• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಅವರದ್ದು ಊರು-ಮನೆ ದಾಟಿದ ಸಾಮರ್ಥ್ಯ: ಹೆಚ್​​ಡಿಕೆ ಹೇಳಿಕೆಗೆ ಸಿ ಟಿ ರವಿ ತಿರುಗೇಟು

Karnataka Politics: ಅವರದ್ದು ಊರು-ಮನೆ ದಾಟಿದ ಸಾಮರ್ಥ್ಯ: ಹೆಚ್​​ಡಿಕೆ ಹೇಳಿಕೆಗೆ ಸಿ ಟಿ ರವಿ ತಿರುಗೇಟು

ಹೆಚ್​.ಡಿ.ಕುಮಾರಸ್ವಾಮಿ, ಸಿ.ಟಿ.ರವಿ

ಹೆಚ್​.ಡಿ.ಕುಮಾರಸ್ವಾಮಿ, ಸಿ.ಟಿ.ರವಿ

ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೆ ಇಡೀ ಸಮುದಾಯವನ್ನು ದೂಷಿಸುವುದು ತಪ್ಪು. ಈ ವಿಚಾರವನ್ನು ನಾನು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಹೇಳುತ್ತಿಲ್ಲ. ಬ್ರಾಹ್ಮಣ ಸಮುದಾಯ ಯಾವುದೇ ಸಮಾಜ ಘಾತುಕ ಚಟುವಟಿಕೆ ಮಾಡಿಲ್ಲ ಎಂದರು.

  • Share this:

ಬೆಂಗಳೂರು: ರಾಜ್ಯ ಬಿಜೆಪಿ ನಪುಂಸಕ‌ ಸರ್ಕಾರ (BJP Government) ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಹೇಳಿಕೆಗೆ ಬಿಜೆಪಿ ಶಾಸಕ ಸಿ.ಟಿ.ರವಿ (BJP MLA CT Ravi) ತಿರುಗೇಟು ನೀಡಿದ್ದಾರೆ.ಅವರಷ್ಟು ಸಾಮರ್ಥ್ಯವಿಲ್ಲ ಎಂದು ನಾವು ಮೊದಲೇ ಒಪ್ಪಿಕೊಂಡಿದ್ದೇವೆ. ನಮ್ಮದು ಮನೆಯೊಳಗಿನ ಸಾಮರ್ಥ್ಯ, ಅವರದ್ದು ಮನೆ-ಊರು ದಾಟಿದ ಸಾಮರ್ಥ್ಯ, ನಮಗೆ ಅಷ್ಟು ಸಾಮರ್ಥ್ಯ ಇಲ್ಲ ಎಂದು ವ್ಯಂಗ್ಯ ಮಾಡಿದರು. ಅವರು ವೈಯಕ್ತಿಕವಾಗಿ ಹೇಳಿದ್ದಾರೋ ಅಥವಾ ರಾಜಕೀಯವಾಗಿ (Political Statement) ಹೇಳಿದ್ದಾರೋ ಗೊತ್ತಿಲ್ಲ. ರಾಜಕೀಯವಾಗಿ ಹೇಳಿದ್ದರೆ ಬಿಜೆಪಿ ತನ್ನ ಸಾಮರ್ಥ್ಯವನ್ನ ಸಾಬೀತು ಮಾಡುತ್ತಲೇ ಬಂದಿದೆ. ಸಿಎಂ ಆಗಿದ್ದಾಗ ಜೆಡಿಎಸ್ (JDS) ಭದ್ರಕೋಟೆಯಲ್ಲೇ ನೂರಾರು ಕೋಟಿ ಖರ್ಚು ಮಾಡಿ ಮಗನನ್ನ (Nikhil Kumaraswamy) ಗೆಲ್ಲಿಸಲು ಆಗಲಿಲ್ಲ ಎಂದು ತಿರುಗೇಟು ನೀಡಿದರು.


ದೇವೇಗೌಡರು ಹಿರಿಯರು, ಗೌರವವಿದೆ, ಇಳಿವಯಸ್ಸಲ್ಲಿ ಕಾಂಗ್ರೆಸ್-ಜೆಡಿಎಸ್ ಸೇರಿ ಗೆಲ್ಲಿಸಲು ಆಗಲಿಲ್ಲ, ಏನು ಹೇಳಬೇಕು? ರಾಜಕೀಯಕ್ಕೆ ಹೇಳಿದ್ದರೆ, ವೈಯಕ್ತಿಕವಾಗಿ ಹೇಳಿದ್ದರೆ ಅವರಷ್ಟು ಸಾಮರ್ಥ್ಯವಿಲ್ಲ ಎಂದು ಒಪ್ಪಿಕೊಂಡಿದ್ದೇವೆ ಎಂದರು.


ಸಿ.ಟಿ.ರವಿ ಟಕ್ಕರ್


ರಾಜಕೀಯವಾಗಿ ಹೇಳಿದ್ದರೆ, ಬಿಜೆಪಿ 25 ಪ್ಲಸ್ 126 ಸೀಟು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯ ತೋರಿಸಿದೆ. ನಮ್ಮದು ಸೀಮಿತ ಚೌಕಟ್ಟಿನ ಸಾಮರ್ಥ್ಯ, ಅವರ ಸಾಮರ್ಥ್ಯಕ್ಕೆ ನಾವು ಶರಣು ಶರಣಾರ್ಥಿ ಎಂದು ಟಕ್ಕರ್ ಕೊಟ್ಟರು.


hd kumaraswamy slams ct ravi for he offer bjp ticket to bhavani revanna
ಸಿಟಿ ರವಿ -ಎಚ್​ಡಿ ಕುಮಾರಸ್ವಾಮಿ


ರಘುಪತಿ ಭಟ್ ಪ್ರತಿಕ್ರಿಯೆ


ಬ್ರಾಹ್ಮಣ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ರಘುಪತಿ ಭಟ್, ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶೃಂಗೇರಿ ಶಾರದಾ ಪೀಠಕ್ಕೆ ದಾಳಿ ಮಾಡಿದ ಪೇಶ್ವೆ ಸಮುದಾಯದವರು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ ಜೋಶಿ ಅವರು ಮಾಧ್ವಸಂಪ್ರದಾಯದ ಉತ್ತರಾದಿ ಮಠಕ್ಕೆ ಸೇರಿದ ಬ್ರಾಹ್ಮಣರು ಎಂದು ಹೇಳಿದರು.


ಯಾವುದೋ ಒಂದು ಕಾಲದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೆ ಇಡೀ ಸಮುದಾಯವನ್ನು ದೂಷಿಸುವುದು ತಪ್ಪು. ಈ ವಿಚಾರವನ್ನು ನಾನು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಹೇಳುತ್ತಿಲ್ಲ. ಬ್ರಾಹ್ಮಣ ಸಮುದಾಯ ಯಾವುದೇ ಸಮಾಜ ಘಾತುಕ ಚಟುವಟಿಕೆ ಮಾಡಿಲ್ಲ ಎಂದರು.


ಇತಿಹಾಸ ಪುರಾಣ ಕಾಲದಿಂದಲೂ ಬ್ರಾಹ್ಮಣ ಸಮುದಾಯ ಕೊಲೆ, ಕ್ರಿಮಿನಲ್, ದೊಂಬಿ ಮಾಡಿದ ಸಮಾಜ ಅಲ್ಲ. ಈ ರೀತಿಯ ಹೇಳಿಕೆ ಕುಮಾರಸ್ವಾಮಿಯ ವ್ಯಕ್ತಿತ್ವವನ್ನು ತೋರಿಸುತ್ತದೆ. ಜೋಶಿಯವರನ್ನು ಬ್ರಾಹ್ಮಣ ಸಮುದಾಯದ ನಡುವಿನ ಪಾರ್ಥೇನಿಯಂ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೋಶಿ ಅವರದ್ದು ಪೇಶ್ವೆ ಡಿಎನ್ಎ ಅಲ್ಲ


ಜೋಶಿಯವರ ಡಿಎನ್ಎಗೆ ಸಂಬಂಧಪಟ್ಟ ಹೇಳಿಕೆ ನೀಡಿದ್ದಾರೆ. ಆದರೆ ಜೋಶಿ ಅವರದ್ದು ಪೇಶ್ವೆ ಡಿಎನ್ಎ ಅಲ್ಲ. ಪೇಶ್ವೆ ಡಿಎನ್ಎ ಆದರೂ ತಪ್ಪಿಲ್ಲ. ಆ ಡಿಎನ್ಎ ಕೂಡ ಸರಿ ಇದೆ. ಯಾರೋ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಸಮುದಾಯ ಹೊಣೆ ಆಗುವುದಿಲ್ಲ ಎಂದು ಕಿಡಿಕಾರಿದರು.


ಎಲ್ಲಾ ಸಮುದಾಯದಲ್ಲೂ ತಪ್ಪು ಮಾಡಿದವರು ಇರುತ್ತಾರೆ. ಮಾದ್ವ ಸಂಪ್ರದಾಯದ ಉತ್ತರಾದಿ ಮಠದವರು ಅನ್ನೋದು ಸ್ಪಷ್ಟ. ಈ ರೀತಿಯ ಹೇಳಿಕೆಗಳು ಕುಮಾರಸ್ವಾಮಿಯ ಅವಿವೇಕ ತೋರಿಸುತ್ತದೆ ಎಂದು ಆಕ್ರೋಶ ಹೊರ ಹಾಕಿದರು.


ಇದನ್ನೂ ಓದಿ:  Congress Logo: ಅದೃಷ್ಟದ ಮೊರೆ ಹೋದ್ರಾ ಕಾಂಗ್ರೆಸ್ ನಾಯಕ; ಹಸ್ತದ ರೇಖೆಯನ್ನೇ ಬದಲಿಸಿದ್ರಾ ಡಿಕೆಶಿ?


ಸಂಪುಟ ವಿಸ್ತರಣೆ ಮಾಡದ ಹಿಂದಿನ ಗುಟ್ಟು ಏನು?


ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಉತ್ತರ ಕರ್ನಾಟಕ ಪ್ರಜಾಧ್ವನಿ (Prajadhwami Yatre) ಯಾತ್ರೆಯಲ್ಲಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಪುಟ ವಿಸ್ತರಣೆ ಮಾಡಿದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಮಂತ್ರಿ ಸ್ಥಾನ ನೀಡಬೇಕಿತ್ತು. ಈ ಹಿನ್ನೆಲೆ ಸಂಪುಟ ವಿಸ್ತರಣೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Published by:Mahmadrafik K
First published: