್ಚರಿ
ಮರೆತು ದೇವಸ್ಥಾನಕ್ಕೆ ಹೋಗುತ್ತಿದೆ
ಅಲ್ಲದೆ, ನಮಗೆ ಅಲ್ಲಿ ಸಭೆ ಇತ್ತು, ಸಭೆ ಮುಕ್ತಾಯ ಮಾಡಿಕೊಂಡು ಅಲ್ಲಿಂದ ತೆರಳುವುದು ನಮ್ಮ ಉದ್ದೇಶವಾಗಿತ್ತು. ಈ ವೇಳೆ ಸ್ಥಳೀಯರು ಬಂದು ಒತ್ತಾಯ ಮಾಡಿದ್ದ ಕಾರಣ ಅಲ್ಲಿಗೆ ಹೋದೆ. ಆದರೆ ನಾನು ಹೋಗುವ ಸಮಯಲ್ಲಿ ಎಲ್ಲಿ ಎರಡು ಪ್ರವೇಶಗಳಲ್ಲಿ ದೇವಸ್ಥಾನ ಕ್ಲೋಸ್ ಆಗಿತ್ತು.
ಆಗ ದೇವಸ್ಥಾನ ಮುಂದಿನ ಪ್ಯಾಸೇಜ್ನಲ್ಲಿ ಹೋಗಿ ಮತ್ತೆ ವಾಪಸ್ ಬಂದಿದ್ದೆವು. ಅದೃಷ್ಟಕ್ಕೆ ದೇವಸ್ಥಾನ ಕ್ಲೋಸ್ ಆಗಿತ್ತು. ಇಲ್ಲ ಎಂದರೆ ಈ ಬಗ್ಗೆ ಮರೆತು ದೇವಸ್ಥಾನಕ್ಕೆ ಹೋಗುತ್ತಿದೆ ಅನ್ಸುತ್ತೆ. ಇದು ಒಂದು ಅಚಾನಕ್ ಘಟನೆ ಅಷ್ಟೇ. ಬೇಡರ ಕಣ್ಣಪ್ಪನಿಗೆ ದೇವರು ಒಲಿದಿದ್ದೆ ಹೇಗೆ ಗೊತ್ತು ಅಲ್ವಾ ಅಂತ ಹೇಳಿದರು.
ಇದನ್ನೂ ಓದಿ: KSRTC ಬಸ್ನಲ್ಲಿ ಮಹಿಳೆ ಸೀಟ್ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ
ಏನಿದು ವಿವಾದ?
ಫೆಬ್ರವರಿ 19ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಸಿ.ಟಿ ರವಿ ಭೇಟಿ ನೀಡಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಸಿ.ಟಿ ರವಿ ಬಾಡೂಟ ಸೇವಿಸಿದ್ದರು. ಬಾಡೂಟ ಸವಿದು ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳು ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ