News18 India World Cup 2019

'ಮತ್ತಷ್ಟು ಸಚಿವರು ರಾಜೀನಾಮೆ ಕೊಡುತ್ತಾರೆ' - ಸಚಿವ ಪುಟ್ಟರಾಜು ಹೇಳಿಕೆ

ಇನ್ನೂ ಹೆಚ್ಚಿನ ಪರಿಹಾರವನ್ನು ಈಗಿನ ಸಂಸದೆ ಸುಮಲತಾ ಕೊಡಿಸಲಿ. ಹೆಚ್ಚಿನ ಪರಿಹಾರ ಕೊಡಿಸಿದರೆ ಮತ್ತಷ್ಟು ಸಂತೋಷ- ಸಿ.ಎಸ್​.ಪುಟ್ಟರಾಜು

Latha CG | news18
Updated:June 14, 2019, 5:02 PM IST
'ಮತ್ತಷ್ಟು ಸಚಿವರು ರಾಜೀನಾಮೆ ಕೊಡುತ್ತಾರೆ' - ಸಚಿವ ಪುಟ್ಟರಾಜು ಹೇಳಿಕೆ
ಸಿ.ಎಸ್​​.ಪುಟ್ಟರಾಜು
Latha CG | news18
Updated: June 14, 2019, 5:02 PM IST
ಕೋಲಾರ(ಜೂ. 14): "ನಮ್ಮಲ್ಲಿ ಮತ್ತಷ್ಟು ಸಚಿವರು ರಾಜೀನಾಮೆ ಕೊಡುತ್ತಾರೆ. ರಾಜೀನಾಮೆ ನೀಡಿ ಎಲ್ಲಾ ಸಮುದಾಯಕ್ಕೂ ಸಚಿವ ಸ್ಥಾನ ಸಿಗುವಂತೆ ಮಾಡುತ್ತಾರೆ. ಸಿಎಂ ಕುಮಾರಸ್ವಾಮಿ ಸೂಚನೆ ಮೇರೆಗೆ ಈ ಪ್ರಕ್ರಿಯೆ ಶುರು ಆಗಿದೆ. ಅದರ ಮೊದಲ ಭಾಗವಾಗಿ ಇಂದು ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಲಾಗಿದೆ," ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್​.ಪುಟ್ಟರಾಜು ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. "ಮೈತ್ರಿ ಸರ್ಕಾರ ಕುಮಾರಸ್ವಾಮಿ ನೇತೃತ್ವದಲ್ಲಿ  ಐದು ವರ್ಷ ನೂರಕ್ಕೆ ನೂರು ಭಾಗ ನಡೆಯುತ್ತದೆ. ಬಹುತೇಕ‌ ಸೋತವರು ಸರ್ಕಾರ ಉಳಿಯುವುದಿಲ್ಲ, ಚುನಾವಣೆ ಬರುತ್ತೆ ಎನ್ನುತ್ತಿದ್ದಾರೆ," ಎಂದು ಸರ್ಕಾರ ಉಳಿಯಲ್ಲ ಎಂಬ ಕೋಳಿವಾಡ ಹೇಳಿಕೆಗೆ ಪುಟ್ಟರಾಜು ತಿರುಗೇಟು ನೀಡಿದರು.

"ಸರ್ಕಾರ ಯಾವ ಬ್ಲ್ಯಾಕ್​ಮೇಲ್​ಗೂ ಮಣಿದಿಲ್ಲ, ಪಕ್ಷೇತರರು ಬ್ಲ್ಯಾಕ್​ಮೇಲ್ ಮಾಡಿಲ್ಲ. ಸರ್ಕಾರಕ್ಕೆ ಬೆಂಬಲ‌ ನೀಡಿರುವ ಹಿನ್ನೆಲೆಯಲ್ಲಿ ಪಕ್ಷೇತರಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಪಕ್ಷೇತರರಿಗೆ ಮಂತ್ರಿ  ಸ್ಥಾನ ಸಿಕ್ಕಿತ್ತು," ಎಂದು ಹೇಳಿದರು.

ಇದನ್ನೂ ಓದಿ: ಹಳ್ಳಿ ಜನರು ತೆರಿಗೆ ಕಟ್ಟಲ್ಲ, ಉದ್ಯಮಿಗಳು ಮಾತ್ರ ಕಟ್ಟುತ್ತಾರೆ ಎಂದು ಕೃಷಿಕರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವ ಡಿಕೆಶಿ

ಸುಮಲತಾ ಹೊಸದಾಗಿ ಪರಿಹಾರ ಕೊಡಿಸಲಿ:

ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರಿಗೆ ಕೇಂದ್ರ ಸರ್ಕಾರದ ಪರಿಹಾರ ಸಿಕ್ಕ ವಿಚಾರವಾಗಿ ಪುಟ್ಟರಾಜು ಪ್ರತಿಕ್ರಿಯೆ ನೀಡಿದರು. "ನವೆಂಬರ್​​ನಲ್ಲಿ ಬಸ್​ ದುರಂತ ಸಂಭವಿಸಿತ್ತು.  ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು.  ಫೆಬ್ರವರಿಯಲ್ಲಿಯೇ ಪರಿಹಾರ ಕೂಡ ಬಂದಿತ್ತು. ಇದು ಆಗಿನ ಲೋಕಸಭಾ ಸದಸ್ಯರಿಗೆ ಗೌರವ ಸಲ್ಲುತ್ತದೆ. ಇನ್ನೂ ಹೆಚ್ಚಿನ ಪರಿಹಾರ ಈಗಿನ ಸಂಸದೆ ಸುಮಲತಾ ಕೊಡಿಸಲಿ. ಹೆಚ್ಚಿನ ಪರಿಹಾರ ಕೊಡಿಸಿದರೆ ಮತ್ತಷ್ಟು ಸಂತೋಷ," ಎಂದು ಸುಮಲತಾ ಅವರಿಗೆ ಪುಟ್ಟರಾಜು ತಿರುಗೇಟು ನೀಡಿದರು.
Loading...

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...