ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಕ್ರೂಝ್ ಬೋಟ್ ಸೇರ್ಪಡೆ

ಇನ್ನು ಒಂದು ವಾರದೊಳಗೆ ಸಂಪೂರ್ಣ ಸಿದ್ದತೆಗೊಂಡು ಪ್ರವಾಸಿಗರ ಉಪಯೋಗಕ್ಕೆ ಅವಕಾಶ ನೀಡಲಿದ್ದು, ಪ್ರಕೃತಿ ಸೌಂದರ್ಯ ಸವಿಯಲು ಇದೊಂದು ಒಳ್ಳೆಯ ಅವಕಾಶ ಎನ್ನುತ್ತಾರೆ ಬೋಟಿನ ಮ್ಯಾನೇಜರ್.

news18-kannada
Updated:October 12, 2020, 7:57 AM IST
ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಕ್ರೂಝ್ ಬೋಟ್ ಸೇರ್ಪಡೆ
ಕ್ರೂಝ್ ಬೋಟ್
  • Share this:
ಉತ್ತರ ಕನ್ನಡ(ಸೆ.12): ಕಾರವಾರ ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರ ಸ್ವರ್ಗ ಎಂದೇ ಕರೆಯುತ್ತಾರೆ. ಜಿಲ್ಲೆಯ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿರುವ ಕಡಲ ಕಿನಾರೆ, ಜಲಪಾತಗಳು ಸೇರಿದಂತೆ ಹತ್ತು ಹಲವು ಪ್ರವಾಸಿ ತಾಣಗಳಿಗೆ ದೇಶ ವಿದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದೀಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕ್ರೂಝ್ ಬೋಟ್ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಇಡೀ ರಾಜ್ಯ ಮಾತ್ರವಲ್ಲ, ದೇಶದಲ್ಲೇ ವಿಭಿನ್ನ ಪ್ರಕೃತಿ ಸೌಂದರ್ಯವನ್ನ ಹೊಂದಿರುವ ಜಿಲ್ಲೆ. ಒಂದು ಕರಾವಳಿ, ಇನ್ನೊಂದು ಕಡೆ ಮಲೆನಾಡು, ಮತ್ತೊಂದು ಕಡೆ ದಟ್ಟ ಅಭಯಾರಣ್ಯ, ಹಾಗೂ ಒಣ ಭೂಮಿ ಪ್ರದಶವನ್ನ ಹೊಂದಿದ ಏಕೈಕ ಜಿಲ್ಲೆ. ಜಿಲ್ಲೆಯ ಪ್ರಸಿದ್ದ ಕಡಲ ಕಿನಾರೆಗಳಿಗೆ, ಜಲಪಾತಗಳಿಗೆ, ದೇವಾಲಯ, ಯಾಣದಂತಹ ಪ್ರವಾಸಿ ತಾಣಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಪ್ರಕೃತಿ ಮಡಿಲಿನಲ್ಲಿ ಇರುವ ಉತ್ತರ ಕನ್ನಡ ಜಿಲ್ಲೆಯನ್ನ ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ.

ಇದೀಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಬಂದರಿನಲ್ಲಿ ಪ್ರವಾಸಿಗರನ್ನ ಹೊತ್ತುಯ್ಯುವ ವೈಟ್ ಪರ್ಲ್ ಎನ್ನುವ ಕ್ರೂಝ್ ಬೋಟ್ ಅನಾವರಣವಾಗಿದೆ. ಸುಮಾರು 80 ಪ್ರವಾಸಿಗರು ಏಕಕಾಲದಲ್ಲಿ ಸಂಚರಿಸುವ ಕ್ರೂಝ್ ಬೋಟ್ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಮೊದಲ ಪ್ರಯತ್ನವಾಗಿದೆ.

Big Breaking: ಖಾತೆ ಬದಲಾವಣೆ: ಶ್ರೀ ರಾಮುಲು ಬಳಿಯಿದ್ದ ಆರೋಗ್ಯ ಖಾತೆ ಸಚಿವ ಸುಧಾಕರ್​ ಹೆಗಲಿಗೆ

ಇನ್ನು ಕುಮಟಾದ ಕೆಲ ಯುವಕರು ಕೋಸ್ಟ್ ಲೈನ್ ವೆಂಚರ್ಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದು ಈ ಸಂಸ್ಥೆ ಲೀಸರ್ಸ್ ರೂಟ್ಸ್ ಎಂಬ ಮತ್ತೊಂದು ಸಂಸ್ಥೆಯೊಂದಿಗೆ ಒಪ್ಪಂದದೊಂದಿಗೆ ಕ್ರೂಝ್ ಬೋಟ್​​ನ್ನು ಪ್ರಾರಂಭಿಸಿದ್ದಾರೆ. ಬೋಟಿನಲ್ಲಿ ವಸತಿ ವ್ಯವಸ್ಥೆ ಇದ್ದು ಬೋಟಿನ ಮೇಲೆ ಹೋಟೆಲ್ ಸಹ ನಿರ್ಮಿಸಲಾಗಿದೆ. ಏಕಕಾಲಕ್ಕೆ 80 ಜನರನ್ನ ಹೊತ್ತೋಯ್ದು ಗಂಗಾವಳಿ ನದಿಯಲ್ಲಿ, ಗೋಕರ್ಣ ಸುತ್ತಮುತ್ತಲಿನ ಕಡಲ ಕಿನಾರೆಯಲ್ಲಿ ಸಂಚರಿಸಲಿದ್ದು ಪ್ರವಾಸಿಗರು ನೀರಿನಲ್ಲಿ ಸಂಚರಿಸಿ ಎಂಜಾಯ್ ಮಾಡುವ ಅವಕಾಶ ಒದಗಿಸಲಾಗಿದೆ. ಇನ್ನು ಒಂದು ವಾರದೊಳಗೆ ಸಂಪೂರ್ಣ ಸಿದ್ದತೆಗೊಂಡು ಪ್ರವಾಸಿಗರ ಉಪಯೋಗಕ್ಕೆ ಅವಕಾಶ ನೀಡಲಿದ್ದು, ಪ್ರಕೃತಿ ಸೌಂದರ್ಯ ಸವಿಯಲು ಇದೊಂದು ಒಳ್ಳೆಯ ಅವಕಾಶ ಎನ್ನುತ್ತಾರೆ ಬೋಟಿನ ಮ್ಯಾನೇಜರ್.

ವೈಟ್ ಪರ್ಲ್ ಕ್ರೂಝ್ ಬೋಟನ್ನ ಗೋವಾದ ಪ್ರಸಿದ್ದ ಬೋಟ್ ವಿನ್ಯಾಸಕರಾದ ಎಕ್ವಾರಿಸ್ ಅವರು ನಿರ್ಮಿಸಿದ್ದು ಬೋಟಿನ ಒಳಗೆ ಸ್ಥಳೀಯ ತಂಡದವರೇ ವಿನ್ಯಾಸ ಮಾಡಿದ್ದಾರೆ. ಗೋಕರ್ಣ ಪ್ರಸಿದ್ದ ಪ್ರವಾಸಿ ತಾಣವಾಗಿದ್ದು ಪ್ರತಿನಿತ್ಯ ದೇಶವಿದೇಶದಿಂದ ನೂರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಗೋಕರ್ಣದ ಕಡಲ ತೀರಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ. ಇದೀಗ ಗೋಕರ್ಣ ಸಮೀಪದ ತದಡಿಯಲ್ಲಿ ಕ್ರೂಝ್ ಬೋಟ್ ಚಾಲನೆ ಸಿಕ್ಕಿದ್ದು ಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ಸುವರ್ಣ ಅವಕಾಶ ಎನ್ನುವುದು ಬೋಟ್ ನಿರ್ವಹಣೆ ಮಾಡುವವರ ಅಭಿಪ್ರಾಯ.

ಒಟ್ಟಿನಲ್ಲಿ ವೈಟ್ ಪರ್ಲ್ ಕ್ರೂಝ್ ಬೋಟ್ ಗೆ ಚಾಲನೆ ಸಿಕ್ಕಿದ್ದು ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ. ಪ್ರವಾಸೋದ್ಯಮ ಅಭಿವೃದ್ದಿಗೆ ಇಂತಹ ಹೊಸ ಪ್ರಯತ್ನಗಳಾಗಲಿ ಎನ್ನುವುದು ಜಿಲ್ಲೆಯ ಜನರ ಅಭಿಪ್ರಾಯ.
Published by: Latha CG
First published: October 12, 2020, 7:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading