ನಾಡಿನತ್ತ ಹೆಜ್ಜೆ ಹಾಕುತ್ತಿವೆ Crocodiles.. ರಂಗನತಿಟ್ಟು ಸುತ್ತಮುತ್ತಲಿನ ಗ್ರಾಮಸ್ಥರ ಎದೆಯಲ್ಲಿ ಢವ ಢವ...

ಸುತ್ತಲು ನದಿಗಳಿರುವುದರಿಂದ ಶ್ರೀರಂಗಪಟ್ಟಣ ದ್ವೀಪವಾಗಿದೆ. ತಾಲೂಕಿನ ಸುತ್ತಲೂ ಕಾವೇರಿ, ಲೋಕಪಾವನಿ ನದಿಗಳು ಹರಿಯುತ್ತಿವೆ. ಹೀಗಾಗಿ ನದಿಗಳಿಂದ ಮೊಸಳೆಗಳು ಆಹಾರ ಅರಸಿ ಗ್ರಾಮಗಳತ್ತ ಮುಖ ಮಾಡ್ತಿವೆ

ಸೆರೆ ಹಿಡಿಯಲಾಗಿರುವ ಮೊಸಳೆ

ಸೆರೆ ಹಿಡಿಯಲಾಗಿರುವ ಮೊಸಳೆ

  • Share this:
ಮಂಡ್ಯ: ಇಷ್ಟು ದಿನ ಆಹಾರ ಅರಸಿ ಆನೆಗಳು (Elephants) ನಾಡಿಗೆ ಬಂದಿವೆ ಅಥವಾ ಚಿರತೆಗಳು (Leopard) ನಾಡಿಗೆ ಬಂದಿವೆ. ಅಥವಾ ಇನ್ನು ಸ್ವಲ್ಪ ಆಲೋಚನೆ ಮಾಡಿ ನೋಡಿದ್ರೆ, ಚಿರತೆ ದಾಳಿಯಿಂದ ಜಾನುವಾರುಗಳು ಸಾವನ್ನಪ್ಪಿವೆ ಎಂಬ ಇತ್ಯಾದಿ ಸುದ್ದಿಗಳನ್ನ ಎಲ್ಲರೂ ಕೇಳಿರ್ತಿದ್ರು. ಆದ್ರೆ ಈಗ ನಾವು ಹೇಳ್ತಿರೋ ಸುದ್ದಿ ಸ್ವಲ್ಪ ಡಿಫರೆಂಟ್ ಆಗಿದೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಈಗ ಮೊಸಳೆಗಳದ್ದೇ (Crocodiles) ಕಾರುಬಾರು. ಮೊಸಳೆಗಳು ಆಹಾರ ಅರಸಿ ನದಿ ಬಿಟ್ಟು ನಾಡಿನತ್ತ ಹೆಜ್ಜೆ ಇಟ್ಟಿವೆ. 

ಶ್ರೀರಂಗಪಟ್ಟಣದಲ್ಲಿ ನಾಡಿನತ್ತ ಹೆಜ್ಜೆ ಹಾಕುತ್ತಿವೆ ಮೊಸಳೆಗಳು 

ಸುತ್ತಲು ನದಿಗಳಿರುವುದರಿಂದ ಶ್ರೀರಂಗಪಟ್ಟಣ ದ್ವೀಪವಾಗಿದೆ. ತಾಲೂಕಿನ ಸುತ್ತಲೂ ಕಾವೇರಿ, ಲೋಕಪಾವನಿ ನದಿಗಳು ಹರಿಯುತ್ತಿವೆ. ಹೀಗಾಗಿ ನದಿಗಳಿಂದ ಮೊಸಳೆಗಳು ಆಹಾರ ಅರಸಿ ಗ್ರಾಮಗಳತ್ತ ಮುಖ ಮಾಡ್ತಿವೆ ಅಂತ ಹೇಳಲಾಗ್ತಿದೆ. ಹೌದು ಕಳೆದ ಆರು ತಿಂಗಳಿಂದ ಶ್ರೀರಂಗಪಟ್ಟಣದ ಪಾಲಹಳ್ಳಿ ಗ್ರಾಮದ ಬಳಿಯ ವಿರಿಜಾ ನಾಲೆ, ಪಟ್ಟಣದ ಬಾಂಗಾರದೊಡ್ಡಿ ನಾಲೆ, ಸೇರಿದಂತೆ ಕೆಲ ಗ್ರಾಮಗಳ ನಾಲೆಗಳ ಬಳಿ ಮೊಸಳೆಗಳು ಪ್ರತ್ಯಕ್ಷವಾಗಿವೆ. ಇದರಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.

ಎರಡು ಮೇಕೆ ತಿಂದಿದ್ದ ಮೊಸಳೆ‌ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ...

ಕೆಲ ದಿನಗಳ ಹಿಂದೆ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮದ ಬಳಿಯ ನಾಲೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ರಾತ್ರಿ ಸಂದರ್ಭ ಸುತ್ತ ಮುತ್ತಲ ಗ್ರಾಮಸ್ಥರು ನಾಲೆ ಬಳಿ ಓಡಾಡುವಾಗ ಮೊಸಳೆ ಕಂಡು ಆತಂಕ ವ್ಯಕ್ತಪಡಿಸಿದ್ದರು. ಇದಾದ ಕೆಲ ದಿನಗಳಲ್ಲೆ ಎರಡು ಮೇಕೆಯನ್ನ ಮೊಸಳೆ ತಿಂದು ಹಾಕಿತ್ತು. ಇದರಿಂದ ಭಯ ಭಿತರಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರು. ನಂತರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮೊಸಳೆಯನ್ನ ಸೆರೆ ಹಿಡಿದು ಕಬಿನಿ ಹಿನ್ನಿರಿಗೆ ಬಿಡಲಾಗಿತ್ತು.

ಇದನ್ನೂ ಓದಿ: Shivamogga:10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್ ನೀಡಿದ ಕಂಡಕ್ಟರ್

ಪಾಲಹಳ್ಳಿ, ರಂಗನತಿಟ್ಟು ಬಳಿ ಕಾಣಿಸಿಕೊಳ್ತಿರೋ ಮೊಸಳೆಗಳು 

ರಂಗನತಿಟ್ಟು ಪಕ್ಷಿಧಾಮದಲ್ಲಿ ಮೊಸಳೆಗಳು ವಾಸ ಮಾಡ್ತಿವೆ. ಮರದಿಂದ ನೀರಿಗೆ ಬಿದ್ದ ಅಲ್ಲಿನ ಪಕ್ಷಿಗಳ ಮರಿಗಳನ್ನ ತಿನ್ನುತ್ತಾ ಹಾಗೂ ಮೀನುಗಳನ್ನ ತಿನ್ನುತ್ತ ಅನೇಕ ವರ್ಷಗಳಿಂದ ಮೊಸಳೆಗಳು ರಂಗನತಿಟ್ಟಿನಲ್ಲಿ ವಾಸ ಮಾಡ್ತಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮೊಸಳೆಗಳು ಆಹಾರ ಅರಸಿ ರಂಗನತಿಟ್ಟು ಸುತ್ತಮುತ್ತಲಿನ ನಾಲೆಗೆ ತೆರಳುತ್ತಿವೆ ಅಂತ ಹೇಳಲಾಗ್ತಿದೆ. ಹಿಗಾಗಿ ಪಾಲಹಳ್ಳಿ ಮತ್ತು ರಂಗನತಿಟ್ಟು ಬಳಿಯ ನಾಲೆಗಳಲ್ಲಿ ಮೇಲಿಂದ ಮೇಲೆ ಮೊಸಳೆಗಳು ಕಾಣಿಸಿಕೊಳ್ತಿವೆ.ಬಂಗಾರ್‌ ದೊಡ್ಡಿ ನಾಲೆಯಲ್ಲಿ ಬೃಹತ್ ಗಾತ್ರದ ಮೊಸಳೆ ಸೆರೆ 

ಪಟ್ಟಣದ ಚಂದ್ರವನ ಆಶ್ರಮದ ಬಳಿಯ ಬಂಗಾರ್ ದೊಡ್ಡಿ ನಾಲೆಯ ಬಳಿ ಕೆಲ ದಿನಗಳಿಂದ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಇದನ್ನ ಕಂಡ ಅಕ್ಕ - ಪಕ್ಕದ ಗ್ರಾಮಸ್ಥರು ಆತಂಕಗೊಂಡು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿಗಳು ಹೊಸ ವರ್ಷದ ದಿನವೇ ಬೃಹತ್ ಗಾತ್ರದ ಮೊಸಳೆಯನ್ನ ಸೆರೆ ಹಿಡಿದಿದ್ದಾರೆ. ಕಳೆದ ಆರು ತಿಂಗಳಲ್ಲಿ ಶ್ರೀರಂಗಪಟ್ಟಣದ ಹಾಸು ಪಾಸಿನ ಗ್ರಾಮಗಳಲ್ಲಿ 4ಕ್ಕೂ ಹೆಚ್ಚು ಮೊಸಳೆಗಳನ್ನ ಸೆರೆ ಹಿಡಿಯಲಾಗಿದೆ. ಅಷ್ಟೇ ಅಲ್ಲದೆ ಪಾಲಹಳ್ಳಿ ಗ್ರಾಮ ಸೇರಿದಂತೆ ರಂಗನತಿಟ್ಟು ಬಳಿಯ ವಿರಿಜಾ ನಾಲೆಯಲ್ಲಿ ಮೇಲಿಂದ ಮೇಲೆ ಮೊಸಳೆಗಳು ಕಾಣಿಸಿಕೊಳ್ತಿವೆ. ಇದ್ರಿಂದ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕಕ್ಕೆ ಒಳಗಾಗಿದ್ದು, ರಾತ್ರಿ ವೇಳೆ ವಲ, ಗದ್ದೆಗಳಿಗೆ ತೆರಳಲು ಭಯ ಪಡುತ್ತಿದ್ದಾರೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡು ಮೊಸಳೆಗಳು ಎಲ್ಲಿಂದ ಬರ್ತಿವೆ ಅನ್ನೋದನ್ನ ಪತ್ತೆ ಹಚ್ಚಿ, ನಾಡಿನತ್ತ ಹೆಜ್ಜೆ ಇಡುತ್ತಿರುವ ಮೊಸಳೆಗಳನ್ನ ತಡೆಯಬೇಕಿದೆ.

(ವರದಿ: ಸುನೀಲ್​ ಕುಮಾರ್​ ಎಚ್​ಬಿ)
Published by:Kavya V
First published: