ರಾಯಚೂರು ಬಾಲಕಿಯೋರ್ವಳ ಕಣ್ಣಿನಲ್ಲಿ ಉರುಳುತ್ತಿವೆ ಹರಳು; ಆತಂಕದಲ್ಲಿ ಪೋಷಕರು

ಚಿಕ್ಕ ಬಾಲಕಿಗೆ ಕಣ್ಣಿನಲ್ಲಿ ಹರಳು ಬರುತ್ತಿರುವ ಸುದ್ದಿಯಿಂದ ಹಲವರು ಅಚ್ಚರಿ ಪಡುವಂತಾಗಿದೆ. ಮಗುವಿನ ಬಗ್ಗೆ ಯಾವುದೇ ಆತಂಕಪಡಬೇಕಾದ ಅವಶ್ಯಕತೆ ಇಲ್ಲದೇ ಹೋದರೂ, ಇದು ವೈದ್ಯಲೋಕದಲ್ಲೇ ಅಚ್ಚರಿ ಸಂಗತಿಯಾಗಿದೆ.

news18-kannada
Updated:January 10, 2020, 2:56 PM IST
ರಾಯಚೂರು ಬಾಲಕಿಯೋರ್ವಳ ಕಣ್ಣಿನಲ್ಲಿ ಉರುಳುತ್ತಿವೆ ಹರಳು; ಆತಂಕದಲ್ಲಿ ಪೋಷಕರು
ಬಾಲಕಿಯ ಕಣ್ಣಿನಲ್ಲಿ ಉರುಳುತ್ತಿವೆ ಹರಳು; ಆತಂಕದಲ್ಲಿ ಪೋಷಕರು
  • Share this:
ರಾಯಚೂರು(ಜ.09): ಇದೊಂದು ವೈದ್ಯ ಲೋಕಕ್ಕೆ ಅಚ್ಚರಿ. 10 ವರ್ಷದ ಮಗುವಿನ ಕಣ್ಣಿನಲ್ಲಿ ಆಗಾಗ ಹರಳು ಉರುಳುತ್ತಿವೆ. ಕಾರಣ ಗೊತ್ತಿಲ್ಲವಾದರೂ ಇದು ಮಾನಸಿಕ ತೊಂದರೆಯೋ ಅಥವಾ ಬೇರೆ ಕಾರಣಕ್ಕೆ ಇರಬಹುದು ಎಂದು ನಿಗಾವಹಿಸಲಾಗುತ್ತಿದೆ.

ಹೌದು, ಈ ಮಗುವಿನ ಹೆಸರು ಪಾರ್ವತಿ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ‌ ಸಾಸಲಮರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾಳೆ. ಈ ಬಾಲಕಿಗೆ ಕಳೆದ ಎರಡು ದಿನಗಳಿಂದ ಪ್ರತಿ 20 ನಿಮಿಷಕ್ಕೊಂದು ಸಣ್ಣಸಣ್ಣ ಹರಳು ಉರುಳುತ್ತಿವೆ. ಹರಳು ಉರುಳುವಾಗ ಕಣ್ಣಿನಲ್ಲಿ ಮಾತ್ರ ನೋವು ಇರುತ್ತದೆ ಎಂದು ಹೇಳುತ್ತಾಳೆ ಬಾಲಕಿ.

ಇನ್ನು ಬಾಲಕಿ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳು ಎಷ್ಟೇ ಹೇಳಿದರೂ ಮೊದಲಿಗೆ ಶಿಕ್ಷಕರು ನಂಬಿರಲಿಲ್ಲ. ನಂತರ ಆಕೆಯನ್ನು ತಮ್ಮ ಆಫೀಸ್​​​ನಲ್ಲಿ ಕೂರಿಸಿದಾದ ಒಂದು ಹರಳು ಬಂದಿದೆ. ಈ ಬೆನ್ನಲ್ಲೇ ಶಿಕ್ಷಕರು ಪಾಲಕರೊಂದಿಗೆ ಸಿಂಧನೂರಿನ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಮತ್ತೊಮ್ಮೆ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ: ಸಿಎಂ ಅರವಿಂದ್​ ಕೇಜ್ರಿವಾಲ್​​ ವಿಶ್ವಾಸ

ಈ ಬಗ್ಗೆ ಬಾಲಕಿಯ ಪಾಲಕರಲ್ಲಿಯೂ ಸ್ವಲ್ಪ ಆತಂಕವಿದೆ. ಆದರೀಗ ವೈದ್ಯರು ನೋಡಿದ ಬಳಿಕ ಬಾಲಕಿ ಬಗ್ಗೆ ಯಾವುದೇ ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎಂದು ಸಮಾಧಾನ ಮಾಡಿದ್ದಾರೆ. ಇದು ಮಾನಸಿಕ ತೊಂದರೆ ಇರಬಹುದು. ಮಕ್ಕಳು ಆಟವಾಡುವಾಗಲೂ ಈ ರೀತಿಯಾಗಿರಬಹುದು. ವೈದ್ಯ ಪುಸ್ತಕದಲ್ಲಿ ಇಲ್ಲಿಯವರೆಗೂ ಓದಿಲ್ಲ, ಈ ಬಗ್ಗೆ ನಿಗಾವಹಿಸಿ ಏನಾಗಿದೆ ಎಂಬ ಬಗ್ಗೆ ಹೇಳಲಾಗುವುದು ಎಂದಿದ್ದಾರೆ ವೈದ್ಯರು.

ಚಿಕ್ಕ ಬಾಲಕಿಗೆ ಕಣ್ಣಿನಲ್ಲಿ ಹರಳು ಬರುತ್ತಿರುವ ಸುದ್ದಿಯಿಂದ ಹಲವರು ಅಚ್ಚರಿ ಪಡುವಂತಾಗಿದೆ. ಮಗುವಿನ ಬಗ್ಗೆ ಯಾವುದೇ ಆತಂಕಪಡಬೇಕಾದ ಅವಶ್ಯಕತೆ ಇಲ್ಲದೇ ಹೋದರೂ, ಇದು ವೈದ್ಯಲೋಕದಲ್ಲೇ ಅಚ್ಚರಿ ಸಂಗತಿಯಾಗಿದೆ.
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ